Search
  • Follow NativePlanet
Share
» »ಕೇರಳದ 5 ಸುಂದರವಾದ ಆಫ್ಬೀಟ್ ಕಡಲ ತೀರಗಳು

ಕೇರಳದ 5 ಸುಂದರವಾದ ಆಫ್ಬೀಟ್ ಕಡಲ ತೀರಗಳು

ಕೇರಳದ ಬೀಚ್ ಗೆ ಭೇಟಿ ಕೊಡಿ. ಕೇರಳದ ಆಫ್ಬೀಟ್ ಬೀಚ್ ಗಳು, ಕೇರಳದ ಆಸಕ್ತಿದಾಯಕ ಕೇಂದ್ರಗಳು,ಎರ್ನಾಕುಲಂ ನಿಂದ ಚೆರೈ ಬೀಚ್ ಗಿರುವ ದೂರ ಮತ್ತು ಇವೆಲ್ಲವನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

By Manjula

ಕೇರಳಕ್ಕೆ ಭೇಟಿ ನೀಡುವ ಅತ್ಯುತ್ತಮ ಅಂಶವೆಂದರೆ ನಾವು ಆಯ್ಕೆ ಮಾಡಬಹುದಾದ ವಿವಿಧ ಸ್ಥಳಗಳು. ಭಾರತದ ಒಂದು ಸಣ್ಣ ರಾಜ್ಯವಾದ ಕೇರಳವು ಭಾರತದ ದಕ್ಷಿಣ ಭಾಗದಲ್ಲಿದೆ. ಇದು ಎಲ್ಲಾ ರೀತಿಯ ಭೂದೃಶ್ಯಗಳಿಗೆ ನೆಲೆಯಾಗಿದೆ. ಮುನ್ನಾರ್ ನ ತಾಜಾ ಚಹಾತೋಟಗಳಿಂದ ಹಿಡಿದು ಜನಪ್ರಿಯ ಗಿರಿಧಾಮಗಳು, ಶಾಂತವಾದ ಕಡಲತೀರಗಳು, ಹಿನ್ನಿರುಗಳು, ಕಡಲತೀರಗಳು, ಗಿರಿಧಾಮಗಳು, ಮತ್ತು ಕೊಚ್ಚಿಯ ಶ್ರೀಮಂತ ಮತ್ತು ವಿಶಿಷ್ಟ ಸಂಸ್ಕೃತಿಯು ದೇವರ ಸ್ವಂತ ನಾಡಿನಲ್ಲಿನ ಅತ್ಯಂತ ರೋಮಾಂಚಕಾರಿ ತುಣುಕುಗಳಾಗಿವೆ.

ಈ ಲೇಖನವು ಕೇರಳದ ಸುಂದರವಾದ ಕಡಲತೀರಗಳ ಕಡೆಗೆ ಕೇಂದ್ರೀಕರಿಸುತ್ತದೆ.ಸುತ್ತಲೂ ತೆಂಗಿನ ಮರಗಳು ಮತ್ತು ಬಿಳಿ ಅಥವಾ ಹೊಂಬಣ್ಣದ ಮರಳುಗಳಿಂದ ಕೂಡಿದ್ದು ಹಲವು ಏಕಾಂತ ಸ್ಥಳಗಳಿಂದ ಸುತ್ತುವರಿಯಲ್ಪಟ್ಟ ಕೇರಳದ ಕಡಲ ತೀರಗಳಲ್ಲಿ ವಿಶ್ರಾಂತಿ ಮಾಡುವಾಗ ಬೆಚ್ಚಗಿನ ಮರಳುಗಳಲ್ಲಿ ನಿಮ್ಮ ಪಾದಗಳನ್ನು ಆಳದಲ್ಲಿ ಮುಳುಗುವಂತೆ ಮಾಡಲು ಸೂಕ್ತ ಸ್ಥಳವಾಗಿದೆ. ಇಲ್ಲಿ ನೀವು ಭೇಟಿ ಕೊಡಬಹುದಾದ ಕಡಲ ತೀರಗಳ ಪಟ್ಟಿ ಇಲ್ಲಿದೆ. ಅದು ಹೆಚ್ಚಿನ ಪ್ರವಾಸಿಗರಿಗೆ ತಿಳಿಯಲ್ಪಟ್ಟಿಲ್ಲ.

ಪದನ್ನಾ ಬೀಚ್ ಕಾಸರಗೋಡು

ಪದನ್ನಾ ಬೀಚ್ ಕಾಸರಗೋಡು

ಅದೇ ಹಳೆಯ ವೈಶಿಷ್ಟ್ಯ ಹಾಗೂ ಹಳೆಯ ಜಗತ್ತಿನ ಮೋಡಿಯನ್ನು ಉಳಿಸಿಕೊಂಡಿರುವ ಪದನ್ನಾ ಬೀಚ್ ಮತ್ತು ಕಾಸರಗೋಡಿನ ಹಿನ್ನೀರು ಒಂದು ನಯನ ಮನೋಹರವಾದ ಜಾಗವಾಗಿದೆ ಈ ಜಾಗವು ಇನ್ನೂ ವ್ಯಾಪರೀಕರಣದಿಂದ ಮುಟ್ಟಲ್ಪಟ್ಟಿಲ್ಲ.

ಈ ಬೀಚಿನ ಒಂದು ಅದ್ಭುತವಾದ ಸಂಗತಿಯೆಂದರೆ ಇಲ್ಲಿಯ ಸ್ಥಳೀಯರಿಂದ ಸಿಂಪಿ (ಒಯ್ ಸ್ಟರ್) ಕೃಷಿ ಮಾಡಲಾಗುತ್ತದೆ. ಕಡಲತೀರದ ಸುಂದರ ನೋಟವನ್ನು ಆನಂದಿಸಲು ಒಂದು ದಿನ ತೆಗೆದುಕೊಳ್ಳಿ ಮತ್ತು ನೀವು ಇಲ್ಲಿರುವಾಗ ರುಚಿಕರವಾದ ಸಿಂಪಿಗಳ ಖಾದ್ಯಗಳನ್ನು ಆನಂದಿಸಲು ಮರೆಯದಿರಿ.

PC: Silver Blue

ವಲ್ಲಿಕುನ್ನು ಬೀಚ್, ಮಲಪ್ಪುರಂ

ವಲ್ಲಿಕುನ್ನು ಬೀಚ್, ಮಲಪ್ಪುರಂ

ಇದು ಮಲಪ್ಪುರಂ ನಗರದಲ್ಲಿದೆ. ವಲ್ಲಿಕುನ್ನು ಬೀಚ್ ಒಂದು ಪ್ರತ್ಯೇಕವಾದ ಹಾಗೂ ಆಕರ್ಷಕವಾದುದಾಗಿದೆ. ಇಲ್ಲಿ ಯಾರಾದರೂ ಏಕಾಂತತೆ ಯನ್ನು ಬಯಸಿದಲ್ಲಿ ಅವರಿಗೆ ಹೇಳಿ ಮಾಡಿಸಿದಂತಿದೆ. ಬೀಚ್ ನ ಗಡಿಗಳಲ್ಲಿ ಸುಂದರವಾದ ಪಾಮ್ ಮರಗಳು ಒಂದು ಬದಿಯಲ್ಲಿ ಮತ್ತೊಂದು ಬದಿಯಲ್ಲಿ ಸ್ವಚ್ಚವಾದ ಕಡಲಿನ ನೀಲಿ ಬಣ್ಣವುಳ್ಳ ನೀರನ್ನು ಕಾಣಬಹುದು.

ನೀವು ಈ ಕಡಲತೀರಕ್ಕೆ ಹೋದಾಗ ಅಲ್ಲಿ ಕಡಲುಂಡಿ ಪಕ್ಷಿಧಾಮಕ್ಕೆ ಭೇಟಿ ನೀಡಬಹುದು. ಇದು ಕಡಲ ತೀರದಿಂದ ಸ್ವಲ್ಪ ದೂರದಲ್ಲಿದ್ದು ನಡೆದುಕೊಂಡೇ ಹೋಗಬಹುದು. ನಂತರ ಕಡಲುಂಡಿ ಅಣೆಕಟ್ಟಿಗೆ ಹೋಗಿ ಅಲ್ಲಿ ನಿಮಗೆ ಸುಂದರವಾದ ಅದ್ಭುತವಾದ ಮತ್ತು ಕೆಲವು ಸಮಯದಲ್ಲಿ ಮಾತ್ರ ಕಾಣಸಿಗುವ ಕೆಲವು ಪಕ್ಷಿಗಳನ್ನು ವೀಕ್ಷಿಸಬಹುದು.

PC: Navaneeth KN


ಚೆರೈ ಬೀಚ್, ಕೊಚ್ಚಿ

ಚೆರೈ ಬೀಚ್, ಕೊಚ್ಚಿ

ಕೊಚ್ಚಿ ಈ ನಗರವು ತನ್ನಲ್ಲಿ ವಿಶಿಷ್ಟ ವಾದ ಸಂಸ್ಕೃತಿಯನ್ನು ಒಳಗೊಂಡಿದೆ. ಅಲ್ಲದೆ ಇದು ಸಾಂಪ್ರದಾಯಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ಮೆರೈನ್ ಡ್ರೈವ್ ಕೂಡ ಹೆಸರುವಾಸಿಯಾಗಿದೆ. ಚೆರೈ ಬೀಚ್ ವೈಪೀನ್ ದ್ವೀಪಕ್ಕೆ ಹತ್ತಿರದಲ್ಲಿದ್ದು ಇದು ಎರ್ನಾಕುಲಂ ನಿಂದ ಸುಮಾರು 30 ಕಿ. ಮೀ ದೂರದಲ್ಲಿದೆ. ಇದು ಕಡಿಮೆ ಪ್ರಚಲಿತದಲ್ಲಿರುವ ಸ್ಥಳವಾಗಿದೆ.

ಕಡಲ ತೀರವು ದೂರದಿಂದ ಸುಂದರವಾದ ಚೀನೀ ಮೀನುಗಾರಿಕಾ ಪರದೆಗಳ ನೋಟವನ್ನು ಒದಗಿಸುತ್ತದೆ. ಚೆರೈ ಬೀಚ್ ಅತ್ಯಂತ ಸುರಕ್ಷಿತವಾಗಿರುವುದರಿಂದ ಇದು ಈಜುಗಾರರಿಗೆ ಸ್ವರ್ಗವಾಗಿದೆ. ನೀವು ಅದೃಷ್ಟವಂತರಾಗಿದ್ದಲ್ಲಿ ಇಲ್ಲಿಯ ನೀರಿನಲ್ಲಿ ಡಾಲ್ಪಿನ್ ಗಳು ಒಮ್ಮೊಮ್ಮೆ ಕಾಣಸಿಗಬಹುದು.

PC: Sudheesh

ಚೌರ ಬೀಚ್, ಕೋವಲಂ

ಚೌರ ಬೀಚ್, ಕೋವಲಂ

ಚೌರಾ ಕೋವಲಂ ಸಮೀಪದ ಒಂದು ಮೀನುಗಾರಿಕಾ ಗ್ರಾಮವಾಗಿದೆ, ಇದು ಸ್ವಚ್ಛ, ಬಿಳಿ ಮರಳಿನ ಕಡಲ ತೀರಕ್ಕೆ ನೆಲೆಯಾಗಿದೆ, ಅಲ್ಲಿ ನೀವು ಆಕಾಶದ ಸುತ್ತಲೂ ಹಾರಾಡುವ ಸುಂದರವಾದ ಪಕ್ಷಿಗಳು, ಗಾಳಿಪಟಗಳಂತೆ ಕಂಡುಬರುತ್ತವೆ. ಇಲ್ಲಿಯ ಸ್ವಚ್ಚವಾದ ಮರಳು ಮತ್ತು ಶಾಂತವಾದ ಗ್ರಾಮ ನಿಮ್ಮನ್ನು ಪ್ರಕೃತಿ ಪ್ರೇಮಿಯನ್ನಾಗಿಸುತ್ತದೆ.

ಸುಂದರವಾದ ಸಮುದ್ರತೀರವನ್ನು ಎತ್ತರದಲ್ಲಿ ನೋಡಬಹುದಾದ ಚೌರ ಎಂಬ ಬೆಟ್ಟದ ಮೇಲೆ ಇರುವ ಅಯ್ಯಪ್ಪ ದೇವಸ್ಥಾನವನ್ನು ಭೇಟಿ ಮಾಡಿ.ಸಾಮಾನ್ಯವಾಗಿ ನವೆಂಬರ್ ನಿಂದ ಜನವರಿ ವರೆಗೆ ನಡೆಯುವ 56-ದಿನಗಳ ಉತ್ಸವದ ಸಮಯದಲ್ಲಿ ಈ ದೇವಾಲಯವು ಜನ ಸಮೂಹದಿಂದ ಕೂಡಿರುತ್ತದೆ.

PC: Kerala Tourism

ಕಪ್ಪಿಲ್ ಬೀಚ್ , ವರ್ಕಲ

ಕಪ್ಪಿಲ್ ಬೀಚ್ , ವರ್ಕಲ

ಈ ಬೀಚ್ ತಿರುವನಂತಪುರಂ ನಿಂದ 58 ಕಿ.ಮೀ ದೂರದಲ್ಲಿದೆ. ಕಪಿಲ್ ಬೀಚ್ ವರ್ಕಲಾದ ಒಂದು ಆಕರ್ಷಕ ಬೀಚ್ ಆಗಿದ್ದು, ಇದು ನಗರದ ರಾಜಧಾನಿಯ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹತ್ತಿರದಲ್ಲಿಯೇ ಬೋಟಿಂಗ್ ವ್ಯವಸ್ಥೆಯೂ ಕೂಡ ಇರುತ್ತದೆ.

ಈ ಬೀಚ್ ನಲ್ಲಿರುವಾಗ ನಿಮ್ಮನ್ನು ನೀವು ಸೂರ್ಯಸ್ನಾನ, ಈಜು, ಮತ್ತು ಡಾಲ್ಪಿನ್ ಕಂಡುಹಿಡಿಯುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆಟೊ ರಿಕ್ಷಾ ಮೂಲಕ ಕೂಡ ಇಲ್ಲಿಂದ ನೀವು ಬೇಕಲ್ ಕೋಟೆಗೆ ನೀವು ಭೇಟಿ ನೀಡಬಹುದು.

PC: Raghavan Prabhu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X