Search
  • Follow NativePlanet
Share
» »ಗೋವಾದ ಸಮುದ್ರದ ತೀರದಲ್ಲಿರುವ ಅಗ್ವಾದ ಕೋಟೆಗೊಮ್ಮೆ ಹೋಗಿ ನೋಡಿ

ಗೋವಾದ ಸಮುದ್ರದ ತೀರದಲ್ಲಿರುವ ಅಗ್ವಾದ ಕೋಟೆಗೊಮ್ಮೆ ಹೋಗಿ ನೋಡಿ

ಗೋವಾ ಎಂದಾಕ್ಷಣ ಸಮುದ್ರ ತೀರಗಳೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಗೋವಾವು ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಬೀಚ್‌ಗಳನ್ನು ಹೊರತುಪಡಿಸಿ ಕೋಟೆಗಳು, ಚರ್ಚ್‌ಗಳು, ದೇವಾಲಯಗಳೂ ಇವೆ. ಹಾಗೆಯೇ 400 ವರ್ಷಗಳ ಇತಿಹಾಸವನ್ನು ಹೊಂದುರಯವ ಪೋರ್ಚುಗೀಶರ ಕೋಟೆಯೂ ಇದೆ. ವಾರಾಂತ್ಯದ ತಾಣಗಳಿಗೆ ಇದು ಸೂಕ್ತವಾಗಿದೆ.

ಅಗ್ವಾದ ಕೋಟೆ

ಅಗ್ವಾದ ಕೋಟೆ

PC:Aviatorjk

ಈ ಪೋರ್ಚುಗೀಸರ ಕೋಟೆಯೇ ಅಗ್ವಾದ ಕೋಟೆ. ಈ ಕೋಟೆಯು ಗೋವಾದ ಸಿನ್‌ಕ್ವೇರಿಮ್ ಕಡ ತೀರದ ಸಿಯೋಲಿಮ್ ರಸ್ತೆಯಲ್ಲಿದೆ. ಬೆಂಗಳೂರಿನಿಂದ ಸುಮಾರು 6000 ಕಿ.ಮೀ ಗಳಷ್ಟು ದೂರದಲ್ಲಿದೆ. ಅಗ್ವಾದ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ನೀರು ಎಂದರ್ಥ.

ಕೋಟೆಯ ಇತಿಹಾಸ

ಕೋಟೆಯ ಇತಿಹಾಸ

PC: Nanasur

ಪೋರ್ಚುಗೀಸರ ದಾಳಿಯಿಂದ ನಲುಗುತ್ತಿರುವಾಗ ಈ ಬಂದರು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿಗೆ ಬರುವ ಹಡಗುಗಳು ಹಾಗೂ ಕಂಟೇನರ್ಸ್‍ಗಳ ಆಗಮನ ಹಾಗೂ ನಿರ್ಗಮನಕ್ಕೆ ಅನುಕೂಲವಾಗಲೆಂದು ಗಡಿಯಾರದ ಗೋಪುರವನ್ನು ನಿರ್ಮಿಸಲಾಗಿತ್ತು.

ಇಲ್ಲಿನ ಪ್ರಮುಖ ಆಕರ್ಷಣೆಗಳು

ಇಲ್ಲಿನ ಪ್ರಮುಖ ಆಕರ್ಷಣೆಗಳು

PC:Aviatorjk

ಇಲ್ಲಿನ ಕೋಟೆಗಳಲ್ಲಿ ಉಳಿದವುಗಳು ವಿದೇಶಿಯರ ದಾಳಿಯಿಂದ ನಾಶವಾಗಿದ್ದವು. ಈ ಕೋಟೆಯನ್ನು ಡಚ್ಚರು ಹಾಗೂ ಮರಾಠರ ದಾಳಿಯಿಂದ ಪೋರ್ಚುಗೀಸರು ರಕ್ಷಿಸಿದ್ದರಂತೆ. ಗಡಿಯಾರದ ಗೋಪುರ ಕೋಟೆಯ ಸುಂದರ ಆಕರ್ಷಣೆ. ಇಲ್ಲಿರುವ ಲೈಟ್ ಹೌಸ್ ಏಷ್ಯಾದಲ್ಲಿಯೇ ಅತ್ಯಂತ ಹಳೆಯದ್ದು. ಹಡಗುಗಳಿಗೆ ಸುರಕ್ಷಿತ ಬಂದರು ಇದಾಗಿದೆ.

ಕಾರಾಗೃಹ

ಕಾರಾಗೃಹ

PC:Aaron C

ಈ ಕೋಟೆಯಲ್ಲಿರುವ ಕಾರಾಗೃಹವು ಈ ಕೋಟೆಯ ಇನ್ನೊಂದು ಆಕರ್ಷಣೆಗಳಲ್ಲಿ ಒಂದು . ಮಾದಕ ವಸ್ತು, ಔಷಧಿ ಹಾಗೂ ಇನ್ನಿತರ ವಸ್ತುಗಳನ್ನು ಕಾನೂನು ಬಾಹಿರವಾಗಿ ಸಾಗಾಟ ನಡೆಸುತ್ತಿದ್ದವರನ್ನು ಈ ಜೈಲಿನಲ್ಲಿ ಬಂಧಿಸಲಾಗುತ್ತಿತ್ತು. ಇಲ್ಲಿನ ಕಡಲ ಅಲೆಗಳು ಕೋಟೆಗೆ ಅಪ್ಪಳಿಸುವ ರಮಣೀಯ ದೃಶ್ಯವನ್ನು ನೋಡುವುದೇ ಒಂದು ಖುಷಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X