ಇನ್ನೇನು ಭಾರತ ಸ್ವಾತಂತ್ರ್ಯ ಚಳವಳಿ ಕೊನೆಯ ಹಂತದಲ್ಲಿರುವಾಗ ಅಂದರೆ 9, 1942 ರಂದು ಮಹಾತ್ಮಾ ಗಾಂಧೀಜಿಯವರು ಮುಂಬೈ (ಬಾಂಬೆ) ಕ್ಷೇತ್ರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಘೋಷಣೆಯನ್ನು ಎತ್ತಿದ್ದರು. ಬಾಪು ಈ ಅಭಿಯಾನದ ಅಡಿಪಾಯ ಹಾಕಿದ ಮೈದಾನವನ್ನು ಪ್ರಸ್ತುತ ʼಆಗಸ್ಟ್ ಕ್ರಾಂತಿ ಮೈದಾನ್ʼ ಎಂದು ಕರೆಯಲಾಗುತ್ತದೆ. ಈ ಮೈದಾನವು ಗಾಂಧೀಜಿಯವರು ಬ್ರಿಟಿಷರಿಗೆ ಭಾರತವನ್ನು ತೊರೆಯಲು ಆದೇಶಿಸಿದ ಸ್ಥಳವಾದ್ದರಿಂದ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಹಿಂದೆ ಇದು ಗೋವಾಲಿಯಾ ಟ್ಯಾಂಕ್ ಮೈದಾನ್ ಎಂದು ಕರೆಯಲ್ಪಡುತ್ತಿತ್ತು. ಆದರೆ ಐತಿಹಾಸಿಕ ಘಟನೆಯನ್ನು ಗುರುತಿಸುವ ಸಲುವಾಗಿ ಆಗಸ್ಟ್ ಕ್ರಾಂತಿ ಮೈದಾನ್ ಎಂದು ಮರು ನಾಮಕರಣ ಮಾಡಲಾಯಿತು.
ಈ ಮೈದಾನ ಎಲ್ಲಿದೆ?
ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನವು ಮುಂಬೈನ ನಾನಾ ಚೌಕ್ (ಗ್ರಾಂಟ್ ರಸ್ತೆ) ಬಳಿ ಇದೆ. ಮಲಬಾರ್ ಹಿಲ್‌ಗೆ ಸಮೀಪದಲ್ಲಿರುವ ಆಗಸ್ಟ್ ಕ್ರಾಂತಿ ಮೈದಾನಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಗ್ರಾಂಟ್ ರಸ್ತೆ. ಇಲ್ಲಿಂದ ನಡಿಗೆಯಲ್ಲಿ ಹೋದರೂ 6 ನಿಮಿಷ ತೆಗೆದುಕೊಳ್ಳುತ್ತದೆ. ಇಲ್ಲಿಗೆ ಮೊದಲ ರೈಲು ಬೆಳಗ್ಗೆ 4:18. ಹಾಗೂ ಕೊನೆಯ ರೈಲು 1:46 ಕ್ಕೆ ಇದೆ. ಹತ್ತಿರದ ಬಸ್ ನಿಲ್ದಾಣವೆಂದರೆ ಆಗಸ್ಟ್ ಕ್ರಾಂತಿ ಮೈದಾನ. ಇಲ್ಲಿಂದ ನಡಿಗೆಯಲ್ಲಿ ಎರಡು ನಿಮಿಷಗಳ ಕಾಲ ದೂರದಲ್ಲಿದೆ. ಇಲ್ಲಿಗೆ ಮೊದಲ ಬಸ್ ಬೆಳಗ್ಗೆ 5:52, ಕೊನೆಯ ಬಸ್ 11:37 ಕ್ಕೆ ಇದೆ.

ಗೋವಾಲಿಯಾ ಟ್ಯಾಂಕ್ ಮೈದಾನ್ ಎನ್ನಲು ಕಾರಣ
ಈ ಮೊದಲೇ ಹೇಳಿದ ಹಾಗೆ ʼಆಗಸ್ಟ್ ಕ್ರಾಂತಿ ಮೈದಾನ್ʼ ಅನ್ನು ಗೋವಾಲಿಯಾ ಟ್ಯಾಂಕ್ ಮೈದಾನ್ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಗೋವಾಲಿಯಾ ಟ್ಯಾಂಕ್‌ನಲ್ಲಿ ಹಸು ಮತ್ತು ಎಮ್ಮೆಗಳಿಗೆ ಸ್ನಾನ ಮಾಡಿಸುವ ಕೆಲಸ ಹೆಚ್ಚಾಗಿ ನಡೆಯುತ್ತಿತ್ತು. ಮರಾಠಿಯಲ್ಲಿ 'ಗೋವಾಲಿಯಾ' ಪದದ ಅರ್ಥ, 'ಗೋ ಎಂದರೆ 'ಹಸು' ಮತ್ತು 'ವಾಲಾ' ಅಥವಾ 'ವಾಲಿ' ಎಂದರೆ ಗೋವಿನ ಮಾಲೀಕ ಎಂದರ್ಥ. ಅಷ್ಟೇ ಅಲ್ಲ, ಮುಂಬೈನಲ್ಲಿ ಓಡುವ ಟ್ರಾಮ್‌ಗಳಿಗೆ ಈ ಮೈದಾನವು ಪ್ರಮುಖ ನಿಲ್ದಾಣವಾಗಿತ್ತು, ಆ ಕಾಲದಲ್ಲಿ ಇಲ್ಲಿಂದ ಪ್ರಿನ್ಸ್ ವೆಲ್ಡ್ ಮ್ಯೂಸಿಯಂ ಅನ್ನು ಒಂದು ಅನ್ನಾ ಅಂದರೆ ಆರು ಪೈಸೆಗೆ ತಲುಪಬಹುದಿತ್ತು.
ಜನಪ್ರಿಯ ಆಟದ ಮೈದಾನ
ಪ್ರಸ್ತುತ ಈ ಮೈದಾನವು ಜನಪ್ರಿಯ ಆಟದ ಮೈದಾನವಾಗಿದೆ. ಇಲ್ಲಿ ಮುಖ್ಯವಾಗಿ ಕ್ರಿಕೆಟ್ ಆಡಲಾಗುತ್ತದೆ, ಆದರೆ ಮಳೆಗಾಲದಲ್ಲಿ ಈ ಸ್ಥಳವು ಫುಟ್‌ಬಾಲ್ ಮತ್ತು ವಾಲಿಬಾಲ್‌ಗೆ ಪ್ರಮುಖ ಆಟದ ಸ್ಥಳವಾಗಿದೆ.
ಐದು ಭಾಗಗಳಾಗಿ ವಿಂಗಡಣೆ
ಈ ಮೈದಾನವನ್ನು ಮುಖ್ಯವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಇದರ ದೊಡ್ಡ ಭಾಗವನ್ನು ಆಟದ ಮೈದಾನವಾಗಿ ಬಳಸಲಾಗುತ್ತದೆ, ಎರಡನೇ ಭಾಗವು ಮಕ್ಕಳ ಆಟದ ಮೈದಾನವಾಗಿದೆ. ಮೂರನೆಯದು ಮುಂಜಾನೆ ಮತ್ತು ಸಂಜೆ ವಯಸ್ಸಾದವರಿಗೆ ನಡಿಗೆಗಾಗಿ, ನಾಲ್ಕನೆಯದು ಶಾಲಾ ಕಾರ್ಯಕ್ರಮಗಳಿಗೆ ಮತ್ತು ಕೊನೆಯ ಮತ್ತು ಐದನೇ ಭಾಗವು ಸ್ಮಾರಕವಾಗಿದೆ. ಭಾರತದ ಬಹುದೊಡ್ಡ ಜನ ಕ್ರಾಂತಿಗೆ ಸಾಕ್ಷಿಯಾಗಿದ್ದ ಈ ನೆಲ ಇಂದಿಗೂ ಹಲವು ಲೋಕಸಭೆಗಳಿಗೆ ಮತ್ತು ಅನೇಕ ಸಾರ್ವಜನಿಕ ನಾಯಕರಿಗೆ ಸೂಕ್ತ ಸ್ಥಳವಾಗಿದೆ.

ಮಾಹಿತಿಯ ಕೊರತೆ
ಮೈದಾನವು ದೇಶದ ಅತಿದೊಡ್ಡ ಮುನ್ಸಿಪಲ್ ಕಾರ್ಪೊರೇಷನ್ ಆಗಿರುವ BMC ಅಡಿಯಲ್ಲಿ ಬರುತ್ತದೆ. ಆದರೆ ಯುವ ಪೀಳಿಗೆಗೆ ಅದರ ಐತಿಹಾಸಿಕ ಪ್ರಾಮುಖ್ಯತೆಯನ್ನು ತಿಳಿಸುವ ಯಾವುದೇ ಯೋಜನೆ ಪ್ರಸ್ತುತ ಇಲ್ಲ. ಯುವಕರಲ್ಲಿ, ಹೊಸ ತಲೆಮಾರಿನ ಜನರಿಗೆ ಈ ಐತಿಹಾಸಿಕ ನೆಲದ ಬಗ್ಗೆ ಮಾಹಿತಿ ಕಡಿಮೆ. ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಸುತ್ತಮುತ್ತಲಿನ ಜನರು ಬೆಳಗ್ಗೆ ಮತ್ತು ಸಂಜೆ ಜಾಗಿಂಗ್ ಮಾಡುವುದು, ಮಕ್ಕಳು ಆಟವಾಡುವುದು ಕಂಡು ಬಂದರೆ, ಮಧ್ಯಾಹ್ನದ ನಂತರ ಈ ಮೈದಾನವು ದುಡಿಯುವ ಜನರ ವಿಶ್ರಾಂತಿ ಸ್ಥಳವಾಗಿದೆ.
ಕಾಲೇಜು ವಿದ್ಯಾರ್ಥಿಗಳು ಸಮಯ ಕಳೆಯುತ್ತಿರುವುದು ಸಹ ಕಂಡು ಬರುತ್ತದೆ. ತಜ್ಞರ ಅಭಿಪ್ರಾಯದಂತೆ, ಮುಂದಿನ ದಿನಗಳಲ್ಲಿ ಈ ನೆಲದ ಬಗ್ಗೆ ಮಾಹಿತಿಯನ್ನು ಸಾಮಾನ್ಯ ಜನರೊಂದಿಗೆ ಬಿಎಂಸಿ ಹಂಚಿಕೊಳ್ಳದಿದ್ದರೆ, ಹೊಸ ಪೀಳಿಗೆಯಲ್ಲಿ ಈ ಐತಿಹಾಸಿಕ ನೆಲವು ತನ್ನತನವನ್ನು ಕಳೆದುಕೊಳ್ಳುತ್ತದೆ.


Click it and Unblock the Notifications

















