» »ಅಹಮದಾಬಾದ್ ನಿಂದ ದಮನ್ - ನಿಮ್ಮ ಇಂದ್ರಿಯಗಳನ್ನು ಸಮ್ಮೋಹನಗೊಳಿಸುವಂತಹ ಅದ್ಬುತವಾದ ನೈಸರ್ಗಿಕ ಸೌಂದರ್ಯತೆಯ ಅನುಭವ ಪಡೆಯ

ಅಹಮದಾಬಾದ್ ನಿಂದ ದಮನ್ - ನಿಮ್ಮ ಇಂದ್ರಿಯಗಳನ್ನು ಸಮ್ಮೋಹನಗೊಳಿಸುವಂತಹ ಅದ್ಬುತವಾದ ನೈಸರ್ಗಿಕ ಸೌಂದರ್ಯತೆಯ ಅನುಭವ ಪಡೆಯ

By: Manjula Balaraj Tantry

ಅಹಮದಾಬಾದ್ ನಿಂದ ದಾಮನ್ ಗೆ ರಸ್ತೆ ಪ್ರಯಾಣಮಾಡುವ ಮತ್ತು ನಿಮ್ಮ ಪ್ರಯಾಣವನ್ನು ಎಂದಿಗೂ ಮರೆಯದಂತೆ ಮಾಡಲು ಬೇಕಾಗುವ ವಿಷಗಳು ಇಲ್ಲಿವೆ. ಪೋರ್ಚುಗೀಸ್ ಪರಂಪರೆಯನ್ನು ಪ್ರಭಾವಶಾಲಿಯಾಗಿ ಪ್ರತಿಬಿಂಬಿಸುವ ದಾಮನ್ ಒಂದು ಜನಪ್ರೀಯ ಪ್ರವಾಸೀ ತಾಣವಾಗಿದೆ.ಎಲ್ಲಾ ವಯಸ್ಸಿನವರಿಗೂ ಇದೊಂದು ಉತ್ತಮ ರಜಾತಾಣವಾಗಿದ್ದು ದಾಮನ್ ಗೆ ದೊಡ್ಡ ಅಥವಾ ಸಣ್ಣ ಗುಂಪು ಮಾಡಿಕೊಂಡು ಭೇಟಿ ನೀಡಿದಲ್ಲಿ ಅದು ಇನ್ನೂ ಹೆಚ್ಚಿನ ಕುತೂಹಲ ಮತ್ತು ಮೋಜು ನೀಡುತ್ತದೆ.

ಇಲ್ಲಿಯ ಸೌಂದರ್ಯತೆ ಮತ್ತು ಪೋರ್ಚುಗೀಸರ ಆಡಳಿತದ ಸಾರವನ್ನು ಹೊಂಬಣ್ಣದ ಮರಳು ಬಾರ್ ಗಳು, ಪಾಮ್ ಮರದ ತೋಪುಗಳು ಮತ್ತು ಪ್ರಶಾಂತವಾದ ಬೀಚ್ ಗಳಲ್ಲಿ ಕಾಣಬಹುದಾಗಿದೆ. ಮೋತಿ ಗಂಗಾ ನದಿ ದಮನ್ ಅನ್ನು ಎರಡು ಭಾಗಗಳಾಗಿ ಮೋತಿ ದಮನ್ ಮತ್ತು ನಾನಿ ದಮನ್ ಎಂದು ವಿಭಜಿಸುತ್ತದೆ.

ಸುಂದರ ನಗರ ಅಹಮ್ಮದಾಬಾದ್ ನಿಂದ ಪ್ರಯಾಣ ಮಾಡಿದರೆ ದಾಮನ್ ತಲುಪಲು ಸುಮಾರು 8-10 ತಾಸು ಬೇಕಾಗುವುದು. ಈ ಪ್ರವಾಸವು ಪ್ರವಾಸಿಗರಿಗೆ ಬೇಕಾದ ಎಲ್ಲಾ ವಿಷಯಗಳನ್ನೂ ಒಳಗೊಂಡಿದ್ದು ತಮ್ಮ ರಜಾದಿನಗಳನ್ನು ಆನಂದಮಯವಾಗಿ ಕಳೆಯಲು ಅನುಕೂಲವಾಗುವಂತಿದೆ.

ದಮನ್ ಗೆ ಪ್ರಯಾಣ ಮಾಡಲು ಸೂಕ್ತ ಸಮಯ

ದಮನ್ ಗೆ ಪ್ರಯಾಣ ಮಾಡಲು ಸೂಕ್ತ ಸಮಯ

PC: Sitanshu

ದಮನ್ ನಲ್ಲಿ ಬಿಸಿಲಿನಿಂದ ಕೂಡಿದ ವಾತಾವರಣವಿದ್ದು ಒಣ ಮತ್ತು ಕಡಿಮೆ ತೇವಾಂಶವನ್ನು ಹೊಂದಿದೆ. ಅರಬ್ಬೀ ಸಮುದ್ರಕ್ಕೆ ಹತ್ತಿರವಿರುವುದರಿಂದ ಇಲ್ಲಿಯ ವಾತಾವರಣವು ವರ್ಷದುದ್ದಕ್ಕೂ ಆಹ್ಲಾದಕರ ವಾತಾವರಣವನ್ನು ಹೊಂದಿದೆ. ಆದರೆ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳ ನಡುವಿನ ತಿಂಗಳುಗಳ ಚಳಿಗಾಲದ ಋತುವಿನಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ ಇಲ್ಲಿ ಉತ್ತಮ ಹವಾಮಾನವನ್ನು ಅನುಭವಿಸಬಹುದು.

ದಮನ್ ಅನ್ನು ತಲುಪುವುದು ಹೇಗೆ

ದಮನ್ ಅನ್ನು ತಲುಪುವುದು ಹೇಗೆ

map

ರೈಲು ಅಥವಾ ರಸ್ತೆ ಮೂಲಕ ದಾಮನ್ ಅನ್ನು ಸುಲಭವಾಗಿ ಸಂಪರ್ಕಿಸಬಹುದು . ಅಹಮ್ಮದಾಬಾದ್ ನಿಂದ ದಮನ್ ಗೆ ನೇರ ವಿಮಾನ ಸಂಪರ್ಕವಿರುವುದಿಲ್ಲವಾದುದರಿಂದ. ವಿಮಾನದ ಪ್ರಯಾಣವನ್ನು ಸೂಕ್ತವಾದುದೆಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ ರೈಲು ಮತ್ತು ರಸ್ತೆಯ ಪ್ರಯಾಣವು ನಿಮ್ಮನ್ನು ಸುತ್ತಲೂ ನೈಸರ್ಗಿಕ ಸೌಂದರ್ಯತೆಯಿಂದ ಸಮ್ಮೋಹನಗೊಳಿಸುತ್ತವೆ. ರಸ್ತೆ ಮೂಲಕ ಪ್ರಯಾಣವು ನೈಸರ್ಗಿಕ ಸೌಂದರ್ಯವನ್ನು ಅನ್ವೇಷಿಸಲು ಒಂದು ಉತ್ತಮವಾದ ಮಾರ್ಗವಾಗಿದೆ.

ರಸ್ತೆ, ರೈಲು ಮತ್ತು ವಾಯು ಮಾರ್ಗಗಳ ಮೂಲಕ ದಾಮನ್ ತಲುಪುವುದು ಹೇಗೆ ತಿಳಿಯಿರಿ ಮತ್ತು ವಿವಿಧ ತಲುಪಲು ಮಾರ್ಗಗಳ ಬಗ್ಗೆ ತಿಳಿಯಿರಿ.

ದಮನ್ ಮಾರ್ಗ 1: ಅಹಮದಾಬಾದ್ - ವಡೋದರಾ - ಸೂರತ್ - ದಮನ್

ಮಾರ್ಗ 2: ಅಹಮದಾಬಾದ್ - ವಲ್ಸಾದ್ - ದಮನ್ ಇಲ್ಲಿ ವಿವರವಾದ ನಕ್ಷೆಯನ್ನು ಪರಿಶೀಲಿಸಿ

ಮಾರ್ಗ 1 ಅತ್ಯುತ್ತಮ ಮಾರ್ಗವಾಗಿದೆ ಮತ್ತು ನೀವು ಪ್ರಯಾಣದ ಮೂಲಕ ಮನಸ್ಸು-ತೃಪ್ತಿಯಾಗುವಂತಹ ಪ್ರವಾಸಿ ಆಕರ್ಷಣೆಯನ್ನು ಪ್ರಯಾಣದಾದ್ಯಂತ ಕಾಣ ಸಿಗುತ್ತದೆ. .

ವಿವರವಾದ ಮಾರ್ಗ ನಕ್ಷೆ

ನಿಮ್ಮ ಪ್ರಯಾಣವು ಸುಂದರ ನಗರ ಅಹಮ್ಮದಾಬಾದ್ ನಿಂದ ಪ್ರಾರಂಭವಾಗುತ್ತದೆ. 111 ಕಿಲೋಮೀಟರ್ ಅಥವಾ ಎರಡು ಗಂಟೆಗಳ ದೂರದ ನಿಲುಗಡೆ ವಡೋದರದಲ್ಲಿ ನಿಮ್ಮ ಮೊದಲ ನಿಲುಗಡೆ.

ವಡೋದರಾ

ವಡೋದರಾ

PC:LOKESHD

ವಡೋದರಾ ಸಮಕಾಲೀನ ವಾಸ್ತುಶೈಲಿಯ ಅತ್ಯುತ್ತಮ ಸಂಗ್ರಹವನ್ನು ಹೊಂದಿದ್ದು, ಇದು ಮರಾಠಾ ಇತಿಹಾಸಕ್ಕೆ ಸಂಪೂರ್ಣವಾಗಿ ಅನುಸರಿಸುತ್ತದೆ. ಈ ದೊಡ್ಡ ನಗರವು ಪಶ್ಚಿಮ ಭಾರತದ ಪ್ರಮುಖ ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ ಎಲ್ಲೂ ನೋಡದಂತಹ ಜನ ಸಂದಣಿಯನ್ನು ಇಲ್ಲಿ ನವರಾತ್ರಿ ಉತ್ಸವದಲ್ಲಿ ಕಾಣಬಹುದು.

ನೀವು ಭೇಟಿ ನೀಡಲು ತಪ್ಪಿಸಿಕೊಳ್ಳಬಾರದಂತಹ ಇತರ ಆಕರ್ಷಣೆಗಳೆಂದರೆ ಶ್ರೀಮಂತ ಅರಮನೆ, ಲಕ್ಷ್ಮಿ ವಿಲಾಸ್ ಅರಮನೆ, ಪ್ರಧಾನ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯ ಮತ್ತು ಹಲವಾರು ಪ್ರಸಿದ್ಧ ಸ್ಮಾರಕಗಳಾಗಿವೆ.

ಸೂರತ್

ಸೂರತ್

PC: Rahul Bhadane T

ನಂತರದ ನಿಲುಗಡೆಯೆಂದರೆ ಅದು ಸೂರತ್ ಇದು ಗುಜರಾತಿನ ಪ್ರಸಿದ್ದ ಹಾಗೂ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ನಗರಗಳಲ್ಲೊಂದಾಗಿದೆ. ಇದು ವಡೋದರಾದಿಂದ 150 ಕಿಲೋಮೀಟರ್ ಅಂತರದಲ್ಲಿದ್ದು ಇಲ್ಲಿಗೆ ತಲುಪಲು ಸುಮಾರು ಮೂರು ತಾಸುಗಳು ಬೇಕಾಗುವುದು.

ಸಾಮಾನ್ಯವಾಗಿ ಫ್ಲೈಓವರ್ ಗಳ ನಗರವೆಂದು ಉಲ್ಲೇಖಿಸಲ್ಪಟ್ಟಿರುವ ಸೂರತ್ ವಜ್ರಗಳು ಮತ್ತು ಬಟ್ಟೆಗಳ ವಾಣಿಜ್ಯ ಕೇಂದ್ರವಾಗಿದೆ.ಸೂರತ್ ನ ಪ್ರಮುಖ ಆಕರ್ಷಣೆಗಳಲ್ಲಿ ಹಝೀರಾ ಎಂಬ ಸುಂದರವಾದ ಪಟ್ಟಣವಿದೆ. ಇದು ಇಲ್ಲಿಯ ಸುಂದರವಾದ ಬೀಚ್ ಗಳಿಗೆ ಜನಪ್ರಿಯವಾಗಿದೆ, ಇಲ್ಲಿಯ ಬಿಸಿ ನೀರಿನ ಬುಗ್ಗೆಗಳು ಮತ್ತು ಇತರ ಮನರಂಜನಾ ಚಟುವಟಿಕೆಗಳಿಂದ ಗಮನ ಸೆಳೆಯುತ್ತದೆ.

ಇಲ್ಲಿಯ ದಮಾಸ್ ಬೀಚ್ ಮತ್ತು ಡಚ್ ಗಾರ್ಡನ್ ಇತರ ಆಕರ್ಷಣಾ ಸ್ಥಳವಾಗಿದ್ದು ಇದು ಅನೇಕ ಪ್ರವಾಸಿಗರು ಮತ್ತು ಸಂದರ್ಶಕರನ್ನು ಸೆಳೆಯುತ್ತದೆ.

ಅಂತಿಮ ಗಮ್ಯಸ್ಥಾನ - ದಮನ್

ಅಂತಿಮ ಗಮ್ಯಸ್ಥಾನ - ದಮನ್

PC: Ameyawiki

ಉಳಿದ 121 ಕಿಲೋಮೀಟರ್ಗಳು ಮತ್ತು ಎರಡುವರೆ ಗಂಟೆಗಳ ಪ್ರಯಾಣವು ನಿಮ್ಮನ್ನು ದಮನ್ ನ ಇನ್ನಿತರ ಬೆರಗುಗೊಳಿಸುವ ಆಕರ್ಷಕ ಸ್ಥಳಗಳಿಗೆ ಕೊಂಡೊಯ್ಯುತ್ತವೆ ಇಲ್ಲಿಯ ವಾತಾವರಣ ಮತ್ತು ಸೌಂದರ್ಯತೆಯು ನಿಮ್ಮನ್ನು ಪ್ರಕೃತಿಯನ್ನು ಪ್ರೀತಿಸುವಂತೆ ಮಾಡುತ್ತದೆ.

ದಮನ್ ಹೊಟೆಲ್ನಲ್ಲಿ ವ್ಯವಹಾರಗಳನ್ನು ಪರಿಶೀಲಿಸಿ

ನೀವು ದಮನ್ ಮತ್ತು ಸುತ್ತಮುತ್ತ ಭೇಟಿ ನೀಡಬಹುದಾದ ಕೆಲವು ಆಕರ್ಷಣೆಗಳಿವೆ

ದೇವ್ಕಾ ಬೀಚ್

ದೇವ್ಕಾ ಬೀಚ್

PC:Dublinsantosh

ಅದ್ಬುತವಾದ ಮತ್ತು ಸುಂದರವಾದ ದೇವ್ಕಾ ಬೀಚ್ ನಲ್ಲಿ ಅಡ್ಡಾಡಿ ಇದು ದಮನ್ ಮತ್ತು ದಿಯೂನ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ ಸಂಗೀತ ಕಾರಂಜಿ ಮತ್ತು ಮನೋರಂಜನಾ ಪಾರ್ಕ್ ಇದರ ದಡವನ್ನು ಇನ್ನೂ ಅಲಂಕರಿಸುತ್ತದೆ. ಇಲ್ಲಿಯ ಮನೋರಂಜನಾ ಪಾರ್ಕ್ ಹಬ್ಬಗಳ ಸಮಯದಲ್ಲಿ ಹೆಚ್ಚು ಬೆಳಗಿಸಲಾಗುತ್ತದೆ ಮತ್ತು ಅನೇಕ ಪ್ರವಾಸಿಗರು ಮತ್ತು ಸಂದರ್ಶಕರನ್ನು ಈ ಹಬ್ಬಗಳಲ್ಲಿ ಭಾಗವಹಿಸಲು ಬರುವವರನ್ನು ಆಕರ್ಷಿಸುತ್ತದೆ.

ಮೋತಿ ದಾಮನ್ ಕೋಟೆ

ಮೋತಿ ದಾಮನ್ ಕೋಟೆ

PC: Viraat

16 ನೇ ಶತಮಾನದ ಮೇರುಕೃತಿಯ ಶ್ರೀಮಂತ ಪರಂಪರೆಯ ಹೊಂದಿರುವ ಮೋತಿ ದಮನ್ ಕೋಟೆಯು ಸಾಂಸ್ಕೃತಿಕ ನೋಟಕ್ಕೆ ಮೆರುಗು ನೀಡುವಂತಿದೆ. ಮೋತಿ ದಮನ್ ಕೋಟೆಯು ಹತ್ತು ಕೊತ್ತಲಗಳು ಮತ್ತು ಎರಡು ಪ್ರಬಲ ಗೇಟ್ವೇಗಳನ್ನು ಹೊಂದಿದೆ.ಪೋರ್ಚುಗೀಸ್ ವಸಾಹತುಶಾಹಿ ಇತಿಹಾಸದಲ್ಲಿ ಈ ಕೋಟೆಯು ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದು ಇಲ್ಲಿ ಹಲವು ಪೋರ್ಚುಗೀಸ್ ಆಡಳಿತಗಾರರು ಕೋಟೆಯಲ್ಲಿ ನೆಲೆಸಿದ್ದರು.

ಮಿರಸೋಲ್ ಲೇಕ್ ಗಾರ್ಡನ್

ಮಿರಸೋಲ್ ಲೇಕ್ ಗಾರ್ಡನ್

PC: wikimedia.org

ಮಿರಸೋಲ್ ಲೇಕ್ ಗಾರ್ಡನ್ ಒಂದು ಮಾನವ ನಿರ್ಮಿತ ಅದ್ಬುತವಾಗಿದ್ದು ಈಗ ಇದು ಅತ್ಯಂತ ಭೇಟಿ ಕೊಡಲ್ಪಡುವ ಪ್ರವಾಸಿ ತಾಣವೆನಿಸಿದೆ. ಎರಡು ದ್ವೀಪಗಳ ನಡುವೆ ಪರಸ್ಪರ ಸಂಪರ್ಕ ಹೊಂದಿದ್ದು ಒಂದು ಸೇತುವೆಯ ಮೂಲಕ ಮತ್ತು ಒಂದು ಆಕರ್ಷಣೀಯ ಸರೋವರದ ಮೂಲಕ ಪರಸ್ಪರ ಸಂಪರ್ಕ ಹೊಂದುತ್ತದೆ. ಈ ಉದ್ಯಾನವನವು ವಿರಾಮದಾಯಕ ಅನೇಕ ಸೌಲಭ್ಯಗಳನ್ನು ಹೊಂದಿದೆ ಅವುಗಳಲ್ಲಿ ಬೋಟ್ ವಿಹಾರ ಮತ್ತು ಕಾರಂಜಿಯು ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.

ಈ ಪ್ರಸಿದ್ದ ದೇವಾಲಯವು ದಾಬೆಲ್ ಗ್ರಾಮದಲ್ಲಿದ್ದು ಇದು ಶಿವನಿಗೆ ಅರ್ಪಿತವಾದ ದೇವಾಲಯವಾಗಿದೆ. ದೇಶದ ವಿವಿಧ ಭಾಗಗಳಿಂದ ಜನರನ್ನು ಗಮನ ಸೆಳೆಯುವ ಗಂಗಾಜಿ ಫೇರ್ ಎಂಬ ಪ್ರಸಿದ್ಧ ವಾರ್ಷಿಕ ಉತ್ಸವ ನಡೆಯುತ್ತದೆ. ದೇವಸ್ಥಾನದಲ್ಲಿ ಶಿವಲಿಂಗವನ್ನು 19 ನೆಯ ಶತಮಾನದಲ್ಲಿ ಸನ್ಯಾಸಿಯೊಬ್ಬರು ನಿರ್ಮಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.

ಜಂಪೋರ್ ಬೀಚ್

ಜಂಪೋರ್ ಬೀಚ್

PC: Sreya D

ಇದು ಕಪ್ಪು ಮಿಶ್ರಿತ ಕೆಸರು ಬಣ್ಣದ ನೀರಿಗೆ ಹೆಸರುವಾಸಿಯಾಗಿದೆ. ಜಂಪೋರ್ ಬೀಚ್ ಒಂದು ಮನಶಾಂತಿ ಮತ್ತು ವಿಶ್ರಾಂತಿ ಬಯಸುವವರಿಗೆ ಒಂದು ಆದರ್ಶಕರವಾದ ಜಾಗವಾಗಿದೆ. ನಿಮ್ಮ ಇಂದ್ರಿಯಗಳನ್ನು ಈ ಸುಂದರವಾದ ಮರಳುಬಾರ್ ಇರುವ ಜಾಗ ಮತ್ತು ಉದ್ದನೆಯ ಮರಗಳ ಮತ್ತು ಸಮುದ್ರದ ತಂಪಾದ ಗಾಳಿಯ ಮಧ್ಯೆ ಸಂತೋಷಗೊಳಿಸಿ ಮತ್ತು ವಿಶ್ರಾಂತಿ ಪಡೆಯಿರಿ.

ಸಿಲ್ವಸ್ಸ

ಸಿಲ್ವಸ್ಸ

PC: Paulmshr14

ದಾದ್ರ ಮತ್ತು ನಾಗರ್ ಹವೇಲಿಯ ರಾಜಧಾನಿಯಾಗಿರುವ ಸಿಲ್ವಸ್ಸಾ ಇದು ಭವ್ಯವಾದ ಸಸ್ಯಗಳ ಸೌಂದರ್ಯತೆ ಮತ್ತು ಪಿಪಾರಿಯಾ ಉದ್ಯಾನವನದ ನಯನ ಮನೋಹರ ಜಲಪಾತಗಳು ನಿಮ್ಮನ್ನು ಸೆರೆಹಿಡಿಯುತ್ತದೆ ಇದು ನಿಮ್ಮ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಇಲ್ಲಿ ಥಾರ್ಪ ಮತ್ತು ಮಾಸ್ಕ್ ನೃತ್ಯದ ಜೊತೆಗೆ ರುಚಿಕರವಾದ ಊಟವನ್ನು ಸವಿಯಿರಿ

ದಮನ್ ನಲ್ಲಿ ಸಾಹಸಮಯ ಚಟುವಟಿಕೆಗಳು

ದಮನ್ ನಲ್ಲಿ ಸಾಹಸಮಯ ಚಟುವಟಿಕೆಗಳು

PC: Indrajit Das

ಸಾಹಸಮಯ ಚಟುವಟಿಕೆಗಳಿಗೆ ದಾಮನ್ ಒಂದು ಸೂಕ್ತವಾದ ತಾಣವಾಗಿದೆ. ಇಲ್ಲಿ ನೀವು ಅನೇಕ ಸಾಹಸಮಯ ಚಟುವಟಿಕೆಗಳನ್ನು ಅನುಭವಿಸಬಹುದು. ಅವುಗಳಲ್ಲಿ ಕ್ಯಾನೊಯಿಂಗ್, ವೇಗದ ಬೋಟಿಂಗ್, ಕಾಯಾಕಿಂಗ್, ಮತ್ತು ಇನ್ನಿತರ ನೀರಿನಲ್ಲಿ ಕ್ರೀಡೆಗಳನ್ನು ಹೊಂದಿದೆ. ನೀವು ನೀರಿನಲ್ಲಿ ಆಡಲು ಇಷ್ಟ ಪಡದಿದ್ದಲ್ಲಿ ನಿಮ್ಮ ಗಾಲ್ಫ್ ಕುಶಲತೆಯನ್ನು ಇಲ್ಲಿ ಪರೀಕ್ಷಿಸಬಹುದು ಅಥವಾ ಸರೋವರದಲ್ಲಿ ಪ್ರಣಯಭರಿತ ಸೂರ್ಯಾಸ್ತದ ನೋಟವನ್ನು ಬೋಟ್ ಸವಾರಿಯ ಮೂಲಕ ಕೈಗೊಂಡು ವೀಕ್ಷಿಸಬಹುದು.