Search
  • Follow NativePlanet
Share
» »ಮೂರೇ ದಿನದ ಗೋವಾ ಟ್ರಿಪ್... ಬಾಡಿಗೆ ಬೈಕ್ ಪಡೆಯೋದನ್ನು ಮರೆಯಬೇಡಿ

ಮೂರೇ ದಿನದ ಗೋವಾ ಟ್ರಿಪ್... ಬಾಡಿಗೆ ಬೈಕ್ ಪಡೆಯೋದನ್ನು ಮರೆಯಬೇಡಿ

ಗೋವಾ ಅಂದ್ರೆ ಎಲ್ಲರಿಗೂ ಇಷ್ಟ. ಯುವಕರಂತೂ ಟ್ರಿಪ್ ಹೋಗೋಣ ಅಂದ್ರೆ ಗೋವಾಗೆ ಹೋಗುವುದನ್ನೇ ಆಯ್ಕೆ ಮಾಡುತ್ತಾರೆ. ಇನ್ನೂ ಆಫೀಸ್‌ಗೆ ಹೋಗುವವರಿಗೂ ಗೋವಾ ಹೋಗೋ ಮನಸ್ಸಿರುತ್ತೆ ಆದರೆ ರಜೆ ಸಿಗೋದೇ ಪ್ರಾಬ್ಲಮ್. ಹೀಗಿರುವ ಆದಷ್ಟು ಕಡಿಮೆ ದಿನ ರಜಾದಲ್ಲಿ ಗೋವಾ ಸುತ್ತಲು ಪ್ರಯತ್ನಿಸಬಹುದು. ಕಡಿಮೆ ಅಂದರೆ ಕನಿಷ್ಠ ಮೂರು ದಿನ ರಜಾದಲ್ಲಿ ಗೋವಾ ಸುತ್ತಾಡಬಹುದು.

ಬೆಂಗ್ಳೂರಿನ ಈ ಸ್ಥಳದಲ್ಲಿ ಲವರ್‌ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದೀರಾ ?ಬೆಂಗ್ಳೂರಿನ ಈ ಸ್ಥಳದಲ್ಲಿ ಲವರ್‌ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದೀರಾ ?

ಶತಮಾನದ ಕಟ್ಟಡಗಳು

ಶತಮಾನದ ಕಟ್ಟಡಗಳು

PC:Anshikasjv12
ಮೊದಲ ದಿನ ನೀವು ಹಳೆಯ ಗೋವಾದ ಶತಮಾನದ ಹಳೆಯ ಕ್ಯಾಥೆಡ್ರಲ್‌ಗಳಾದ ಬೆಸಿಲಿಕಾ ಆಫ್ ಬಾಮ್ ಜೀಸಸ್ ಮತ್ತು ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚಾಪೆಲ್‌ನ ವೀಕ್ಷಣೆ ಮಾಡಬಹುದು. ಗೋವಾ ಕೋಟೆಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿ ೧೫ನೇ ಶತಮಾನಕ್ಕೆ ಸಂಬಂಧಿಸಿದಂತಹ ಕೋಟೆಗಳನ್ನೂ ಕಾಣಬಹುದು.

ಬೈಕ್‌ ರೈಡ್‌

ಬೈಕ್‌ ರೈಡ್‌

PC: youtube

ಗೋವಾಕ್ಕೆ ಹೋದ ಮೇಲೆ ನೀವು ಅಲ್ಲಿ ಸಿಗುವ ಬಾಡಿಗೆ ಬೈಕ್‌ನ್ನು ಪಡೆಯಿರಿ. ಅದರಲ್ಲಿ ಇಡೀ ಹಳೆ ಗೋವಾವನ್ನು ಸುತ್ತಬಹುದು. ಇಲ್ಲಿ ಪನ್ಜಿಮ್, ನದಿವಿಹಾರದ ಆನಂದ ಪಡೆಯಿರಿ.

 ನಾರ್ತ್ ಗೋವಾ

ನಾರ್ತ್ ಗೋವಾ

PC:Vinayaraj
ಗೋವಾದಲ್ಲಿ ಬೀಚ್‌ನ ಸೌಂದರ್ಯವನ್ನು ಕಾಣೋದೇ ಒಂದು ಖುಷಿ. ಗೋವಾದಲ್ಲಿ ನೀವು ನೋಡಲೇ ಬೇಕಾಗಿರುವ ಬೀಚ್ ಎಂದರೆ ಅಂಜುನಾ, ಬಾಗಾ ಹಾಗೂ ಕಾಲಂಗುಟೆ. ಈ ಬೀಚ್‌ನಲ್ಲಿ ವಾಟರ್‌ ಸ್ಪೋರ್ಟ್ಸ ಅಧಿಕ ಇವೆ. ಪ್ಯಾರ ಸೈಕ್ಲಿಂಗ್, ಸ್ಕೂಬಾ ಡೈವಿಂಗ್ ಇವುಗಳ ಆನಂದವನ್ನು ಇಲ್ಲಿ ಪಡೆಯಬಹುದು. ಎರಡನೇ ದಿನ ನೀವು ಗೋವಾದ ನೈಟ್‌ ಲೈಫ್‌ನ ಆನಂದವನ್ನು ಪಡೆಯಬಹುದು. ಟೀಟೋ ಬಾರ್‌ ಇಲ್ಲಿನ ಫೇಮಸ್ ಪಾರ್ಟಿ ತಾಣವಾಗಿದೆ. ಶಾಪಿಂಗ್ ಮಾಡಬೇಕಾದರೆ ನೈಟ್‌ ಬಜಾರ್‌ಗೂ ಹೋಗಬಹುದು.

Read more about: india goa travel beach
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X