Search
  • Follow NativePlanet
Share
» »ಕರ್ನಾಟಕದಲ್ಲಿನ ಪ್ರಸಿದ್ಧವಾದ 5 ಕೋಟೆಗಳು

ಕರ್ನಾಟಕದಲ್ಲಿನ ಪ್ರಸಿದ್ಧವಾದ 5 ಕೋಟೆಗಳು

ಕೋಟೆಗಳು ಎಂದರೆ ಯಾರಿಗೆ ಇಷ್ಟವಾಗಲ್ಲ? ಐತಿಹಾಸಿಕತೆಯನ್ನು ಅಡಗಿರುವ ಒಂದೊಂದು ಗೋಡೆಯು ತನ್ನದೇ ಆದ ಮಹತ್ವವನ್ನು ಮತ್ತು ಇತಿಹಾಸವನ್ನು ಹೊಂದಿರುತ್ತವೆ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕವು ಕೋಟೆಗಳು ಎಂದರೆ ಬಲು ಇಷ್ಟ ಪಡುವವರು ಇದ್ದಾರೆ.

ಕೋಟೆಗಳು ಎಂದರೆ ಯಾರಿಗೆ ಇಷ್ಟವಾಗಲ್ಲ? ಐತಿಹಾಸಿಕತೆಯನ್ನು ಅಡಗಿರುವ ಒಂದೊಂದು ಗೋಡೆಯು ತನ್ನದೇ ಆದ ಮಹತ್ವವನ್ನು ಮತ್ತು ಇತಿಹಾಸವನ್ನು ಹೊಂದಿರುತ್ತವೆ. ದೊಡ್ಡವರಿಂದ ಹಿಡಿದು ಚಿಕ್ಕವರ ತನಕವು ಕೋಟೆಗಳು ಎಂದರೆ ಬಲು ಇಷ್ಟ ಪಡುವವರು ಇದ್ದಾರೆ.

ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಹಲವರು ಕೋಟೆಗಳು ಇವೆ. ಆ ಕೋಟೆಗಳೆಲ್ಲವೂ ತನ್ನ ಚಾರಿತ್ರತೆಗೆ ಹೆಸರುವಾಸಿಯಾಗಿದೆ. ಕೋಟೆಗಳ ಹೊಂದಿರುವ ಪ್ರಖ್ಯಾತ ದೇಶ ನಮ್ಮದ್ದು. ಇಲ್ಲಿನ ಕೋಟೆಗಳಿಗೆ ಭಾರತದ ಪ್ರಜೆಗಳೇ ಅಲ್ಲದೇ ವಿದೇಶಿಯರು ಕೂಡ ಹೆಚ್ಚಾಗಿ ಇಷ್ಟ ಪಡುವ ತಾಣಗಳು ಈ ಕೋಟೆಗಳು. ನಮ್ಮ ಹಿಂದಿನ ರಾಜ ಮನೆತನಗಳ ಶೌರ್ಯ. ಸಾಹಸ, ಯುದ್ಧ, ಕೊಡುಗೆ, ರಕ್ತಪಾತಗಳನ್ನು ತಿಳಿಯುವ ಹಂಬಲ ಎಲ್ಲರಿಗೂ ಇರುವುದು ಸಾಮಾನ್ಯವಾದುದಾಗಿದೆ.

ಚಿತ್ರದುರ್ಗದ ಕೋಟೆ

ಚಿತ್ರದುರ್ಗದ ಕೋಟೆ

ಚಿತ್ರದುರ್ಗ ಎಂದರೆ ಒಂದು "ಸುಂದರವಾದ ಕೋಟೆ" ಹಲವಾರು ಬೆಟ್ಟಗಳಿಂದ ಹರಡಿರುವ ಈ ಕೋಟೆ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದೆ. ಇದು ಕರ್ನಾಟಕದಲ್ಲಿನ ಹೆಮ್ಮೆಯ ಹಾಗು ಆಕರ್ಷಕವಾದ ಕೋಟೆ ಎಂದರೆ ತಪ್ಪಾಗಲಾದರು. ಇಲ್ಲಿ ಅಂದಿನ ಚಾಕಚಕ್ಯತೆಯನ್ನು ಕಾಣಬಹುದಾಗಿದೆ. ಅದೆನೆಂದರೆ ಮನೆಗಳು, ಕಣಜಗಳು, ಹಲವಾರು ದೇವಾಲಯಗಳು ಇಲ್ಲಿನ ಪ್ರಮುಖವಾದ ಆಕರ್ಷಣೆಯಾಗಿದೆ.

ಚಿತ್ರದುರ್ಗದ ಕೋಟೆ

ಚಿತ್ರದುರ್ಗದ ಕೋಟೆ

ಕೋಟೆಯ ಒಳಗೆ ಪ್ರವೇಶಿಸಲು 3 ರಕ್ಷಣಾತ್ಮಕವಾದ ದ್ವಾರಗಳು ಇವೆ. ಈ ಕೋಟೆಯ ಇತಿಹಾಸ ಕ್ರಿ.ಪೂ 3 ನೇ ಶತಮಾನಕ್ಕಿಂತ ಹಿಂದಿನದು ಎಂದು ಗುರುತಿಸಲಾಗಿದೆ. ಹಾಗೆಯೇ ಈ ಕೋಟೆಯು ವಿಜಯನಗರದ ಆಳ್ವಿಕೆಯ ಕಾಲದಲ್ಲಿತ್ತು. ಮೈಸೂರಿನ ಹೈದರ್ ಆಲಿಯು 1779 ರಲ್ಲಿ ವಶಪಡಿಸಿಕೊಂಡ ನಂತರ ಸತತ 20 ವರ್ಷಗಳ ಕಾಲ ಬ್ರಿಟಿಷರು ಈ ಕೋಟೆಯನ್ನು ಆಕ್ರಮಿಸಿಕೊಂಡರು.


PC:Pavithrah

ಶ್ರೀರಂಗ ಪಟ್ಟಣ ಕೋಟೆ

ಶ್ರೀರಂಗ ಪಟ್ಟಣ ಕೋಟೆ

ಶ್ರೀರಂಗ ಪಟ್ಟಣ ಕೋಟೆಯು ಭಾರತದ ಇತಿಹಾಸದಲ್ಲಿ ಗಮನಾರ್ಹವಾದ ಸ್ಥಳವನ್ನು ಹೊಂದಿದೆ. ಇದು ಬ್ರಿಟಿಷರ ಪ್ರಾಬಲ್ಯದ ವಿರುದ್ಧ ನಿಂತಿದ್ದ ಕೊನೆಯ ಭದ್ರ ಕೋಟೆಯಾಗಿತ್ತು. ಟಿಪ್ಪು ಸುಲ್ತಾನ್ ನೇತೃತ್ವದಲ್ಲಿ ಶ್ರೀರಂಗ ಪಟ್ಟಣವನ್ನು ಬ್ರಿಟಿಷರ ಕೈವಶವಾಗದಂತೆ ಕೊನೆಯವರೆಗೂ ಹೋರಾಡಿದರು. ಆದರೆ 1799 ರಲ್ಲಿ ಶೀರಂಗ ಪಟ್ಟಣವು ಬ್ರಿಟಿಷರ ಕೈವಶವಾಯಿತು.


PC:Steve Haslam

ಶ್ರೀರಂಗ ಪಟ್ಟಣ ಕೋಟೆ

ಶ್ರೀರಂಗ ಪಟ್ಟಣ ಕೋಟೆ

ಟಿಪ್ಪುವಿನ ಅರಮನೆ ಮತ್ತು ವಿವಿಧ ಮಿಲಿಟರಿ ರಚನೆಗಳು ನೆಲಸಮವಾದುವು. ಈ ಸುಂದರವಾದ ಕೋಟೆಯು ಕಾವೇರಿ ನದಿಯ ನೀರಿನಿಂದ ಎರಡು ಕಡೆಗಳಿಂದ ರಕ್ಷಿಸಲ್ಪಟ್ಟಿದೆ. ಇಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯ, ಜಾಮ ಮಸೀದಿ ಮತ್ತು ದರಿಯಾ ದೌಲತಾ ಬಾಗ್ ಇವೆಲ್ಲವೂ ಕೋಟೆಯೊಳಗಿನ ಪ್ರಮುಖ ಆರ್ಕಷಣೆಯಾಗಿವೆ.


PC:Spiros Vathis

ಬಿಜಾಪುರ ಕೋಟೆ

ಬಿಜಾಪುರ ಕೋಟೆ

ಕರ್ನಾಟಕದಲ್ಲಿನ ಕೋಟೆಗಳಲ್ಲಿ ಬಿಜಾಪುರದ ಕೋಟೆಗಳಿಗೆ ಪ್ರತ್ಯೇಕವಾದ ಸ್ಥಾನಗಳಿವೆ. ಇಲ್ಲಿನ ಕೋಟೆಗಳು ವಿಭಿನ್ನವಾಗಿರುತ್ತದೆ. ಆದಿಲ್ ಶಾಹಿ ರಾಜರು ಬಯಲು ಪ್ರದೇಶದಲ್ಲಿ ಕೋಟೆಯನ್ನು ರಕ್ಷಿಸಲು ಕಷ್ಟವೆಂದು ತಿಳಿದಿದ್ದರು. ಹಾಗಾಗಿಯೇ ಎತ್ತರದ ಗಡಿಗಳನ್ನು ನಿರ್ಮಾಣಕ್ಕೆ ಹೆಚ್ಚು ಮಾನ್ಯತೆ ನೀಡುತ್ತಿದ್ದರು.


PC:UNKNOWN

ಬಿಜಾಪುರ ಕೋಟೆ

ಬಿಜಾಪುರ ಕೋಟೆ

ಬಿಜಾಪುರದ ಅತ್ಯಂತ ಪ್ರಸಿದ್ಧವಾದ ಸ್ಮಾರಕವೆಂದರೆ "ಗೋಲ್‍ಗುಂಬಜ್". ಇದೊಂದು ದೊಡ್ಡ ಸಮಾಧಿಯಾಗಿದ್ದು, ಅತ್ಯಂತ ಆಕರ್ಷಕವಾಗಿದೆ. ಈ ಸ್ಮಾರಕವು ತನ್ನ ಗೊಮ್ಮಟಾಕಾರದಿಂದ ಹೆಸರುವಾಸಿಯಾಗಿದೆ. ರೋಮ್‍ನಲ್ಲಿನ ಸೆಂಟ್ ಪೀಟರ್ಸ್ ನಂತರ ಇದು ವಿಶ್ವದಲ್ಲಿಯೇ ಅತಿ ದೊಡ್ಡದಾದ ಗುಮ್ಮಟ ಎಂದು ಪ್ರಖ್ಯಾತಿ ಪಡೆದಿದೆ.

ಬೀದರ್ ಕೋಟೆಗಳು

ಬೀದರ್ ಕೋಟೆಗಳು

ಬೀದರ್ ಕೋಟೆಗಳು ಅದರ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬೀದರ್‍ನಲ್ಲಿನ 2 ಕೋಟೆಗಳು ಟ್ರಿಪಲ್ ಕಂದಕದಿಂದ ಬಲಪಡಿಸಲಾಗಿದೆ. ಇಲ್ಲಿ ಅರಮನೆಗಳು, ಕೊಠಡಿಗಳು, ಮಂಟಪಗಳು ಮತ್ತು ಮಸೀದಿಗಳನ್ನು ಕೋಟೆಯ ಅವರಣದಲ್ಲಿ ಕಾಣಬಹುದಾಗಿದೆ.

ಬೀದರ್ ಕೋಟೆಗಳು

ಬೀದರ್ ಕೋಟೆಗಳು

ರಂಗೀನ್ ಮಹಲ್ ಒಂದು ಭವ್ಯವಾದ ಮತ್ತು ಸುರಕ್ಷಿತವಾದ ಅರಮನೆಯಾಗಿದೆ. ಈ ಅರಮನೆಯ ಮುಖ್ಯ ಹಾಲ್ ಹಲವಾರು ಸುಂದರವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ. ಕೋಟೆಯ ಮತ್ತೊಂದು ಸುಂದರವಾದ ಸ್ಮಾರಕವೆಂದರೆ "ಸೋಲಾಹ್ ಖಂಬ ಮಸೀದಿ"ಯಾಗಿದೆ. ಅಂದರೆ 16 ಸ್ತಂಭದ ಮಸೀದಿ ಎಂದೇ ಆಗಿದೆ. ಇದು ಬಹುಮನಿಗಳ ಆಳ್ವಿಕೆಯಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು.

ಗುಲ್ಬರ್ಗಾ ಕೋಟೆ

ಗುಲ್ಬರ್ಗಾ ಕೋಟೆ

ಗುಲ್ಬರ್ಗಾದ ಕೋಟೆಗಳು 16 ನೇ ಶತಮಾನದಲ್ಲಿ ಅವುಗಳ ಅವಶೇಷಗಳು ಅಸ್ತಿತ್ವಕ್ಕೆ ಬಂದವು. ದೆಹಲಿಯ ಸುಲ್ತಾನ ಮುಹಮ್ಮದ್ ಬೀನ್ ತುಘಲಕ್ ಇದನ್ನು ವಶಪಡಿಸಿಕೊಳ್ಳುವ ಮೊದಲು ಆನೇಕ ರಾಜವಂಶಗಳು ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಬಹುಮನಿ ಸುಲ್ತಾನರು ಪರ್ಷಿಯನ್ ಪ್ರಭಾವದ ವಾಸ್ತುಶಿಲ್ಪಶೈಲಿಯನ್ನು ಅಳವಡಿಸಿಕೊಂಡಿದ್ದರು.


PC:Ramnath Bhat

ಗುಲ್ಬರ್ಗಾ ಕೋಟೆ

ಗುಲ್ಬರ್ಗಾ ಕೋಟೆ

ಇಲ್ಲಿ ದೊಡ್ಡ ದೊಡ್ಡದಾದ ಫಿರಂಗಿಗಳನ್ನು ಕಾಣಬಹುದಾಗಿದೆ. ಗುಲ್ಬರ್ಗದಲ್ಲಿನ ಜಾಮಾ ಮಸೀದಿ ದಕ್ಷಿಣ ಭಾರತದ ಅತ್ಯುತ್ತಮವಾದ ಮಸೀದಿಯಲ್ಲಿ ಒಂದಾಗಿದೆ. ಇದನ್ನು ಮೊರಿಶ್ ವಾಸ್ತುಶಿಲ್ಪ ಶೈಲಿಯಲ್ಲಿ ರೂಪಿಸಿದ್ದಾರೆ ಎಂದು ನಂಬಲಾಗಿದೆ.

PC:Shashank stark

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X