
ನೀವು ನಿಮ್ಮ ದಿನನಿತ್ಯದ ನಿರಂತರ ಚಟುವಟಿಕೆಗಳಿಂದ ಬೇಸತ್ತಿದ್ದರೆ ಮತ್ತು ದೆಹಲಿಯಲ್ಲಿ ಯಾವುದಾದರೂ ನಿಮ್ಮ ಮನಸ್ಸನ್ನು ತಣಿಸುವಂತಹ ಮತ್ತು ಮಾಲಿನ್ಯದಿಂದ ಕೂಡಿದ ಪರಿಸರದಿಂದ ದೂರವಿದ್ದು ಯಾವುದಾದರೂ ವಿಶ್ರಾಂತಿಯನ್ನು ಕೊಡಬಲ್ಲ ಸ್ಥಳಕ್ಕೆ ಭೇಟಿ ನೀಡ ಬಯಸಿದಲ್ಲಿ, ನೀವು ಅಹಿಂಸಾ ಸ್ಥಳಕ್ಕೆ ಭೇಟಿ ಕೊಡುವುದರ ಬಗ್ಗೆ ಯೋಚಿಸುವುದು ಒಳಿತು.
ಈ ಮೆಟ್ರೋ ಪಾಲಿಟನ್ ಸದ್ದುಗದ್ದಲಗಳಿಂದ ಕೂಡಿದ ನಗರದಲ್ಲಿರುವ ಈ ಸ್ಥಳವು ಶಬ್ದ ಮಾಲಿನ್ಯದಿಂದ ದೂರವಿರುವ ಸ್ಥಳಗಳಲ್ಲೊಂದೆನಿಸಿದ್ದು ಇಲ್ಲಿ ನೀವು ನಿಮ್ಮ ಸ್ವಲ್ಪ ಸಮಯವನ್ನು ಪ್ರಶಾಂತತೆ ಮತ್ತು ಶಾಂತಿಯುತ ಪರಿಸರದ ಮಧ್ಯೆ ಕಳೆಯಬಹುದಾಗಿದೆ. ಅದಕ್ಕಿಂತ ಹೆಚ್ಚಾಗಿ ತಮ್ಮ ವಿಶ್ರಾಂತಿ ರಹಿತ ಭಯಂಕರವಾದ ಜೀವನದಿಂದ ಒಂದು ವಿರಾಮವನ್ನು ಪಡೆಯಲು ಯಾರು ತಾನೆ ಬಯಸುವುದಿಲ್ಲ?
ತುಂಬಿ ಹರಿಯುತ್ತಿದೆ ಅರಿಪ್ಪರ ಫಾಲ್ಸ್, ಅಣ್ಣಕ್ಕೊಂಪಾಯಿಲ್ ಭೇಟಿಗೆ ಇದು ಪರ್ವಕಾಲ
ಆದುದರಿಂದ ಮುಂದೆ ಯಾವಾಗಲಾದರೂ ಇಂತಹ ತೊಂದರೆಯ ಜೀವನದ ಕತ್ತಲೆ ಭರಿತ ಹಾದಿಯಲ್ಲಿ ನೀವು ಬಿದ್ದು ತೊಳಲಾಡುತ್ತಿರುವಿರಿ ಎಂಬ ಭಾವನೆ ನಿಮ್ಮಲ್ಲಿ ಬಂದಲ್ಲಿ, ಅಹಿಂಸಾ ಸ್ಥಳಕ್ಕೆ ಭೇಟಿ ಕೊಡುವುದರ ಬಗ್ಗೆ ಯೋಚನೆ ಮಾಡಿ ಮತ್ತು ಇಲ್ಲಿ ನಿಮ್ಮ ಈ ಎಲ್ಲಾ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಿ. ಆದುದರಿಂದ ಈ ಏಕಾಂತೆಯ ಪ್ರತಿರೂಪವೆನಿಸಿರುವ ಅಹಿಂಸಾ ಸ್ಥಳದ ಬಗ್ಗೆ ಮತ್ತು ಇಲ್ಲಿಗೆ ತಲುಪುವ ಬಗ್ಗೆ ಓದಿ ತಿಳಿಯಿರಿ.

ಅಹಿಂಸಾ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತ ಸಮಯ
Romana Klee
ದೆಹಲಿಯಲ್ಲಿರವ ಈ ಅಹಿಂಸಾ ಸ್ಥಳದ ಪ್ರದೇಶವು ವಿಪರೀತವಾದ ಹವಾಗುಣವನ್ನು ಅನುಭವಿಸುತ್ತದೆ. ಆದುದರಿಂದ ಇದು ಬೇಸಿಗೆಯಲ್ಲಿ ಕಡಿಮೆ ಭೇಟಿ ಕೊಡಲ್ಪಡುವ ಸ್ಥಳವಾಗಿದೆ. ಆದರೂ ಇಲ್ಲಿಗೆ ಜನರು ಇದರ ಸುತ್ತ ಮುತ್ತಲಿರುವ ಉದ್ಯಾನವನಗಳಲ್ಲಿ ಕುಳಿತುಕೊಳ್ಳಲು ಮತ್ತು ಧ್ಯಾನ ಮಾಡುವ ಸಲುವಾಗಿ ಭೇಟಿ ನೀಡುತ್ತಾರೆ. ಆದುದರಿಂದ ಇದು ವರ್ಷವಿಡೀ ಭೇಟಿ ನೀಡಲ್ಪಡುವ ಸ್ಥಳವೆಂದು ಹೇಳಬಹುದು. ಅಹಿಂಸಾ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ಸೆಪ್ಟಂಬರ್ ನಿಂದ ನವೆಂಬರ್ ಮತ್ತು ಫೆಬ್ರವರಿಯಿಂದ ಮಾರ್ಚ್ ವರೆಗಿನ ಸಮಯವಾಗಿದೆ.

ಅಹಿಂಸಾ ಸ್ಥಳದ ಇದರ ರಚನೆ
Jain cloud
ನಗರ ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ದೆಹಲಿಯ ನೈಋತ್ಯ ಜಿಲ್ಲೆಯ ಮೆಹ್ರೌಲಿ ಪ್ರದೇಶದಲ್ಲಿದ್ದು ಇದೊಂದು ಸುಂದರವಾದ ಜೈನ ದೇವಾಲಯವಾಗಿದೆ ಮತ್ತು ಇಲ್ಲಿಯ 13 ಅಡಿ ಎತ್ತರದ ಭಗವಾನ್ ಮಹಾವೀರರ ಪ್ರತಿಮೆಯನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು 1980 ರಲ್ಲಿ ಸ್ಥಾಪನೆಯಾಯಿತು ಮತ್ತು ಒಗ್ಗಟ್ಟು ಮತ್ತು ಸಮಾನತೆಯನ್ನು ಸಂದೇಶವನ್ನು ಸುಂದರವಾದ ಕೆತ್ತನೆಯ ಮೂಲಕ ತೋರಿಸಿರುವುದರಿಂದ ಅತ್ಯಂತ ಜನಪ್ರಿಯವಾಗಿದೆ.

ಸುತ್ತಮುತ್ತಲಿನ ಪ್ರದೇಶ
Jain cloud
ಜೈನರಿಗೆ ಇದೊಂದು ಧಾರ್ಮಿಕ ಮಹತ್ವವುಳ್ಳ ತಾಣವಾಗಿದ್ದರು ಕೂಡ ಈ ಸ್ಥಳದಲ್ಲಿ ಸುಂದರವಾದ ಉದ್ಯಾನಗಳು ಮತ್ತು ಶಾಂತಿಯುತವಾದ ಸ್ಥಳಗಳಿರುವ ಕಾರಣದಿಂದಾಗಿ ಇಲ್ಲಿ ಸುಲಭವಾಗಿ ಧ್ಯಾನ ಮಾಡಬಹುದಾಗಿದೆ ಮತ್ತು ಅಂತರಾತ್ಮದ ಶೋಧನೆಗೆ ಉತ್ತಮವಾದ ಸ್ಥಳವಾದುದರಿಂದ ಎಲ್ಲಾ ಧರ್ಮದವರು ಮತ್ತು ಸಮುದಾಯದ ಜನರಿಂದ ಭೇಟಿ ನೀಡಲ್ಪಡುತ್ತದೆ. ಈ ಸ್ಥಳವಿರುವ ಪ್ರದೇಶದ ಸುತ್ತಮುತ್ತಲೂ ಅತೀ ಚಟುವಟಿಕೆಗಳಿಂದ ಕೂಡಿದ ಬೀದಿಗಳು ಮತ್ತು ಮಾಲಿನ್ಯದಿಂದ ಕೂಡಿದ ಪರಿಸರವಿದ್ದರೂ ಕೂಡಾ ಈ ಸ್ಥಳದಲ್ಲಿ ಶಾಂತಿಯುತವಾದ ಮತ್ತು ಕಳಂಕರಹಿತವಾದ ವಾತಾವರಣವನ್ನು ಇನ್ನೂ ಕಾಯ್ದುಕೊಂಡು ಬಂದಿದೆ.
ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್ ಮಾಡ್ಕೋಬೇಡಿ

ಅಹಿಂಸಾ ಸ್ಥಳಕ್ಕೆ ಏಕೆ ಭೇಟಿ ಕೊಡಬೇಕು
Harjeetsinghnarang
ಹೆಸರೇ ಸೂಚಿಸುವಂತೆ ಅಹಿಂಸೆಯ ಸ್ಥಳವೆಂದೇ ಅರ್ಥೈಸುವ ಈ ಸ್ಥಳವು ಇದರ ಸಂಯೋಜಿತ ಪರಿಸರಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿ ನೀವು ಶಾಂತಿಯುತವಾದ ಪರಿಸರದ ಮಧ್ಯೆ ವಿಶ್ರಾಂತಿಯನ್ನು ಪಡೆಯಬಹುದಾಗಿದೆ. ಇಲ್ಲಿ ಧ್ಯಾನ ಮಾಡುವುದರಿಂದ ಹಿಡಿದು ದೈಹಿಕ ವ್ಯಾಯಾಮಗಳವರೆಗೆ ಮತ್ತು ಛಾಯಾಗ್ರಹಣದಿಂದ ಹಿಡಿದು ಇಲ್ಲಿಯ ಉದ್ಯಾನವನಗಳಲ್ಲಿ ವಿಶ್ರಾಂತಿ ಪಡೆಯುವವರೆಗೆ ಎಲ್ಲವನ್ನೂ ಈ ಸ್ಥಳವು ಇಲ್ಲಿಗೆ ಭೇಟಿ ನೀಡುವವರಿಗೆ ಒದಗಿಸಿಕೊಡುತ್ತದೆ.
ಆದುದರಿಂದ ಎಲ್ಲವೂ ಅತೀ ಚಟುವಟಿಕೆಗಳಿಂದ ಕೂಡಿದ ನಿರಂತರವಾದ ಮೆಟ್ರೋ ಪಾಲಿಟನ್ ನಗರದ ಮಧ್ಯೆ ಇರುವ ಈ ಅದ್ಬುತವಾದ ಸ್ಥಳದಲ್ಲಿ ನೀವು ಕಳೆದುಹೋಗಬೇಕೆಂದಿದ್ದಲ್ಲಿ ಇಲ್ಲಿಗೆ ಭೇಟಿ ಕೊಟ್ಟು ನಿಮ್ಮನ್ನು ನೀವು ಶೋಧಿಸಿಕೊಂಡು ಮತ್ತು ನಿಮ್ಮ ಜೀವನದ ಕಷ್ಟಗಳು ಮತ್ತು ಜಂಜಾಟಗಳಿಗೆ ವಿರಾಮ ಕೊಡಬಾರದೇಕೆ? ಇಲ್ಲಿಗೆ ಹತ್ತಿರವಿರುವ ದೀಪಸ್ಥಂಭಕ್ಕೂ ಭೇಟಿ ಕೊಡಬಹುದಾಗಿದೆ ಇದನ್ನು 19ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಮತ್ತು ಇದೊಂದು ಐತಿಹಾಸಿಕ ಮಹತ್ವವುಳ್ಳ ಸ್ಥಳವಾಗಿದೆ.

ಅಹಿಂಸಾ ಸ್ಥಳಕ್ಕೆ ತಲುಪುವುದು ಹೇಗೆ
Jain cloud
ದೆಹಲಿಯಲ್ಲಿರುವ ಈ ಅಹಿಂಸಾ ಸ್ಥಳವನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ನೀವೇನಾದರು ಬೇರೆ ನಗರದಲ್ಲಿ ವಾಸಿಸುವವರಾದಲ್ಲಿ, ನೀವು ಇಲ್ಲಿಗೆ ನೇರವಾಗಿ ವಿಮಾನದ ಮೂಲಕ ಅಥವಾ ರೈಲಿನ ಮೂಲಕ ಕ್ರಮವಾಗಿ ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ. ದೆಹಲಿಯು ಎಲ್ಲಾ ಪ್ರಮುಖವಾದ ನಗರಗಳಿಗೆ ಎಲ್ಲಾ ರೀತಿಯ ಸಾರಿಗೆಯ ಸೌಕರ್ಯಗಳನ್ನೂ ಹೊಂಡಿದೆ. ಅಹಿಂಸಾ ಸ್ಥಳಕ್ಕೆ ಹತ್ತಿರವಿರುವ ಮೆಟ್ರೋ ನಿಲ್ದಾಣವೆಂದರೆ ಅದು ಸಾಕೇತ್. ಒಮ್ಮೆ ನೀವು ಸಾಕೇತ್ ಗೆ ತಲುಪಿದ ನಂತರ ಇಲ್ಲಿಂದ ನೀವು ಸಿಟಿ ಬಸ್ಸು ಅಥವಾ ಆಟೋ ರಿಕ್ಷಾದ ಮೂಲಕ ಅಹಿಂಸಾ ಸ್ಥಳವನ್ನು ತಲುಪಬಹುದಾಗಿದೆ.
ಇಂಗ್ಲೀಷ್‌ನಲ್ಲಿ ಓದಲು : Ahinsa Sthal In Delhi: Leave Your Troubles Here