Search
  • Follow NativePlanet
Share
» »ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...

ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...

By Manjula Balaraj Tantry

ಮಹಾತ್ಮಾ ಗಾಂಧಿಯವರ ಬಗ್ಗೆ ನಿಮಗೆ ತಿಳಿದಿಲ್ಲವಾದಲ್ಲಿ ಭಾರತದ ಬಗ್ಗೆ ನಿಮಗೆ ಅರ್ಧದಷ್ಟು ವಿಷಯ ಗೊತ್ತಿಲ್ಲವೆಂದೇ ಅರ್ಥ. ನವದೆಹಲಿಯಲ್ಲಿರುವ ಈಗ ಗಾಂಧೀ ಸ್ಮೃತಿ ಎಂದು ಕರೆಯಲ್ಪಡುವ ಬಿರ್ಲಾ ಹೌಸ್ ಸಂಗ್ರಹಾಲಯವು ಗಾಂಧೀಜಿಯವರ ಜೀವನ ಮತ್ತು ಶೈಲಿಯ ನೋಟಗಳ ಬಗ್ಗೆ ಒಂದು ನೋಟವನ್ನು ನೀಡುತ್ತದೆ. ಇಲ್ಲಿ ಗಾಂಧೀಜಿಯವರು ತಮ್ಮ ಕೊನೆಯ 144 ದಿನಗಳನ್ನು ಕಳೆದ ಕೋಣೆಯನ್ನು ಈಗ ಸಂರಕ್ಷಿಸಲಾಗಿದೆ.

1. ಬಿರ್ಲಾ ಹೌಸ್ನ ಪ್ರಮುಖ ಆಚರಣೆಗಳು

1. ಬಿರ್ಲಾ ಹೌಸ್ನ ಪ್ರಮುಖ ಆಚರಣೆಗಳು

PC: James G. Howes

ಬಿರ್ಲಾ ಹೌಸ್ ವರ್ಷವಿಡೀ ಯಾವುದಾದರೂ ಆಚರಣೆಗಳು ನಡೆಯುವ ಸ್ಥಳವಾಗಿದೆ. ಗಾಂಧೀಜಿಯವರ ಜೀವನ ಕುರಿತ ಕಾರ್ಯಕ್ರಮಗಳ ಜೊತೆಗೆ ಇಲ್ಲಿ ಮಹಿಳಾ ಸಾಕ್ಷರತೆ, ಮಕ್ಕಳ, ಮತ್ತು ಅಂಗವಿಕಲ ಯುವ ಜನರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತದೆ. ಇಲ್ಲಿ ನಡೆಯುವ ಕೆಲವು ಕಾರ್ಯಕ್ರಮಗಳಲ್ಲಿ ನೀವು ಖಂಡಿತವಾಗಿಯೂ ಭಾಗವಹಿಸಬೇಕು ಅವು ಯಾವುದೆಂದರೆ:

ಅಕ್ಟೋಬರ್ 2 : ಗಾಂಧೀ ಜಯಂತಿ

ಜನವರಿ 30 ಹುತಾತ್ಮರ ದಿನ

ಮಾರ್ಚ್ 12 - ಎಪ್ರಿಲ್ 6 : ಗಾಂಧೀಜಿಯವರ ದಂಡಿ ಚಳುವಳಿಯನ್ನು ನೆನಪಿಸುವ ದಿನಗಳನ್ನಾಗಿ ಆಚರಿಸಲಾಗುತ್ತದೆ.

ಈ ದಿನಗಳಲ್ಲಿ ವಿಶಿಷ್ಟ ಅತಿಥಿಗಳು, ರಾಜಕಾರಣಿಗಳು, ಸಾಮಾಜಿಕ ಸುಧಾರಕರು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳು ಗಾಂಧಿ ಸ್ಮೃತಿಗೆ ರಾಷ್ಟ್ರ ಪಿತಾಮಹನಿಗೆ ಗೌರವ ಸಲ್ಲಿಸಲು ಭೇಟಿ ನೀಡುತ್ತಾರೆ.

2. ಸೋಮವಾರ ಮುಚ್ಚಿರುತ್ತದೆ

2. ಸೋಮವಾರ ಮುಚ್ಚಿರುತ್ತದೆ

PC: James G. Howes

ಗಾಂಧಿ ಸ್ಮೃತಿ ಸಂಗ್ರಹಾಲಯವು ಪ್ರತೀ ಸೋಮವಾರ ಮುಚ್ಚಿರುತ್ತದೆ ಆದುದರಿಂದ ನಿಮ್ಮ ಪ್ರಯಾಣವನ್ನು ಅದಕ್ಕೆ ಸರಿಯಾಗಿ ಹೊಂದಿಸಿಕೊಳ್ಳಿ. ನವದೆಹಲಿ ಚಳಿಗಾಲದಲ್ಲಿ ಭೇಟಿ ಕೊಡಲು ಒಂದು ಸೂಕ್ತವಾದ ಸ್ಥಳವಾಗಿದೆ. ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ವರೆಗೆ ಇರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ತಂಪಾದ ಚಳಿಗಾಲದ ತಿಂಗಳುಗಳಾಗಿದ್ದು ಈ ಸಮಯದಲ್ಲಿ ಸೂರ್ಯನ ತಾಪಮಾನವು ಕೆಳಗಿರುತ್ತದೆ ಆದರೂ ದಿನದ ಸಮಯದಲ್ಲಿ ಸೂರ್ಯನ ಬಿಸಿಲು ಸ್ವಲ್ಪ ಮಟ್ಟಿಗೆ ಇದ್ದು ಬೆಚ್ಚರಿಗುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ನೀವು ಹಣ ಉಳಿಸಲು ಬಯಸಿದರೆ ಮತ್ತು ನಿಮ್ಮ ಬಡ್ಜೆಟ್ ನಲ್ಲಿ ಇಲ್ಲಿಯ ಹೋಟೆಲುಗಳಲ್ಲಿ ಆನಂದಿಸಿ.

3. ಇಲ್ಲಿಗೆ ತಲುಪುವುದು ಹೇಗೆ ?

3. ಇಲ್ಲಿಗೆ ತಲುಪುವುದು ಹೇಗೆ ?

PC: Diego Delso

ಭಾರತದ ರಾಜಧಾನಿಯಾಗಿರುವ ನವ ದೆಹಲಿಯು ಜಗತ್ತಿನ ಅನೇಕ ಪ್ರಮುಖ ನಗರಗಳೊಡನೆ ವಾಯುಮಾರ್ಗದ ಮೂಲಕ ಸಂಪರ್ಕವನ್ನು ಹೊಂದಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಐಜಿಐಎ) ರಾತ್ರಿ ಹಗಲೆನ್ನದೆ ಪ್ರಯಾಣಿಕರನ್ನು ಜಗತ್ತಿನ ಎಲ್ಲಾ ಭಾಗದ ಜನರನ್ನು ಬರಮಾಡಿಕೊಳ್ಳುತ್ತದೆ. ನೀವು ಇಲ್ಲಿಂದ ಜಗತ್ತಿನ ಯಾವುದೇ ಪ್ರಮುಖ ನಗರಗಳಿಗೆ ಪ್ರಯಾಣಿಸಬಹುದಾಗಿದೆ.

4. ರೈಲು ಪ್ರಯಾಣ

4. ರೈಲು ಪ್ರಯಾಣ

Diego Delso

ದೇಶೀಯ ವಿಮಾನಗಳು ಪಾಲಂ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತವೆ. ನವ ದೆಹಲಿಯಲ್ಲಿ ಭಾರತವು ಉತ್ತಮ ಸಂಪರ್ಕ ಹೊಂದಿದ ರೈಲ್ವೆ ಜಾಲವನ್ನು ಹೊಂದಿದೆ. ರಾಜಧಾನಿಯಾಗಿರುವ ದೆಹಲಿಯು ರೈಲ್ವೇ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಇಲ್ಲಿಯ ದೊಡ್ದ ರೈಲ್ವೇ ನಿಲ್ದಾಣಗಳೆಂದರೆ ಹಳೆ ರಲ್ವೇ ನಿಲ್ದಾಣ, ನವ ದೆಹಲಿ ರೈಲ್ವೇ ನಿಲ್ದಾಣ, ಹಜ್ರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣ ಮತ್ತು ಆನಂದ್ ವಿಹಾರ್ ರೈಲ್ವೇ ನಿಲ್ದಾಣ.

5. ಬಸ್ಸಿನ ಮೂಲಕ ಪ್ರಯಾಣ

5. ಬಸ್ಸಿನ ಮೂಲಕ ಪ್ರಯಾಣ

PC: Hideyuki KAMON

ನೀವು ಭಾರತದ ಕೆಲವು ನಗರಗಳಿಂದ ಬಸ್ಸಿನ ಮೂಲಕ ಪ್ರಯಾಣ ಮಾಡಲು ಬಯಸುವಿರಾದಲ್ಲಿ, ದೆಹಲಿಯಲ್ಲಿ ನೀವು ಈ ಕೆಳಗಿನ ರಾಜ್ಯ ಬಸ್ ಟರ್ಮಿನಲ್ ಗಳಲ್ಲಿ ಇಳಿಯಬಹುದು. ಮಹಾರಾಣಾ ಪ್ರತಾಪ್ ಐಎಸ್ ಬಿಟಿ ಕಾಶ್ಮೀರಿ ಗೇಟ್, ದೆಹಲಿ; ದೆಹಲಿಯ ಆನಂದ್ ವಿಹಾರ್ ನಲ್ಲಿ ಸ್ವಾಮಿ ವಿವೇಕಾನಂದ ಐಎಸ್ ಬಿಟಿ; ಮತ್ತು ದೆಹಲಿಯ ಸಾರ ಕಲೆ ಖಾನ್ ನಲ್ಲಿರುವ ವೀರ್ ಹಕಿಕತ್ ರಾಯ್ ಐಎಸ್ ಬಿಟಿ. ಎಲ್ಲಾ ನೆರೆಯ ಭಾರತೀಯ ರಾಜ್ಯಗಳ ಪ್ರಮುಖ ನಗರಗಳಿಗೆ ಬಸ್ಸುಗಳು ದೆಹಲಿಯಿಂದ ಕಾರ್ಯನಿರ್ವಹಿಸುತ್ತವೆ.

6. ಆಟೋ ರಿಕ್ಷಾ ಹತ್ತಿ

6. ಆಟೋ ರಿಕ್ಷಾ ಹತ್ತಿ

PC: wikicommons

ಒಮ್ಮೆ ನೀವು ದೆಹಲಿಯ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಅಥವಾ ಬಸ್ಸು ಟರ್ಮಿನಲ್‌ ಗಳನ್ನು ತಲುಪಿದ ನಂತರ ಅಲ್ಲಿಂದ ನೀವು ಬಾಡಿಗೆ ಟ್ಯಾಕ್ಸಿ ಅಥವಾ ಆಟೋ ರಿಕ್ಷಾ ಗಳ ಮೂಲಕ ಬಿರ್ಲಾ ಹೌಸ್/ ಬಿರ್ಲಾ ಭವನವನ್ನು ತಲುಪಬಹುದಾಗಿದೆ. ಮುಂಗಡ ಪಾವತಿಸಿದ ಆಟೋ ರಿಕ್ಷಾಗಳ ಬೂತ್ ಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ಗಾಂಧಿ ಸ್ಮೃತಿ ದೆಹಲಿಯ ಹೃದಯ ಭಾಗದಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿದೆ. ಕೊನಾಟ್ ಸ್ಥಳವು ಸಿಪಿ ಎಂದೂ ಕರೆಯಲ್ಪಡುತ್ತದೆ. ಇಲ್ಲಿಗೆ ಹತ್ತಿರವಿರುವ ಮೆಟ್ರೋ ನಿಲ್ದಾಣವೆಂದರೆ ರಾಜೀವ್ ಚೌಕ್. ನೀವು ರಾಜೀವ್ ಚೌಕ್ ಗೆ ಮೆಟ್ರೋ ರೈಲಿನ ಮೂಲಕವೂ ಬರಬಹುದು ಮತ್ತು ಅಲ್ಲಿಂದ ಆಟೋ ರಿಕ್ಷಾ ಅಥವಾ ಬಾಡಿಗೆ ಟ್ಯಾಕ್ಸಿ ಮೂಲಕ ಗಾಂಧೀ ಸ್ಮೃತಿಯನ್ನು ತಲುಪಬಹುದಾಗಿದೆ.

Read more about: new delhi india travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X