Search
  • Follow NativePlanet
Share
» »ಬೆಳಗಾವಿಯ ಭವ್ಯ ತಾಣ... ಒಮ್ಮೆ ನೋಡಿರಣ್ಣ...

ಬೆಳಗಾವಿಯ ಭವ್ಯ ತಾಣ... ಒಮ್ಮೆ ನೋಡಿರಣ್ಣ...

By Divya

ಬೆಳಗಾವಿ ಎಂದರೆ 'ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ' ಎಂದರ್ಥ. ಊರಿನ ವಾತಾವರಣವು ಹೆಸರಿಗೆ ತಕ್ಕಂತೆ ಇದೆ. ಮುಂಜಾನೆ ಸಮಯದಲ್ಲಿ ತಂಪಾದ ವಾತಾವರಣವನ್ನು ಇಲ್ಲಿ ಅನುಭವಿಸಬಹುದು. ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ಪ್ರದೇಶದಲ್ಲಿ ರಾಷ್ಟ್ರಕೂಟರು, ಯಾದವರು, ಚಾಲುಕ್ಯರು ಹಾಗೂ ಕದಂಬರು ಸೇರಿದಂತೆ ಅನೇಕ ರಾಜ ಮನೆತನದವರು ಆಳಿಹೋಗಿದ್ದಾರೆ.

ಉತ್ತರ ಕರ್ನಾಟಕದ ಅತಿದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿಯನ್ನು ಐತಿಹಾಸಿಕ ಹಾಗೂ ಸ್ಮಾರಕ ತಾಣಗಳ 'ನಿಧಿ ಮನೆ' ಎಂದು ಕರೆಯಲಾಗುತ್ತದೆ. ಬೆಂಗಳೂರಿನಿಂದ 505.6 ಕಿ.ಮೀ. ಅಂತರದಲ್ಲಿರುವ ಈ ಜಿಲ್ಲೆಯಲ್ಲಿ ಉತ್ತಮ ವಸತಿ ವ್ಯವಸ್ಥೆಯನ್ನು ಹೊಂದಬಹುದು. ಒಮ್ಮೆ ಬೆಳಗಾವಿಯಕಡೆ ಪ್ರಯಾಣ ಬೆಳೆಸಿದರೆ ತಪ್ಪದೆ ನೋಡಲೇ ಬೇಕಾದ ಸ್ಥಳಗಳು ಹಲವಾರಿವೆ...

ಬೆಳಗಾವಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಳಗಾವಿಯ ವಾತಾವರಣ

ಬೆಳಗಾವಿಯ ವಾತಾವರಣ

ಬೆಳಗಾವಿಯು ಸಮುದ್ರ ಮಟ್ಟದಿಂದ 2500 ಅಡಿ ಎತ್ತರದಲ್ಲಿದೆ. ಸಹ್ಯಾದ್ರಿಯ ಮಡಿಲಲ್ಲಿ ಇರುವ ಈ ಜಿಲ್ಲೆ ಅರಬ್ಬಿ ಸಮುದ್ರದಿಂದ ಕೇವಲ 100 ಕಿ.ಮೀ. ದೂರದಲ್ಲಿದೆ. ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ಇಲ್ಲಿ ಹರಿಯುವ ಪ್ರಮುಖ ನದಿಗಳು.
PC: wikimedia.org

ಬೆಳಗಾವಿಯ ವಿಶೇಷ

ಬೆಳಗಾವಿಯ ವಿಶೇಷ

ಪುರಾತನ ಕಾಲದಲ್ಲಿ ಬೆಳಗಾವಿಯನ್ನು ವೇಣುಗ್ರಾಮ ಎಂದು ಕರೆಯುತ್ತಿದ್ದರು. ಇಲ್ಲಿ ಅನೇಕ ರಾಜರು ಆಳಿರುವುದರಿಂದ ಅವರ ಕುರುಹುಗಳಾಗಿ ಐತಿಹಾಸಿಕ ಸ್ಥಳಗಳನ್ನು ಇಂದು ಕಾಣಬಹುದು. ವಾಣಿಜ್ಯ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿ ಪ್ರವಾಸೋದ್ಯಮ ಕ್ಷೇತ್ರದಲ್ಲೂ ತನ್ನದೆ ಆದ ಹಿರಿಮೆಯನ್ನು ಪಡೆದುಕೊಂಡಿದೆ.
PC: wikimedia.org

ಗೋಕಾಕ್ ಜಲಪಾತ

ಗೋಕಾಕ್ ಜಲಪಾತ

ಬೆಳಗಾವಿಯಿಂದ 73.2 ಕಿ.ಮೀ. ದೂರ ಇರುವ ಈ ಜಲಪಾತ ಗೋಕಾಕ್ ನಗರದಿಂದ 6 ಕಿ.ಮೀ. ದೂರದಲ್ಲಿದೆ. ಇದು ಘಟಪ್ರಭಾ ನದಿಯಿಂದ ಜನ್ಮತಾಳುತ್ತದೆ. ಇದನ್ನು ಭಾರತದ ನಯಾಗರ ಜಲಪಾತ ಎಂತಲೂ ಕರೆಯುತ್ತಾರೆ. ಸುಮಾರು 180 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ಮಳೆಗಾಲ ಹಾಗೂ ಚಳಿಗಾಲದಲ್ಲಿ ತುಂಬಿ ಹರಿಯುತ್ತದೆ. ಈ ನದಿಗೆ ಅಡ್ಡವಾಗಿ ಒಂದು ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇಲ್ಲಿ ನಿಂತು ಜಲಪಾತವನ್ನು ವೀಕ್ಷಿಸುವುದು ಒಂದು ಅದ್ಭುತ ಅನುಭವವನ್ನು ನೀಡುತ್ತದೆ.
PC: wikimedia.org

ಬೆಳಗಾವಿ ಕೋಟೆ

ಬೆಳಗಾವಿ ಕೋಟೆ

12ನೇ ಶತಮಾನದ ಇತಿಹಾಸ ಹೊಂದಿರುವ ಬೆಳಗಾವಿ ಕೋಟೆ ರಟ್ಟರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿತ್ತು. ಈ ಕೋಟೆಯಲ್ಲಿ ಜೈನರ ಕಮಲ ಬಸದಿ, ಆದಿಲ್ ಶಾಹಿಗಳ ಮಸೀದಿಯನ್ನು ನೋಡಬಹುದು. ಅಂಡಾಕಾರದಲ್ಲಿರುವ ಈ ಕೋಟೆ ಆಳವಾದ ಕಂದಕದಿಂದ ಸುತ್ತುವರಿದಿದೆ. ಕಂದಕದ ತಳ ಭಾಗದಿಂದ 32 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಲಾಗಿದೆ. ಒಳಾಂಗಣ 910 ಮೀಟರ್ ಉದ್ದ ಹಾಗೂ 730 ಅಡಿ ಅಗಲವಿದ್ದು, ಎರಡು ದ್ವಾರಗಳನ್ನು ಒಳಗೊಂಡಿದೆ. ಇದು ಬೆಳಗಾವಿಯಿಂದ 4 ಕಿ.ಮೀ. ದೂರದಲ್ಲಿದೆ.
PC: wikipedia.org

ಕಿತ್ತೂರು ಕೋಟೆ

ಕಿತ್ತೂರು ಕೋಟೆ

ಬೆಳಗಾವಿಯಿಂದ 50 ಕಿ.ಮೀ. ದೂರದಲ್ಲಿರುವ ಈ ಕೋಟೆ ಕಿತ್ತೂರು ರಾಣಿ ಚೆನ್ನಮ್ಮನ ಕಾಲದಲ್ಲಿ ನಿರ್ಮಿಸಲಾದ ಕೋಟೆ ಎಂದು ಹೇಳಲಾಗುತ್ತದೆ. ಅಲ್ಲಲ್ಲಿ ಕೋಟೆಗಳು ಭಗ್ನಾವಶೇಷ ರೂಪದಲ್ಲಿರುವುದನ್ನು ಕಾಣಬಹುದು. ಕೋಟೆಯೊಳಗೆ ನಕ್ಷತ್ರಗಳ ವೀಕ್ಷಣೆಗೆ ಮಾಡಿಕೊಂಡ ಕೊಳವೆಗಳು, ನೀರಿನ ವ್ಯವಸ್ಥೆ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ದೇವರ ಮನೆ, 100 ಅಡಿ ಅಗಲ ಹಾಗೂ 200 ಅಡಿ ಉದ್ದದ ದ್ವಾರಗಳು ಬಹಳ ವಿಶೇಷವಾಗಿವೆ. ಇದೀಗ ಇಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ರಾಜರ ಕಾಲದ ಕತ್ತಿ-ಗುರಾಣಿ, ಬೀಸುಕಲ್ಲು, ನಾಣ್ಯಗಳು ಹಾಗೂ ಆ ಕಾಲದ ಪ್ರಮುಖ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಇಲ್ಲಿ ಪ್ರವೇಶಕ್ಕೆ ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಅವಕಾಶವಿರುತ್ತದೆ.

ವಜ್ರಪೋಹಾ ಜಲಪಾತ

ವಜ್ರಪೋಹಾ ಜಲಪಾತ

ಬೆಳಗಾವಿಯಿಂದ 8.5 ಕಿ.ಮೀ. ದೂರದಲ್ಲಿದೆ. ಪಶ್ಚಿಮ ಘಟ್ಟಗಳಿಂದ ಸುತ್ತುವರಿದ ಈ ಜಲಪಾತ ಪ್ರವಾಸಿಗರಿಗೊಂದು ಆಕರ್ಷಕ ತಾಣ. ಇಲ್ಲಿ ಮಳೆಗಾಲದಲ್ಲಿ ಬಂದರೆ ಉಕ್ಕಿ ಹರಿಯುವ ಜಲಧಾರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಪರಸ್ಗಡ ಕೋಟೆ

ಪರಸ್ಗಡ ಕೋಟೆ

ಬೆಳಗಾವಿಯಿಂದ 97 ಕಿ.ಮೀ. ದೂರದಲ್ಲಿರುವ ಈ ಕೋಟೆ 10ನೇ ಶತಮಾನದ ಇತಿಹಾಸವನ್ನು ಹೊಂದಿದೆ. ರಟ್ಟ ದ್ಯಾನಸ್ತ್ಯರ ಕಾಲದಲ್ಲಿ ನಿರ್ಮಿಸಲಾಗಿದ್ದು, ಸವದತ್ತಿ ಹಳ್ಳಿಯಿಂದ 2 ಕಿ.ಮೀ. ದೂರದಲ್ಲಿದೆ. ಕುರುಚಲು ಗಿಡಗಳಿಂದ ಕೂಡಿದೆ. ಅಲ್ಲಲ್ಲಿ ಕುಸಿದು ಹಾಳಾಗಿರುವ ಈ ಕೋಟೆಯ ಮೇಲೆ ಹನುಮಂತನ ಚಿಕ್ಕ ಗುಡಿಯಿದೆ.
PC: wikipedia.org

Read more about: belgaum

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more