Search
  • Follow NativePlanet
Share
» »ಲಿಟಲ್ ಲಾಸಾದಲ್ಲಿ ಭೇಟಿ ನೀಡಬಹುದಾದಂತಹ 7 ಅತ್ಯುತ್ತಮ ಸ್ಥಳಗಳು - ಧರ್ಮಶಾಲಾ

ಲಿಟಲ್ ಲಾಸಾದಲ್ಲಿ ಭೇಟಿ ನೀಡಬಹುದಾದಂತಹ 7 ಅತ್ಯುತ್ತಮ ಸ್ಥಳಗಳು - ಧರ್ಮಶಾಲಾ

ಲಿಟಲ್ ಲಾಸಾದ ಧರ್ಮಶಾಲಾದಲ್ಲಿ ಭೇಟಿ ನೀಡಬಹುದಾದಂತಹ 7 ಅತ್ಯುತ್ತಮ ಸ್ಥಳಗಳ ಬಗ್ಗೆ ಇನ್ನಷ್ಟು ಮತ್ತಷ್ಟು ಮಾಹಿತಿ

By Majula Balaraj

ಹಿಮಾಚಲ ಪ್ರದೇಶದ ಕಂಗ್ರಾ ಕಣಿವೆಯ ಮೇಲ್ಭಾಗದಲ್ಲಿ ಸಮುದ್ರ ಮಟ್ಟದಿಂದ 1,475 ಮೀಟರ್ ಎತ್ತರದಲ್ಲಿ ಧರ್ಮಶಾಲಾ ಇದೆ. ಈ ನಗರವು ದೇವದಾರು ಮರಗಳ ದಟ್ಟವಾದ ಹೊದಿಕೆಗಳಿಂದ ಆವೃತವಾಗಿದೆ ಮತ್ತು ಇದು ಟಿಬೆಟಿಯನ್ ನಿರಾಶ್ರಿತರು ನೆಲೆಯಿರುವ ಪ್ರಮುಖ ಸ್ಥಳವಾಗಿದೆ ಹಾಗೂ14 ನೇ ದಲೈಲಾಮಾರ ವಾಸಸ್ಥಾನವಾಗಿದೆ.

ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಗಡಿಪಾರಾದ ಟಿಬೆಟಿಯನ್ ನಿರಾಶ್ರಿತರ ವಾಸವಾಗಿದ್ದಾರೆ. ಈ ಕಾರಣದಿಂದಾಗಿ ಇದು ಲಿಟಲ್ ಲಾಸಾ ಎಂದು ಪ್ರೀತಿಯಿಂದ ಕರೆಯಲ್ಪಡುತ್ತದೆ. ಇದು ಟಿಬೆಟಿಯನ್ ಸರಕಾರದ ಮುಖ್ಯ ಕೇಂದ್ರವಾಗಿದೆ.ಈ ಸ್ಥಳವು ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿದ್ದು, ದೇಶದ ಎರಡು ರಾಜಧಾನಿಗಳನ್ನು ಹೊಂದಿರುವ ಮೂರನೇ ರಾಜ್ಯವೆನಿಸಿದೆ. ಇಲ್ಲಿಯ ಸುಂದರ ಪರಿಸರ ಮತ್ತು ದಲೈಲಾಮಾ ಅವರು ಇಲ್ಲಿ ಉಪಸ್ಥಿತರಿರುವ ಕಾರಣದಿಂದಾಗಿ ಈ ಪಟ್ಟಣವು ಭಾರತದ ಮತ್ತು ವಿದೇಶಿ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.

1.ಟ್ಸುಗ್ಲಾ ಖಾಂಗ್ ಕಾಂಪ್ಲೆಕ್ಸ್

1.ಟ್ಸುಗ್ಲಾ ಖಾಂಗ್ ಕಾಂಪ್ಲೆಕ್ಸ್

PC: Adam Jones

ಟಿಬೆಟಿಯರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲ್ಪಟ್ಟ ಈ ಸಂಕೀರ್ಣವು 14 ನೇ ದಲೈಲಾಮಾ ಅವರ ಪವಿತ್ರತೆಯ ಅಧಿಕೃತ ನಿವಾಸವಾಗಿದೆ. ದಲೈ ಲಾಮಾ ಅವರ ಧಾರ್ಮಿಕ ಮನೆಯಾಗಿರುವುದರ ಜೊತೆಗೆ, ಟಿಬೆಟ್ ಮ್ಯೂಸಿಯಂ ನಂಜಿಯಾಲ್ ಗೊಂಪಾ ಹಾಗೂ ಟ್ಸುಗ್ಲಾ ಖಾಂಗ್ ದೇವಾಲಯಗಳನ್ನೊಳಗೊಂಡ ಸಂಕೀರ್ಣ ಇಲ್ಲಿದೆ.

ದೇವಾಲಯದ ಮೂರು ದೇವತೆಗಳೆಂದರೆ ಸಕ್ಯಮುನಿ ಬುದ್ಧ,ಪದ್ಮಸಂಭವ ಮತ್ತು ಅವಲೋಕೈಟೇಶ್ವರ ಸಕ್ಯಮುನಿ ಮೂರ್ತಿಯು ಮೂರು ಮೀಟರ್ ಎತ್ತರವಿದ್ದು, ಕಂಚಿನಿಂದ ಮಾಡಲ್ಪಟ್ಟಿದೆ; ಪದ್ಮಸಂಭವದ ವಿಗ್ರಹವು ಟಿಬೆಟನ್ನು ಎದುರಿಸಲು ಇದೆ ಎಂದು ಹೇಳಲಾಗುತ್ತದೆ. ಅವಲೋಕೈಟೇಶ್ವರವನ್ನು ಸಹಾನುಭೂತಿಯ ಬುದ್ಧ ಎಂದು ಕರೆಯಲಾಗುತ್ತದೆ. ದಲೈ ಲಾಮಾ ಅವರನ್ನು ಇಂದಿನ ದಿನ ಅವಲೋಕೈಟೇಶ್ವರನ ಪುನರ್ಜನ್ಮ ಎಂದು ನಂಬಲಾಗಿದೆ.

2. ನಂಗ್ಯಾಲ್ ಮಠ

2. ನಂಗ್ಯಾಲ್ ಮಠ

PC: Russavia

ನಂಜಿಯಾಲ್ ಮಠವನ್ನು 1575 ರಲ್ಲಿ ದಲೈಲಾಮಾ ಮೂರನೇಯವರು ಸ್ಥಾಪಿಸಿದರು; ಮೂಲತಃ ಇದು ಟಿಬೆಟ್ ನಲ್ಲಿದ್ದು 1959 ರಲ್ಲಿ ಟಿಬೆಟ್ ವಶಪಡಿಸಿಕೊಂಡ ನಂತರ ಈ ಮಠವನ್ನು ಧರ್ಮಶಾಲಾಗೆ ಸ್ಥಳಾಂತರಿಸಲಾಯಿತು.

ಇದನ್ನು ದಲೈ ಲಾಮಾರ ದೇವಸ್ಥಾನ ಎಂದು ಕರೆಯಲಾಗುತ್ತದೆ ಮತ್ತು 14 ನೆಯ ದಲೈಲಾಮಾ ಅವರ ಧಾರ್ಮಿಕ ಹಾಗೂ ವೈಯಕ್ತಿಕ ಮಠವಾಗಿದೆ. ಈಗಿರುವ ಮಠ ಸುಮಾರು 200 ಜನ ಟಿಬೇಟಿಯನ್ ಸನ್ಯಾಸಿಗಳ ನೆಲೆಯಾಗಿದೆ, ಅವರು ಪ್ರಾಚೀನ ಆಚರಣೆಗಳು, ಕಲಾತ್ಮಕ ಕೌಶಲ್ಯಗಳು ಮತ್ತು ಮಠದ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ.

3. ಮ್ಯಾಕ್ಲಿಯೋಡ್ ಗಂಜ್

3. ಮ್ಯಾಕ್ಲಿಯೋಡ್ ಗಂಜ್

PC: Kiran Jonnalagadda

ಮ್ಯಾಕ್ಲಿಯೋಡ್ ಗಂಜ್ ಧರ್ಮಶಾಲಾದ ಉಪನಗರವಾಗಿದ್ದು, ಲಿಟ್ಲ್ ಲಾಸಾ ಎಂದು ಕರೆಯಲ್ಪಡುತ್ತದೆ ಮತ್ತು ಇದು ಗಡಿಪಾರು ಟಿಬೆಟಿಯನ್ ಜನರ ಸರ್ಕಾರಕ್ಕೆ ನೆಲೆಯಾಗಿದೆ.ಬ್ರಿಟಿಷ್ ಆಳ್ವಿಕೆಯಲ್ಲಿ ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸರ್ ಡೊನಾಲ್ಡ್ ಫ್ರಿಯೆಲ್ ಮಕ್ಯೋದ್ ಅವರ ಹೆಸರನ್ನು ಈ ಸ್ಥಳಕ್ಕೆ ಇಡಲಾಗಿದೆ.

ಈ ಪಟ್ಟಣದಲ್ಲಿ ಹಿಮಾಲಯದ ಅನೇಕ ಪರ್ವತ ಶ್ರೇಣಿಗಳಿರುವುದರಿಂದ ಅನೇಕ ಟ್ರೆಕ್ಕಿಂಗ್ ಗಳ ಬೇಸ್ ಕ್ಯಾಂಪ್ ಆದುದರಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಈ ಸ್ಥಳವು ಥಾಂಕಾಸ್, ಟಿಬೆಟಿಯನ್ ಕರಕುಶಲ ವಸ್ತುಗಳು, ಕಾರ್ಪೆಟ್ಗಳು, ಹಾಡುವ ಬಟ್ಟಲುಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ.

4.ಮಾಸ್ರುರ್

4.ಮಾಸ್ರುರ್

PC: Akashdeep83

ಧರ್ಮಶಾಲಾದಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ ಮಸ್ರೂರ್, ಇದು ಕಲ್ಲಿನ ಸಂಕೀರ್ಣದಿಂದ ಮಾಡಿದ ದೇವಸ್ಥಾನವೆಂದು ಹೆಸರುವಾಸಿಯಾಗಿದೆ, ಇದು 6ನೇ ಶತಮಾನದಿಂದ 8ನೇ ಶತಮಾನದಷ್ಟು ಹಿಂದಿನದು ಎಂದು ಇತಿಹಾಸಕಾರರು ಹೇಳುತ್ತಾರೆ. ಈ ದೇವಾಲಯದ ಸಂಕೀರ್ಣವು ಕಲ್ಲಿನ (ರಾಖಿ) ಪರ್ವತದ ಮೇಲೆ ಇದೆ. ಇದು 1905 ರಲ್ಲಿ ಉಂಟಾದ ಭೂಕಂಪದಲ್ಲಿ ಗಮನಾರ್ಹವಾದ ಹಾನಿಗೊಳಗಾದ ದೇವಾಲಯವಾಗಿದೆ. ಇದು ಏಕಶಿಲೆಯ ದೇವಾಲಯವಾಗಿದೆ.

ಈ ದೇವಾಲಯಗಳು ಮಹಾಬಲಿಪುರಂ, ಎಲ್ಲೋರಾ ಮತ್ತು ಧನಾರ್ ದೇವಾಲಯಗಳಿಗೆ ಹೋಲುತ್ತವೆ.ಇಲ್ಲಿನ ಮುಖ್ಯ ದೇವಾಲಯವನ್ನು ಠಾಕುರ್ದ್ವಾರ ಎಂದು ಕರೆಯಲಾಗುತ್ತದೆ, ಅಲ್ಲಿ ರಾಮನ ವಿಗ್ರಹದ ಜೊತೆತೆ ಅವರ ಪತ್ನಿ ಸೀತಾ ದೇವಿ ಮತ್ತು ಅವರ ಸಹೋದರ ಲಕ್ಷ್ಮಣರನ್ನು ಕಾಣಬಹುದು. ದಂತಕಥೆಗಳ ಪ್ರಕಾರ, ಪಾಂಡವರು ತಮ್ಮ ಗಡಿಪಾರಿನ ಅವಧಿಯಲ್ಲಿ ಇಲ್ಲಿಯೇ ಇದ್ದರು ಮತ್ತು ಈ ದೇವಸ್ಥಾನವನ್ನು ಕಟ್ಟಿದರು ಎಂದು ಹೇಳಲಾಗುತ್ತದೆ. ಇಲ್ಲಿ ವಾಸವಾಗಿದ್ದಾಗ, ಅಲ್ಲಿ ಇದ್ದ ಗುರುತಿಗಾಗಿ ಇದನ್ನು ಕಟ್ಟಿದ್ದು ಮತ್ತು ಅವರು ಸ್ಥಳದಿಂದ ಸ್ಥಳಾಂತರಿಸಬೇಕಾಗಿ ಬಂದ ಕಾರಣದಿಂದಾಗಿ, ಸಂಕೀರ್ಣವು ಅಪೂರ್ಣವಾಗಿ ಉಳಿದಿರುವುದಕ್ಕೆ ಸಾಕ್ಷಿಯಾಗಿದೆ.

5. ಗ್ಯುಟೊ ಮೊನಾಸ್ಟರಿ (ಮಠ)

5. ಗ್ಯುಟೊ ಮೊನಾಸ್ಟರಿ (ಮಠ)

PC: Offical Site

ಟಿಬೆಟಿಯನ್ ಬೌದ್ಧ ಧರ್ಮದ ಕಗ್ಯು ಪಂಥದ ಮುಖ್ಯಸ್ಥರಾಗಿದ್ದ ಕರ್ಮಪನ ಮನೆಯೇ ಗ್ಯೂಟೋ ಮಠವಾಗಿದೆ.ಈ ಮಠವು ಬೌದ್ಧ ತತ್ತ್ವಶಾಸ್ತ್ರ, ತಾಂತ್ರಿಕ ಆಚರಣೆಗಳು ಮತ್ತು ತಾಂತ್ರಿಕ ಧ್ಯಾನದ ಕುರಿತಾದ ಅಧ್ಯಯನಗಳಿಗೆ ಹೆಸರುವಾಸಿಯಾಗಿದೆ.

ಈ ಕಟ್ಟಡವನ್ನು 1951 ರಲ್ಲಿ ಟಿಬೆಟ್ ಸ್ವಾತಂತ್ರ್ಯ ಯುದ್ಧದಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡ ಸೈನಿಕರ ನೆನಪಿಗಾಗಿ ನಿರ್ಮಿಸಲಾಯಿತು.ಈ ಮಠ ಸಂಕೀರ್ಣವು ಅದರ ವಾಸ್ತುಶಿಲ್ಪ ಮತ್ತು ಆಕರ್ಷಕ ವಿನ್ಯಾಸಗಳು ಸುಂದರವಾಗಿದೆ., ಈ ಸ್ಥಳವು ಶಾಂತಿಯುತವಾಗಿದ್ದು ಧೌಲಾಧರ್ ಶ್ರೇಣಿಗಳ ಸುಂದರವಾದ ಹಿನ್ನೆಲೆ ಇರುವ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಇದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

6. ಕಂಗ್ರಾ ಕೋಟೆ

6. ಕಂಗ್ರಾ ಕೋಟೆ

PC: John Hill

ಕಾಂಗ್ರಾ ಕೋಟೆ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ನಿರ್ಮಿಸಲಾಗಿರುವ ಅತ್ಯಂತ ದೊಡ್ಡ ಕೋಟೆಯಾಗಿದ್ದು, ಬಹುಶಃ ಇದು ದೇಶದ ಅತ್ಯಂತ ಹಳೆಯ ಕೋಟೆಯಾಗಿದೆ. ಈ ಕೋಟೆಯನ್ನು ಕಟೋಚ್ ರಾಜಮನೆತನದ ರಾಜ ರಜಪೂತ ಕುಟುಂಬವು ನಿರ್ಮಿಸಿತ್ತು,

ಇದರ ಮೂಲವು ಟ್ರಿಗಾರ್ಟದ ಪ್ರಾಚೀನ ಸಾಮ್ರಾಜ್ಯಕ್ಕೆ ಹೋಲುವಂತೆ ತೋರುತ್ತದೆ, ಎಂದು ಮಹಾಭಾರತದ ಮಹಾಕಾವ್ಯದಲ್ಲಿ ಉಲ್ಲೇಖಿಸಲಾಗಿದೆ. ಈ ಕಟ್ಟಡವು ಕಡಿದಾದ ಬಂಡೆಯ ಮೇಲೆ ಎತ್ತರದಲ್ಲಿದೆ, ಇಲ್ಲಿ ಸುತ್ತಮುತ್ತಲಿನ ಕಣಿವೆಗಳದೇ ಮೇಲುಗೈ , ಇದನ್ನು ಬಂಗಾಂಗ ಮತ್ತು ಮಜಿಯ ನದಿಗಳ ಸಂಗಮ ಸ್ಥಳದಲ್ಲಿ ನಿರ್ಮಿಸಲಾಗಿದೆ.

7. ದಾಲ್ ಸರೋವರ

7. ದಾಲ್ ಸರೋವರ

PC: Officialkt

ಕಾಶ್ಮೀರದ ದಾಲ್ ಸರೋವರವೆಂದು ಗೊಂದಲಕ್ಕೀಡಾಗಬೇಡಿ, ಈ ಸರೋವರವು ಧರ್ಮಶಾಲ ಸಮೀಪದ ಟೋಟಾ ರಾಣಿ ಗುಡ್ಡದಲ್ಲಿದೆ.ಸಮುದ್ರ ಮಟ್ಟದಿಂದ ಸುಮಾರು 1,775 ಮೀಟರ್ ಎತ್ತರದಲ್ಲಿರುವ ಈ ಸರೋವರವು ಒಂದು ಸುಂದರವಾದ ಸ್ಥಳದಲ್ಲಿದೆ.

ಇದು ಶಾಂತ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ.ಸರೋವರವು ದೊಡ್ಡ ಪ್ರಮಾಣದ ಮೀನುಗಳಿಗೆ ನೆಲೆಯಾಗಿದೆ; ಅದರ ದಂಡೆಯಲ್ಲಿರುವ ಶಿವನಿಗೆ ಅರ್ಪಿತವಾದ ಸಣ್ಣ ದೇವಾಲಯವನ್ನು ಕಾಣಬಹುದು. ಇದು ಇಲ್ಲಿನ ಧಾರ್ಮಿಕ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ.

Read more about: ಭಾರತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X