Search
  • Follow NativePlanet
Share
» »ಭಾರತದ ಯಾವ ಸ್ಥಳ ಯಾವ ವಿದೇಶದ ಹಾಗಿದೆ?

ಭಾರತದ ಯಾವ ಸ್ಥಳ ಯಾವ ವಿದೇಶದ ಹಾಗಿದೆ?

By Vijay

ಐತಿಹಾಸಿಕ ಶ್ರೀಮಂತಿಕೆ, ಅಸಾಧಾರಣ ಪರಂಪರೆ, ಜಗತ್ತೆ ಬೆರಗಾಗಿ ನೋಡುವಂತಹ ಆಚರಣೆ-ಸಂಪ್ರದಾಯಗಳನ್ನು ಹೊತ್ತು ನಿಂತಿರುವ ಭಾರತವು ಆಧ್ಯಾತ್ಮಿಕ ಹಾಗೂ ಧಾರ್ಮಿಕತೆಯಲ್ಲಿ ಸಾಕಷ್ಟು ಪಳಗಿದ್ದು ಪ್ರಪಂಚಕ್ಕೆ ಆಧ್ಯಾತ್ಮಿಕ ರಾಜಧಾನಿಯಾಗಿ ಮೆರೆಯುತ್ತದೆ ಎಂದರೂ ತಪ್ಪಾಗಲಾರದು.

ಜಗತ್ತಿನಲ್ಲಿ ಬಹುತೇಕ ವಿದೇಶಿ ಪ್ರವಾಸಿಗರು ಭಾರತ ಎಂದಾಕ್ಷಣ, ಇಲ್ಲಿನ ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ ಹಾಗೂ ಸಾಧು-ಸಂತರ ತಪಸ್ಸು, ಸರಾಸರಿ ಮನುಷ್ಯನ ಕುತೂಹಲಕರ ಜೀವನಶೈಲಿಯ ಕುರಿತೆ ಹೆಚ್ಚು ಆಕರ್ಷಿತರಾಗುತ್ತಾರೆ. ಆ ನಿಟ್ಟಿನಲ್ಲಿ ಇಂದಿನ ಯುವ ಜನಾಂಗವೂ ಸಹ ಅದೆ ರೀತಿಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎನ್ನಬಹುದು.

ಜಗತ್ತಿಗೆ ಇದು ಭಾರತ ಎಂದು ಹೇಳುವ ಹೆಗ್ಗುರುತುಗಳು!

ಆದರೆ, ಭಾರತ ಇವುಗಳಿಗೆ ಮಾತ್ರ ಸೀಮಿತವೆ? ಖಂಡಿತ ಇಲ್ಲ, ಇಲ್ಲಿ ಹೇಗೆ ಸನಾತನ ಧರ್ಮವು ತನ್ನ ಶ್ರೀಮಂತ ವೈಭವತೆಯಿಂದ ದೇಶವನ್ನು ಆಧ್ಯಾತ್ಮಿಕ ಸ್ತರದಲ್ಲಿ ಜಗತ್ತಿನಲ್ಲೆ ಬಹು ಎತ್ತರದಲ್ಲಿ ನಿಲ್ಲುವಂತೆ ಮಾಡಿದೆಯೊ ಅದೇ ರೀತಿಯಾಗಿ ಭಾರತದ ಹಲವಾರು ಸ್ಥಳಗಳು ತಮ್ಮ ಸಹಜ ಹಾಗೂ ಅತಿ ಶ್ರೇಷ್ಠ ಪ್ರಾಕೃತಿಕ ಸೊಬಗಿನಿಂದ ಚುಂಬಕದಂತೆ ಆಕರ್ಷಿಸುವುದಲ್ಲೆ ಮನದಲ್ಲಿ ಅಚ್ಚಳಿಯದೆ ನಿಲ್ಲುವ ಹಾಗೆ ಮಾಡುತ್ತವೆ.

ಈ ಸ್ಥಳಗಳು ನಾವು ಆಗಾಗ ಟಿವಿ ಪರದೆಯ ಮೇಲೋ ಅಥವಾ ಚಿತ್ರಮಂದಿರಗಳಲ್ಲೊ ನೋಡುವ ಅಂದ ಚೆಂದ ವಿದೇಶಿ ಸ್ಥಳಗಳಂತೆಯೆ ಆಕರ್ಷಕವಾಗಿ ಕಂಡುಬರುತ್ತವೆ. ಅಂತೆಯೆ ಭಾರತದಲ್ಲಿನ ಕೆಲವು ಸ್ಥಳಗಳಿಗೆ ವಿದೇಶಿ ನಾಮಾಂಕಿತಗಳನ್ನು ಪ್ರೀತಿಯಿಂದ ನೀಡಲಾಗಿದೆ. ಹಾಗಾದರೆ ಬನ್ನಿ ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿ ಕಂಡುಬರುವ ಕೆಲವು ಆಯ್ದ ಯಾವೆಲ್ಲ ಸ್ಥಳಗಳು, ರಚನೆಗಳು ಪ್ರಖ್ಯಾತಿ ಪಡೆದಿರುವ ವಿದೇಶಗಳ ರಚನೆ ಅಥವಾ ಸ್ಥಳಗಳ ಹಾಗಿದೆ ಎಂಬುದನ್ನು ತಿಳಿಯಿರಿ.

ಹಿನ್ನೀರು

ಹಿನ್ನೀರು

ಕೇರಳದಲ್ಲಿರುವ ಹಿನ್ನೀರಿನ ಪ್ರವಾಸಕ್ಕೆ ಪ್ರಖ್ಯಾತಿಗಳಿಸಿದ ಅಲಪುಳಾ ಅಥವಾ ಅಲೆಪ್ಪಿಯನ್ನು "ವೆನಿಸ್ ಆಫ್ ಇಂಡಿಯಾ" ಎಂತಲೆ ಕರೆಯುತ್ತಾರೆ. ಏಕೆಂದರೆ ಇಟಲಿ ದೇಶದ ವನಿಸ್ ನಗರವು ಯಾವ ರೀತಿ ಹಿನ್ನೀರಿನಲ್ಲಿ ಕಳೆಗಟ್ಟುತದೊ ಅದೆ ರೀತಿಯಾಗಿ ಅಲೆಪ್ಪಿಯೂ ಸಹ. ಸಾಮಾನ್ಯ ಸಂಚಾರಕ್ಕೆ ದೋಣಿಗಳನ್ನೆ ಬಹುತೇಕವಾಗಿ ಬಳಸಲಾಗುತ್ತದೆ. ಅಲ್ಲದೆ ಇವೆರಡೂ ನಗರಳು ಪ್ರವಾಸಕ್ಕೆ ಹೆಸರುವಾಸಿ.

ಚಿತ್ರಕೃಪೆ: ReflectedSerendipity

ನಳ ನಳಿಸುವ ಕಟ್ಟಡಗಳು

ನಳ ನಳಿಸುವ ಕಟ್ಟಡಗಳು

ಇನ್ನೊಂದು ವಿಷಯವೆಂದರೆ ವೆನಿಸ್ ನಗರದಲ್ಲಿ ನೀರಿನ ಮೂಲಕ ಸಾಗುತ್ತ ಅತ್ಯದ್ಭುತ ಕಟ್ಟಡಗಳ ನೋಟವನ್ನು ಸವಿಯಬಹುದಾಗಿದ್ದು ಅಲೆಪ್ಪಿಯಲ್ಲಿ ಪ್ರಾಕೃತಿಕ ಸೊಬಗನ್ನು ಹೆಚ್ಚಾಗಿ ಸವಿಯಬಹುದಾಗಿದೆ.

ಚಿತ್ರಕೃಪೆ: Oliver Clarke

ಕೊಡಗು

ಕೊಡಗು

ಭಾರತದ ಕರ್ನಾಟಕ ರಾಜ್ಯದಲ್ಲಿರುವ ಅತಿ ಸುಂದರ ಗಿರಿಧಾಮವಾದ ಕೊಡಗನ್ನು ಪ್ರೀತಿಯಿಂದ "ಸ್ಕಾಟ್ ಲ್ಯಾಂಡ್ ಆಫ್ ಇಂಡಿಯಾ" ಎಂದೆ ಕರೆಯಲಾಗುತ್ತದೆ. ಏಕೆಂದರೆ ಉನೈಟೆಡ್ ಕಿಂಗ್ಡಂನ ಭಾಗ ಹಾಗೂ ಒಂದು ರಾಷ್ಟ್ರವಾಗಿರುವ ಸ್ಕಾಟ್ ಲ್ಯಾಂಡ್ ನಲ್ಲಿ ಹಸಿರಿನ ಸಿರಿ ಹಾಗೂ ಕೊಡಗನಾಡಿನ ಮೈಸಿರಿಯಲ್ಲಿ ಸಾಮ್ಯತೆಯನ್ನು ಕಾಣಬಹುದು.

ಚಿತ್ರಕೃಪೆ: Kalidas Pavithran

ಸ್ಕಾಟ್ ಲ್ಯಾಂಡ್

ಸ್ಕಾಟ್ ಲ್ಯಾಂಡ್

ಸ್ಕಾಟ್ ಲ್ಯಾಂಡ್ ನ ದಿ ಲೋಚನ್ ನಲ್ಲಿ ಕಂಡುಬರುವ ಹಸಿರಿನ ಮೈಸಿರಿ.

ಚಿತ್ರಕೃಪೆ: Jonathan Combe

ಖಜ್ಜಿಯಾರ್

ಖಜ್ಜಿಯಾರ್

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಖಜ್ಜಿಯಾರ್ ತನ್ನ ವೈಭವಯುತ ಪ್ರಾಕೃತಿಕ ಸೊಬಗಿನಿಂದ ಸ್ವಿಟ್ಜರ್ ಲ್ಯಾಂಡ್ ಆಫ್ ಇಂಡಿಯಾ ಎಂದೆ ಕರೆಸಿಕೊಳ್ಳುತ್ತದೆ.

ಚಿತ್ರಕೃಪೆ: Amit.pratap1988

ಸ್ವಿಟ್ಜರ್ ಲ್ಯಾಂಡ್

ಸ್ವಿಟ್ಜರ್ ಲ್ಯಾಂಡ್

ವಿಶ್ವದಲ್ಲೆ ಅಗ್ರಗಣ್ಯ ಹಾಗೂ ಜನಪ್ರೀಯ ಪ್ರವಾಸಿ ತಾಣಗಳ ಪಂಕ್ತಿಯಲ್ಲಿ ನಿಲ್ಲುತ್ತದೆ ಸ್ವಿಟ್ಜರ್ ಲ್ಯಾಂಡ್

ಚಿತ್ರಕೃಪೆ: Grzegorz Jereczek

ಪಾಂಡಿಚೆರಿ ಫ್ರೆಂಚ್ ಕಾಲೋನಿ

ಪಾಂಡಿಚೆರಿ ಫ್ರೆಂಚ್ ಕಾಲೋನಿ

ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾದ ಪಾಂಡಿಚೆರಿಯ ಫ್ರೆಂಚ್ ಕಾಲೋನಿಯಲ್ಲಿ ಕಮ್ಡುಬರುವ ರಸ್ತೆ ಹಾಗೂ ಕಟ್ಟಡ ರಚನೆಗಳು ಗ್ರೀಕ್ ದೇಶದ ಫೀರಾದಲ್ಲಿ ಕಂಡುಬರುವ ಮನೆ ಹಾಗೂ ಇತರೆ ಕಟ್ಟಡ ರಚನೆಗಳೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: McKay Savage

ಆಕರ್ಷಕ

ಆಕರ್ಷಕ

ಗ್ರೀಕ್ ದೇಶ ಫಿರಾ ಪಟ್ಟಣ.

ಚಿತ್ರಕೃಪೆ: Norbert Nagel

ನೈನಿತಾಲ್ ಕೆರೆ

ನೈನಿತಾಲ್ ಕೆರೆ

ಉತ್ತರಾಖಂಡ ರಾಜ್ಯದ ನೈನಿತಾಲ್ ನಲ್ಲಿರುವ ನೈನಿತಾಲ್ ಕೆರೆ ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್ ನಲ್ಲಿರುವ ಕೆರೆಯೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವುದನ್ನು ಕಾಣಬಹುದು.

ಚಿತ್ರಕೃಪೆ: Extra999

ಲೇಕ್ ಡಿಸ್ಟ್ರಿಕ್ಟ್

ಲೇಕ್ ಡಿಸ್ಟ್ರಿಕ್ಟ್

ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್ ನಲ್ಲಿರುವ ಕೆರೆ.

ಚಿತ್ರಕೃಪೆ: Richard Webb

ಇಂಡಿಯಾ ಗೇಟ್

ಇಂಡಿಯಾ ಗೇಟ್

ಭಾರತದ ರಾಜಧಾನಿ ನಗರವಾದ ದೆಹಲಿಯಲ್ಲಿರುವ ದೇಶದ ಅತ್ಯಂತ ಗುರುತರವಾದ ಸ್ಮಾರಕವಾಗಿದೆ ಇಂಡಿಯಾ ಗೇಟ್. ಆರ್ಕ್ ಡಿ ಟ್ರೊಂಫೆ, ಪ್ಯಾರಿಸ್ ನಲ್ಲಿರುವ ಸ್ಮಾರಕವಾಗಿದ್ದು ಇಂಡಿಯಾ ಗೇಟ್ ನೊಂದಿಗೆ ಸಾಮ್ಯತೆಯನ್ನು ಹೊಂದಿದೆ.

ಚಿತ್ರಕೃಪೆ: Leon Yaakov

ಆರ್ಕ್ ಡಿ ಟ್ರೊಂಫೆ

ಆರ್ಕ್ ಡಿ ಟ್ರೊಂಫೆ

ಫ್ರಾನ್ಸ್ ದೇಶದ ರಾಜಧಾನಿ ನಗರವಾದ ಪ್ಯಾರಿಸ್ ನಗರದಲ್ಲಿರುವ ಸುಂದರ ಸ್ಮಾರಕ ಇದಾಗಿದೆ.

ಚಿತ್ರಕೃಪೆ: Skyline-Photo

ಜಯಪುರ್

ಜಯಪುರ್

ರಾಜಸ್ಥಾನದ ಪ್ರಖ್ಯಾತ ಪ್ರವಾಸಿ ತಾಣವಾದ ಜಯಪುರ್ ನಲ್ಲಿರುವ ಜಲ್ ಮಹಲ್ ನೋಡಲು ಆಕರ್ಷಕವಾಗಿದ್ದು ಸುತ್ತಲೂ ಇರುವ ನೀರು ಕಣ್ಣಿಗೆ ತಂಪನ್ನಿಯ್ಯುವಂತಿದೆ.

ಚಿತ್ರಕೃಪೆ: LRBurdak

ಲಿಥುವಾನಿಯಾ

ಲಿಥುವಾನಿಯಾ

ಉತ್ತರ ಯುರೋಪ್ ಖಂಡದಲ್ಲಿರುವ ಲಿಥುವಾನಿಯಾ ದೇಶದಲ್ಲಿರುವ ಟ್ರಾಕೈ ಕೋಟೆಯು ಜಲ್ ಮಹಲ್ ದೊಂದಿಗೆ ಸಾಮ್ಯತೆ ಹೊಂದಿದೆ.

ಚಿತ್ರಕೃಪೆ: Leon petrosyan

ಸರೋವರ ಸಿಕ್ಕಿಂ

ಸರೋವರ ಸಿಕ್ಕಿಂ

ಭಾರತದ ಸಿಕ್ಕಿಂನಲ್ಲಿ ಕಂಡುಬರುವ ಗುರುದೊಂಗ್ಮಾರ್ ಸರೋವರವು ಜಗತ್ತಿನಲ್ಲಿ ಅತಿ ಎತ್ತರದಲ್ಲಿ ಸ್ಥಿತವಿರುವ ಅದ್ಭುತ ಸರೋವರಗಳ ಪೈಕಿ ಒಂದಾಗಿದ್ದು ಐಸ್ ಲ್ಯಾಂಡ್ ನ ಜೊಕುಲ್ ಸರ್ಲ್ ಆನ್ ಸರೋವರದೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ.

ಚಿತ್ರಕೃಪೆ: Rupak Sarkar

ಜೊಕುಲ್‍ಸರ್ಲಾನ್

ಜೊಕುಲ್‍ಸರ್ಲಾನ್

ಐಸ್ ಲ್ಯಾಂಡ್ ದೇಶದಲ್ಲಿರುವ ಜೊಕುಲ್‍ಸರ್ಲಾನ್ ಸರೋವರವು ಹಿಮಗಟ್ಟಿದ್ದು ಸಾಕಷ್ಟು ನಯನಮನೋಹರವಾದ ತಾಣವಾಗಿದೆ.

ಚಿತ್ರಕೃಪೆ: Martin Peeks

ಶ್ರೀನಗರ

ಶ್ರೀನಗರ

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿರುವ ಇಂದಿರಾ ಗಾಂಧಿ ಟುಲಿಪ್ ಹೂವುಗಳ ಉದ್ಯಾನವು ಆಮ್ ಸ್ಟರ್ ಡ್ಯಾಂನಲ್ಲಿರುವ ಉದ್ಯಾನದೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ.

ಚಿತ್ರಕೃಪೆ: Abdars

ಆಮ್ಸ್ಟರ್ ಡ್ಯಾಂ

ಆಮ್ಸ್ಟರ್ ಡ್ಯಾಂ

ನೆದರ್ಲ್ಯಾಂಡ್ ದೇಶದ ರಾಜಧಾನಿಯಾದ ಆಮ್ ಸ್ಟರ್ ಡ್ಯಾಂ ನಲ್ಲಿರುವ ಟುಲಿಪ್ ಹುವುಗಳ ಉದ್ಯಾನವು ಇಂದಿರಾಗಾಂಧಿ ಟುಲಿಪ್ ಉದ್ಯಾನದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿದೆ.

ಚಿತ್ರಕೃಪೆ: Randi Hausken

ಚಮೋಲಿ

ಚಮೋಲಿ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಔಲಿ ಗಿರಿಧಾಮವು ನಿರ್ದಿಷ್ಟ ಸಮಯದಲ್ಲಿ ಹಿಮಜಾರುಬಂಡೆ ಹಾಗೂ ಸುಂದರ ಹಸಿರು ಹೊತ್ತ ಸುತ್ತಲು ಹಿಮಪರ್ವತಗಳಿಂದ ಕೂಡಿರುವ ತಾಣವಾಗಿ ಹೆಸರುವಾಸಿಯಾಗಿದ್ದು ಅಮೇರಿಕದ ಅಲಾಸ್ಕಾ ಪ್ರದೇಶವನ್ನು ನೆನಪಿಸುವಂತಿದೆ.

ಚಿತ್ರಕೃಪೆ: Induhari

ಅಲಾಸ್ಕಾ

ಅಲಾಸ್ಕಾ

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಒಂದಾಗಿರುವ ಅಲಾಸ್ಕಾ ಪ್ರದೇಶವೂ ಸಹ ಹಿಮಚ್ಛಾದಿತ ಹಾಗೂ ಹಸಿರಿನ ಪ್ರದೆಶಗಳಿಂದ ಕೂಡಿದೆ.

ಚಿತ್ರಕೃಪೆ: Jason Grote

ಜೈಸಲ್ಮೇರ್

ಜೈಸಲ್ಮೇರ್

ರಾಜಸ್ಥಾನದ ಬಹುತೇಕ ಭಾಗವು ಥಾರ್ ಮರಭೂಮಿಯಿಂದ ಆವೃತವಾಗಿದೆ. ಮರಳಿನ ದಿಬ್ಬಗಳು ಸಾಕಷ್ಟು ಅದ್ಭುತವಾಗಿದ್ದು ಇದು ಮೊರಕ್ಕೊ ದೇಶದ ಸಹಾರಾ ಮರಭೂಮಿಯೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿದೆ.

ಚಿತ್ರಕೃಪೆ: Sankara Subramanian

ಮೊರಕ್ಕೊ

ಮೊರಕ್ಕೊ

ಮೊರಕ್ಕೊ ದೇಶದಲ್ಲಿ ಹರಡಿರುವ ಅಥವಾ ಕಂಡುಬರುವ ಸಹಾರಾ ಮರಭೂಮಿ.

ಚಿತ್ರಕೃಪೆ: Med Rizki ZNIBER

ಗಂಡಿಕೋಟ

ಗಂಡಿಕೋಟ

ಆಂಧ್ರಪ್ರದೆಶ ರಾಜ್ಯದ ಕಡಪ ಜಿಲ್ಲೆಯಲ್ಲಿರುವ ಗಂಡಿಕೋಟ ಗ್ರಾಮವನ್ನು ಅದರ ಭೌಗೋಳಿಕತೆಯ ಕಾರಣದಿಂದಾಗಿ ಭಾರತದ "ಗ್ರ್ಯಾಂಡ್ ಕ್ಯಾನಿಯಾನ್" ಎಂದೆ ಸಂಬೋಧಿಸಲಾಗುತ್ತದೆ. ಒಣ ಬೆಟ್ಟಗುಡ್ಡಗಳ ಮಧ್ಯದಲ್ಲಿರುವ ಕಣಿವೆ ಕಂದಕಗಳಿಗಾಗಿ ಇದು ಪ್ರಸಿದ್ಧವಾಗಿದೆ.

ಚಿತ್ರಕೃಪೆ: Akanksha1811

ಗ್ರ್ಯಾಂಡ್ ಕ್ಯಾನಿಯಾನ್

ಗ್ರ್ಯಾಂಡ್ ಕ್ಯಾನಿಯಾನ್

ಅಮೇರಿಅಕದ ಅರಿಜೋನಾ ರಾಜ್ಯದಲ್ಲಿರುವ ಕೊಲೊರೋಡಾ ನದಿ ಹರಿದು ಹೋಗಿರುವ ಗ್ರ್ಯಾಂಡ್ ಕ್ಯಾನಿಯಾನ್ ಗಂಡಿಕೋಟದೊಂದಿಗೆ ಸಾಮ್ಯತೆಯನ್ನು ಹೊಂದಿರುವುದನ್ನು ಕಾಣಬಹುದು.

ಚಿತ್ರಕೃಪೆ: J Brew

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more