Search
  • Follow NativePlanet
Share
» » ಬೇಸಿಗೆಯಲ್ಲಿ ಗೋವಾಕ್ಕೆ ಹೋಗಬೇಕು ಯಾಕೆ ಗೊತ್ತಾ?

ಬೇಸಿಗೆಯಲ್ಲಿ ಗೋವಾಕ್ಕೆ ಹೋಗಬೇಕು ಯಾಕೆ ಗೊತ್ತಾ?

ಅಬ್ಬಬ್ಬಾ !!! ಎಂಥಾ ಧಗೆ !!! ಈ ಬೇಸಿಗೆ ಕಳೆಯುವವರೆಗೂ ಹೇಗಪ್ಪಾ ತಡೆಯುವುದು . ಇಲ್ಲೇ ಎಲ್ಲಾದರೂ ಒಂದು ನದಿಯೋ, ಹೊಳೆಯೋ ಇದ್ದಿದ್ದರೆ ತುಂಬ ಚೆನ್ನಾಗಿರ್ತಿತ್ತು . ಇವೆಲ್ಲ ನಮ್ಮ ಜೀವನದಲ್ಲಿ ಪ್ರತಿ ವರ್ಷ ಆಯಾ ಕಾಲಕ್ಕೆ ತಕ್ಕಂತೆ ಎದುರಾಗುವ ಒಂದು ಭಾಗವಷ್ಟೇ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ನಡೆಯುವ ಗುಣ ನಮ್ಮದಾಗಬೇಕು. ಹಾಗೆಂದು ಇಷ್ಟೊಂದು ಬಿಸಿಲು ಬಂದರೆ ತಡೆದುಕೊಳ್ಳಬೇಕೇ ? ಇದಕ್ಕೆ ಪರ್ಯಾಯ ಮಾರ್ಗವೇನೂ ಇಲ್ಲವೇ ? ಏಕಿಲ್ಲ ಇದೆ. ಸಮಸ್ಯೆ ಎಂದ ಮೇಲೆ ಪರಿಹಾರ ಇಲ್ಲದೆ ಇರುತ್ತದೆಯೇ ?

 ಗೋವಾ ಬೀಚ್

ಗೋವಾ ಬೀಚ್

PC: Satyajit Nayak
ಬಿಸಿಲಿನ ಝಳಕ್ಕೆ ನಮ್ಮ ದೇಹಕ್ಕೆ ಒಂದು ಒಳ್ಳೆಯ ಆಹ್ಲಾದಕರವಾದ ಖುಷಿಯಾದ ಅನುಭವ ಒದಗಿಸಿಕೊಡುವ ಸ್ಥಳವೆಂದರೆ, ಅದು ವಿಶ್ವಪ್ರಸಿದ್ಧವಾದ ನಮ್ಮ ಭಾರತದಲ್ಲೇ ಇರುವ ಗೋವಾ ಬೀಚ್. ಇದೇನಿದು ? ಬಿಸಿಲಿನ ಕ್ಷಣದಲ್ಲಿ ಯಾವುದಾದರೂ ಒಂದು ತಂಪಾದ ಸ್ಥಳ ಹೇಳುತ್ತಾರೆ ಎಂದುಕೊಂಡರೆ ಗೋವಾ ಎಂದು ಹೇಳುತ್ತಿದ್ದಾರೆ. ಇವರಿಗೇನಾದರೂ ಬುದ್ದಿ ಕಮ್ಮಿಯೇ ? ಅಥವಾ ಬೇಸಿಗೆಯಲ್ಲಿ ಗೋವಾ ಹೇಗಿರುತ್ತದೆ ಎಂದು ಇವರಿಗೇನಾದರೂ ಸ್ವಲ್ಪವಾದರೂ ಗೊತ್ತಿದೆಯೇ ? ನಾವು ಅಲ್ಲಿಗೆ ಹೋಗುವುದೇ ಪಾರ್ಟಿ ಮಾಡುವುದಕ್ಕೆ. ಆದರೆ ಮಿರ ಮಿರ ಮಿಂಚುವ ಬಿಸಿಲಿನ ಹಬೆಗೆ ಗೋವಾದಲ್ಲಿ ಸದಾ ಪಾರ್ಟಿ ಮಾಡಲೆಂದೇ ಇರುವ ಸ್ಥಳಗಳೆಲ್ಲಾ ಬಂದ್ ಆಗಿರುತ್ತವೆ. ಆದರೆ ನೀವು ಬೇಸಿಗೆಯಲ್ಲಿ ಗೋವಾಕ್ಕೆ ಹೋಗಲು ಈ ಕೆಳಗಿನ ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಿ. ಹೇಗಾದರೂ ಒಂದು ರೀತಿಯಲ್ಲಿ ಉಪಯೋಗವಾಗುತ್ತದೆ.

 ಗೋವಾ, ಬೇಸಿಗೆಯಲ್ಲಿ ಎಲ್ಲ ರೀತಿಯಲ್ಲೂ ಅತ್ಯಂತ ಅಗ್ಗ

ಗೋವಾ, ಬೇಸಿಗೆಯಲ್ಲಿ ಎಲ್ಲ ರೀತಿಯಲ್ಲೂ ಅತ್ಯಂತ ಅಗ್ಗ

PC: Archaeodontosaurus
ಹೌದು ಇದು ನಂಬಲು ಅಸಾಧ್ಯವೆನಿಸಿದರೂ ಸತ್ಯ. ನೀವು ಬೇಸಿಗೆಯಲ್ಲಿ ಗೋವಾಕ್ಕೆ ಹೋಗಲು ಬಯಸಿದರೆ ನೀವು ತಯಾರಾಗಿ ಹೊರಡುವ ಮೊದಲು ಬುಕ್ ಮಾಡುವ ಫ್ಲೈಟ್ ಟಿಕೆಟ್ ನಿಂದ ಹಿಡಿದು , ನಿಮಗಿಷ್ಟವಾಗುವ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡುವ ತನಕ ಬೇರೆ ಯಾವುದೇ ಬೀಚ್ ಗೆ ಹೋಲಿಸಿದರೆ ಅಲ್ಲಿ ಎಲ್ಲಾ ಅತ್ಯಂತ ಅಗ್ಗವೇ. ನೀವು ಅಲ್ಲಿ ಉಳಿಸಿದ ಹಣವನ್ನು ಅಲ್ಲೇ ಪಾರ್ಟಿ ಮಾಡಲೋ ಅಥವಾ ಸುತ್ತಾಡಲೂ ಅಥವಾ ಏನಾದರು ತೆಗೆದುಕೊಳ್ಳಲು ಉಪಯೋಗಿಸಬಹುದು ಅದು ಇನ್ನೂ ಹೆಚ್ಚಿನ ರಿಯಾಯಿತಿ ದರದಲ್ಲಿ. ಏಕೆಂದರೆ ನೀವು ಕಷ್ಟ ಪಟ್ಟು ದುಡಿದ ಹಣವನ್ನೇ ಅಲ್ಲವೇ ನೀವು ಉಳಿಸುತ್ತಿರುವುದು. ಗೋವಾ ಗೆ ಹೋಗಲು ಇದಕ್ಕಿಂತಾ ಒಂದು ಕಾರಣ ಬೇಕೇ ?

ಗೋವಾ ಶಾಪಿಂಗ್‌ನ ಸ್ವರ್ಗ

ಗೋವಾ ಶಾಪಿಂಗ್‌ನ ಸ್ವರ್ಗ

PC:Nikkul
ಗೋವಾದಲ್ಲಿ ಶಾಪಿಂಗ್ ಮಾಡುವುದೇ ಒಂದು ಖುಷಿ. ಹೌದು ಗೋವಾ ಬೀಚ್ ನ ಶಾಪಿಂಗ್ ಅನುಭವವೇ ಹಾಗೆ. ಬೇಸಿಗೆ ಕಾಲದಲ್ಲಂತೂ ಬೀಚ್ ಬಳಿಯಲ್ಲಿ ಎಲ್ಲರೂ ಬಯಸುವುದು ಸ್ವಿಮ್ ಸೂಟ್. ಬೀಚ್ ನ ಪಕ್ಕದಲ್ಲೇ ಸಾಲು ಸಾಲಾಗಿ ಜೋಡಿಸಿರುವ ಅಂಗಡಿಗಳಲ್ಲಿ ಸಿಗುವ ಇಂತಹ ಸುಂದರ ವಸ್ತುಗಳು, ಬಟ್ಟೆ-ಬರೆಗಳು ಬಹಳ ಅಗ್ಗ. ಜೊತೆಗೆ ಬೇಸಿಗೆ ಆದ್ದರಿಂದ ಇಲ್ಲಿಗೆ ಬರುವ ಜನರು ಮತ್ತು ಪ್ರವಾಸಿಗರು ಸಹ ಅತ್ಯಂತ ವಿರಳ . ಜೊತೆಗೆ ನಾವು ಮೇಲೆ ತಿಳಿಸಿದಂತೆ ಫ್ಲೈಟ್ ಟಿಕೆಟ್ ಬುಕಿಂಗ್ ನಲ್ಲಿ ನೀವು ಉಳಿಸಿದ ಹಣವನ್ನು ಇಲ್ಲಿ ಶಾಪಿಂಗ್ ಗಾಗಿ ಖರ್ಚು ಮಾಡಬಹುದಲ್ಲವೇ.. ಇದರಿಂದ ನಿಮ್ಮ ಶಾಪಿಂಗ್ ಅಗ್ಗವಾದರೂ ಖುಷಿ ದುಪ್ಪಟ್ಟಾಗುತ್ತದೆ ತಾನೇ?

ಕೆಲವೇ ಪ್ರವಾಸಿಗರು, ಹಲವು ರೀತಿಯ ಖುಷಿಯ ಅನುಭವ

ಕೆಲವೇ ಪ್ರವಾಸಿಗರು, ಹಲವು ರೀತಿಯ ಖುಷಿಯ ಅನುಭವ

PC:Tanya Dedyukhina
ಸಾಮಾನ್ಯವಾಗಿ ಪ್ರವಾಸಿಗರು ಬೇಸಿಗೆಯಲ್ಲಿ ಗೋವಾ ಬಿಟ್ಟು ಬೇರೆ ಬೀಚ್ ಗಳನ್ನೇ ತಮ್ಮ ಪ್ರವಾಸಿ ತಾಣಗಳಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ ಇಲ್ಲಿನ ರಣ ಬಿಸಿಲು. ಇಲ್ಲಿ ಬೇಸಿಗೆಯಲ್ಲಿ ಸಿಗುವ ಹಲವಾರು ಒಳ್ಳೆಯ ಅದ್ಬುತ ಪ್ರಯೋಜನಗಳನ್ನು ತಾವೇ ಮಿಸ್ ಮಾಡಿಕೊಳ್ಳುತ್ತಾರೆ. ಹೇಗೂ ಪ್ರವಾಸಿಗರ ಸಂಖ್ಯೆ ವಿರಳವಾದ್ದರಿಂದ ಬೀಚ್ ನಲ್ಲಿ ನಿಮ್ಮ ಕುಟುಂಬದ ಜೊತೆಗೆ ಅತ್ಯಂತ ಖುಷಿಯಾಗಿ ಕಾಲ ಕಳೆಯಬಹುದು. ನಿಮ್ಮ ಪ್ರೈವೆಸಿಗೆ ಯಾರೂ ಅಡ್ಡ ಬರುವುದಿಲ್ಲ. ಬೇಸಿಗೆ ಆದ್ದರಿಂದ ಸಾಗರದ ನೀರಿನಲ್ಲಿ ನಿಮ್ಮ ಕುಟುಂಬದೊಂದಿಗೆ ದೋಣಿಯ ವಿಹಾರ , ವಾಟರ್ ಸ್ಪೋರ್ಟ್ಸ್ ಎಲ್ಲಾ ಅತ್ಯಂತ ರಿಯಾಯಿತಿ ದರದಲ್ಲೇ ಸಿಗುತ್ತದೆ . ಸಾಲದಕ್ಕೆ ನೀವು ನೋಡಲು ಬಯಸುವ ಕೋಟೆ , ಬಂದರುಗಳು ನೋಡಲು ಮುಕ್ತವಾಗಿ ನಯನ ಮನೋಹರವಾಗಿ ಕಣ್ಮನ ತಣಿಸುತ್ತವೆ.

ಬೋಟ್ ಪ್ಯಾರಾಸೈಲಿಂಗ್

ಹೌದು. ನೀವು ಒಬ್ಬ ಪ್ರವಾಸಿಗರಾಗಿ ಅಲ್ಲದೆ ಸಾಹಸ ಪ್ರವೃತ್ತಿಯ ಮನೋಭಾವವುಳ್ಳವರಾಗಿದ್ದರೆ , ಗೋವಾದಲ್ಲಿನ ಬೋಟ್ ಪ್ಯಾರಾಸೈಲಿಂಗ್‌ನ ಅನುಭವ ಮಿಸ್ ಮಾಡಿಕೊಳ್ಳುವ ಹಾಗಿಲ್ಲ . ಏಕೆಂದರೆ ಬೇಸಿಗೆಯೇ ಗೋವಾದಲ್ಲಿ ಬೋಟ್ ಪ್ಯಾರಾಸೈಲಿಂಗ್ ಮಾಡಲು ಒಳ್ಳೆಯ ಸಮಯ. ಇಲ್ಲಿಗೆ ಭೇಟಿ ಕೊಡುವ ಯಾವ ಪ್ರವಾಸಿಗರೂ ಪ್ಯಾರಾಸೈಲಿಂಗ್ ಮಿಸ್ ಮಾಡಿರುವ ಉದಾಹರಣೆಯೇ ಇಲ್ಲ . ಅಷ್ಟು ಅದ್ಬುತ ಈ ಅನುಭವ. ಸಾಗರದ ಮಧ್ಯದಲ್ಲಿ ದೋಣಿಯಲ್ಲಿ ನಿಂತು ನೀರಿನಲ್ಲಿ ತೇಲುತ್ತಾ ಸಮುದ್ರದ ಸುತ್ತ ಕಣ್ಣಾಯಿಸಿ ದಡದತ್ತ ನೋಡುವುದೇ ಒಂದು ವಿಶಿಷ್ಟ ಅನುಭವ ಅದೂ ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ .

 ಗೋವಾದಲ್ಲಿ ನಿಮ್ಮ ಕ್ಯಾಮೆರಾದ ಜೊತೆ ಆ ಕ್ಷಣ

ಗೋವಾದಲ್ಲಿ ನಿಮ್ಮ ಕ್ಯಾಮೆರಾದ ಜೊತೆ ಆ ಕ್ಷಣ

PC: Saad Faruque
ಪ್ರವಾಸಕ್ಕೆಂದು ಹೊರಟರೆ ಅದೂ ಗೋವಾ ಕ್ಕೆ ಹೊರಟರೆ ಕ್ಯಾಮೆರಾ ಮರೆಯುವುದುಂಟೆ ? ಸಾಧ್ಯವೇ ಇಲ್ಲ. ಬೇಸಿಗೆಯಲ್ಲಿ ಜನರು ಇಲ್ಲಿಗೆ ಕಡಿಮೆ ಬರುವುದರಿಂದ ಎಂತಹ ಉಪಯೋಗವಾಗುತ್ತದೆ ನೋಡಿ. ನಮ್ಮಂಥಹ ಪ್ರವಾಸಿಗರಿಗೆ ಫೋಟೋ ಕ್ಲಿಕ್ಕಿಸಲು ಇದು ಒಳ್ಳೆಯ ತಾಣ. ಪಕ್ಕದಲ್ಲೇ ತಲೆ ಎತ್ತಿ ನಿಂತಿರುವ ಕೋಟೆಗಳು ಹಾಗು ಚರ್ಚ್‌ಗಳ ಸೌಂದರ್ಯ ಸೆರೆ ಹಿಡಿಯಲು ನಿಮ್ಮದೇ ಆದ ಸಮಯ ತೆಗೆದುಕೊಂಡು ಬಹಳ ಸುಂದರವಾಗಿ ಚಿತ್ರಿಸಬಹುದು.ನಿಮ್ಮ ಕುಟುಂಬದವರೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದು. ಏಕೆಂದರೆ ಫೋಟೋಗಳು ನಮ್ಮ ಕಳೆದುಹೋದ ಮಧುರ ಅದ್ಬುತ ಕ್ಷಣಗಳನ್ನು ನೆನಪಿಗೆ ತರುತ್ತವೆ. ಅಲ್ಲವೇ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X