» »ಶಂಖದ ಆಕಾರದಲ್ಲಿ ತುಂಗ್ ಕೋಟೆಯ ಸೊಬಗು

ಶಂಖದ ಆಕಾರದಲ್ಲಿ ತುಂಗ್ ಕೋಟೆಯ ಸೊಬಗು

By: Divya

ಊರಿನಿಂದ ಚಿಕ್ಕಮ್ಮ ಬಂದಿದ್ದಳು. ಆಕೆ ಶಾಲೆ, ಪಾಠ ಎನ್ನುತ್ತಾ ಸಂಬಂಧಿಕರ ಮನೆಗೆ ಬರುವುದೇ ಅಪರೂಪ. ಹಾಗೊಮ್ಮೆ ಸ್ವಲ್ಪ ಸಮಯ ಸಿಕ್ಕರೂ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುತ್ತಾಳೆ. ಪುರಾತನ ವೈಭವಗಳ ಬಗ್ಗೆ ಕಲೆಹಾಕಿ, ಶಾಲೆಯ ಮಕ್ಕಳಿಗೆ ಹೇಳುತ್ತಾಳೆ. ಅವರು ನಮ್ಮ ಮನೆಗೆ ಬಂದಾಗ ಎಲ್ಲಾದರೂ ಕರೆದುಕೊಂಡು ಹೋಗಬೇಕು ಎನ್ನುವ ಮನಸ್ಸಾಯಿತು. ಅದಕ್ಕಾಗಿ ಬೆಂಗಳೂರಿಗೆ ಹತ್ತಿರ ಇರುವ ಐತಿಹಾಸಿಕ ತಾಣ ಯಾವುದು ಎಂದು ಜಾಲಾಡಿದೆ. ಆಗ ಕಣ್ಣಿಗೆ ಬಿದ್ದಿದ್ದು ತುಂಗ್ ಕೋಟೆ.

ತುಂಗ್ ಕೋಟೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಬೆಂಗಳೂರಿನಿಂದ 920.6 ಕಿ.ಮೀ. ದೂರದಲ್ಲಿರುವುದಿಂದ 13 ತಾಸುಗಳ ಪ್ರಯಾಣ ಮಾಡಬೇಕು. ಚಿಕ್ಕಮ್ಮ ಇನ್ನೂ ವಿಮಾನ ಪ್ರಯಾಣ ಮಾಡಿರಲಿಲ್ಲ. ಹಾಗಾಗಿ ಅವಳನ್ನು ವಿಮಾನ ಯಾನದ ಮೂಲಕವೇ ಈ ಕೋಟೆಗೆ ಕರೆದುಕೊಂಡು ಹೋಗಬೇಕೆಂದುಕೊಂಡೆ. ವಾರದ ರಜೆಯಾದ್ದರಿಂದ ಕುಟುಂಬದವರು ಜೊತೆಯಲ್ಲಿ ಬಂದರು. ಎಲ್ಲರು ಒಟ್ಟಿಗೆ ತುಂಗ್ ಕೋಟೆ ಪ್ರಯಾಣ ಪ್ರಾರಂಭಿಸಿದೆವು.

ಶಂಖದ ಆಕಾರದಲ್ಲಿ ತುಂಗ್ ಕೋಟೆಯ ಸೊಬಗು

                                          PC: flickr.com

ಪುಣೆಯಲ್ಲಿರುವ ಈ ತಾಣ ಮಲಾವ್ಲಿ ರೈಲ್ವೆ ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟಕ್ಕಿಂತ 1075 ಅಡಿ ಎತ್ತರದಲ್ಲಿ ನಿಂತಿದೆ. ತುಂಗಿ ಎನ್ನುವ ಹಳ್ಳಿಯಲ್ಲಿರುವುದರಿಂದ ಇದಕ್ಕೆ ತುಂಗ್ ಕೋಟೆ ಎಂದು ಕರೆಯಲಾಗುತ್ತದೆ. ಪಾವನ ಅಣೆಕಟ್ಟನ್ನು ಇಲ್ಲಿ ನಿರ್ಮಿಸಿರುವುದರಿಂದ ಕೋಟೆಯ ಮೂರು ದಿಕ್ಕು ನೀರಿನಿಂದ ಕೂಡಿದೆ. ಇದನ್ನು ಕಾಥಿಂನ್‍ಘಢ ಕೋಟೆ ಎಂತಲೂ ಕರೆಯುತ್ತಾರೆ. ಕಾಥಿಂನ್ ಎಂದರೆ ಮರಾಠಿ ಭಾಷೆಯಲ್ಲಿ ಕಷ್ಟ ಎಂದಾಗುತ್ತದೆ. ಹೆಸರಿಗೆ ತಕ್ಕಂತೆ ಈ ಕೋಟೆಯನ್ನು ಹತ್ತಿ ಹೋಗುವುದು ಅಷ್ಟು ಸುಲಭವಲ್ಲ.

ಪುಣೆಯ ಆಕರ್ಷಣೆಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೋಟೆಯು ಶಂಖದ ಆಕಾರದಲ್ಲಿದ್ದು, ಪರ್ವತದ ಅಂಚಿನಲ್ಲಿದೆ. ಇಲ್ಲಿಗೆ ಹೋಗುವ ದಾರಿಯೂ ಬಹಳ ಕಿರಿದಾಗಿರುವುದರಿಂದ ಕಷ್ಟಪಟ್ಟು ಹತ್ತಬೇಕು. ಈ ಕೋಟೆಗೆ ತಲುಪಬೇಕೆಂದರೆ ಪವನ ಅಣೆಕಟ್ಟಿಯಿಂದ ಸುಮಾರು 400 ಮೀ. ದೂರದವರೆಗೆ ಗುಡ್ಡ ಹತ್ತಿ ಹೋಗಬೇಕು. ಲೋಣಾವಲಾ ಹಳ್ಳಿಯಿಂದಾದರೆ ಸುಮಾರು 20 ಕಿ.ಮೀ. ಆಗುವುದು. ಈ ರಸ್ತೆಮಾರ್ಗವು ಅಷ್ಟಾಗಿ ಅನುಕೂಲಕರವಾಗಿಲ್ಲ. ಆಗ ರಸ್ತೆ ಕಾಮಗಾರಿ ನಡೆಯುತ್ತಿತ್ತು.

ಶಂಖದ ಆಕಾರದಲ್ಲಿ ತುಂಗ್ ಕೋಟೆಯ ಸೊಬಗು

                                             PC: flickr.com

ಚಿಕ್ಕಮ್ಮನಿಗೆ ಕೋಟೆಯ ಸಂಪೂರ್ಣ ವಿವರದ ಅಗತ್ಯವಿದ್ದುದ್ದರಿಂದ ಸ್ಥಳಿಯ ಮಾರ್ಗದರ್ಶಕರನ್ನೊಬ್ಬರನ್ನು ಜೊತೆಯಲ್ಲಿ ಕರೆದೊಯ್ದಿದ್ದೆವು. ಅವುರು ಹೇಳುವ ಪ್ರಕಾರ ಈ ಕೋಟೆಯನ್ನು 1600 ವರ್ಷಕ್ಕಿಂತಲೂ ಮೊದಲೇ ನಿರ್ಮಿಸಲಾಗಿತ್ತು. ಇದನ್ನು ನಿರ್ಮಿಸಿದವರು ಆದಿಲ್ ಶಾಹಿಗಳು. ಆ ನಂತರ ಛತ್ರಪತಿ ಶಿವಾಜಿ ಮಹಾರಜ ವಶಪಡಿಸಿಕೊಂಡನು. ಆದರೆ ಬಹಳ ಕಾಲ ಅಧೀನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.

ಬೆಟ್ಟದ ತುದಿಯಲ್ಲಿ ಇಲ್ಲಿರುವ ಈ ಕೋಟೆಯನ್ನು ಹತ್ತಿ ಹೋಗುವುದು ಅಮೋಘ ಅನುಭವ ನೀಡುತ್ತದೆ. ಚಾರಣ ಪ್ರಿಯರಿಗೆ ಹಾಗೂ ಐತಿಹಾಸಿಕ ತಾಣಗಳ ಬಗ್ಗೆ ಆಸಕ್ತಿ ಇರುವವರಿಗೆ ಇದೊಂದು ಸ್ವರ್ಗತಾಣ. ದಪ್ಪದಾದ ಗೋಡೆಯನ್ನು ಕೋಟೆ ಹೊಂದಿದೆ. ಹಾಗಾಗಿಯೇ ಶತ್ರುಗಳು ಒಳ ನುಗ್ಗಲು ಕಷ್ಟವಾಗುತ್ತಿತ್ತು ಎನ್ನಲಾಗುತ್ತದೆ. ಇದರ ಸುತ್ತಲು ಹುಲ್ಲಿನಿಂದ ಕೂಡಿರುವ ಇಳಿಜಾರು ಪ್ರದೇಶ ಇರುವುದರಿಂದ ಸ್ವಲ್ಪ ಜಾಗೃತರಾಗಿರಬೇಕು.

ಶಂಖದ ಆಕಾರದಲ್ಲಿ ತುಂಗ್ ಕೋಟೆಯ ಸೊಬಗು

                                          PC: commons.wikimedia.org

ಇಲ್ಲಿಗೆ ಬಂದರೆ ಹತ್ತಿರದಲ್ಲಿರುವ ಪವನ ಕೆರೆ, ಲೋಹಘಡ್ ಕೋಟೆ, ಲೈಯನ್ಸ್ ಪಾಯಿಂಟ್, ಡೆಲ್ಲಾ ಅಡ್ವೆಂಚರ್ಸ್, ಪಶ್ಚಿಮ ಘಟ್ಟದ ಗಿರಿಧಾಮಗಳು, ಭಾಜಾ ಗುಹೆ, ಕರ್ಲಾ ಗುಹೆ, ನಾರಾಯಣಿ ದೇಗುಲ, ಲೋಣಾವಲಾ ಕೆರೆ, ತಿಕೋನ ಕೋಟೆ, ಕುನೆ ಜಲಪಾತಗಳನ್ನು ನೋಡಬಹುದು.

Please Wait while comments are loading...