• Follow NativePlanet
Share
Menu
» »ಅನ್ನಪೂರ್ಣೇಶ್ವರಿ ದೇವಾಲಯದ ಮಹಿಮೆ ಏನು ಗೊತ್ತ?

ಅನ್ನಪೂರ್ಣೇಶ್ವರಿ ದೇವಾಲಯದ ಮಹಿಮೆ ಏನು ಗೊತ್ತ?

Posted By:

ನಮ್ಮ ಸನಾತನ ಧರ್ಮದ ಪ್ರಕಾರ ಆಹಾರಕ್ಕೆ (ಅನ್ನಕ್ಕೆ) ತನ್ನದೇ ಆದ ಪ್ರಾಮುಖ್ಯತೆ ಇದೆ. ಜೀವಿಗಳು ಬದುಕಲು ಮುಖ್ಯವಾಗಿ ಬೇಕಾಗಿರುವುದೇ ಆಹಾರವಾಗಿದೆ. ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವಿಯಲ್ಲಿಯೂ, ವಸ್ತುವಿನಲ್ಲಿಯೂ ದೈವತ್ವವನ್ನು ಕಾಣವುದು ಸರ್ವೆ ಸಾಮಾನ್ಯ. ಅನ್ನವನ್ನು ನೀಡುವ ತಾಯಿಯಾದ ಅನ್ನಪೂರ್ಣೆಯನ್ನು ಪ್ರತಿಯೊಬ್ಬರು ಭಕ್ತಿಯಿಂದ ಆರಾಧಿಸುತ್ತಾರೆ.

ಭಾರತ ದೇಶದಲ್ಲಿ ಹಲವಾರು ದೇವರುಗಳಿಗೆ ದೇವಾಲಯಗಳಿದ್ದರು ಕೂಡ ಅನ್ನಪೂರ್ಣೆಗೆಂದು ಮುಡಿಪಾದ ದೇವಾಲಯಗಳು ಇರುವುದು ಕಡಿಮೆಯೇ. ಪ್ರಸ್ತುತ ಲೇಖನದಲ್ಲಿ ಅನ್ನಪೂರ್ಣೆಗೆ ಮುಡಿಪಾದ 2 ಪ್ರಮುಖ ದೇವಾಲಯಗಳಿವೆ. ಆ ದೇವಾಲಯಗಳಿಗೆ ತನ್ನದೇ ಆದ ಮಹತ್ವವಿದೆ. ಪ್ರಸ್ತುತ ಲೇಖನದಲ್ಲಿ 2 ಅನ್ನಪೂರ್ಣೆಯ ದೆವಾಲಯದ ಬಗ್ಗೆ ತಿಳಿದುಕೊಳ್ಳೋಣ.

1.ಅನ್ನಪೂರ್ಣೇಶ್ವರಿಯ ಮಹಿಮೆ

1.ಅನ್ನಪೂರ್ಣೇಶ್ವರಿಯ ಮಹಿಮೆ

ಈ ತಾಯಿಯ ಬಗ್ಗೆ 2 ಕಥೆಗಳು ಪ್ರಚಾರದಲ್ಲಿದೆ. ಆ ಕಥೆಗಳ ಪ್ರಕಾರ, ಶಿವನ ಮಡದಿಯಾದ ಮಹಾಗೌರಿಯು ಅತ್ಯಂತ ಸುಂದರ ಹಾಗು ರೂಪವತಿಯಾಗಿದ್ದಳು. ಒಂದೊಮ್ಮೆ ರಸಿಕಾಟದಲ್ಲಿ ಮಹಾಶಿವನ ಮೂರು ಕಣ್ಣುಗಳನ್ನು ಮುಚ್ಚಿದಳು. ಇದರ ಪರಿಣಾಮ.

2.ಅನ್ನಪೂರ್ಣೇಶ್ವರಿಯ ಮಹಿಮೆ

2.ಅನ್ನಪೂರ್ಣೇಶ್ವರಿಯ ಮಹಿಮೆ

ಇದರಿಂದ ಜಗತ್ತಿನೆಲ್ಲೆಡೆ ಅಂಧಕಾರ ವ್ಯಾಪಿಸಿತು. ಗೌರಿಯು ಕೂಡ ತನ್ನ ಪ್ರಭೆಯನ್ನು ಕಳೆದುಕೊಂಡಳು. ಇದರಿಂದ ಅಂತಕಕ್ಕೊಳಗಾದ ಗೌರಿಯು ಶಿವನನ್ನು ಕ್ಷಮೆ ಯಾಚಿಸಿದಳು. ಇದಕ್ಕೆ ಮಹಾಶಿವನು ಕಾಶಿಯಲ್ಲಿ ಅನ್ನದಾನ ಮಾಡಲು ಸೂಚಿಸುತ್ತಾನೆ.

3.ಅನ್ನಪೂರ್ಣೇಶ್ವರಿಯ ಮಹಿಮೆ

3.ಅನ್ನಪೂರ್ಣೇಶ್ವರಿಯ ಮಹಿಮೆ

ಇನ್ನೊಂದು ಕಥೆಯ ಪ್ರಕಾರ, ಒಮ್ಮೆ ಶಿವನು ಮಾತನಾಡುವ ಸಮಯದಲ್ಲಿ ಪಾರ್ವತಿಗೆ ಈ ಲೋಕವು ಮಾಯೆ ಎಂದೂ, ಇಲ್ಲಿರುವ ಸಕಲ ವಸ್ತುಗಳು ಕೂಡ ಮಾಯೆ ಎಂದೂ, ಆಹಾರವು ಕೂಡ ಮಾಯೆ ಎಂದು ಹೇಳಿದನು. ಇದರಿಂದ ಬೇಸರಗೊಂಡ ಪಾರ್ವತಿ ದೇವಿಯು ಅದೃಶ್ಯಳಾಗಿ ಆಹಾರವನ್ನೆ ಲೋಕದಿಂದ ಮಾಯ ಮಾಡಿದಳು.

4.ಅನ್ನಪೂರ್ಣೇಶ್ವರಿಯ ಮಹಿಮೆ

4.ಅನ್ನಪೂರ್ಣೇಶ್ವರಿಯ ಮಹಿಮೆ

ಪಾರ್ವತಿ ದೇವಿ ಹೀಗೆ ಮಾಡಿದ್ದರಿಂದ ಹಾಹಾಕಾರ ಉಂಟಾಯಿತು. ಜನರು ಹಸಿವಿನಿಂದ ನರಳತೊಡಗಿದರು. ಶಿವನಿಗೂ ಸಹ ಹಸಿವಿನ ತೀವ್ರತೆ ಎದುರಾಯಿತು. ನಂತರ ಪಶ್ಚಾತಾಪ ಪಟ್ಟು ಕರುಣೆಯಿಂದ ಪಾರ್ವತಿ ದೇವಿ ಅನ್ನಪೂರ್ಣೆಯಾಗಿ ಕಾಶಿಯಲ್ಲಿ ಅಡುಗೆ ಮನೆಯನ್ನು ತೆರೆದು ಎಲ್ಲರಿಗೂ ಆಹಾರವನ್ನು ನೀಡತೊಡಗಿದಳು.

5.ಅನ್ನಪೂರ್ಣೇಶ್ವರಿಯ ಮಹಿಮೆ

5.ಅನ್ನಪೂರ್ಣೇಶ್ವರಿಯ ಮಹಿಮೆ

ಹೀಗೆ ಆಹಾರ ನೀಡುವ ಸಲುವ ತಾಯಿಗೆ ನಾವು ನಮಿಸಲೇಬೇಕು ಅಲ್ಲವೇ? ಹಾಗಾಗಿಯೇ ಪಾರ್ವತಿ ದೇವಿಯ ಅವತಾರವಾದ ಅನ್ನಪೂರ್ಣೆಯನ್ನು ನಾವು ಭಕ್ತಿಯಿಂದ ಆರಾಧಿಸಿದರೆ ಸಕಲ ಧನ-ಧಾನ್ಯಗಳು ಮನೆಯಲ್ಲಿರುತ್ತದೆ. ಅನ್ನಪೂರ್ಣೆಗೆ ಮುಡಿಪಾದ ಒಂದು ಮುಖ್ಯ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.

6.ಅನ್ನಪೂರ್ಣೇಶ್ವರಿಯ ಮಹಿಮೆ

6.ಅನ್ನಪೂರ್ಣೇಶ್ವರಿಯ ಮಹಿಮೆ

ಚಿಕ್ಕಮಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಹೊರನಾಡು ಎಂಬ ಕ್ಷೇತ್ರದಲ್ಲಿದೆ. ಇದನ್ನು ಶ್ರೀಕ್ಷೇತ್ರ ಹೊರನಾಡು ಎಂದು ಸಹ ಕರೆಯುತ್ತಾರೆ. ಹೊರನಾಡು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವುದರಿಂದ ಹಲವಾರು ಸ್ಥಳಗಳಿಂದ ಈ ತಾಯಿಯ ದರ್ಶನ ಕೋರಿ ಬರುತ್ತಾರೆ.

7.ಅನ್ನಪೂರ್ಣೇಶ್ವರಿಯ ಮಹಿಮೆ

7.ಅನ್ನಪೂರ್ಣೇಶ್ವರಿಯ ಮಹಿಮೆ

ಈ ದೇವಾಲಯವು ಅತ್ಯಂತ ಪುರಾತನವಾದುದಾಗಿದ್ದು, ಅನ್ನಪೂರ್ಣೆಶ್ವರಿಯ ಮೂಲ ವಿಗ್ರಹವು ಬಂಗಾರದಿಂದ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಒಂದು ನಂಬಿಕೆಯ ಪ್ರಕಾರ, ಇಲ್ಲಿಗೆ ಭೇಟಿ ನೀಡುವ ಭಕ್ತರು ಅನ್ನದ ಕೊರತೆಯನ್ನು ಯಾವುದೇ ರೀತಿಯಲ್ಲಿ ಕಾಣುವುದಿಲ್ಲವೆಂಬ ನಂಬಿಕೆಯಿದೆ.

8.ಅನ್ನಪೂರ್ಣೇಶ್ವರಿಯ ಮಹಿಮೆ

8.ಅನ್ನಪೂರ್ಣೇಶ್ವರಿಯ ಮಹಿಮೆ

ಪುರಾತನ ಮೂಲಗಳ ಪ್ರಕಾರ, ಒಮ್ಮೆ ಶಿವನು ಶಾಪಕ್ಕೊಳಗಾಗಿದ್ದಾಗ ಅನ್ನಪೂರ್ಣೇಶ್ವರಿ ದೇವಿಯ ಆಶೀರ್ವಾದದಿಂದ ಶಾಪ ವಿಮೋಚನೆಯಾಯಿತು ಎಂಬ ನಂಬಿಕೆ ಇಲ್ಲಿದೆ. ಈ ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೂ ಅನ್ನಪ್ರಸಾದ ಮತ್ತು ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ.

9.ಅನ್ನಪೂರ್ಣೇಶ್ವರಿಯ ಮಹಿಮೆ

9.ಅನ್ನಪೂರ್ಣೇಶ್ವರಿಯ ಮಹಿಮೆ

ಹೊರನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಗೆಯೇ ಅಕ್ಕಪಕ್ಕದ ದೇವಾಲಯಗಳಿಗೂ ಹೋಗಬಹುದು. ಶೃಂಗೇರಿಯು ಅಲ್ಲಿಂದ 75 ಕಿ.ಮೀ ನಷ್ಟು ದೂರದಲ್ಲಿದೆ. ಹೊರನಾಡಿಗೆ ಹೋಗುವ ಹಾದಿಯಲ್ಲಿ ಸಿಗುವ ಇತರೆ ಪ್ರಸಿದ್ಧ ಸ್ಥಳಗಳೆಂದರೆ ಧರ್ಮಸ್ಥಳ ಶ್ರೀ ಮಂಜುನಾಥ ಮತ್ತು ಉಡುಪಿ ಶ್ರೀ ಕೃಷ್ಣ ದೇವಾಲಯಗಳು.

10.ಅನ್ನಪೂರ್ಣೇಶ್ವರಿಯ ಮಹಿಮೆ

10.ಅನ್ನಪೂರ್ಣೇಶ್ವರಿಯ ಮಹಿಮೆ

ಬೆಂಗಳೂರಿನಿಂದ 330 ಕಿ.ಮೀ ಗಳಷ್ಟು ದೂರದಲ್ಲಿರುವ ಹೊರನಾಡಿಗೆ ಹತ್ತಿರವಿರುವ ರೈಲ್ವೆ ನಿಲ್ದಾಣ ಶಿವಮೊಗ್ಗ ಆಗಿದೆ. ಅಲ್ಲದೇ ರಾಜ್ಯ ಮತ್ತು ಸ್ಥಳೀಯ ಬಸ್ಸು ಸೇವೆಗಳು ಇಲ್ಲಿಗೆ ಬರುವಂತೆ ಉತ್ತರ ರಸ್ತೆ ಸಂಪರ್ಕ ಹೊಂದಿದೆ. ಮಂಗಳೂರು ನಗರ ವಿಮಾನ ನಿಲ್ದಾಣವು ಹೊರನಾಡಿಗೆ ಸಮೀಪವಿರುವುದು ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಿದೆ.

11.ಅನ್ನಪೂರ್ಣೇಶ್ವರಿಯ ಮಹಿಮೆ

11.ಅನ್ನಪೂರ್ಣೇಶ್ವರಿಯ ಮಹಿಮೆ

ಇಲ್ಲಿ ಎಲ್ಲರಿಗೂ ಉಚಿತವಾಗಿ ಮಧ್ಯಾಹ್ನದಲ್ಲಿ ಹಾಗು ರಾತ್ರಿಯಲ್ಲಿ ಊಟವನ್ನು ಮಹಾಪ್ರಸಾದವಾಗಿ ನೀಡಲಾಗುತ್ತದೆ. ಹೊರನಾಡು ಕ್ಷೇತ್ರವು ಬೆಂಗಳೂರಿನಿಂದ 315 ಕಿ.ಮೀ, ಶೃಂಗೇರಿಯಿಂದ 44 ಕಿ.ಮೀ, ಧರ್ಮಸ್ಥಳದಿಂದ 95 ಕಿ.ಮೀ ಹಾಗು ಕುದುರೆಮುಖದಿಂದ ಸುಮಾರು 30 ಕಿ.ಮೀಗಳಷ್ಟು ದೂರದಲ್ಲಿದೆ.

12.ಅನ್ನಪೂರ್ಣೇಶ್ವರಿಯ ಮಹಿಮೆ

12.ಅನ್ನಪೂರ್ಣೇಶ್ವರಿಯ ಮಹಿಮೆ

2 ನೇ ಅನ್ನಪೂರ್ಣಾ ಮಂದಿರ ಯಾವುದೆಂದರೆ ಅದು ಕಾಶಿ. ಉತ್ತರ ಪ್ರದೇಶ ರಾಜ್ಯದಲ್ಲಿರುವ ಪ್ರಖ್ಯಾತವಾದ ಧಾರ್ಮಿಕ ತಾಣವಾದ ವಾರಾಣಾಸಿಯಲ್ಲಿ ಅನ್ನಪೂರ್ಣೆಯ ಈ ದೇವಾಲಯವಿದೆ. ಪ್ರಖ್ಯಾತ ಕಾಶಿ ವಿಶ್ವನಾಥನ್ ದೇವಾಲಯದಿಂದ ಕೇವಲ 50 ಅಡಿಗಳಷ್ಟು ದೂರದಲ್ಲಿ ಈ ಮಂದಿರವಿದೆ. ಇಲ್ಲಿಗೆ ಸಾವಿರಾರು ಭಕ್ತಾಧಿಗಳು ಭೇಟಿ ನೀಡುತ್ತಿರುತ್ತಾರೆ.

13.ಅನ್ನಪೂರ್ಣೇಶ್ವರಿಯ ಮಹಿಮೆ

13.ಅನ್ನಪೂರ್ಣೇಶ್ವರಿಯ ಮಹಿಮೆ

ದಂತಕಥೆಯ ಪ್ರಕಾರ, ಪಾರ್ವತಿಯು ಅನ್ನಪೂರ್ಣೆಯ ಅವತಾರ ಧರಿಸಿದಾಗ ಕಾಶಿಯಲ್ಲಿಯೇ ಅಡುಗೆ ಮನೆಯ ನಿರ್ಮಾಣ ಮಾಡಿ ಪ್ರತಿಯೊಬ್ಬರಿಗೂ ಆಹಾರವನ್ನು ನೀಡಿದಳಂತೆ. ಹಾಗಾಗಿಯೇ ಈ ದೇವಾಲಯಕ್ಕೆ ವಿಶೇಷವಾದ ಮಹತ್ವವಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ