Search
  • Follow NativePlanet
Share
» »ಭಾರತದಲ್ಲಿನ ಯಾವ ಸ್ಥಳಗಳು ಯಾವ ವಿದೇಶದಿಂದ ಇದೆ ಗೊತ್ತ?

ಭಾರತದಲ್ಲಿನ ಯಾವ ಸ್ಥಳಗಳು ಯಾವ ವಿದೇಶದಿಂದ ಇದೆ ಗೊತ್ತ?

ಭಾರತದಲ್ಲಿ ಕಂಡುಬರುವ ಕೆಲವೊಂದು ಸ್ಥಳಗಳು ಹಾಗೂ ರಚನೆಗಳು ವಿದೇಶಗಳಲ್ಲಿರುವ ಸ್ಥಳ ಹಾಗೂ ರಚನೆಗಳೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು ಸಾಕಷ್ಟು ಗಮನಸೆಳೆಯುತ್ತವೆ.

ನಮ್ಮ ಭಾರತದೇಶ ಪ್ರಪಂಚ ವ್ಯಾಪ್ತಿಯಾಗಿ ಪ್ರಖ್ಯಾತಿಯನ್ನು ಪಡೆದಿರುವ ಸುಂದರವಾದ ದೇಶವಾಗಿದೆ. ಭಾರತ ದೇಶವು ತನ್ನದೇ ಆದ ಸಂಸ್ಕøತಿ ಹಾಗು ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಭವ್ಯವಾದ ದೇಶವಾಗಿದೆ. ಹಾಗಾಗಿಯೇ ವಿದೇಶದವರು ಕೂಡ ನಮ್ಮ ಭಾರತ ದೇಶವನ್ನು ಅತಿ ಹೆಚ್ಚಾಗಿ ಇಷ್ಟ ಪಡುತ್ತಾರೆ.

ವಿದೇಶದಂತೆಯೇ ನಮ್ಮ ದೇಶದಲ್ಲಿಯೂ ಕೂಡ ಸುಂದರವಾದ ಪ್ರದೇಶಗಳು ಇದ್ದು, ವಿದೇಶಕ್ಕೆ ಸೆಡ್ಡು ಹೊಡೆದಂತೆ ಇದೆ. ನಮ್ಮ ಭಾರತ ದೇಶದಲ್ಲಿ ವಿದೇಶದಂತೆಯೇ ಹೋಲುವ ಸುಂದರವಾದ ಪ್ರದೇಶಗಳನ್ನು ಕಾಣಬಹುದಾಗಿದೆ. ಭಾರತ ದೇಶವು ತನ್ನ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿದ್ದು, ಶ್ರೇಷ್ಟವಾದ ದೇಶ ಎಂಬ ಹೆಸರಿನಿಂದ ಗುರುತಿಸಿಕೊಂಡಿದೆ.

ವಿದೇಶದಲ್ಲಿನ ಸ್ಥಳಗಳನ್ನು ಕಾಣಲು ಅಲ್ಲಿಗೇ ಹೋಗಬೇಕಾಗಿಲ್ಲ, ಬದಲಿಗೆ ವಿದೇಶಕ್ಕೆ ಹೋಲಿಸುವಂತೆ ನಮ್ಮ ಭಾರತ ದೇಶದಲ್ಲಿ ಹಲವಾರು ಪ್ರದೇಶಗಳಿವೆ. ಅವುಗಳನ್ನು ಲೇಖನದ ಮೂಲಕ ತಿಳಿಯೊಣ.

ಹಿನ್ನೀರು

ಹಿನ್ನೀರು

ಕೇರಳದಲ್ಲಿರುವ ಹಿನ್ನೀರಿನ ಪ್ರವಾಸವು ಪ್ರಖ್ಯಾತಿಯನ್ನು ಗಳಿಸಿರುವ ಪ್ರದೇಶವಾಗಿದೆ. ಅಲಪುಳಾ ಅಥವಾ ಅಲೆಪ್ಪಿಯನ್ನು "ವೆನಿಸ್ ಆಫ್ ಇಂಡಿಯಾ" ಎಂದೇ ಕರೆಯುತ್ತಾರೆ. ಏಕೆಂದರೆ ಇಟಲಿ ದೇಶದ ವೆನಿಸ್ ನಗರವು ಯಾವ ರೀತಿ ಇದೆಯೋ ಅದೇ ರೀತಿಯಲ್ಲಿಯೇ ಕೇರಳದ ಹಿನ್ನೀರು ಕೂಡ ಇದೆ. ಸಾಮಾನ್ಯ ಸಂಚಾರಕ್ಕೆ ದೋಣಿಗಳನ್ನೇ ಬಹುತೇಕವಾಗಿ ಇಲ್ಲಿ ಬಳಸಲಾಗುತ್ತದೆ.


PC:ReflectedSerendipity

ಸುಂದರವಾದ ಕಟ್ಟಡಗಳು

ಸುಂದರವಾದ ಕಟ್ಟಡಗಳು

ಇನ್ನೊಂದು ವಿಷಯವೆನೆಂದರೆ ವೆನಿಸ್ ನಗರದಲ್ಲಿ ನೀರಿನ ಮೂಲಕ ಸಾಗುತ್ತ ಅಲ್ಲಿನ ಅದ್ಭುತವಾದ ಕಟ್ಟಡಗಳ ನೋಟವನ್ನು ಸವಿಯಬಹುದಾಗಿದೆ. ಅಲೆಪ್ಪಿಯಲ್ಲಿ ಪ್ರಾಕೃತಿಕ ಸೊಬಗನ್ನು ಹೆಚ್ಚಾಗಿ ಪ್ರವಾಸಿಗರು ಸವಿಯಬಹುದಾಗಿದೆ. ವಿದೇಶದ ಸೌಂದರ್ಯದ ಬದಲಾಗಿ ಇಲ್ಲಿನ ಅದ್ಭುತವಾದ ಸೌಂದರ್ಯವನ್ನು 2 ದಿನಗಳ ಕಾಲ ಇದ್ದು ಸವಿಯಬಹುದಾಗಿದೆ.

PC: Oliver Clarke

ಕೊಡಗು

ಕೊಡಗು

ಕರ್ನಾಟಕ ರಾಜ್ಯದಲ್ಲಿರುವ ಅತ್ಯಂತ ಸುಂದರವಾದ ಸ್ಥಳವೆಂದರೆ ಅದು ಕೊಡುಗು ಎಂದೇ ಹೇಳಬಹುದು. ಇಲ್ಲಿ ಅತ್ಯಂತ ಸುಂದರವಾದ ಗಿರಿಧಾಮವಾದ ಕೊಡಗು ಅನ್ನು ಪ್ರೀತಿಯಿಂದ "ಸ್ಕಾಟ್ ಲ್ಯಾಂಡ್ ಆಫ್ ಇಂಡಿಯಾ" ಎಂದು ಬಣ್ಣಿಸುತ್ತಾರೆ. ಈ ಅದ್ಭುತವಾದ ಸ್ಥಳವು ಸ್ಕಾಟ್ ಲ್ಯಾಂಡ್‍ನ ಯುನೈಟೆಡ್ ಕಿಂಗ್ ಡಂ ನಂತೆಯೇ ಇದೆ. ಇಲ್ಲಿಯೂ ಕೂಡ ಹಚ್ಚ ಹಸಿರಿನ ಸಿರಿಯನ್ನು ಕಂಡು ವಿದೇಶದ ಅನುಭವವನ್ನು ಪಡೆಯಬಹುದಾಗಿದೆ.

ಸ್ಕಾಟ್ ಲ್ಯಾಂಡ್

ಸ್ಕಾಟ್ ಲ್ಯಾಂಡ್

ಸ್ಕಾಟ್ ಲ್ಯಾಂಡ್‍ನ ದಿ ಲೋಚನ್‍ನಲ್ಲಿ ಕಂಡುಬರುವ ಹಸಿರು ಮೈಸಿರಿ ಇದು. ಈ ಸುಂದರವಾದ ಪ್ರದೇಶಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.


PC:Jonathan Combe


ಖಜ್ಜಿಯಾರ್

ಖಜ್ಜಿಯಾರ್

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಖಜ್ಜಿಯಾರ್ ತನ್ನ ವೈಭವಯುತ ಪ್ರಾಕೃತಿಕ ಸೊಬಗಿನಿಂದ ಸ್ವಿಟ್ಜರ್ ಲ್ಯಾಂಡ್ ಆಫ್ ಇಂಡಿಯಾ ಎಂದೇ ಹೇಳಬಹುದು.

PC:Amit.pratap1988

ಸ್ವಿಟ್ಜರ್ ಲ್ಯಾಂಡ್

ಸ್ವಿಟ್ಜರ್ ಲ್ಯಾಂಡ್

ವಿಶ್ವದಲ್ಲೆ ಅಗ್ರಗಣ್ಯ ಹಾಗು ಜನಪ್ರಿಯ ಪ್ರವಾಸಿ ತಾಣಗಳ ಪಂಕ್ತಿಯಲ್ಲಿ ನಿಲ್ಲುತ್ತದೆ. ಅದ್ಭುತವಾದ ನೋಟವನ್ನು ಇಲ್ಲಿ ಪ್ರವಾಸಿಗರು ಕಣ್ಣುತುಂಬಿಕೊಳ್ಳಬಹುದು.


PC: Grzegorz Jereczek


ಪಾಂಡಿಚೇರಿ ಫ್ರೆಂಚ್ ಕಾಲೋನಿ

ಪಾಂಡಿಚೇರಿ ಫ್ರೆಂಚ್ ಕಾಲೋನಿ

ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಪಾಂಡೆಚೇರಿಯ ಫ್ರೆಂಚ್ ಕಾಲೋನಿಯಲ್ಲಿ ಕಂಡುಬರುವ ರಸ್ತೆ ಹಾಗು ಕಟ್ಟಡಗಳು ಗ್ರೀಕ್ ದೇಶದ ಫೀರಾದಲ್ಲಿ ಕಂಡುಬರುವ ಮನೆ ಹಾಗು ಇತರೆ ಕಟ್ಟಡಗಳ ರಚನೆಗಳೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿರುವುದನ್ನು ಗಮನಿಸಬಹುದು.

PC:McKay Savage

ಆಕರ್ಷಕ

ಆಕರ್ಷಕ

ಇದು ಗ್ರೀಕ್ ದೇಶ ಪೀರಾ ಎಂಬ ಪಟ್ಟಣವಾಗಿದೆ. ಈ ಪ್ರದೇಶಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

PC:: Norbert Nagel

ನೈನಿತಾಲ್ ಕೆರೆ

ನೈನಿತಾಲ್ ಕೆರೆ

ಉತ್ತರಾಖಂಡ ರಾಜ್ಯದ ನೈನಿತಾಲ್‍ನಲ್ಲಿರುವ ನೈನಿತಾಲ್ ಕೆರೆ ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್‍ನಲ್ಲಿರುವ ಕೆರೆಯೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವುದನ್ನು ಕಾಣಬಹುದು.

PC:Extra999

ಲೇಕ್ ಡಿಸ್ಟ್ರಿಕ್ಟ್

ಲೇಕ್ ಡಿಸ್ಟ್ರಿಕ್ಟ್

ಇದು ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್‍ನಲ್ಲಿರುವ ಕೆರೆ.


PC:Richard Webb

ಇಂಡಿಯಾ ಗೇಟ್

ಇಂಡಿಯಾ ಗೇಟ್

ಭಾರತದ ರಾಜಧಾನಿ ನಗರವಾದ ದೆಹಲಿಯಲ್ಲಿರುವ ದೇಶ ಅತ್ಯಂತ ಪ್ರಸಿದ್ಧವಾದ ಸ್ಮಾರಕವಾಗಿದೆ ಇಂಡಿಯಾ ಗೇಟ್. ಆರ್ಕ್ ಡಿ ಟ್ರೋಂಫೆ, ಪ್ಯಾರಿಸ್‍ನಲ್ಲಿರುವ ಸ್ಮಾರಕವಾಗಿದ್ದು, ಇಂಡಿಯಾ ಗೇಟ್‍ನೊಂದಿಗೆ ಸಾಮ್ಯತೆಯನ್ನು ಹೊಂದಿದೆ.

PC:Leon Yaakov


ಆರ್ಕ್ ಡಿ ಟ್ರೊಂಫ್

ಆರ್ಕ್ ಡಿ ಟ್ರೊಂಫ್

ಫ್ರಾನ್ಸ್ ದೇಶದ ರಾಜಧಾನಿ ನಗರವಾದ ಪ್ಯಾರಿಸ್ ನಗರದಲ್ಲಿರುವ ಸುಂದರವಾದ ಸ್ಮಾರಕವಾಗಿದೆ.

PC:Skyline-Photo

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X