» »ನಾಯಿಗಳ ದೇವಾಲಯ ಎಲ್ಲಿದೆ ಗೊತ್ತ?

ನಾಯಿಗಳ ದೇವಾಲಯ ಎಲ್ಲಿದೆ ಗೊತ್ತ?

Written By: Sowmyabhai

ನಮ್ಮ ದೇಶದಲ್ಲಿ ಹಲವಾರು ಚಿತ್ರ ವಿಚಿತ್ರಗಳು ದಿನನಿತ್ಯ ಕಾಣುತ್ತೆವೆ. ಅವುಗಳು ಕೆಲವೊಮ್ಮೆ ಬೆಳಕಿಗೆ ಬಂದರೆ ಇನ್ನೂ ಕೆಲವು ನಮಗೆ ತಿಳಿದಿರುವುದಿಲ್ಲ. ಕೋಟ್ಯಾಂತರ ದೇವರುಗಳು ನಿಮಗೆ ಬಹುಶಃ ಪರಿಚಯವಿದೆ. ಅವುಗಳಲ್ಲಿ ವಿಭಿನ್ನ ನಿಮಗೆ ತಿಳಿಯದ ದೇವರುಗಳ ದೇವಾಲಯಗಳಿವೆ ಎಂಬುದು ನಿಮಗೆ ತಿಳಿದಿದೆಯಾ?. ವಿವಿಧ ರೀತಿಯ ಆಚರಣೆಗಳು, ಕಂಡು ಕೇಳಿರದ ಕಾಣಿಕೆಗಳನ್ನು ಈ ದೇವಾಲಯಗಳಲ್ಲಿ ನೀಡುತ್ತಾರೆ. ಕಾಣಿಕೆಯಾಗಿ ಗಡಿಯಾರ, ಆಟೋಟ ಸಮಾನುಗಳು, ದೇವರನ್ನು ಅವಾಚ್ಯಾ ಶಬ್ದಗಳಿಂದ ಬಯ್ಯುವುದು, ಭಾರತಾಂಬೆ ದೇವಾಲಯಗಳು, ಸೋನಿಯಾ ಗಾಂಧಿಯ ದೇವಾಲಯ, ಅಮಿತಾಬ್ ದೇವಾಲಯ, ನಾಯಿಗಳ ದೇವಾಲಯ ಇತ್ಯಾದಿಗಳ ಬಗ್ಗೆ ಪ್ರಸ್ತುತ ಲೇಖನದಲ್ಲಿ ವಿವಿಧ ಆಚರಣೆಗಳನ್ನು ತಿಳಿಯಿರಿ.

1.ಗಡಿಯಾರದ ಕಾಣಿಕೆ

1.ಗಡಿಯಾರದ ಕಾಣಿಕೆ

ಬ್ರಹ್ಮನ ಬಾಬಾ ದೇವಾಲಯದಲ್ಲಿ ಭೇಟಿ ನೀಡುವ ಭಕ್ತರು ತಮ್ಮ ಇಷ್ಟಾರ್ಥಗಳು ನೇರವೇರಿದರೆ ಗಡಿಯಾರ ಅಥವಾ ಕೈ ಗಡಿಯಾರವನ್ನು ಕಾಣಿಕೆಯಾಗಿ ನೀಡುವ ಆಚಾರ ಪ್ರತೀತಿಯಲ್ಲಿದೆ.
PC:James_1972

2.ಗುರುದ್ವಾರ

2.ಗುರುದ್ವಾರ

ಗುರುದ್ವಾರದ ಹಳ್ಳಿಯಲ್ಲಿರುವ ಜಲಂದರದಲ್ಲಿರುವ ನದಿಯಲ್ಲಿ ತೇಲುತ್ತಿರುವ ಅದೆಷ್ಟೂ ಆಟದ ವಸ್ತುಗಳನ್ನು ಕಾಣಬಹುದಾಗಿದೆ. ಭಕ್ತರು ಇಂತಹ ಆಟದ ವಸ್ತುಗಳನ್ನು ಬಿಡುವ ಕಾರಣ ಹೀಗೆ ಆಟ ಸಾಮನುಗಳನ್ನು ಈ ಪವಿತ್ರ ದೇವಾಲಯದಲ್ಲಿ ಬಿಟ್ಟರೆ ವಿದೇಶಕ್ಕೆ ಹೋಗಲು ವಿಸಾ ದೊರೆಯುತ್ತದೆ ಎಂಬ ಕಾರಣದಿಂದ ಹೀಗೆ ಮಾಡುತ್ತಾರೆ.
PC:Jed Blues

3.ಕುಂಡುನ್‍ಗಲ್ಲು ಭಗವತಿ ದೇವಾಲಯ

3.ಕುಂಡುನ್‍ಗಲ್ಲು ಭಗವತಿ ದೇವಾಲಯ

ಕೇರಳದಲ್ಲಿರುವ ಕುಂಡುನ್‍ಗಲ್ಲು ಭಗವತಿ ದೇವಾಲಯದ ಭರಣಿ ಉತ್ಸವ ನಡೆಯುವ ಸಮಯದಲ್ಲಿ ಭಗವತಿ ದೇವಿಯನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾರೆ.
PC:Darius Austin

4.ಭಾರತ ಮಾತಾ ದೇವಾಲಯ

4.ಭಾರತ ಮಾತಾ ದೇವಾಲಯ

ಈ ಭಾರತ ಮಾತಾ ದೇವಾಲಯವು ವಾರಾಣಾಸಿಯಲ್ಲಿದೆ. ಕೋಟ್ಯಾಂತರ ದೇವಾಲಯವನ್ನು ಹೊಂದಿರುವ ನಮ್ಮ ದೇಶದಲ್ಲಿ ಭಾರತ ಮಾತೆಯ ದೇವಾಲಯವನ್ನು ಸಹಾ ಕಾಣಬಹುದಾಗಿದೆ.
PC:Isriya Paireepairit

5.ಕಾಳಿ ಸಿಂಗ್ ದೇವಾಲಯ

5.ಕಾಳಿ ಸಿಂಗ್ ದೇವಾಲಯ

ಕಾಳಿ ಸಿಂಗ್ ದೇವಾಲಯವು ಮುಜಾಫರ್ ಜಂಗ್‍ನಲ್ಲಿದೆ. ಕಾಳಿ ಸಿಂಗ್ ದೇವಾಲಯದಲ್ಲಿ ಹಸುಗಳು ಹಾಲನ್ನು ಹೆಚ್ಚಾಗಿ ನೀಡಲಿ ಎಂದು ಪೂಜಿಸುವ ದೇವಾಲಯ ಇದಾಗಿದೆ.
PC:Jennifer Gon

6.ಸೋನಿಯಾ ಗಾಂಧಿ ದೇವಾಲಯ

6.ಸೋನಿಯಾ ಗಾಂಧಿ ದೇವಾಲಯ

ಪ್ರಸಿದ್ದ ಮಹಿಳಾ ರಾಜಕಾರಿಣಿ ಸೋನಿಯಾ ಗಾಂಧಿಯ ಪ್ರತಿಮೆಯ ದೇವಾಲಯ ಮೆಹೆಬೂಬ್ ನಗರದಲ್ಲಿರುವುದನ್ನು ಕಾಣಬಹುದು. ಇದನ್ನು ಶಂಕರ ರಾವ್ ನಿರ್ಮಿಸಿದರು ಎನ್ನಲಾಗಿದೆ.
PC:Pressbrief

7.ನಾಯಿಗಳ ದೇವಾಲಯ

7.ನಾಯಿಗಳ ದೇವಾಲಯ

ನಾಯಿಗಳಿಗೂ ಒಂದು ದೇವಾಲಯವಿದೆ ಎಂದು ನಿಮಗೆ ತಿಳಿದಿದೆಯೇ? ಹೌದು ನಾಯಿಗಳಿಗೆ ಪ್ರತ್ಯೇಕವಾದ ದೇವಾಲಯವನ್ನು ಕರ್ನಾಟಕದ ಚೆನ್ನಪಟ್ನದಲ್ಲಿ ಕಾಣಬಹುದಾಗಿದೆ.
PC:Marion Holtzman

8.ಅಮಿತಾಬ್ ಬಚನ್ ದೇವಾಲಯ

8.ಅಮಿತಾಬ್ ಬಚನ್ ದೇವಾಲಯ

ಬಾಲಿವುಡ್‍ನ ಪ್ರಖ್ಯಾತ ನಟ ಅಮಿತಾಬ್ ಬಚನ್ ದೇವಾಲಯವು ಕೋಲ್ಕತ್ತದಲ್ಲಿದೆ. ಸಾಮಾನ್ಯವಾಗಿ ಭಾರತದಲ್ಲಿ ಅಮಿತಾಬ್ ಹಲವಾರು ಪ್ರತಿಮೆಗಳಿವೆ ಆದರೆ ಇಲ್ಲಿ ಅಮಿತಾಬ್‍ನನ್ನು ದೇವತಾ ಮೂರ್ತಿಯ ಹಾಗೆ ಪೂಜಿಸಲಾಗುತ್ತದೆ.
PC:artist murali

9.ಕಾರಣಿ ಮಠ ದೇವಾಲಯ

9.ಕಾರಣಿ ಮಠ ದೇವಾಲಯ

ಈ ಕಾರಣಿ ಮಠ ದೇವಾಲಯವು ದೇಶನುಕ್‍ನಲ್ಲಿದೆ. ಈ ದೇವಾಲಯದಲ್ಲಿ ಮೂಶಿಕಗಳನ್ನು ಕಾಳಿ ಸ್ವರೂಪಿ ಎಂದು ಆರಾಧಿಸಲಾಗುತ್ತದೆ.
PC:kantikshah

10.ರಾವಣನ ದೇವಾಲಯ

10.ರಾವಣನ ದೇವಾಲಯ

ಮಧ್ಯೆ ಪ್ರದೇಶದಲ್ಲಿ ರಾವಣನನ್ನು ಸಾವಿರಾರು ಕನ್ಯಾಕುಬ್‍ಜಾ ಬ್ರಾಹ್ಮಣರು ಆರಾಧಿಸುತ್ತಾರೆ.
PC:bearingblue

11.ಸಚಿನ್ ದೇವಾಲಯ

11.ಸಚಿನ್ ದೇವಾಲಯ

ಕ್ರಿಕೆಟ್‍ನ ದೇವರು ಎಂದೇ ಖ್ಯಾತನಾಗಿರುವ ಸಚಿನ್. ಈತನ ದೇವಾಲಯವು ಕೂಡ ಬಿಹಾರದಲ್ಲಿ ಇರುವುದನ್ನು ಕಾಣಬಹುದು.
PC:SB

12.ಓಂ ಬನ್ನ ಬಾಬಾ ದೇವಾಲಯ

12.ಓಂ ಬನ್ನ ಬಾಬಾ ದೇವಾಲಯ

ಬುಲೆಟ್‍ಗಾಡಿಯೇ ಓಂ ಬನ್ನ ಬಾಬಾ. ಈ ಬುಲೆಟ್ ಬೈಕಿಗೂ ಒಂದು ದೇವಾಲಯವನ್ನು ಜೋಧಪುರ್‍ನಲ್ಲಿ ಕಾಣಬಹುದಾಗಿದೆ.
PC:Nipun Srivastava

13.ಕಾಲ ಬೈರವ ದೇವಾಲಯ

13.ಕಾಲ ಬೈರವ ದೇವಾಲಯ

ಕಾಲ ಬೈರವ ದೇವಾಲಯವು ಉಜೈನಿಯಲ್ಲಿದೆ. ಇಲ್ಲಿರುವ ಕಾಲ ಬೈರವನಿಗೆ ಮಧ್ಯಪಾನವನ್ನು ಭಕ್ತರು ಪ್ರಸಾದವಾಗಿ ನೀಡುತ್ತಾರೆ.
PC:Greg Inda

14.ದಿಗಂಬರೇಶ್ವರ ದೇವಾಲಯ

14.ದಿಗಂಬರೇಶ್ವರ ದೇವಾಲಯ

ಈ ದೇವಾಲಯದ ಗೋಪುರದ ಮೇಲಿನಿಂದ ಮಗುವನ್ನು ಎಸೆಯುತ್ತಾರೆ ಹೀಗೆ ಮಾಡುವುದರಿಂದ ದಿಗಂಬರೇಶ್ವರನು ಒಳ್ಳೆ ಅದೃಷ್ಟ ನೀಡುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ.
PC:Yoann JEZEQUEL

15.ದುರ್ಯೋಧನನ ದೇವಾಲಯ

15.ದುರ್ಯೋಧನನ ದೇವಾಲಯ

ಕೌರವರ ಅರಸ ದುರ್ಯೋಧನನನ್ನು ಉತ್ತರ ಖಂಡನ ಹಲವಾರು ಸ್ಥಳಗಳಲ್ಲಿ ಆರಾಧಿಸಲಾಗುತ್ತದೆ. ಆದೇ ರೀತಿ ಕೇರಳದ ಒಂದು ಚಿಕ್ಕ ಹಳ್ಳಿಯಲ್ಲೊ ಕೂಡ ದುರ್ಯೋಧನನಿಗೆ ಸಂಬಂಧಿಸಿದ ದೇವಾಲಯವಿರುವುದನ್ನು ಕಾಣಬಹುದು.
PC:Suresh Dhanakotti

Please Wait while comments are loading...