Search
  • Follow NativePlanet
Share
» »ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡುವ ದೆಹಲಿಯ ಭಯಾನಕ ಸ್ಮಾರಕ

ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡುವ ದೆಹಲಿಯ ಭಯಾನಕ ಸ್ಮಾರಕ

ಇಲ್ಲಿ ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡಲಾಗುತ್ತದೆ ಎಂತೆ. ಎಂಥಹ ಭಯಾನಕವಾದ ಸ್ಥಳ ಇರುವುದಾದರು ಎಲ್ಲಿ? ಏಕೆ ಹೀಗೆ ಜನರನ್ನು ಹಿಪ್ನೋಟೈಸ್ ಮಾಡಲಾಗುತ್ತಿದೆ? ಎಂಬ ಹಲವಾರು ಪ್ರಶ್ನೆಗಳಿಗೆ ಲೇಖನದ ಮೂಲಕ ಉತ್ತರ ಪಡೆಯಿರಿ.

ಕೆಲವು ಸ್ಥಳಗಳು ಸುಂದರವಾಗಿದೆ ಎಂದು ಹತ್ತಿರಕ್ಕೆ ತೆರಳಿದರೆ ಅಲ್ಲಿ ಕೆಲವೊಮ್ಮೆ ಭಯಾನಕತೆ ಆವರಿಸುತ್ತದೆ. ಯಾವುದೇ ಒಂದು ಸ್ಥಳವು ನಾವು ಅಂದುಕೊಂಡಿರುವಷ್ಟು ಸಾಮಾನ್ಯವಾಗಿರುವುದಿಲ್ಲ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಹಾಗೆಯೇ ಕೆಲವು ಸುಂದರವಾದ ಸ್ಥಳಗಳೆಲ್ಲಾ ಅದ್ಭುತವಲ್ಲ. ಏನಿದು ಹೀಗೆ ಈ ಲೇಖನ ಹೇಳುತ್ತಿದ್ದೇನೆ ಎಂದು ಕೊಳ್ಳುತ್ತಿದ್ದೀರಾ?

ನಾನು ಲೇಖನದಲ್ಲಿ ಹೇಳಲು ಬಯಸುತ್ತಿರವ ಸ್ಥಳ ಒಂದು ಭಯಾನಕತೆಯಿಂದ ಕೂಡಿದ ಸ್ಥಳವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಬಾಲಿವುಡ್ ಸಿನಿಮಾ "ಪಿಕೆ" ಚಿತ್ರದ ಒಂದು ತುಣುಕು ಈ ಸ್ಥಳದಲ್ಲಿ ಚಿತ್ರಿಸಿದ್ದಾರೆ. ಇದೊಂದು ಪುರಾತನವಾದ ಸ್ಮಾರಕವಾಗಿದೆ. ಈ ಸ್ಮಾರಕವನ್ನು ಅಗ್ರಸೇನ್ ಕಿ ಬಾವೋಲಿ ಎಂದು ಕರೆಯುತ್ತಾರೆ.

ಇಲ್ಲಿ ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡಲಾಗುತ್ತದೆ ಎಂತೆ. ಎಂಥಹ ಭಯಾನಕವಾದ ಸ್ಥಳ ಇರುವುದಾದರು ಎಲ್ಲಿ? ಏಕೆ ಹೀಗೆ ಜನರನ್ನು ಹಿಪ್ನೋಟೈಸ್ ಮಾಡಲಾಗುತ್ತಿದೆ? ಎಂಬ ಹಲವಾರು ಪ್ರಶ್ನೆಗಳಿಗೆ ಲೇಖನದ ಮೂಲಕ ಉತ್ತರ ಪಡೆಯಿರಿ.

ಎಲ್ಲಿದೆ?

ಎಲ್ಲಿದೆ?

ಈ ಅಗ್ರಸೇನ್ ಕಿ ಬಾವೋಲಿ ಸ್ಮಾರಕ ಇರುವುದು ನಮ್ಮ ಭಾರತ ದೇಶದ ರಾಜಧಾನಿ ದೆಹಲಿಯಲ್ಲಿ. ಇದೊಂದು ದೆಹಲಿಯ ಅತ್ಯಂತ ಪುರಾತನವಾದ ಸ್ಮಾರಕವಾಗಿದೆ. ಪಿ.ಕೆ ಸಿನಿಮಾ ಬಂದ ನಂತರ ಈ ಸ್ಥಳಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದು ಸರಿ ಸುಮಾರು ನವದೆಹಲಿಯ ಕೊನಾಟ್ ಪ್ಲೇಸ್ ಸಮೀಪ ಹೇಯ್ಲೆ ರಸ್ತೆಯ ಕಿರಿದಾದ ಹೈಲೆ ಲೈನ್‍ನಲ್ಲಿದೆ.

ಪ್ರಯಾಣ

ಪ್ರಯಾಣ

ಈ ಅಗ್ರಸೇನ್ ಕಿ ಬಾವೋಲಿಗೆ ಜಂತರ್ ಮಂತರ್‍ನಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಇಮಡಿಯಾ ಗೇಟ್‍ನಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಈ ಸ್ಮಾರಕದ ಪ್ರವೇಶವು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತದೆ.

ಅಗ್ರಸೇನ್ ಕಿ ಬಾವೋಲಿ ಅಥವಾ ಉಗ್ರಸೇನ್ ಕಿ ಬಾವೋಲಿ

ಅಗ್ರಸೇನ್ ಕಿ ಬಾವೋಲಿ ಅಥವಾ ಉಗ್ರಸೇನ್ ಕಿ ಬಾವೋಲಿ

ಕೆಂಪು ಬಣ್ಣದ ಮರಳುಗಲ್ಲಿನ ಫಲಕವು ಅದರ ಮೇಲೆ ಅಧಿಕೃತವಾಗಿ ಉಗ್ರಸೇನ್ ಕಿ ಬಾವೋಲಿ ಎಂದು ಹೊಂದಿದೆ. ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರ ಮಾಡುವ ಸಮಯದಲ್ಲಿ ಅಂದರೆ 1911 ರ ನಂತರ ಈ ಸ್ಮಾರಕವು ಕಣ್ಮರೆಯಾಯಿತು.

PC: Anupamg

ಬಾವೋಲಿ ಎಂದರೆ ಏನು?

ಬಾವೋಲಿ ಎಂದರೆ ಏನು?

ಬಾವೋಲಿ ಎಂದರೆ ಕನ್ನಡ ಬಾಷೆಯಲ್ಲಿ ಪುಷ್ಕರಣಿ ಅಥವಾ ಕಲ್ಯಾಣಿ. ಇದೊಂದು ಅದ್ಭುತವಾದ ವಾಸ್ತು ಶಿಲ್ಪವನ್ನು ಹೊಂದಿದೆ. ಮುಖ್ಯವಾಗಿ ಮೆಟ್ಟಿಲುಗಳನ್ನು ಹೊಂದಿದ್ದು ಅಂತಸ್ತಿನ ರೀತಿ ಕಾಣುತ್ತದೆ. ಇಲ್ಲಿನ ಸೊಬಗು ನೋಡಿಯೇ ಆನಂದಿಸಬೇಕಾಗಿದೆ.

PC: Deepak Kumar

ಭಾರತದ ಪುರಾತತ್ತ್ವ ಶಾಸ್ತ್ರದ ಪ್ರಕಾರ

ಭಾರತದ ಪುರಾತತ್ತ್ವ ಶಾಸ್ತ್ರದ ಪ್ರಕಾರ

ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ಪ್ರಕಾರ, ಅಗ್ರಸೇನ್ ಕಿ ಬಾವೋಲಿ 58.2 ಮೀಟರ್ ಮತ್ತು 13.71 ಮೀಟರ್ ನೆಲದ ಮಟ್ಟದಲ್ಲಿ ಅಳೆಯುತ್ತದೆ. ಇದನ್ನು ಕಲ್ಲುಮನೆ ಎಂದೂ ಸಹ ಕರೆಯುತ್ತಾರೆ. ಈ ಸ್ಮಾರಕವು ನಾಲ್ಕು ಹಂತಗಳಾಗಿ ವಿಂಗಡಿಸಬಹುದಾಗಿದೆ. ಇಲ್ಲಿ ಸುಮಾರು 108 ಮೆಟ್ಟಿಲುಗಳು ಇರುವುದನ್ನು ಕಾಣಬಹುದಾಗಿದೆ.


PC: Anupamg

ಸ್ಮಾರಕದ ಮೂಲಗಳು

ಸ್ಮಾರಕದ ಮೂಲಗಳು

ತುಘಲಕ್ ಅಥವಾ ಲೋದಿಯವರ ವಾಸ್ತು ಶಿಲ್ಪಶೈಲಿಯಲ್ಲಿ ಈ ಅಗ್ರಾಸೆನ್ ಕಿ ಬಾವೋಲಿ ನಿರ್ಮಾಣ ಮಾಡಲಾಗಿದೆ ಎಂದು ಕೆಲವರು ಲೆಕ್ಕಚಾರ ಹಾಕಿದ್ದಾರೆ. ಆದರೆ ಯಾರು ನಿರ್ದಿಷ್ಟವಾಗಿ ಯಾರು ನಿರ್ಮಾಣ ಮಾಡಿದರು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಬದಲಾಗಿ ಒಂದು ಜನಪ್ರಿಯ ದಂತಕಥೆಯ ಪ್ರಕಾರ.....


PC: Prateek Rungta

ಮಹಾಭಾರತ ಸಮಯದಲ್ಲಿ ನಿರ್ಮಾಣ

ಮಹಾಭಾರತ ಸಮಯದಲ್ಲಿ ನಿರ್ಮಾಣ

ಆದರೆ ಒಂದು ಜನಪ್ರಿಯ ದಂತಕತೆಯ ಪ್ರಕಾರ ಮಹಾರಾಜ ಅಗ್ರಸೆನ್ ಚಕ್ರವರ್ತಿ ನಿರ್ಮಾಣ ಮಾಡಿದ ಎನ್ನಲಾಗಿದೆ. ಮಹಾಭಾರತದ ಕಾಲದಲ್ಲಿ, ಹರಿಯಾಣದ ಅಗ್ರೋಹಾದ ಪ್ರಾಚೀನ ಪಟ್ಟಣದಲ್ಲಿ ಅವನು ಜೀವಿಸಿದ್ದನು ಎಂದು ನಂಬಲಾಗಿದೆ.

PC: Supreet Sethi

ಇದೊಂದು ಭಯಾನಕವಾದ ಸ್ಥಳ

ಇದೊಂದು ಭಯಾನಕವಾದ ಸ್ಥಳ

ಅಗ್ರಾಸೆನ್ ಕಿ ಬಾವೋಲಿ ಒಂದು ಭಯಾನಕವಾದ ಸ್ಥಳ (ಹಂಟೆಡ್ ಪ್ಲೇಸ್) ಎಂದು ಕರೆಯಲಾಗುತ್ತದೆ. ಇಲ್ಲಿನ ಪುಷ್ಕರಣಿಯಲ್ಲಿ ನೀರು ಇಲ್ಲ. ಸ್ವಲ್ಪ ಮಾತ್ರ ಉಳಿದಿದೆ. ಇಲ್ಲಿ ವಿಶೇಷವಾಗಿ ಆತ್ಮಹತ್ಯೆಗೆ ಶರಣಾಗಲು ಜನರನ್ನು ಹಿಪ್ನೋಟೈಸ್ ಮಾಡುವ ಶಕ್ತಿ ಇದೆ ಎಂದು ಹೇಳಲಾಗುತ್ತಿದೆ.


PC: Anupamg

ಆತ್ಮಹತ್ಯೆ ಪ್ರಕರಣ

ಆತ್ಮಹತ್ಯೆ ಪ್ರಕರಣ

ಆತ್ಮಹತ್ಯೆ ಪ್ರಕರಣ ಕೂಡ ಸುದ್ದಿ ಪತ್ರಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಘಟನೆಗಳು ಇಲ್ಲಿ ನಡೆದಿವೆ. ಇದು ಜೂನ್ 2007 ರಲ್ಲಿ ಒಂದು ಹಿಂದೂ ಪತ್ರಿಕೆಯಲ್ಲಿ ವರದಿಯಾಗಿತ್ತು. ಅದೇನೆಂದರೆ ಆ ಸಮಯದಲ್ಲಿ ನೀರಿನ ಮಟ್ಟವು "ಕೇವಲ ನಾಲ್ಯುರಿಂದ ಐದು ಅಡಿ ಆಳವಾಗಿತ್ತು" ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತದೆ

ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತದೆ

ಸ್ಥಳವು ಮುಖ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತದೆ ಎಂತೆ. ಹಾಗಾಗಿಯೇ ಈ ಸ್ಥಳಕ್ಕೆ ಯಾವುದೇ ಒಬ್ಬ ಪ್ರವಾಸಿಗನು ಕೂಡ ಸೂರ್ಯಾಸ್ತವಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತಾರೆ. ಈ ಸ್ಥಳವು ಇಂದಿಗೂ ಕಪ್ಪು ಬಣ್ಣದ ಪುಷ್ಕರಣಿ ಹೊಂದಿದೆ. ಈ ಸ್ಥಳ ಭಯಾನಕವಾದುದು ಎಂದು ಹಣೆ ಪಟ್ಟಿ ಹಾಕಲಾಗಿದೆ.

 108 ಮೆಟ್ಟಿಲುಗಳು

108 ಮೆಟ್ಟಿಲುಗಳು

ಇಲ್ಲಿ 108 ಮೆಟ್ಟಿಲುಗಳು ಇವೆ. ಇಲ್ಲಿ ಅಪ್ಪಿ ತಪ್ಪಿ ಸಂಜೆಯ ಸಮಯದಲ್ಲಿ ಇದ್ದರೆ ಅವರಿಗೆ ಹಲವಾರು ಭಯಾನಕವಾದ ಅನುಭವಗಳಾಗಿವೆ ಎಂತೆ. ಏಕೆಂದರೆ ರಾತ್ರಿಯ ಸಮಯದಲ್ಲಿ ಹಲವಾರು ಭಯಾನಕವಾದ ಶಬ್ಧಗಳು ಇಲ್ಲಿ ಕೇಳಿಸಿವೆ ಎಂತೆ. ಹೀಗೆ ಅನುಭವವಾದ ನಂತರ ಈ ಸ್ಥಳವು ಸಂಜೆಯ ಸಮಯದಲ್ಲಿ ಪ್ರವಾಸಿಗರಿಗಾಗಿ ಮುಚ್ಚಲಾಗಿದೆ.

PC: Anupamg

ನಿಗೂಢ ಆತ್ಮಹತ್ಯೆಗಳು

ನಿಗೂಢ ಆತ್ಮಹತ್ಯೆಗಳು

ಅಗ್ರಾಸೆನ್ ಕಿ ಬಾವೋಲಿ ಒಳಗೆ ನೀರು ಇದೆ. ಆ ಕಪ್ಪು ನೀರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಅವರನ್ನು ಪ್ರಚೋದಿಸುತ್ತದೆ ಎಂತೆ. ಇಲ್ಲಿನ ನೀರು ಆಶ್ಚರ್ಯಕರವಾಗಿ ಕಪ್ಪು ನೀರು ಹೊಂದಿದ್ದು, ನಿಗೂಢವಾಗಿ ಜನರು ಇಲ್ಲಿ ಆತ್ಮಹತ್ಯೆಗೆ ಒಳಗಾಗಿದ್ದಾರೆ.


PC: Prateek Rungta

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X