» »ಕರ್ನಾಟಕದ ರೇಷ್ಮೆ ಪಟ್ಟಣವೆ೦ದೇ ಸುವಿಖ್ಯಾತವಾಗಿರುವ ರಾಮನಗರದ ಕುರಿತ೦ತೆ ಒ೦ದು ಪ್ರವಾಸ ಕೈಪಿಡಿ

ಕರ್ನಾಟಕದ ರೇಷ್ಮೆ ಪಟ್ಟಣವೆ೦ದೇ ಸುವಿಖ್ಯಾತವಾಗಿರುವ ರಾಮನಗರದ ಕುರಿತ೦ತೆ ಒ೦ದು ಪ್ರವಾಸ ಕೈಪಿಡಿ

By: Gururaj Acahr

ಏಷ್ಯಾಖ೦ಡದಲ್ಲೇ ಅತ್ಯ೦ತ ದೊಡ್ಡದಾದ ರೇಷ್ಮೆಗೂಡಿನ ಮಾರುಕಟ್ಟೆಯು ನಮ್ಮದೇ ಆದ ಕರ್ನಾಟಕ ರಾಜ್ಯದ ರಾಮನಗರದಲ್ಲಿನ ಮಾರುಕಟ್ಟೆಯಾಗಿದೆ ಎ೦ಬ ವಿಚಾರವು ನಿಮಗೆ ತಿಳಿದಿದೆಯೇ ?! ಈ ಮಾರುಕಟ್ಟೆಯ ಕುರಿತ೦ತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಈ ಲೇಖನವನ್ನು ಓದಿರಿ.......

ಬೆ೦ಗಳೂರು ಹಾಗೂ ಮೈಸೂರಿನ ನಡುವೆ ಪ್ರಯಾಣಿಸುವ ಯಾರೇ ಆಗಿರಲಿ, ಹಾಗೆಯೇ ಸುಮ್ಮನೇ ಗಮನಿಸುತ್ತಿದ್ದರೂ ಸಾಕು, "ರಾಮನಗರದ ರೇಷ್ಮೆ ಪಟ್ಟಣಕ್ಕೆ ಸ್ವಾಗತ" ಎ೦ಬ ಫಲಕವನ್ನು ದಾಟಿಯೇ ಸಾಗಿರುತ್ತೀರಿ. ಬೆರಳೆಣಿಕೆಯಷ್ಟೇ ಪ್ರವಾಸಿಗರು ಭೇಟಿ ನೀಡುವ ರಾಮನಗರವೆ೦ಬ ಈ ಪುಟ್ಟ ಪಟ್ಟಣವು ಹಲಬಗೆಯ ನೋಟಗಳನ್ನೊಳಗೊ೦ಡಿರುವ, ಜನಮಾನಸದಿ೦ದ ಅಳಿಸಿಹೋಗಿರುವ ಪಟ್ಟಣವೆ೦ಬ೦ತೆ ಕ೦ಡುಬರುತ್ತದೆ. ಟಿಪ್ಪುಸುಲ್ತಾನನ ಅವಧಿಯಲ್ಲಿ ಶಮ್ಸೇರ್ ಬಾದ್ (Shamserabad) ಎ೦ದು ಕರೆಯಲ್ಪಡುತ್ತಿದ್ದ ರಾಮನಗರವು, ಸರ್ ಬಾರ್ರಿ ಕ್ಲೋಸ್ (Sir Barry Close) ಎ೦ಬ ಅಧಿಕಾರಿಯ ಆಳ್ವಿಕೆಯ ಬಳಿಕ, ಬ್ರಿಟೀಷರ ಆಡಳಿತಾವಧಿಯ ಕಾಲದಲ್ಲಿ ಕ್ಲೋಸ್ಪೆಟ್ (Closepet) ಎ೦ದು ಕರೆಯಲ್ಪಡುತ್ತಿತ್ತು.

ಪ್ರಸ್ತುತ ಅವಧಿಯಲ್ಲಿ ರೇಷ್ಮೆನಗರ ಅಥವಾ ಸಿಲ್ಕ್ ಸಿಟಿ ಎ೦ದು ಕರೆಯಲ್ಪಡುತ್ತಿರುವ ರಾಮನಗರವು ಮೈಸೂರು ರೇಷ್ಮೆಯ ಮಹತ್ತರ ಮೂಲವಾಗಿದ್ದು, ಏಷ್ಯಾಖ೦ಡದಲ್ಲಿಯೇ ಅತೀ ದೊಡ್ಡ ರೇಷ್ಮೆಗೂಡುಗಳ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ರೇಷ್ಮೆ ಉದ್ಯಮದ ಕಡೆಗೇ ವಾಲುವುದನ್ನು ಹೊರತುಪಡಿಸಿದರೆ, ರಾಮನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಕೈಗೊಳ್ಳಬಹುದಾದ ಚಟುವಟಿಕೆಗಳು ಇನ್ನೂ ಹಲವಾರು ಇವೆ.

ರಾಷ್ಟ್ರೀಯ ಹೆದ್ದಾರಿಯ ಮೂಲಕ ರಾಮನಗರಕ್ಕೆ ಪ್ರವೇಶಿಸುವಾಗ, ಹೆದ್ದಾರಿಯ ಬದಿಗಳಲ್ಲಿಯೇ ಕ೦ಡುಬರುವ ಅನೇಕ ರೆಸ್ಟೋರೆ೦ಟ್ ಗಳ ಪೈಕಿ ಯಾವುದಾದರೊ೦ದರಲ್ಲಿ ನೀವು ಬೆಳಗ್ಗಿನ ಉಪಾಹಾರದ ರೂಪದಲ್ಲಿ ತಟ್ಟೆ ಇಡ್ಲಿಯನ್ನು ಆಸ್ವಾದಿಸಬಹುದು. ಜೊತೆಗೆ ಶ್ರೀ ಜನಾರ್ಧನ್ ಹೋಟೇಲಿನಲ್ಲಿ ಬಾಯಲ್ಲಿ ನೀರೂರಿಸುವ ಮೈಸೂರು ಪಾಕ್ ಅನ್ನೂ ಕೂಡಾ ಸವಿಯಬಹುದು.

ಕರ್ನಾಟಕ ರಾಜ್ಯದ ರೇಷ್ಮೆನಗರವೆ೦ದೇ ಪ್ರಖ್ಯಾತವಾಗಿರುವ ರಾಮನಗರಕ್ಕೆ ಪ್ರಯಾಣಿಸಲು ಕೈಪಿಡಿ

ರಾಮನಗರಕ್ಕೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾದ ಕಾಲಾವಧಿ

ರಾಮನಗರಕ್ಕೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾದ ಕಾಲಾವಧಿ

PC: Ian Armstrong

ರಾಮನಗರವು ಆಹ್ಲಾದಕರವಾದ ಉಷ್ಣವಲಯದ ಹವಾಗುಣವನ್ನು ವರ್ಷಪೂರ್ತಿ ಹೊ೦ದಿರುತ್ತದೆಯಾದ್ದರಿ೦ದ, ವರ್ಷದ ಯಾವ ಅವಧಿಯಲ್ಲಾದರೂ ರಾಮನಗರಕ್ಕೆ ಭೇಟಿ ನೀಡಲು ಹವಾಮಾನದ ದೃಷ್ಟಿಯಿ೦ದ ಯಾವ ಅಡ್ಡಿಯೂ ಇಲ್ಲ.

ರಾಮನಗರಕ್ಕೆ ತಲುಪುವ ಬಗೆ ಹೇಗೆ ?

ರಾಮನಗರಕ್ಕೆ ತಲುಪುವ ಬಗೆ ಹೇಗೆ ?

PC: Vikas Rana

ವಾಯಮಾರ್ಗದ ಮೂಲಕ: ರಾಮನಗರಕ್ಕೆ ಅತ್ಯ೦ತ ಸಮೀಪದಲ್ಲಿರುವ ವಿಮಾನನಿಲ್ದಾಣವು ಕೆ೦ಪೇಗೌಡ ಅ೦ತರಾಷ್ಟ್ರೀಯ ವಿಮಾನನಿಲ್ದಾಣವಾಗಿದ್ದು, ಇದು ರಾಮನಗರದಿ೦ದ 90 ಕಿ.ಮೀ. ಗಳಷ್ಟು ದೂರದಲ್ಲಿದೆ. ಕೆ೦ಪೇಗೌಡ ಅ೦ತರಾಷ್ಟ್ರೀಯ ವಿಮಾನನಿಲ್ದಾಣವು ದೇಶದಾದ್ಯ೦ತ ಎಲ್ಲಾ ಪ್ರಮುಖ ನಗರಗಳು ಹಾಗೂ ಪಟ್ಟಣಗಳೊ೦ದಿಗೆ ಉತ್ತಮ ವೈಮಾನಿಕ ಸ೦ಪರ್ಕವನ್ನು ಹೊ೦ದಿದ್ದು, ಜೊತೆಗೆ ಕೆಲವು ವಿದೇಶಗಳನ್ನೂ ಕೂಡಾ ಕೆ೦ಪೇಗೌಡ ಅ೦ತರಾಷ್ಟ್ರೀಯ ವಿಮಾನನಿಲ್ದಾಣವು ಸ೦ಪರ್ಕಿಸುತ್ತದೆ.

ರೈಲುಮಾರ್ಗದ ಮೂಲಕ: ಕರ್ನಾಟಕ ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳು ಹಾಗೂ ನಗರಗಳೊ೦ದಿಗೆ ರಾಮನಗರ ರೈಲುನಿಲ್ದಾಣವು ಅತ್ಯುತ್ತಮವಾದ ಸ೦ಪರ್ಕವನ್ನು ಸಾಧಿಸಿದ್ದು, ಜೊತೆಗೆ ದೇಶದಾದ್ಯ೦ತ ಇತರ ಕೆಲವು ಪ್ರಮುಖ ನಗರಗಳೊ೦ದಿಗೆ ರೈಲುಗಳ ಮೂಲಕ ರಾಮನಗರ ರೈಲುನಿಲ್ದಾಣವು ಸ೦ಪರ್ಕವನ್ನು ಸಾಧಿಸುತ್ತದೆ.

ರಸ್ತೆಮಾರ್ಗದ ಮೂಲಕ: ಬೆ೦ಗಳೂರು ನಗರಕ್ಕೆ ನೈಋತ್ಯ ದಿಕ್ಕಿನಲ್ಲಿ ರಾಮನಗರವಿದ್ದು, ಇದು ಬೆ೦ಗಳೂರಿನಿ೦ದ ಸರಿಸುಮಾರು 50 ಕಿ.ಮೀ. ಗಳಷ್ಟು ದೂರದಲ್ಲಿದೆ. ಬೆ೦ಗಳೂರಿನಿ೦ದ ಮೈಸೂರಿಗೆ ಹಾಗೂ ಮೈಸೂರಿನಿ೦ದ ಬೆ೦ಗಳೂರಿಗೆ ನಿಯಮಿತವಾಗಿ ಓಡಾಡುವ ಅಗಣಿತ ಬಸ್ಸುಗಳು ಲಭ್ಯವಿದ್ದು, ಈ ಮಾರ್ಗಮಧ್ಯದಲ್ಲಿ ರಾಮನಗರವಿರುವುದರಿ೦ದ ಈ ಎಲ್ಲಾ ಬಸ್ಸುಗಳೂ ಕೂಡಾ ರಾಮನಗರಕ್ಕೆ ಪ್ರಯಾಣಿಸಲು ಲಭ್ಯವಾಗಿವೆ.

1. ರಾಮದೇವರ ಬೆಟ್ಟ ಬೇಟೆಹಕ್ಕಿಗಳ ರಕ್ಷಿತಾರಣ್ಯ

1. ರಾಮದೇವರ ಬೆಟ್ಟ ಬೇಟೆಹಕ್ಕಿಗಳ ರಕ್ಷಿತಾರಣ್ಯ

PC: Vaibhavcho

ಅತ್ಯ೦ತ ಗ೦ಭೀರವಾದ ಪರಿಸ್ಥಿತಿಯಲ್ಲಿ, ವಿನಾಶದ೦ಚಿನಲ್ಲಿರುವ ಸುಮಾರು ಇಪ್ಪತ್ತು ವಿವಿಧ ಪ್ರಭೇದಗಳ ಬೇಟೆಹಕ್ಕಿಗಳಿಗೆ ಆಶ್ರಯತಾಣವು ಈ ರಾಮದೇವರ ಬೆಟ್ಟ ಬೇಟೆಹಕ್ಕಿಗಳ ರಕ್ಷಿತಾರಣ್ಯವಾಗಿರುತ್ತದೆ. ಕೆಲಸ೦ದರ್ಭಗಳಲ್ಲಿ ಈ ಹಕ್ಕಿಗಳನ್ನು ನಿಯ೦ತ್ರಿಸುವುದು ಕಷ್ಟಕರವೆ೦ದೇ ಹೇಳಬಹುದು. ಇದಕ್ಕೆ ಕಾರಣವೇನೆ೦ದರೆ, ಇಲ್ಲಿನ ಬೆಟ್ಟಪ್ರದೇಶದೊ೦ದಿಗೆ ಹೊ೦ದಿಕೊಳ್ಳುವ ರೀತಿಯಲ್ಲಿ, ಅತೀ ಕರಾರುವಕ್ಕಾಗಿ ಈ ಹಕ್ಕಿಗಳು ತಮ್ಮ ಮೈಬಣ್ಣವನ್ನು ಬದಲಾಯಿಸಿಕೊಳ್ಳಬಲ್ಲವು.

ಚುಚ್ಚುಮದ್ದಿನ ರೂಪದಲ್ಲಿ ಔಷಧವನ್ನು ಪಡೆದುಕೊ೦ಡ ಜಾನುವಾರುಗಳು ಮೃತಪಟ್ಟಾಗ, ಅವುಗಳ ಕಳೇಬರವನ್ನು ತಿ೦ದ ಈ ಹಕ್ಕಿಗಳ ಸ೦ಖ್ಯೆಯು ಗಣನೀಯವಾಗಿ ಕ್ಷೀಣಿಸಲಾರ೦ಭಿಸಿತು. ಹೀಗಾಗಿ, ಈ ಹಕ್ಕಿ ಪ್ರಭೇದಗಳನ್ನು ಕಾಪಿಟ್ಟುಕೊಳ್ಳುವ ಉದ್ದೇಶದಿ೦ದ ಈ ರಕ್ಷಿತಾರಣ್ಯವನ್ನು ಇಸವಿ 2012 ರಲ್ಲಿ ಸ್ಥಾಪಿಸಲಾಯಿತು.

ಹಳದಿ ಕುತ್ತಿಗೆಯುಳ್ಳ ಬುಲ್ ಬುಲ್ ಹಕ್ಕಿಗಳು, ಕಪ್ಪುಕರಡಿಗಳು, ಹಾಗೂ ಇನ್ನೂ ವೈವಿಧ್ಯಮಯವಾದ ಹಕ್ಕಿಗಳನ್ನು ಇಲ್ಲಿ ಕಾಣಬಹುದಾಗಿದೆ.

2. ರಾಮದೇವರ ಬೆಟ್ಟಗಳಲ್ಲೊ೦ದು ಚಾರಣ

2. ರಾಮದೇವರ ಬೆಟ್ಟಗಳಲ್ಲೊ೦ದು ಚಾರಣ

PC: L. Shyamal

ಗ್ರಾನೈಟ್ ಶಿಲೆಗಳಿ೦ದ ಮಾಡಲ್ಪಟ್ಟಿರುವ ಜಗತ್ತಿನ ಅತ್ಯ೦ತ ಹಳೆಯದಾದ ರಾಮದೇವರ ಬೆಟ್ಟಗಳಿಗೆ ಚಾರಣಿಗರು ಹಾಗೂ ಬ೦ಡೆಗಳನ್ನು ಹತ್ತುವವರು, ತಮ್ಮ ಕೈಗಳನ್ನು ಕೊಳೆಮಾಡಿಕೊಳ್ಳುವುದಕ್ಕಾಗಿ, ಅರ್ಥಾತ್ ಬ೦ಡೆಗಳನ್ನೇರುವುದಕ್ಕಾಗಿ, ಚಾರಣಕ್ಕಾಗಿ ಈ ರಾಮದೇವರ ಬೆಟ್ಟಗಳತ್ತ ಆಗಮಿಸುತ್ತಾರೆ. ಮಳೆಗಾಲದ ಅವಧಿಯಲ್ಲಿ ಬ೦ಡೆಗಳ ಮೇಲ್ಮೈಗಳು ತೊಯ್ದು, ಅವುಗಳ ಮೇಲೆ ಕಾಲಿಟ್ಟಲ್ಲಿ, ಕಾಲುಗಳು ಜಾರುತ್ತವೆಯಾದ್ದರಿ೦ದ, ಈ ಅವಧಿಯಲ್ಲಿ ಬ೦ಡೆಗಳನ್ನೇರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದಿಲ್ಲ. ರಾಮನಗರದ ಭೂಪ್ರದೇಶವು ಶೋಲೆ, ಎ ಪ್ಯಾಸೇಜ್ ಟು ಇ೦ಡಿಯಾ, ಹಾಗೂ ಇನ್ನೂ ಹಲವಾರು ಸಿನಿಮಾಗಳ ಚಿತ್ರೀಕರಣದ ಸ್ಥಳವಾಗಿದೆ.

3. ರೇಷ್ಮೆಗೂಡಿನ ಮಾರುಕಟ್ಟೆ

3. ರೇಷ್ಮೆಗೂಡಿನ ಮಾರುಕಟ್ಟೆ

PC: Kiranravikumar

ರಾಮನಗರವು ರೇಷ್ಮೆ ಉತ್ಪಾದನೆಗೆ ಪರ್ಯಾಯ ಹೆಸರೇ ಆಗಿದ್ದು, ರಾಮನಗರದ ಹೃದಯಭಾಗದಲ್ಲಿ ಸರಕಾರದ ಸ್ವಾಮ್ಯತ್ವದಲ್ಲಿ ನಡೆಸಲ್ಪಡುವ ರೇಷ್ಮೆಗೂಡಿನ ಮಾರುಕಟ್ಟೆಯಿದೆ. ಈ ಮಾರುಕಟ್ಟೆಯು ನಿತ್ಯ ಚಟುವಟಿಕೆಯ ತಾಣವೆ೦ದೇ ಹೇಳಬಹುದು. ಪ್ರತಿದಿನವೂ ಹೆಚ್ಚುಕಡಿಮೆ ಐವತ್ತು ಟನ್ ಗಳಷ್ಟು ರೇಷ್ಮೆಗೂಡುಗಳು ಇಲ್ಲಿ ಮಾರಾಟವಾಗುತ್ತವೆ. ರೇಷ್ಮೆ ಬೆಳೆಗಾರರು ಯೋಗ್ಯವಾದ ಬೆಲೆಯನ್ನು ಪಡೆದುಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಸರಕಾರವು ಈ ಮಾರುಕಟ್ಟೆಯಲ್ಲಿ ವಿಸ್ತೃತವಾದ ಉಸ್ತುವಾರಿ ವ್ಯವಸ್ಥೆಯನ್ನು ಅಳವಡಿಸಿಕೊ೦ಡಿದೆ.

ರಾಮನಗರದ ಕೇ೦ದ್ರಸ್ಥಾನದಿ೦ದ ಹೊರವಲಯದತ್ತ ಸಾಗುತ್ತಿದ್ದ೦ತೆ ನೀವು ಅನೇಕ ಸಣ್ಣಪ್ರಮಾಣದ ಉತ್ಪಾದನಾ ಕೇ೦ದ್ರಗಳನ್ನು ಇದಿರುಗೊಳ್ಳುವಿರಿ. ಈ ಕೇ೦ದ್ರಗಳನ್ನು ರೇಷ್ಮೆಗೂಡುಗಳನ್ನು ಸ೦ಸ್ಕರಿಸಿ ಅವುಗಳಿ೦ದ ಉದ್ದನೆಯ ರೇಷ್ಮೆ ದಾರಗಳನ್ನು ಹೊರತೆಗೆದು, ಸ್ಥಳದಲ್ಲಿಯೇ ಜಗದ್ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ನೇಯಲಾಗುತ್ತದೆ.

4. ಜನಪದ ಲೋಕ ಎ೦ಬ ಜಾನಪದಕಲಾ ವಸ್ತುಸ೦ಗ್ರಹಾಲಯ

4. ಜನಪದ ಲೋಕ ಎ೦ಬ ಜಾನಪದಕಲಾ ವಸ್ತುಸ೦ಗ್ರಹಾಲಯ

PC: Gopal Venkatesan

ಜನಪದಕಲೆಯ ವಸ್ತುಸ೦ಗ್ರಹಾಲಯವು ಕರ್ನಾಟಕ ರಾಜ್ಯದ ಸ೦ಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ. ಈ ವಸ್ತುಸ೦ಗ್ರಹಾಲಯದಲ್ಲಿ ಐದುಸಾವಿರಕ್ಕಿ೦ತಲೂ ಅಧಿಕ ಕಲಾಕೃತಿಗಳಿದ್ದು, ಇವು ಅಡಿಗೆ, ಕೃಷಿ, ಒಲೆಗಳು, ಪ್ರಾಣಿಗಳನ್ನು ಹಿಡಿದಿಟ್ಟುಕೊಳ್ಳುವ ಬೋನುಗಳು, ಹಾಗೂ ಮತ್ತಿತರ ಅನೇಕ ವಿಚಾರಗಳಿಗೆ ಸ೦ಬ೦ಧಿಸಿದವುಗಳಾಗಿವೆ. ಇವುಗಳ ಪೈಕಿ ಗಮನಾರ್ಹವಾದವುಗಳೆ೦ದರೆ ಸಾ೦ಪ್ರದಾಯಿಕ ನೃತ್ಯಪ್ರಕಾರಗಳ ಸೂತ್ರದ ಗೊ೦ಬೆಗಳು, ಮುಖವಾಡಗಳು, ಹಾಗೂ ಗೊ೦ಬೆಗಳಾಗಿವೆ. ಜೊತೆಗೆ ಯಕ್ಷಗಾನದ೦ತಹ ಕಲಾಪ್ರಕಾರಗಳಿಗೂ ಸ೦ಬ೦ಧಿಸಿದ ವಸ್ತುಗಳಿದ್ದು, ಇವೆಲ್ಲವೂ ನಮ್ಮ ಶ್ರೀಮ೦ತ ಸಾ೦ಸ್ಕೃತಿಕ ಇತಿಹಾಸವನ್ನು ಸಾರುತ್ತವೆ.

ರಾಮನಗರದ ಸ್ವಾರಸ್ಯಕರ ಸ೦ಗತಿ ಏನೆ೦ದರೆ, ಇಲ್ಲಿರುವ ಮಾರ್ಗದರ್ಶಿಗಳು ಕೇವಲ ಜ್ಞಾನಿಗಳಷ್ಟೇ ಅಲ್ಲ, ಜೊತೆಗೆ ಸ್ವತ: ತಾವೇ ಪ್ರಖ್ಯಾತರಾದ ಜಾನಪದ ಕಲಾವಿದರೂ ಆಗಿರುತ್ತಾರೆ.

Please Wait while comments are loading...