Search
  • Follow NativePlanet
Share
» »ಭಾರತದಲ್ಲಿರುವ 15 ಎತ್ತರದ ಪ್ರತಿಮೆಗಳು

ಭಾರತದಲ್ಲಿರುವ 15 ಎತ್ತರದ ಪ್ರತಿಮೆಗಳು

By Vijay

ಸಾಮಾನ್ಯವಾಗಿ ಎತ್ತರದ ಪ್ರತಿಮೆಗಳು ಸಾಕಷ್ಟು ಗಮನಸೆಳೆವ ಕುತೂಹಲಕರ ಪ್ರವಾಸಿ ಆಕರ್ಷಣೆಗಳಾಗಿರುತ್ತವೆ. ಜಗತ್ತಿನೆಲ್ಲೆಡೆ ಹಲವಾರು ಆಗಸವನ್ನೆ ಚುಂಬಿಸುತ್ತಿರುವಂತಿರುವ ಅತಿ ಎತ್ತರದ ಪ್ರತಿಮೆಗಳನ್ನು ಕಾಣಬಹುದು. ಅದರಂತೆ ಭಾರತ ದೇಶವೂ ಹೊರತಾಗಿಲ್ಲ. ಇಲ್ಲಿಯೂ ಸಹ ಹಲವಾರು ಭವ್ಯ ಹಾಗೂ ಅತಿ ಎತ್ತರದ ಪ್ರತಿಮೆಗಳನ್ನು ಕಾಣಬಹುದು.

ಭಾರತವನ್ನು ಪರಿಚಯಿಸುವ ಮುಖ್ಯ ಹೆಗ್ಗುರುತುಗಳು

ಭಾರತದಲ್ಲಿ ಬಹು ಪಾಲು ಹಿಂದುಗಳಿದ್ದು ಅವರ ನೆಚ್ಚಿನ ಹಾಗೂ ಬಲಶಾಲಿ ದೇವರುಗಳಾದ ಶಿವ, ಆಂಜನೇಯ, ಗಣೇಶನ ಪ್ರತಿಮೆಗಳನ್ನು ಸಾಮಾನ್ಯವಾಗಿ ಎಲ್ಲೆಡೆ ಕಾಣಬಹುದು.ಇನ್ನುಳಿದಂತೆ ಆಯಾ ಪ್ರದೇಶದ ಬಹುಪಾಲು ಜನರು ತಾವು ನಡೆದುಕೊಳ್ಳುವ ಗುರುಗಳದ್ದೊ, ದೇವರದ್ದೋ ಅಥವಾ ಮಹಾ ಪುರುಷರದ್ದೊ ಪ್ರತಿಮೆಗಳನ್ನು ನಿರ್ಮಿಸಿರುತ್ತಾರೆ.

ಪ್ರಸ್ತುತ ಲೇಖನದಲ್ಲಿ ಭಾರತದಲ್ಲಿ ಒಂದೊಮ್ಮೆಯಾದರೂ ನೋಡಲೇಬೇಕಾದ ತಮ್ಮ ಎತ್ತರಗಳಿಂದ ಪ್ರವಾಸಿ ಆಕರ್ಷಣೆಗಳಾಗಿ ಜನರನ್ನು ಚುಂಬಕದಂತೆ ಸೆಳೆವ 15 ಆಯ್ದ ಎತ್ತರದ ಪ್ರತಿಮೆಗಳ ಕುರಿತು ತಿಳಿಸಲಾಗಿದೆ. ಇವುಗಳಲ್ಲದೆ ಇನ್ನೂ ಎಷ್ಟೊ ಸಾಕಷ್ಟು ಪ್ರತಿಮೆಗಳು ಇರಲೂಬಹುದು.

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಬಸವ ಪ್ರತಿಮೆ : ಕರ್ನಾಟಕದ ಬೀದರ್ ಜಿಲ್ಲೆಯಲ್ಲಿರುವ ಬಸವಕಲ್ಯಾಣದಲ್ಲಿ ವಚನಕಾರ ಹಾಗೂ ಲಿಂಗಾಯತ ಮತದ ಸ್ಥಾಪಕರಾದ ಬಸವೇಶ್ವರರ ಈ ಪ್ರತಿಮೆಯಿದೆ. ಇದರ ಎತ್ತರ 108 ಅಡಿಗಳು.

ಚಿತ್ರಕೃಪೆ: Sscheral

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ವೀರ ಅಭಯ ಆಂಜನೇಯಸ್ವಾಮಿ ಪ್ರತಿಮೆ: ಆಂಧ್ರಪ್ರದೇಶ ರಾಜ್ಯದ ವಿಜಯವಾಡಾ ನಗರದಿಂದ ಸುಮಾರು 30 ಕಿ.ಮೀ ದೂರವಿರುವ ಪರಿತಲಾ ಎಂಬ ಗ್ರಾಮದಲ್ಲಿರುವ ಈ ಅಂಜನೇಯಸ್ವಾಮಿಯ ಪ್ರತಿಮೆಯು ಸದ್ಯ ಭಾರತದಲ್ಲಿರುವ ಅತಿ ಎತ್ತರದ ಆಂಜನೇಯ ಸ್ವಾಮಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ಎತ್ತರ 135 ಅಡಿಗಳು.

ಚಿತ್ರಕೃಪೆ: MaddogMike

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ತಿರುವಳ್ಳುವರ್ ಪ್ರತಿಮೆ : ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದ ಬಗ್ಗಲಿನಲ್ಲೆ ಭವ್ಯವಾಗಿ ನಿರ್ಮಾಣಗೊಂಡಿರುವ ತಮಿಳಿನ ಪ್ರಾಚೀನ ಹಾಗೂ ಸಂತ ಕವಿಯಾದ ತಿರುವಳ್ಳುವರ್ ಪ್ರತಿಮೆಯಿದ್ದು 133 ಅಡಿಗಳಷ್ಟು ಎತ್ತರ ಹೊಂದಿದೆ.

ಚಿತ್ರಕೃಪೆ: Docku

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಬುದ್ಧ ಉದ್ಯಾನ : ಭಾರತದ ಸಿಕ್ಕಿಂ ರಾಜ್ಯದ ಸಿಕ್ಕಿಂ ನಗರದ ರಾವಂಗ್ಲಾ ಬಳಿಯಲ್ಲಿರುವ ಈ ಬುದ್ಧನ ಉದ್ಯಾನದಲ್ಲಿ ಸುಂದರವಾಗಿ ನಿರ್ಮಿಸಲಾದ ಎತ್ತರದ ಬೌದ್ಧ ವಿಗ್ರಹವಿದೆ. ಇದರ ಎತ್ತರ 128 ಅಡಿಗಳು.

ಚಿತ್ರಕೃಪೆ: Kutsa

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಧ್ಯಾನ ಬುದ್ಧ : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಮರಾವತಿ ಹಳ್ಳಿಯಲ್ಲಿ ಧಾನ್ಯ ಭಂಗಿಯಲ್ಲಿರುವ ಈ ಬುದ್ಧನ ವಿಗ್ರಹವಿದೆ. ಇದರ ಎತ್ತರ 125 ಅಡಿಗಳು.

ಚಿತ್ರಕೃಪೆ: Jai Kishan Chadalawada

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಪದ್ಮಸಂಭವ ಪ್ರತಿಮೆ : ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿರುವ ರೇವಲ್ಸರ್ ಒಂದು ಚಿಕ್ಕದಾದ ಪಟ್ಟಣವಾಗಿದೆ. ಬೌದ್ಧರು ಎರಡನೇಯ ಬುದ್ಧನೆಂದು ಕರೆಯುವ ಗುರು ರಿಂಪೊಂಚೆ ಎಂತಲೂ ಕರೆಯಲ್ಪಡುವ ಪದ್ಮಸಂಭವರ ಅತಿ ಎತ್ತರವಾದ ಪ್ರತಿಮೆಯ್ಯಿದ್ದು ಇದರ ಎತ್ತರ 123 ಅಡಿಗಳು.

ಚಿತ್ರಕೃಪೆ: John Hill

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಶಿವ ಪ್ರತಿಮೆ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿದೆ. ಅರಬ್ಬಿ ಸಮುದ್ರದ ಹಿನ್ನಿಲೆಯಲ್ಲಿ ಅದ್ಭುತವಾಗಿ ಕಂಡುಬರುವ ಈ ಶಿವನ ಪ್ರತಿಮೆಯ ಎತ್ತರ 121 ಅಡಿಗಳು.

ಚಿತ್ರಕೃಪೆ: Kousthubh Aithal

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಅಹಿಂಸೆಯ ಪ್ರತಿಮೆ : ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿರುವ ಮಂಗಿ-ತುಂಗಿ ಎಂಬ ಎರಡು ಶೃಂಗಗಳ ಬೆಟ್ಟಗಳು ಜೈನರ ಪವಿತ್ರ ಕ್ಷೇತ್ರವಾಗಿದ್ದು ಇಲ್ಲಿ ಜೈನರ ಮೊದಲನೇಯ ತೀರ್ಥಂಕರರಾದ ರಿಶಭನಾಥರ ಪ್ರತಿಮೆ 108 ಅಡಿಗಳಷ್ಟು ಎತ್ತರವಿದೆ. ಜಗತ್ತಿನಲ್ಲೆ ಅತಿ ಎತ್ತರದ ಜೈನ ಪ್ರ್ತಿಮೆ ಇದಾಗಿದೆ.

ಚಿತ್ರಕೃಪೆ: ASethi

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಮಿಂಡ್ರಾಲಿಂಗ್ ಬೌದ್ಧ ಮಠ : ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿರುವ ಮಿಂಡ್ರಾಲಿಂಗ್ ಬೌದ್ಧ ಮಠದಲ್ಲಿರುವ ಈ ಬುದ್ಧನ ಪ್ರತಿಮೆಯು 107 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: Teemu Kiiski

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಜಾಖೂ ಆಂಜನೇಯ : ಹಿಮಾಚಲದ ರಾಜಧಾನಿ ನಗರ ಶಿಮ್ಲಾದಿಂದ ಮೂರು ಕಿ.ಮೀ ದೂರದಲ್ಲಿರುವ ಜಾಖೂ ಎಂಬ ಬೆಟ್ಟದ ಮೇಲಿರುವ ಹನುಮನಿಗೆ ಮುಡಿಪಾದ ದೇವಾಲಯವು ಅತಿ ಪ್ರಾಚೀನ ದೇವಾಲಯವಾಗಿದೆ. ಇಲ್ಲಿ ಆಂಜನೇಯನ ಅತಿ ಎತ್ತರದ ಪ್ರತಿಮೆಯನ್ನು ನೋಡಬಹುದು. ಇದರ ಎತ್ತರ 108 ಅಡಿಗಳು.

ಚಿತ್ರಕೃಪೆ: Rvbalaiyer

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಜಂಪಾ ಬುದ್ಧ : ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರಾಂತ್ಯದ ನುಬ್ರಾ ಕಣಿವೆಯಲ್ಲಿರುವ ದಿಸ್ಕಿತ್ ಬೌದ್ಧ ಮಠದ ಜಂಪಾ ಬುದ್ಧನ ಪ್ರತಿಮೆ 105 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: John Hill

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ನಂದುರಾ ಗ್ರಾಮದಲ್ಲಿರುವ ಆಂಜನೇಯನ ಈ ಪ್ರತಿಮೆಯು 105 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: Surabhi Dhake

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಹರ್ ಕಿ ಪೌರಿ : ಉತ್ತರಾಖಂಡದಲ್ಲಿರುವ ಹರಿದ್ವಾರ ಒಂದು ಪ್ರಮುಖ ಧಾರ್ಮಿಕ ಪ್ರವಾಸಿ ಕೇಂದ್ರ ಇಲ್ಲಿರುವ ಹರ್ ಕಿ ಪೌರಿ ನಲ್ಲಿ ಶಿವನ ಎತ್ತರದ ಪ್ರತಿಮೆಯನ್ನು ನೋಡಬಹುದಾಗಿದ್ದು ಇದರ ಎತ್ತರ 100 ಅಡಿಗಳು.

ಚಿತ್ರಕೃಪೆ: Ekabhishek

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಚಿನ್ಮಯ ಗಣಾಧೀಶ : ಚಿನ್ಮಯ ಸಂದೀಪನಿ ಆಶ್ರಮದ ವತಿಯಿಂದ ನಿರ್ಮಿಸಲಾದ ಗಣೇಶನ ವಿಗ್ರಹವು ಕೊಲ್ಹಾಉರದಲ್ಲಿದೆ. ಸುಂದರವಾಗಿ ನಿರ್ಮಿಸಲಾದ ಈ ಗಣೇಶ ಪ್ರತಿಮೆಯ ಎತ್ತರ 85 ಅಡಿಗಳು.

ಚಿತ್ರಕೃಪೆ: Vineet Timble

15 ಎತ್ತರದ ಪ್ರತಿಮೆಗಳು:

15 ಎತ್ತರದ ಪ್ರತಿಮೆಗಳು:

ಸಾಯಿ ಬಾಬಾ : ಆಂಧ್ರಪ್ರದೇಶದ ಮಚಲಿಪಟ್ನಂನ ನಗರ ಪ್ರದೇಶದಲ್ಲಿ ಶಿರಡಿ ಸಾಯಿ ಬಾಬಾರ ಈ ಬೃಹತ್ ಪ್ರತಿಮೆಯಿದೆ. ಇದರ ಎತ್ತರ 54 ಅಡಿಗಳು.

ಚಿತ್ರಕೃಪೆ: Ganeshk

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more