Search
  • Follow NativePlanet
Share
» »ಶಿವಮೊಗ್ಗದಲ್ಲಿರುವ ಪುರಾತನ ಹಾಗೂ ಆಕರ್ಷಕ ದೇವಾಲಯಗಳು!

ಶಿವಮೊಗ್ಗದಲ್ಲಿರುವ ಪುರಾತನ ಹಾಗೂ ಆಕರ್ಷಕ ದೇವಾಲಯಗಳು!

By Vijay

ಮಲೆನಾಡ ಸುಂದರಿ, ಪಶ್ಚಿಮ ಘಟ್ಟಕ್ಕೆ ಪ್ರವೇಶ ದ್ವಾರ ಎಂಬೆಲ್ಲ ಖ್ಯಾತಿಗಳಿಗೆ ಪಾತ್ರವಾಗಿರುವ ತುಂಗಾ ನದಿ ತಟದ ಮೇಲೆ ನೆಲೆಸಿರುವ ಶಿವಮೊಗ್ಗವು ಕರ್ನಾಟಕದಲ್ಲಿರುವ ಪ್ರಮುಖ ನಗರಗಳ ಪೈಕಿ ಒಂದಾಗಿದೆ. ಸಾಕಷ್ಟು ಪ್ರೀತಿ-ವಿಶ್ವಾಸಗಳಿಂದ ಪ್ರವಾಸಿಗರಿಗೆ ಸ್ವಾಗತ ಕೋರುವಂತಹ ವಿಶಾಲ ಹೃದಯದ ಜನರನ್ನು ಹೊಂದಿರುವ ಈ ಜಿಲ್ಲೆಯಲ್ಲಿ ನೋಡಲು ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ.

ಧಾರ್ಮಿಕವಾಗಿಯೂ, ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಸಾಕಷ್ಟು ಹಿಂದು ದೇವಾಲಯಗಳು ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬರುತ್ತವೆ. ಈ ದೇವಾಲಯಗಳಿಗೆ ನಿತ್ಯವು ಪ್ರವಾಸಿಗರು/ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಲೆ ಇರುತ್ತಾರೆ. ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿರುವ ಕೆಲವು ಪುರಾತನ ಹಾಗೂ ವಿಶೇಷವಾದ ದೇವಾಲಯಗಳ ಕುರಿತು ತಿಳಿಯಿರಿ.

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗ ಜಿಲ್ಲೆಯಲ್ಲಿರುವ ಸಾಗರ ತಾಲೂಕಿನ ಇಕ್ಕೇರಿಯಲ್ಲಿರುವ ಶಿವನ ದೇವಾಲಯವಿದು. ಶಿವನು ಇಲ್ಲಿ ಅಘೋರೇಶ್ವರನಾಗಿ ನೆಲೆಸಿರುವುದು ವಿಶೇಷ.

ಚಿತ್ರಕೃಪೆ: Shashidhara halady

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಎರಡು ಕೇರಿ ಅಥವಾ ಎರಡು ಬೀದಿಗಳು ಎಂಬ ಅರ್ಥ ಕೊಡುವ ಇಕ್ಕೇರಿಯು ಸಾಗರ ತಾಲೂಕು ಕೇಂದ್ರದಿಂದ ಸುಮಾರು ಆರು ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Chandu6119

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ವಿಜಯನಗರ, ದ್ರಾವಿಡ, ಹೊಯ್ಸಳ, ಚಾಲುಕ್ಯ ಹಾಗೂ ದಖ್ಖನ್ ವಾಸ್ತು ಶೈಲಿಗಳ ಪ್ರಭಾವವಿರುವುದನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಶಿಲ್ಪಕಲೆಯಿಂದ ಶ್ರೀಮಂತವಾಗಿರುವ ಈ ದೇವಾಲಯವು ಕೆಳದಿಯ ನಾಯಕರಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: B B Susheel Kumar

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಬಳಿಯಿರುವ ಕುಬತೂರು/ಕುಬ್ಬತ್ತೂರು ಎಂಬಲ್ಲಿರುವ ಕೈತಭೇಶ್ವರನ ದೇವಾಲಯ ಇದಾಗಿದೆ.

ಚಿತ್ರಕೃಪೆ: Dineshkannambadi

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಸುಮಾರು ಕ್ರಿ.ಶ.1100 ರಲ್ಲಿ ಹೊಯ್ಸಳ ದೊರೆ ವಿನಯದಿತ್ಯನ ಕಾರ್ಯಾಭಾರವಿದ್ದಾಗ ನಿರ್ಮಾಣವಾದ ಶಿವನಿಗೆ ಮುಡಿಪಾದ ಪ್ರಾಚೀನ ದೇವಾಲಯ ಇದಾಗಿದೆ.

ಚಿತ್ರಕೃಪೆ: Dineshkannambadi

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಭಾರತೀಯ ಪುರಾತತ್ವ ಇಲಾಖೆಯಿಂದ ರಷ್ಟ್ರೀಯ ಮಹತ್ವ ಪಡೆದ ಸ್ಮಾರಕವೆಂದು ನಾಮಾಂಕಿತಗೊಂಡಿರುವ ಈ ದೇವಾಲಯವು ಶ್ರೀಮಂತವಾದ ಶಿಲ್ಪಕಲೆಯಿಂದ ಕೂಡಿದೆ.

ಚಿತ್ರಕೃಪೆ: Dineshkannambadi

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಅಲಸೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಒಂದು ಚಿಕ್ಕ ಗ್ರಾಮ. ಮಲೆನಾಡಿನ ದಟ್ಟ ವನರಾಶಿಯ ಮಧ್ಯದಲ್ಲಿರುವ ಈ ಗ್ರಾಮವು ಚಂಡಿಕೇಶ್ವರಿ ದೇವಾಲಯಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Mmindia1

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಕ್ತಿ ದೇವಿಯ ಅವತಾರವಾದ ಚಂಡಿಕೇಶ್ವರಿ ದೇವಾಲಯದಲ್ಲಿ ನವರಾತ್ರಿಯಂತಹ ಉತ್ಸವಗಳನ್ನು ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ. ನಿತ್ಯವು ಸಾಕಷ್ಟು ಜನ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Mmindia1

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಇರುವ ಹೊಸಗುಂದ ಎಂಬ ಗ್ರಾಮದಲ್ಲಿರುವ ಶಿವನಿಗೆ ಮುಡಿಪಾದ ಉಮಾಮಹೇಶ್ವರ ದೇವಸ್ಥಾನ. ಇದು ಸಾಕಷ್ಟು ಪುರಾತನವಾದ ದೇವಾಲಯವಾಗಿದೆ.

ಚಿತ್ರಕೃಪೆ: Pavanaja

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ರಾಮೇಶ್ವರ ದೇವಾಲಯ : ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ಹಾಗೂ ಭದ್ರಾ ನದಿಗಳು ಸಮ್ಗಮಗೊಂಡು ಇಲ್ಲಿಂದ ತುಂಗಭದ್ರಾ ನದಿಯಾಗಿ ಹರಿಯುತ್ತದೆ. ಹಾಗೆ ಆ ಎರಡು ನದಿಗಳು ಸಂಗಮ ಹೊಂದುವ ಸ್ಥಳವೆ ಕೂಡ್ಲಿ (ಕೂಡಲಿ). ಕೂಡ್ಲಿಯು ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿದೆ. ಇದು ಕೂಡ್ಲಿಯಲ್ಲಿರುವ ರಾಮೇಶ್ವರ ದೇವಾಲಯ.

ಚಿತ್ರಕೃಪೆ: Dineshkannambadi

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಹನ್ನೆರಡನೇಯ ಶತಮಾನದಲ್ಲಿ ನಿರ್ಮಿತವಾದ ಹೊಯ್ಸಳ ಶೈಲಿಯ ಈ ಭವ್ಯ ದೇವಾಲಯವು ಶಿಲ್ಪಕಲೆಯ ದೃಷ್ಟಿಯಿಂದ ಸಾಕಷ್ಟು ಶ್ರೀಮಂತವಾಗಿದ್ದು ಶಿವಮೊಗ್ಗ ನಗರ ಕೇಂದ್ರದ ಈಶಾನ್ಯಕ್ಕೆ ಕೇವಲ ಒಂಭತ್ತು ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲ್ಪುಬಹುದಾಗಿದೆ.

ಚಿತ್ರಕೃಪೆ: Rmuthuprakash

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಹರಿಹರ ದೇವಾಲಯ : ಕೂಡ್ಲಿಯ ಸಂಗಮ ಕ್ಷೇತ್ರದಲ್ಲಿರುವ ಅತಿ ಪುಟ್ಟ ದೇಗುಲ ಇದಾಗಿದೆ. ಇದರ ವೈಶಿಷ್ಟ್ಯತೆಯೆಂದರೆ ತುಂಗಾ ಹಾಗೂ ಭದ್ರಾ ನದಿಗಳು ಕರಾರುವಕ್ಕಾಗಿ ಕೂಡುವ ಸ್ಥಳದಲ್ಲಿಯೆ ಇದನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: HPN

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗ ನಗರದಲ್ಲೆ ರಾಮ, ಸೀತಾ ಹಾಗೂ ಆಂಜನೇಯನಿಗೆ ಮುಡಿಪಾದ ಈ ದೇವಸ್ಥಾನವನ್ನು ಕಾಣಬಹುದು.

ಚಿತ್ರಕೃಪೆ: Chidambara

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಶ್ರೀ ಲಕ್ಷ್ಮಿನರಸಿಂಹರ ಈ ದೇವಸ್ಥಾನವನ್ನು ಕಾಣಬಹುದು. ಸಾಕಷ್ಟು ಪುರಾತ್ನವಾದ ಈ ದೇವಾಲಯ ಐತಿಹಾಸಿಕವಾಗಿ ಮಹತ್ವ ಪಡೆದಿದೆ ಹಾಗೂ ಇತಿಹಾಸಪ್ರಿಯ ಪ್ರವಾಸಿಗರಿಂದ ಇದು ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Primejyothi

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಸಾಗರ ತಾಲೂಕಿನ ವರದಪುರ ಎಂಬ ಗ್ರಾಮದಲ್ಲಿ ಶ್ರೀಧರ ಸ್ವಾಮಿಗಳ ಈ ಆಶ್ರಮವಿದೆ. ಇಲ್ಲೊಂದು ಪವಿತ್ರ ನೀರಿನ ತೊರೆ ಹರಿದಿದ್ದು ಅದರಲ್ಲಿ ತೀರ್ಥಸ್ನಾನ ಮಾಡಲು ಭಕ್ತಾದಿಗಳು ಬರುತ್ತಿರುತ್ತಾರೆ. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಚರ್ಮ ವ್ಯಾಧಿಗಳು ಹಾಗೂ ಮಾಡಿದ ಪಾಪ ಕರ್ಮಗಳು ನಾಶ ಹೊಂದುತ್ತವೆ ಎಂದು ನಂಬಲಾಗಿದೆ.

ಚಿತ್ರಕೃಪೆ: Vpsmiles

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿ ಎಂಬಲ್ಲಿದೆ ಈ ಪುರಾತನ ಕೇದಾರೇಶ್ವರ ದೇವಸ್ಥಾನ. ಶಿವನಿಗೆ ಮುಡಿಪಾದ ಈ ದೇವಸ್ಥಾನದಲ್ಲಿ ವಿಷ್ಣುವಿನ ವಿಗ್ರಹವನ್ನೂ ಸಹ ಕಾಣಬಹುದು. ಕೆಲವು ಉಲ್ಲೇಖಗಳ ಪ್ರಕಾರ, ಈ ದೇವಾಲಯದ ಸಂಬಂಧ ಅಸುರ ರಾಜ ಬಲಿ ಚಕ್ರವರ್ತಿಯೊಂದಿಗಿದೆ ಎನ್ನಲಾಗಿದೆ. ಅಂದಿನ ಸಮಯದಲ್ಲಿ ಇದು ಬಹುವಾಗಿ ಜನರನ್ನು ಆಕರ್ಷಿಸುತ್ತಿತ್ತು. ಅದರಲ್ಲೂ ಪ್ರಮುಖವಾಗಿ ಶೈವ ಸಮುದಾಯದ ಕಾಲಾಮುಖ ಪಂಗಡದವರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ಚಿತ್ರಕೃಪೆ: Pawaskar Vinayak

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಶಿವಮೊಗ್ಗದ ಆಕರ್ಷಕ ದೇವಾಲಯಗಳು:

ಕೇದಾರೇಶ್ವರನ ದೇವಸ್ಥಾನ ಹಿಂದಿನ ಬದಿಯಿಂದ. ಇಲ್ಲಿ ನಾಲ್ಕು ಮುಖಗಳುಳ್ಳ ಬ್ರಹ್ಮನ ವಿಗ್ರಹವನ್ನೂ ಸಹ ದೇವಾಲಯ ಆವರಣದಲ್ಲಿ ಕಾಣಬಹುದಾಗಿದೆ. ದೇವಾಲಯ ಆವರಣದಲ್ಲಿ ಕಂಡುಬರುವ ಚತುರ್ಮುಖ ಬ್ರಹ್ಮನ ವಿಗ್ರಹ.

ಚಿತ್ರಕೃಪೆ: Pawaskar Vinayak

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more