» »ಇದು ಹಾಡುವ ಅಲೆಗಳ ನಾಡು

ಇದು ಹಾಡುವ ಅಲೆಗಳ ನಾಡು

By: Divya

ತಮಿಳು ನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಬರುವ ಸುಂದರ ಸಮುದ್ರ ತೀರ ತರಂಗಂಬಾಡಿ. ಇದನ್ನು ಟ್ರಾನ್ಕ್ವಿಬಾರ್ ಎಂತಲೂ ಕರೆಯುತ್ತಾರೆ. 17 ರಿಂದ 19ನೇ ಶತಮಾನದಲ್ಲಿ ಡೆನಿಷ್ಪರ ಅಧೀನದಲ್ಲಿದ್ದ ಮುಖ್ಯ ಬಂದರು ಆಗಿತ್ತು ಎನ್ನಲಾಗುತ್ತದೆ. ತರಂಗಂಬಾಡಿ ಎಂದರೆ 'ಹಾಡುವ ಅಲೆಗಳ ನಾಡು' ಎಂದು ಕರೆಯುತ್ತಾರೆ.

ತಮಿಳುನಾಡಿನ ಸ್ಥಳಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪುರಾತನ ಕಾಲದಲ್ಲಿ ಇಲ್ಲೊಂದು ಶಿವಾಲಯವಿತ್ತು ಎನ್ನಲಾಗುತ್ತದೆ. ದ್ವಿಪಕ್ಷೀಯ ವ್ಯಾಪರ ನಡೆಸುವ ಉದ್ದೇಶದಿಂದ 1620ರಲ್ಲಿ ಡಚ್ಚರು ಅಲ್ಲಿಯ ಸ್ಥಳೀಯ ರಾಜನಿಗೆ ಕೋಟೆಯೊಂದನ್ನು ನಿರ್ಮಿಸಲು ಹೇಳಿದರು. ಆ ಕೋಟೆಯೇ ಈಗಲೂ ಸಮುದ್ರದ ಡದಲ್ಲಿ ನಿಂತುಕೊಂಡಿದೆ ಎಂದು ಇತಿಹಾಸ ಹೇಳುತ್ತದೆ. ಚೆನ್ನೈನಿಂದ 287 ಕಿ.ಮೀ. ದೂರ ಹಾಗೂ ಬೆಂಗಳೂರಿನಿಂದ 438 ಕಿ.ಮೀ. ದೂರದಲ್ಲಿದೆ....

ನಗರದೊಳಗೆ

ನಗರದೊಳಗೆ

ಈ ನಗರದ ಒಳಗೆ ಡೆನಿಷ್, ಬ್ರಿಟಿಷ್, ಜರ್ಮನ್ ಮತ್ತು ಫ್ರೆಂಚ್ ಕಾಲೋನಿಗಳು ಸೇರಿಕೊಂಡಿರುವುದನ್ನು ನೋಡಬಹುದು. 2004ರಲ್ಲಿ ಆದ ಸುನಾಮಿಯಿಂದ ಈ ನಗರವು ಕೊಚ್ಚಿ ಹೋಗಿತ್ತು. ಇಲ್ಲಿ ಈಗ ಒಂದು ಚಿಕ್ಕ ಮ್ಯೂಸಿಯಂ ಇರುವುದನ್ನು ಕಾಣಬಹುದು. ಟ್ರಾನ್ಕ್ವಿಬಾರ್‍ನಲ್ಲಿ ಡಚ್ಚರು ಇತಿಹಾಸವನ್ನು ಒಳಗೊಂಡಿರುವ ಈ ತಾಣ ಪ್ರಪಂಚದ ಎರಡನೇ ಅತಿ ದೊಡ್ಡ ಕೋಟೆ ಹಾಗೂ ಓಝೋನ್‍ನಿಂದ ಶ್ರೀಮಂತಗೊಂಡ ಸಮುದ್ರ ತೀರ ಎಂದು ಕರೆಯಲಾಗುತ್ತದೆ.

PC: en.wikipedia.org

ಡ್ಯಾನಿಷ್ ಕೋಟೆ

ಡ್ಯಾನಿಷ್ ಕೋಟೆ

ವಾಣಿಜ್ಯ ಕೇಂದ್ರವಾಗಿರುವ ಡ್ಯಾನಿಷ್ ಕೋಟೆ 400 ವರ್ಷದ ಇತಿಹಾಸವನ್ನು ಒಳಗೊಂಡಿದೆ. ಇದನ್ನು ಡ್ಯಾನಿಷ್ ನಾಯಕ ಓವೆ ಗೆಜ್ಡೆ ಕಟ್ಟಿಸಿದ್ದನು ಎನ್ನಲಾಗುತ್ತದೆ. ಇಲ್ಲಿಯ ವರೆಗೆ ಇದರ ನವೀಕರಣವನ್ನು ಹಲವು ಬಾರಿ ಮಾಡಲಾಗಿದೆ ಎನ್ನಲಾಗುತ್ತದೆ. ಇಲ್ಲೊಂದು ಮ್ಯೂಸಿಯಂ ಇರುವುದನ್ನು ಕಾಣಬಹುದು. ಪುರಾತನಕಾಲದಲ್ಲಿ ಬಳಸಲಾದ ಪ್ರಮುಖ ವಸ್ತುಗಳನ್ನು ಇಲ್ಲಿ ಇಡಲಾಗಿದೆ.

PC:www.flickr.com

ಮಸಿಳಮಣಿ ನಾಥರ್ ದೇಗುಲ

ಮಸಿಳಮಣಿ ನಾಥರ್ ದೇಗುಲ

ಪಾಂಡ್ಯ ವಂಶದ ರಾಜಾ ಮರವರ್ಮ ಕುಲಶೇಖರ ಪಾಂಡಿಯನ್ ಕ್ರಿ.ಶ 1305 ರಲ್ಲಿ ನಿರ್ಮಿಸಿದ್ದನು. ಪುರಾತನ ಕಾಲದ ವಾಸ್ತು ಶಿಲ್ಪಗಳನ್ನು ಒಳಗೊಂಡ ಈ ದೇಗುಲ ಕಡಲ ಕೊರೆತ ಹಾಗೂ ಸುನಾಮಿಯಿಂದಾಗಿ ದೇವಸ್ಥಾನದ ಮುಂದಿನ ಭಾಗವೇ ಹಾನಿಗೊಳಗಾಗಿರುವುದನ್ನು ಕಾಣಬಹುದು. ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಾವುದೂ ನಡೆಯುವುದಿಲ್ಲ.

PC:en.wikipedia.org

ಹೊಸ ಜೆರುಸ್ಲೆಮ್ ಚರ್ಚ್

ಹೊಸ ಜೆರುಸ್ಲೆಮ್ ಚರ್ಚ್

ಇದು ಭಾರತದಲ್ಲಿರುವ ಮೊದಲ ಪ್ರೊಟೆಸ್ಟೆಂಟ್ ಚರ್ಚ್. ಇದರಲ್ಲಿ ಝೀಜೆಂಗ್‍ಬಲ್ಗ್ ಅವರ ಸಮಾಧಿ ಇರುವುದನ್ನು ಕಾಣಬಹುದು.

PC:www.flickr.com

ಮೆರಿಟೈಮ್ ಮ್ಯೂಸಿಯಂ

ಮೆರಿಟೈಮ್ ಮ್ಯೂಸಿಯಂ

ಬಹಳ ಸಣ್ಣದಾಗಿರುವ ಈ ಮ್ಯೂಸಿಯಂನಲ್ಲಿ ಹಳೆಯ ಕಾಲದಲ್ಲಿ ನಿರ್ಮಿಸಲಾದ ವಿವಿಧ ಬಗೆಯ ದೋಣಿಗಳು, ವಿಭಿನ್ನ ಬಗೆಯ ಮೀನಿನ ಚಿತ್ರ, ವೀಡಿಯೋಗಳಿರುವುದನ್ನು ನೋಡಬಹುದು. ಇದು ಸಹ ಸುನಾಮಿಯ ಹೊಡೆತಕ್ಕೆ ನಲುಗಿತ್ತು ಎನ್ನಲಾಗುತ್ತದೆ.

PC: en.wikipedia.org

ಝೋನ್ ಚರ್ಚ್

ಝೋನ್ ಚರ್ಚ್

ಇದು ತನ್ನದೇ ಆದ ಗತಕಾಲದ ಇತಿಹಾಸವನ್ನು ಹೊಂದಿದೆ. ಇದು ಇತರ ಪ್ರೇಕ್ಷಣೀಯ ಸ್ಥಳಗಳಿಗೂ ಹತ್ತಿರವಿರುವುದರಿಂದ ಇಲ್ಲಿಯ ಪ್ರವಾಸ ಸಾರ್ಥಕವಾಗುತ್ತದೆ.

ಟ್ರಾಂಕ್ವೀಬಾರ್ನ ಜಾಗಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

PC: en.wikipedia.org

ಉಳಿಯುವುದು ಎಲ್ಲಿ?

ಉಳಿಯುವುದು ಎಲ್ಲಿ?

ಇಲ್ಲಿ ಅನುಕೂಲಕ್ಕೆ ತಕ್ಕಂತಹ ಗೇಟ್ ಹೌಸ್, ನಾಯಕ್ ಹೌಸ್, ಹೋಟೆಲ್ ತಮಿಳು ನಾಡು ಹಾಗೂ ತಮಿಳು ನಾಡು ಪ್ರವಾಸೋದ್ಯಮ ಇಲಾಖೆ ನಡೆಸುತ್ತಿರುವ ವಸತಿ ಗೃಹಗಳೂ ಇವೆ.

en.wikipedia.org

 

 

Read more about: chennai
Please Wait while comments are loading...