Search
  • Follow NativePlanet
Share
» »ಆಶ್ಚರ್ಯ: ಈ ದೇಶದವರಿಗೆ ಅಯೋಧ್ಯೆ ಪವಿತ್ರವಾದ ಪುಣ್ಯಕ್ಷೇತ್ರ

ಆಶ್ಚರ್ಯ: ಈ ದೇಶದವರಿಗೆ ಅಯೋಧ್ಯೆ ಪವಿತ್ರವಾದ ಪುಣ್ಯಕ್ಷೇತ್ರ

ಪ್ರಪಂಚದಲ್ಲಿನ ಅತ್ಯಂತ ಪುರಾತನವಾದ ನಗರಗಳಲ್ಲಿ ಅಯೋಧ್ಯೆ ಕೂಡ ಒಂದು ಎಂಬುದು ನಿಮಗೆಲ್ಲಾ ತಿಳಿದಿರುವ ಸಂಗತಿಯೇ. ರಘುಕುಲ ನಂದನಾದ ಆ ಸೀತಾಮಾತೆಯ ಪತಿ ಹುಟ್ಟಿದ ನಗರ ಅಯೋಧ್ಯೆ. ಒಂದು ಸ್ವರ್ಣಬಿಂದುವಿಗೆ ಕೇಂದ್ರ ಬಿಂದು ಅಯೋದ್ಯೆ. ಹಾಗಾಗಿಯೇ ಆ ನಗರ ಪ್ರಖ್ಯಾತ ಪುಣ್ಯಕ್ಷೇತ್ರವಾಗಿ ಭಾವಿಸುತ್ತಾರೆ. ಹಿಂದೂಗಳು ಅಪರಿಮಿತವಾಗಿ ಪ್ರೇಮಿಸುವ ಶ್ರೀರಾಮಚಂದ್ರ ಪ್ರಭುವಿನ ಹುಟ್ಟಿದ ಊರಾದ ಆಯೋಧ್ಯೆಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕು ಎಂದು ಪ್ರತಿಯೊಬ್ಬರಿಗೂ ಅನ್ನಿಸದೇ ಇರದು.

ಪ್ರತಿ ವರ್ಷವು ಸಾವಿರಾರು ಸಂಖ್ಯೆಯಲ್ಲಿ ಪ್ರಜೆಗಳು ಅಯೋಧ್ಯೆಗೆ ಭೇಟಿ ನೀಡುತ್ತಿರುತ್ತಾರೆ. ಅವರು ನಮ್ಮ ದೇಶದವರು ಅಲ್ಲ, ಹಿಂದೂ ಧರ್ಮದವರು ಅಲ್ಲ. ಆದರೂ ಕೂಡ ಅವರಿಗೆ ಅಯೋಧ್ಯೆ ಒಂದು ಪವಿತ್ರವಾದ ಪುಣ್ಯಕ್ಷೇತ್ರ. ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಅಯೋಧ್ಯೆಯನ್ನು ದರ್ಶನ ಮಾಡಬೇಕು ಎಂದು ಒಂದು ದೇಶದ ಪ್ರಜೆಗಳೆಲ್ಲಾ ಬದುಕುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ?

ನೀವು ಓದುತ್ತಿರುವುದು ಸತ್ಯ. ಯಾವ ದೇಶದವರು? ಯಾರು? ಏಕೆ ಪ್ರತಿವರ್ಷ ಅಯೋಧ್ಯೆಗೆ ತಂಡೋಪತಂಡವಾಗಿ ಭೇಟಿ ನೀಡುತ್ತಾರೆ ಎಂಬ ವಿಷಯಗಳು ಲೇಖನದ ಮೂಲಕ ತಿಳಿಯೋಣ ಬನ್ನಿ.

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಅಯೋಧ್ಯೆಯು ಉತ್ತರ ಪ್ರದೇಶ ರಾಜ್ಯ ಸರಯೂ ನದಿ ತೀರದಲ್ಲಿ ಫೈಜಾಬದ್‍ಗೆ ಸುಮಾರು 6 ಕಿ.ಮೀ ದೂರದಲ್ಲಿದೆ. ಅಯೋಧ್ಯೆ ವಿಷ್ಣುಮೂರ್ತಿಯ 7 ನೇ ಅವತಾರವಾದ ರಾಮನ ಚರಿತ್ರೆಗೆ ಸಂಬಂಧವನ್ನು ಹೊಂದಿದೆ. ಅಯೋಧ್ಯೆಯನ್ನು ಸಾಕೇತಪುರಂ ಎಂದು ಸಹ ಕರೆಯುತ್ತಾರೆ.

Ramnath Bhat

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಅಯೋಧ್ಯೆ ಭಾರತದೇಶದಲ್ಲಿಯೇ ಪುರಾತನವಾದ ನಗರಗಳಲ್ಲಿ ಒಂದು. ವಿಷ್ಣು ಶ್ರೀರಾಮನಾಗಿ ಅವತಾರವೆತ್ತ ಪ್ರದೇಶವೇ ಈ ಅಯೋಧ್ಯೆ. ರಾಮಾಯಣ ಮಹಾಕಾವ್ಯ ಆ ಸ್ಥಳಕ್ಕೆ ಪ್ರತ್ಯಕ್ಷ ಸಾಕ್ಷಿ. ಇದು ಉತ್ತರ ಪ್ರದೇಶದಲ್ಲಿನ ಫೈಜಾಬಾದ್ ಎಂಬ ಜಿಲ್ಲೆಯಲ್ಲಿದೆ.

Swaminathan

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಅಯೋಧ್ಯೆಯು ಸಮುದ್ರಮಟ್ಟಕ್ಕೆ ಸುಮಾರು 305 ಅಡಿ ಎತ್ತರದಲ್ಲಿದೆ. ಅಯೋಧ್ಯೆ ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಆಯೋಧ್ಯೆ ಶ್ರೀರಾಮ ಚರಿತ್ರೆಯಲ್ಲಿನ ಪ್ರಮುಖವಾದ ನಗರವಾಗಿದೆ. ಶ್ರೀರಾಮನು ಈ ನಗರದಲ್ಲಿಯೇ ಜನಿಸಿದನು ಎಂಬದನ್ನು ಚರಿತ್ರೆಯು ಹೇಳುತ್ತದೆ.

Uttkarsh

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ನಮ್ಮ ಏಷ್ಯಾ ಖಂಡದಲ್ಲಿ ದೇಶದಲ್ಲಿ ಸೌತ್ ಕೊರಿಯಾ ಕೂಡ ಒಂದು. ಎಷ್ಟು ಸಾವಿರಾರು ವರ್ಷಗಳ ಚರಿತ್ರೆಗಳನ್ನು ಹೊಂದಿರುವ ನಮ್ಮ ಭಾರತದೇಶದ ವಿಸ್ತೀರ್ಣ, ಚೀನಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಶ್ರೀಲಂಕಾ, ಬರ್ಮಾ, ವಿಯತ್ನಾಂ, ಇಂಡೋನೇಷಿಯಾನಂತಹ ಆನೇಕ ದೇಶಗಳಿಂದ ಒಳಗೊಂಡ ಭವ್ಯವಾದ ಭರತ ದೇಶವಾಗಿತ್ತು.

Ramnath Bhat

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಕೊರಿಯಾ ದೇಶದ ಜನರು ದಕ್ಷಿಣ ಕೊರಿಯಾ ವರ್ಗ ಒಂದೇ ಇತ್ತು ಎಂದು ಹೇಳುತ್ತಾರೆ. ಬಹಳ ಹಿಂದೆಯೇ ಹಿಂದುತ್ವವು ಏಷ್ಯಾದಲ್ಲಿ ಬಹುತೇಕ ಹರಡಿಕೊಂಡಿತ್ತು.

Nagarjun Kandukuru

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಆ ಸಮಯದಲ್ಲಿ ಚೀನಾ, ಜಪಾನ್ ಎಂದು ಹೆಸರನ್ನು ಇಟ್ಟಕೊಂಡು ಪ್ರದೇಶಗಳಾದವು. ವಿವಿಧ ಪ್ರದೇಶಗಳ ರಾಣಿಗಳು, ನಮ್ಮ ದೇಶದ ರಾಜರು ಹಾಗು ಆ ಪ್ರದೇಶಗಳ ರಾಜರು ಭಾರತ ದೇಶದ ರಾಣಿಯರನ್ನು ನೀಡಿ ವಿವಾಹವನ್ನು ಮಾಡುತ್ತಿದ್ದರು ಎಂದು ನಮ್ಮ ಮಹಾಭಾರತ ಹೇಳುತ್ತದೆ.

PC:आशीष भटनागर

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಇದಕ್ಕೆ ನಿದರ್ಶನವೆಂಬಂತೆ ಮಹಾಭಾರತದಲ್ಲಿನ ಕೌರವರ ತಾಯಿಯಾದ ಗಾಂಧಾರಿ ಕೂಡ ಪ್ರಸ್ತುತ ಇರುವ ಅಫ್ಘಾನಿಸ್ತಾನ ದೇಶಕ್ಕೆ ಸೇರಿದ್ದ ಮಹಿಳೆ ಎಂದು ಪುರಾಣಗಳು ಹೇಳುತ್ತವೆ.PC:wikimedia.org

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಅಂತಹ ಒಂದು ರೋಚಕವಾದ ಸತ್ಯಕಥೆ ಚರಿತ್ರೆಯಪುಟದಲ್ಲಿ ನಿಕ್ಷೇಪವಾಗಿ ಇದೆ. ಇದು ನಮಗೆ ಬಂಧವನ್ನು ಏರ್ಪಾಟು ಮಾಡಿತು ಎಂದು ಹಾನ್ಯಾಂಗ್ ಯೂನಿರ್ವಸಿಟಿಗೆ ಸೇರಿದ ಪ್ರೋಫೆಸರ್ ಎಮರಿಟಸ್ ಹೇಳುತ್ತಾರೆ.

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಕೊರಿಯನ್ ಕಥೆಯ ಪ್ರಕಾರ ಪೂರ್ವ ಕೊರಿಯಾ ಪ್ರದೇಶಕ್ಕೆ ಮೊದಲ ಚಕ್ರವರ್ತಿಯಾದ ಗ್ಯೂಂಗ್ವಾನ್ ಗಯ ವಂಶದಲ್ಲಿನ ಗಿಂಸುರ್ ಎಂಬ ರಾಜನಿಗೆ ತಕ್ಕದಾದ ವಧುವಿನ ಬಗ್ಗೆ ಎಲ್ಲಾ ಪ್ರದೇಶದಲ್ಲಿಯೂ ಹೇಳಿಕೊಳ್ಳುವಾಗ ಅವರ ಕುಲ ದೇವನಾಗಿದ್ದ ಸಾಂಜಿ, ಸುರಿರತ್ನ ಎಂಬ ಯುವತಿಯ ತಂದೆ ತಾಯಿಗಳ ಕನಸ್ಸಿನಲ್ಲಿ ಬಂದು ತಮ್ಮ ಮಗಳನ್ನು ಗಯ ರಾಜ್ಯಕ್ಕೆ ಕಳುಹಿಸು ಎಂದು ಹೇಳುತ್ತಾನೆ.

Vishwaroop2006

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಅಲ್ಲಿ ಆಕೆ ಮಹಾರಾಣಿಯಾಗುತ್ತಾಳೆ ಎಂದು ಹೇಳಿದ ದೇವನ ಮಾತನ್ನು ಕೇಳಿ ಆಕೆಯನ್ನು ಒಂದು ಹಡಗಿನಲ್ಲಿ ಕಳುಹಿಸುತ್ತಾರೆ. ಸಮುದ್ರ ಮಾರ್ಗವಾಗಿ ತೆರಳುತ್ತಿರುವ ಆಕೆಗೆ ಯಾವುದೇ ಅಡ್ಡಿ-ಆತಂಕಗಳು ಎದುರಾಗಬಾರದು ಎಂದು 2 ಮೀನಿನ ಗೊಂಬೆಗಳನ್ನು ಹಾಗು ನೀಲಿ ಬಣ್ಣದ ಕಲ್ಲನ್ನು ಕೊಟ್ಟು ಕಳುಹಿಸಿದರಂತೆ.

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಕೊರಿಯಾಗೆ ಸೇರಿಕೊಂಡ ಸುರಿರತ್ನದ ಬಗ್ಗೆ ತಿಳಿದಕೊಂಡ ರಾಜನು ಆಕೆಯ ಮೇಲೆ ಪ್ರೀತಿಯಲ್ಲಿ ಮುಳುಗಿದನು ಎಂದು ಪುರಾಣಗಳು ಹೇಳುತ್ತವೆ.

Ramnath Bhat

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ವಿವಾಹದ ನಂತರ ಆಕೆಯ ಹೆಸರು ಹಿಯಾ ಹ್ವಾಂಗ್ ಓಕ್ ಎಂದು ಮಾರ್ಪಾಟಾಗುತ್ತದೆ. ಈಕೆ ಆ ದೇಶದ ಮೊದಲ ಮಹಾರಾಣಿಯಾಗಿ ಕೊರಿಯನ್‍ಗಳು ಹೇಳುತ್ತಾರೆ.

Vyacheslav Argenberg

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಾಣಿ ಹಿಯಾ ಹ್ವಾಂಗ್ ಓಕ್‍ಳ ಜನ್ಮಸ್ಥಳದ ಬಗ್ಗೆ ಆನೇಕ ಬಾರಿ ಚರಿತ್ರೆಕಾರರು ಪರಿಶೋಧನೆಯನ್ನು ಮಾಡಿದ್ದಾರೆ. ಕೆಲವು ಸಂಶೋಧನೆಗಳ ಪ್ರಕಾರ ಆಕೆಯು ಭಾರತದೇಶದಲ್ಲಿ ಅಯುತ ಎಂಬ ವಂಶಕ್ಕೆ ಸೇರಿದವಳು ಎಂದು ಆ ವಂಶದವರು ರಾಮಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ 48 ಎ.ಡಿಯಿಂದಲೂ ಇದ್ದಾರೆ ಎಂದು ಹೇಳಲಾಗುತ್ತಿದೆ.

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಆಕೆಗೆ ವಿವಾಹವಾದ ವಯಸ್ಸು ಕೇವಲ 16 ಆಗಿತ್ತಂತೆ. ಈ ವಿಷಯವನ್ನು ಅಲ್ಲಿನ ಚರಿತ್ರೆಕಾರರು, ನಾಯಾಕರು, ಅಧಿಕಾರಿಗಳು ತಿಳಿಸುತ್ತಾರೆ. 2001 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅಖಿಲೇಷ್ ಯಾದವ್ ಅವರ ಹತ್ತಿರ ಬಂದು ತಮ್ಮ ದೇಶದ ಮೊದಲನೇ ಮಹಾರಾಣಿಯ ತವರೂರು ಆದ ಅಯೋಧ್ಯೆಯಲ್ಲಿ ಹಿಯಾ ಹ್ವಾಂಗ್ ಓಕ್ ಹೆಸರಿನ ಮೇಲೆ ಒಂದು ಮೆಮೋರಿಯಲ್ ಸ್ಥಾಪಿಸುತ್ತೇವೆ ಎಂದು ಕೇಳಿಕೊಂಡರಂತೆ. ಇದಕ್ಕೆ ಯಾದವ್ ಅವರು ಅಂಗೀಕಾರ ಮಾಡಿದರಂತೆ.

Grace Hwu

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಅಂದಿನಿಂದ ಕೊರಿಯನ್ನರು ಅಯೋಧ್ಯೆಯನ್ನು ತಮ್ಮ ತವರೂರು ಎಂದು ಭಾವಿಸುತ್ತಿದ್ದಾರೆ. ಹಾಗಾಗಿಯೇ ಪ್ರತಿ ವರ್ಷ ಸೌತ್ ಕೊರಿಯಾ ನೂತನವರ್ಷದ ದಿನದಂದು ಅಯೋಧ್ಯೆಗೆ ತಂಡೋಪತಂಡವಾಗಿ ದರ್ಶನ ಮಾಡಲು ಭೇಟಿ ನೀಡುತ್ತಾರೆ.

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ರಘುಕುಲ ನಂದನಾದ ಆ ಸೀತಾಪತಿ ಹುಟ್ಟಿದ ನಗರ ಅಯೋಧ್ಯ

ಅಲ್ಲಿಗೆ ಭೇಟಿ ನೀಡುವ ಕೊರಿಯನ್ನರ ಪ್ರಕಾರ ಅಯೋಧ್ಯೆ ತಮ್ಮ ತಾಯಿಯಮನೆಯಾಗಿದ್ದು, ಇದೊಂದು ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ ಎಂದು ಭಾವಿಸುತ್ತಾರೆ. ತಮ್ಮ ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಗೆ ಭೇಟಿ ನೀಡಲೇಬೇಕು ಎಂಬುದು ಅವರ ನಂಬಿಕೆಯಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ನಿಲ್ದಾಣ
ಅಯೋಧ್ಯೆಯಿಂದ 150 ಕಿ.ಮೀ ದೂರದಲ್ಲಿರುವ ಲಕ್ನೋ ವಿಮಾನ ನಿಲ್ದಾಣವು ಅಯೋಧ್ಯೆಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ ಇಲ್ಲಿಂದ ಯಾವುದಾದರೂ ಖಾಸಗಿ ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ನಗರಕ್ಕೆ ಸುಲಭವಾಗಿ ತೆರಳಬಹುದಾಗಿದೆ. ವಾರಣಾಸಿ ಮತ್ತು ಕಾನ್ಪೂರ್‍ನಲ್ಲಿಯೂ ಕೂಡ ದೇಶಿಯ ವಿಮಾನ ನಿಲ್ದಾನಗಳು ಆಯೋಧ್ಯಕ್ಕೆ ಸಮೀಪದಲ್ಲಿಯೇ ಇದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲುಮಾರ್ಗದ ಮೂಲಕ
ದೆಹಲಿ, ಲಕ್ನೊ, ವಾರಣಾಸಿ ಮತ್ತು ಅಲಹಾಬಾದ್‍ನಂತಹ ಪ್ರಧಾನವಾದ ನಗರಕ್ಕೆ ಆಯೋಧ್ಯೆ ರೈಲಿನ ಮೂಲಕ ತೆರಳಬಹುದಾಗಿದೆ. ಸಮೀಪದಲ್ಲಿ ಹಲವಾರು ರೈಲು ನಿಲ್ದಾಣಗಳು ಇದ್ದು ಸುಲಭವಾಗಿ ತೆರಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more