Search
  • Follow NativePlanet
Share
» »ಭಾರತ ದೇಶದಲ್ಲಿನ 12 ರಹಸ್ಯವಾದ ದೇವಾಲಯಗಳು

ಭಾರತ ದೇಶದಲ್ಲಿನ 12 ರಹಸ್ಯವಾದ ದೇವಾಲಯಗಳು

ಭಾರತ ದೇಶದಲ್ಲಿ ಹಲವಾರು ಚಮತ್ಕಾರಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ದೇವಾಲಯಗಳು ಅಗ್ರ ಸ್ಥಾನದಲ್ಲಿವೆ. ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿವೆ. ಅವುಗಳಲ್ಲಿ ವಿಚಿತ್ರವಾದ ದೇವಾಲಯಗಳು ಕೂಡ ಇದೆ. ಆ ವಿಚಿತ್ರವನ್ನು ಇಂದಿಗೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಭಾರತ ದೇಶದಲ್ಲಿ ಒಟ್ಟು 12 ವಿಚಿತ್ರವಾದ ದೇವಾಲಯಗಳು ಇವೆ. ಆ ರಹಸ್ಯಗಳನ್ನು ಇಷ್ಟೇ ಬೇಧಿಸಿದರು ಕೂಡ ಸಾಧ್ಯವಾಗುತ್ತಿಲ್ಲವಂತೆ. ಹಾಗಾದರೆ ಆ ನಿಗೂಢತೆಯನ್ನು ಹೊಂದಿರುವ ದೇವಾಲಯದ ಬಗ್ಗೆ ತಿಳಿದುಕೊಳ್ಳಬೇಕು ಅಲ್ಲವೇ?

ಆ ದೇವಾಲಯಗಳು ತನ್ನದೇ ಆದ ವಿಶೇಷಗಳನ್ನು ಹೊಂದಿದೆ. ಒಂದೊಂದು ಮಂದಿರವು ಒಂದೊಂದಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಹಾಗಾದರೆ ಆ ರಹಸ್ಯಗಳನ್ನು ಹೊಂದಿರುವ ದೇವಾಲಯಗಳ ಬಗ್ಗೆ ಲೇಖನದಲ್ಲಿ ಸಂಕ್ಷೀಪ್ತವಾಗಿ ತಿಳಿಯೋಣ.

1.ತೆಪ್ಪೆರುಮನಲ್ಲೂರ್ ಶಿವಾಲಯ

1.ತೆಪ್ಪೆರುಮನಲ್ಲೂರ್ ಶಿವಾಲಯ

ತಮಿಳುನಾಡಿನಲ್ಲಿ ತೆಪ್ಪರುಮನಲ್ಲೂರ್ ಶಿವಾಲಯದಲ್ಲಿ ಹಲವಾರು ಆಶ್ಚರ್ಯಕರವಾದ ಘಟನೆಗಳು ನಡೆಯುತ್ತವೆ. ಈ ದೇವಾಲಯದಲ್ಲಿ ಒಂದು ಶಕ್ತಿವಂತ ನಾಗರಹಾವು ಸ್ವಯಂ ಶಿವನಿಗೆ ಪೂಜೆ ಮಾಡಿ ಎಲ್ಲರನ್ನು ಆಶ್ಚರ್ಯವನ್ನು ಉಂಟು ಮಾಡುತ್ತದೆ.

2010 ರಲ್ಲಿ ಒಂದು ದಿನ ಮುಂಜಾನೆ ದೇವಾಲಯದ ಪೂಜಾರಿ ದೇವಾಲಯಕ್ಕೆ ಬಂದು ದೇವಾಲಯದ ಬಾಗಿಲನ್ನು ತೆರೆಯುವ ಸಮಯಕ್ಕೆ ಒಂದು ಹಾವು ಶಿವಲಿಂಗದ ಮೇಲೆ ಇರುವುದು, ನಂತರ ಆ ಹಾವು ಅಲ್ಲಿಂದ ಬಿಲ್ವಾಪತ್ರೆಗಳನ್ನು ಶೇಖರಿಸುತ್ತದೆ ಎಂತೆ. ಆ ನಂತರ ಶಿವಲಿಂಗಕ್ಕೆ ಹಾವು ತನ್ನ ಬಾಯಿಯ ಸಹಾಯದಿಂದ ಬಿಲ್ವ ಪತ್ರೆಯನ್ನು ಶಿವನಿಗೆ ಪೂಜೆ ಮಾಡುತ್ತದೆಯಂತೆ. ಆ ಹಾವು ಏಕೆ ಹೀಗೆ ಮಾಡುತ್ತಿದೆ? ಆ ಹಾವನ್ನು ಆ ಮಹಾಶಿವನನ್ನೇ ಕಳುಹಿಸಿದ್ದಾನೆ ಎಂದು ಭಕ್ತರು ನಂಬುತ್ತಾರೆ. ಆದರೆ ಈ ರಹಸ್ಯವನ್ನು ಬೇಧಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ.

2.ಶನಿ ಸಿಂಗನಾಪೂರ್

2.ಶನಿ ಸಿಂಗನಾಪೂರ್

ಇದು ಒಂದು ಗ್ರಾಮ. ಮಹಾರಾಷ್ಟ್ರದಲ್ಲಿ ಈ ಪುಣ್ಯಕ್ಷೇತ್ರವಿದೆ. ಇಲ್ಲಿನ ಒಂದು ಆಶ್ಚರ್ಯವೆನೆಂದರೆ ಇಲ್ಲಿನ ಯಾವುದೇ ಒಂದು ಮನೆಗೂ ಕೂಡ ಬಾಗಿಲುಗಳು ಇಲ್ಲದೇ ಇರುವುದನ್ನು ಕಾಣಬಹುದು. ಬಾಗಿಲು ಇಲ್ಲದೇ ಇದ್ದರು ಕೂಡ ಇಲ್ಲಿ ಯಾವುದೇ ಕಳ್ಳತನ ಕೂಡ ಆಗಿಲ್ಲ ಎಂದು ವರದಿಯಾಗಿದೆ. ಏಕೆಂದರೆ ಇಲ್ಲಿ ನೆಲೆಸಿರುವ ಶನಿದೇವನು ಈ ಪ್ರದೇಶದಲ್ಲಿ ಕಳ್ಳತನ ಮಾಡಿದರೆ ಅವರನ್ನು ಶಿಕ್ಷಿಸುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ. ಮತ್ತೊಂದು ವಿಶೇಷವೆನೆಂದರೆ ಹಣವನ್ನು ಹೊಂದಿರುವ ಬ್ಯಾಂಕ್‍ಗಳಿಗೂ ಕೂಡ ಬಾಗಿಲುಗಳು ಇಲ್ಲದೇ ಇರುವುದು. ಇದಕ್ಕೆಲ್ಲಾ ಶನಿದೇವನ ಮಹಿಮೆಯೇ ಕಾರಣ ಎಂದೇ ಹೇಳಬಹುದು.

3.ಗುರುದ್ವಾರ್

3.ಗುರುದ್ವಾರ್

ಗುರುದ್ವಾರ್ ಪಂಜಾಬ್‍ನಲ್ಲಿನಲ್ಲಿದೆ. ಈ ಗುರುದ್ವಾರದಲ್ಲಿ ಆಶ್ಚರ್ಯಕರವಾದ ಘಟನೆ ನಡೆಯುತ್ತದೆ. ಅದೆನೆಂದರೆ ಇಲ್ಲಿನ ಒಂದು ಮಾವಿನ ಮರ. ಈ ಪ್ರದೇಶದಲ್ಲಿರುವ ಒಂದು ಮಾವಿನ ಮರವು ವರ್ಷ ಪೂರ್ತಿ ಹಣ್ಣು ಬೆಳೆಯುವುದು. ಇಲ್ಲಿನ ಮಾವಿನ ಮರಕ್ಕೆ ಯಾವುದೇ ಕಾಲಕ್ಕೆ ಸಂಬಂಧವಿಲ್ಲ. ಪ್ರತಿ ದಿನ ಹಣ್ಣುಗಳನ್ನು ಬಿಡುತ್ತಲೇ ಇರುತ್ತದೆ. ಹೀಗೆ ವರ್ಷ ಪೂರ್ತಿ ಹಣ್ಣು ಬಿಡುವುದು ಅರ್ಥವಾಗದೇ ಇರುವ ಪ್ರೆಶ್ನೆಯಾಗಿದೆ.

4.ಯಾಗಂಟಿ ದೇವಾಲಯ

4.ಯಾಗಂಟಿ ದೇವಾಲಯ

ಯಾಂಗಟಿ ದೇವಾಲಯವು ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧವಾದ ಕ್ಷೇತ್ರವಾಗಿದೆ. ಇಲ್ಲಿರುವ ನಂದಿ ವಿಗ್ರಹವು ಒಂದು ರಹಸ್ಯಮಯವಾದುದಾಗಿದೆ. ಮೊದಮೊದಲು ಚಿಕ್ಕದಾಗಿದ್ದ ನಂದಿ, ದಿನಗಳು ಉರುಳುತ್ತಿದ್ದಂತೆ ದೇವಾಲಯದ ಪ್ರಾಂಗಣವೆಲ್ಲಾ ಹರಡಿಕೊಳ್ಳುತ್ತಿದೆ. ಅಂದರೆ ದೊಡ್ಡದಾಗುತ್ತಿದೆ.

5.ಯಾಗಂಟಿ ದೇವಾಲಯ

5.ಯಾಗಂಟಿ ದೇವಾಲಯ

ಇದಕ್ಕೆ ವಿಜ್ಞಾನಿಗಳು ಇಲ್ಲಿ ಇರುವ ನಂದಿಯು ಹೀಗೆ ದೊಡ್ಡದಾಗಿ ಬೆಳೆಯುತ್ತಿರುವುದಕ್ಕೆ ಕಾರಣವೇನು ಎಂದರೆ ನಂದಿ ಭೂಗರ್ಭದಿಂದಲೂ ಬೆಳೆಯುತ್ತಿದೆ ಎಂದು ಹೇಳಲಾಗುತ್ತದೆ. ಹಾಗಾಗಿ 20 ವರ್ಷಕ್ಕೆ ಒಂದು ಇಂಚು ದೊಡ್ಡದಾಗುತ್ತಿದೆ ಎಂತೆ. ಆದರೆ ಭಕ್ತರ ನಂಬಿಕೆ ಮಾತ್ರ ಬೇರೆಯೇ ಆಗಿದೆ. ಯುಂಗಾತ್ಯದಲ್ಲಿ ಆ ನಂದಿಯು ಮೇಲೆ ಇದ್ದರೆ ಪ್ರಳಯವಾಗುತ್ತದೆ ಎಂದು ನಂಬುತ್ತಾರೆ.

6.ಲೇಪಾಕ್ಷಿ

6.ಲೇಪಾಕ್ಷಿ

ಲೇಪಾಕ್ಷಿ ಆಂಧ್ರ ಪ್ರದೇಶದಲ್ಲಿನ ಅನಂತಪುರ ಜಿಲ್ಲೆಯಲ್ಲಿರುವ ರಹಸ್ಯವಾದ ದೇವಾಲಯವಾಗಿದೆ. ಇಲ್ಲಿರುವ ಸ್ತಂಭಗಳು ಆನೇಕ ರಹಸ್ಯಗಳನ್ನು ಹೊಂದಿದೆ. ಈ ದೇವಾಲಯವನ್ನು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು. ಈ ಸ್ತಂಭದ ಕೆಳಗೆ ಪೇಪರ್ ಅಥವಾ ಬಟ್ಟೆಯನ್ನು ಸುಲಭವಾಗಿ ತೆಗೆಯಬಹುದು. ಏಕೆಂದರೆ ಇಲ್ಲಿನ ಒಂದು ಸ್ತಂಭ ಭೂಮಿಯ ಮೇಲೆ ನೆಲೆ ನಿಂತಿಲ್ಲ.

7.ಲೇಪಾಕ್ಷಿ

7.ಲೇಪಾಕ್ಷಿ

ಭೂಮಿಯ ಮೇಲೆ ಯಾವುದೇ ಆಧಾರವಿಲ್ಲದೆ ಒಂದು ಸ್ತಂಭ ಏಕೆ ಇಲ್ಲಿ ನೆಲೆನಿಂತಿದೆ ಎಂಬುದು ಇಂದಿಗೂ ಒಂದು ಬಗೆಹರಿಸಲಾಗದ ನಿಗೂಢವಾಗಿದೆ. ಈ ವಿಚಿತ್ರವನ್ನು ಬೇಧಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಹಾಗೆಯೇ ಇಲ್ಲಿಗೆ ಹಲವಾರು ಪ್ರವಾಸಿಗರು ಈ ವಿಚಿತ್ರವಾದ ಸ್ತಂಭದ ದರ್ಶನ ಮಾಡಲು ಭೇಟಿ ನೀಡುತ್ತಾರೆ.

8.ದ್ವಾರೆಷ್ ದರ್ಗಾ, ಪುಣೆ

8.ದ್ವಾರೆಷ್ ದರ್ಗಾ, ಪುಣೆ

ಇದು ಪೂಣೆಯಲ್ಲಿದೆ. ಸುಮಾರು 90 ಕೆ.ಜಿಯ ಕಲ್ಲು ಈ ದರ್ಗಾ ಪ್ರತ್ಯೇಕವಾದ ಆಕರ್ಷಣೆಯಾಗಿದೆ. ಇಲ್ಲಿ ಬರೋಬ್ಬರಿ 11 ಮಂದಿ ಸೇರಿ ಒಂದು ಕಲ್ಲನ್ನು ಕೇವಲ ಒಂದೇ ಬೆರಳಿನ ಸಾಹಯದ ಮೂಲಕ ಮೇಲೆ ಎತ್ತುತ್ತಾರೆ. ಆ ಕಲ್ಲನ್ನು ಮುಟ್ಟಿದ ತಕ್ಷಣ ಹಜರತ್ ಅಲಿದರ್ವೇಷ್ ಎಂದು ಹೇಳುತ್ತಾ ಮೇಲೆ ಎತ್ತಬೇಕು.

9.ದ್ವಾರೆಷ್ ದರ್ಗಾ, ಪುಣೆ

9.ದ್ವಾರೆಷ್ ದರ್ಗಾ, ಪುಣೆ

ಹೀಗೆ ಮಾಡಿದ ಕ್ಷಣದಲ್ಲಿಯೇ ಆ ಕಲ್ಲು 10 ರಿಂದ 11 ಅಡಿ ಎತ್ತರದಲ್ಲಿ ಹೋಗಿ ಹಾಗೆಯೇ ಗಾಳಿಯಲ್ಲಿ ತೇಲುತ್ತದೆ ಎಂತೆ. ಇದು ಹೇಗೆ ಸಾಧ್ಯವು ಇಂದಿಗೂ ಯಾರಿಗೂ ತಿಳಿದಿಲ್ಲ.

10.ತಂಜಾವೂರಿನ ಬೃಹದೀಶ್ವರ ದೇವಾಲಯ

10.ತಂಜಾವೂರಿನ ಬೃಹದೀಶ್ವರ ದೇವಾಲಯ

ತಂಜಾವೂರಿನಲ್ಲಿ ಬೃಹದೀಶ್ವರ ದೇವಾಲಯವು ಇಂದಿಗೂ ಒಂದು ರಹಸ್ಯವನ್ನು ಹೊಂದಿರುವ ದೇವಾಲಯವೇ ಆಗಿದೆ. ಇದನ್ನು ರಾಜ ರಾಜ ಚೋಳನು 11 ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು. ಈ ದೇವಾಲಯದಲ್ಲಿ ಅಸಂಖ್ಯಾತ ರಹಸ್ಯಗಳನ್ನು ನಾವು ಕಾಣಬಹುದಾಗಿದೆ. ಮುಖ್ಯವಾಗಿ ಆ ದೇವಾಲಯದಲ್ಲಿ ನೆರಳೇ ಒಂದು ರಹಸ್ಯವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ದೇವಾಲಯದ ನೆರಳು ಎಂಬುದು ಯಾರಿಗೂ ಕಾಣಿಸುವುದಿಲ್ಲ.

11.ತಂಜಾವೂರಿನ ಬೃಹದೀಶ್ವರ ದೇವಾಲಯ

11.ತಂಜಾವೂರಿನ ಬೃಹದೀಶ್ವರ ದೇವಾಲಯ

ಅಂದರೆ ದೇವಾಲಯದ ನೆರಳು ಎಂದಿಗೂ ಕೂಡ ಭೂಮಿಯ ಮೇಲೆ ಬೀಳುವುದಿಲ್ಲ. ವರ್ಷದ ಯಾವುದೇ ಸಂದರ್ಭವಾಗಲೇ ಅಥವಾ ಸಂಜೆಯ ಸಮಯವಾಗಲೀ ದೇವಾಲಯದ ನೆರಳು ಮಾತ್ರ ಭೂಮಿಗೆ ತಾಕುವುದಿಲ್ಲ. ಇದೊಂದು ಇಂದಿಗೂ ರಹಸ್ಯವಾಗಿಯೇ ಉಳಿದಿರುವ ವಿಷಯವಾಗಿದೆ. ಹಾಗೆಯೇ ಈ ದೇವಾಲಯಕ್ಕೆ ಉಪಯೋಗಿಸಿದ ಗ್ರಾನೈಟ್ ಕೂಡ ಎಲ್ಲಿಂದ ತೆಗೆದುಕೊಂಡು ನಿರ್ಮಾಣ ಮಾಡಿದರು ಎಂಬುದು ಕೂಡ ರಹಸ್ಯವಾಗಿಯೇ ಉಳಿದಿದೆ.

12.ಪೂರಿ ಜಗನ್ನಾಥ ದೇವಾಲಯ

12.ಪೂರಿ ಜಗನ್ನಾಥ ದೇವಾಲಯ

ಪೂರಿ ಜಗನ್ನಾಥ ದೇವಾಲಯದಲ್ಲಿಯೂ ಕೂಡ ನೆರಳು ಎಂಬುದು ಯಾವುದೇ ಸಮಯದಲ್ಲಿಯೂ ಕೂಡ ಕಾಣಿಸುವುದಿಲ್ಲ. ಅಷ್ಟೇ ಅಲ್ಲ ಪೂರಿಕ್ಷೇತ್ರಕ್ಕೆ ಸಮೀಪದಲ್ಲಿ ಬಂಗಾಳಕೊಲ್ಲಿ ಸಮುದ್ರ ಇದೆ. ಆ ಸಮುದ್ರದ ಶಬ್ಧ ಕೂಡ ಈ ದೇವಾಲಯದ ಪ್ರವೇಶ ದ್ವಾರದಲ್ಲಿ ಕೇಳಿಸುತ್ತದೆ. ಅಂದರೆ ಸಿಂಹದ್ವಾರದಲ್ಲಿ ಸಮುದ್ರಘೋಷ ಕೇಳಿಸುತ್ತದೆ. ಅದನ್ನು ದಾಟಿ ಒಳಗೆ ಪ್ರವೇಶಿಸಿ ಮತ್ತೇ ಆ ಸಿಂಹ ದ್ವಾರದ ಬಳಿ ಕಿವಿ ಇಟ್ಟು ಕೇಳಿಸಿಕೊಂಡರೆ ಮತ್ತೇ ಆ ಶಬ್ಧ ಕೇಳಿಸುವುದಿಲ್ಲ.

13.ಷೋಲಾಪೂರ್

13.ಷೋಲಾಪೂರ್

ಮಹಾರಾಷ್ಟ್ರದಲ್ಲಿನ ಷೋಲಾಪೂರ್ ನಾವು ದಿನ ನಿತ್ಯ ಉಪಯೋಗಿಸುವ ಬೆಡ್ ಷೀಟ್‍ಗಳಿಗೆ ಇಟ್ಟಿರುವ ಹೆಸರಾಗಿದೆ. ಇಲ್ಲಿ ಒಂದು ವಿಭಿನ್ನವಾದ ಗ್ರಾಮವಿದೆ. ಆ ಗ್ರಾಮದಲ್ಲಿ ಹಾವುಗಳಿಗೆ ಪೂಜೆಯನ್ನು ಮಾಡುವುದು ಅಲ್ಲಿನ ಪದ್ಧತಿಯಾಗಿದೆ. ಆ ಗ್ರಾಮದ ಪ್ರತಿ ಮನೆಯಲ್ಲಿ ಹಾವುಗಳಿಗೇ ಎಂದು ಪ್ರತ್ಯೇಕವಾದ ಕೊಠಡಿ ಇರುತ್ತದೆ.

14.ಷೋಲಾಪೂರ್

14.ಷೋಲಾಪೂರ್

ಪ್ರತಿ ಮನೆಯಲ್ಲಿಯೂ ಮನುಷ್ಯರು ತಿರುಗಿದಂತೆ ಹಾವುಗಳು ಕೂಡ ಸಂಚಾರ ಮಾಡುತ್ತಾ ಇರುತ್ತದೆ. ಆದರೆ ಯಾವುದೇ ಕಾರಣಕ್ಕೂ ಇಂದಿನವರೆವಿಗೂ ಯಾರಿಗೂ ಹಾವುಗಳು ಕಚ್ಚಿಲ್ಲ.

15.ಕಬಿಸ್ ಬಾಬಾ ದೇವಾಲಯ

15.ಕಬಿಸ್ ಬಾಬಾ ದೇವಾಲಯ

ಈ ದೇವಾಲಯವನ್ನು ಕಾಳ ಭೈರವ ದೇವಾಲಯ ಎಂದು ಕೂಡ ಕರೆಯುತ್ತಾರೆ. ಈ ದೇವಾಲಯವು ಉತ್ತರ ಪ್ರದೇಶದ ಸಿತಾಪೂರ್ ಜಿಲ್ಲೆಯಲ್ಲಿನ ಕಬಿಸ್ ಬಾಬಾ ದೇವಾಲಯವಾಗಿದೆ. ಇದೊಂದು ವಿಚಿತ್ರವಾದ ದೇವಾಲಯವಾಗಿದೆ. ಇಲ್ಲಿ ಮುಖ್ಯವಾಗಿ ದೇವರ ಮೂರ್ತಿ ಇರುವುದಿಲ್ಲ. ಪೂಜಾರಿ ಕೂಡ ಇರುವುದಿಲ್ಲ. ಈ ದೇವಾಲಯವು 150 ವರ್ಷಕ್ಕಿಂತ ಹಿಂದೆ ನಿರ್ಮಾಣ ಮಾಡಿದರು ಎಂದು ಅಲ್ಲಿನವರು ಹೇಳುತ್ತಾರೆ.

16.ಕಬಿಸ್ ಬಾಬಾ ದೇವಾಲಯ

16.ಕಬಿಸ್ ಬಾಬಾ ದೇವಾಲಯ

ಆದರೆ ಅಲ್ಲಿ ಒಬ್ಬ ಶಿವಭಕ್ತನಾದ ಕಬೀಸ್ ಬಾಬಾ ಇರುತ್ತಾನೆ. ಆತನು ಸಾಯಂಕಾಲದ ಸಮಯದಲ್ಲಿ ಭಕ್ತರು ಸರ್ಮಪಿಸುವ ಮದ್ಯವನ್ನು ಸೇವಿಸಿ ಭಕ್ತರಿಗೆ ಉಂಟಾದ ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾನಂತೆ.

17.ಅಮ್ರೋಹ್

17.ಅಮ್ರೋಹ್

ಉತ್ತರ ಪ್ರದೇಶದಲ್ಲಿನ ಅಮ್ರೋಹ್ ಷರ್ಫುದ್ದೀನ್ ಷಾವಿಲಾಯತ್‍ಗೆ ಪ್ರಸಿದ್ಧ ಹೊಂದಿದೆ. ಈ ಪುಣ್ಯಕ್ಷೇತ್ರದ ಸುತ್ತ ಕವಾಲು ಯಾರು ಕಾಯುತ್ತಾರೆ ಗೊತ್ತ? ಚೇಳು. ಹೌದು, ಇಲ್ಲಿ ದೇವಾಲಯದ ಒಳಗೆ ಆನೇಕ ಚೇಳು ತಿರುಗುತ್ತಾ ಇರುತ್ತವೆ. ಒಂದಲ್ಲ, ಎರಡಲ್ಲ ಸಾವಿರಾರು ಸಂಖ್ಯೆಯಲ್ಲಿ ಇವೆ. ಆದರೆ ಭಕ್ತರಿಗೆ ಮಾತ್ರ ಯಾವುದೇ ಕಾರಣಕ್ಕೂ ಕಚ್ಚುವುದಿಲ್ಲ. ಇಂತಹದು ಆಂಧ್ರ ಪ್ರದೇಶದಲ್ಲಿದೆ.

18.ಮಿಸ್ಟರಿ ಮಮ್ಮಿ

18.ಮಿಸ್ಟರಿ ಮಮ್ಮಿ

ಮತ್ತೊಂದು ವಿಚಿತ್ರ ಹಾಗು ಭಯಂಕರ ಕೂಡ ನಮ್ಮ ಭಾರತ ದೇಶದಲ್ಲಿ ರಹಸ್ಯವಾಗಿಯೇ ಉಳಿದಿದೆ. ಅದೇ ಒಂದು ಮಿಸ್ಟರಿ ಮಮ್ಮಿ. ಮಮ್ಮಿ ಎಂದರೆ ಮೊದಲಿಗೆ ಗುರುತಿಗೆ ಬರುವುದೇ ಈಜಿಫ್ಟ್. ಆದರೆ ಹಿಮಾಚಲ ಪ್ರದೇಶದಲ್ಲಿ ಗ್ಯೂ ಎಂಬ ಒಂದು ಗ್ರಾಮವಿದೆ. ಆ ಗ್ರಾಮದಲ್ಲಿ 500 ವರ್ಷಗಳ ಹಿಂದಿನ ಒಂದು ಮಮ್ಮಿ ಇದ್ದು, ಎಲ್ಲರನ್ನು ಆಶ್ಚರ್ಯಗೊಳಿಸುತ್ತಿದೆ. ಸಂಗಾತ್ ಎಂಬ ಟಿಬೆಟ್‍ಗೆ ಸೇರಿದ ಒಬ್ಬ ಸನ್ಯಾಸಿ ಅಲ್ಲಿ ಮಮ್ಮಿಯಾಗಿ ಕುಳಿತುಕೊಂಡಿದೆ.

19.ಮಿಸ್ಟರಿ ಮಮ್ಮಿ

19.ಮಿಸ್ಟರಿ ಮಮ್ಮಿ

ಆ ಮಮ್ಮಿ 500 ವರ್ಷಗಳ ಹಿಂದಿನದು. ಅದರ ಚರ್ಮ, ಹಲ್ಲುಗಳನ್ನು ನಾವು ಕಾಣಬಹುದು. ಆದರೆ ಇಷ್ಟು ವರ್ಷದ ಈ ಮಮ್ಮಿ ವಿಚಿತ್ರದ ಬಗ್ಗೆ ಯಾರಿಗೂ ಏನು ತಿಳಿದಿಲ್ಲ. ಇವೆಲ್ಲಾ ನಮ್ಮ ಭಾರತ ದೇಶದಲ್ಲಿ ಅಡಗಿರುವ ರಹಸ್ಯಗಳೇ ಆಗಿವೆ.

ನಮ್ಮ ಭಾರತ ದೇಶದಲ್ಲಿನ 12 ರಹಸ್ಯವಾದ ದೇವಾಲಯಗಳು

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more