Search
  • Follow NativePlanet
Share
» »ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

ನಮ್ಮ ಭಾರತ ದೇಶದಲ್ಲಿ ಕೆಲವು ಸ್ಥಳಗಳು ರಹಸ್ಯವಾಗಿಯೇ ಉಳಿದಿದೆ. ಕಟ್ಟಡಗಳು, ಪ್ರಕೃತಿ ಸಿದ್ಧವಾಗಿ ಏರ್ಪಾಟಾದ ನಿರ್ಮಾಣವು ಕೂಡ ತನ್ನಲ್ಲಿ ಆನೇಕ ನಿಗೂಢತೆಯನ್ನು ಒಳಗೊಂಡಿದೆ. ಅವುಗಳಲ್ಲಿ ಹಿಮಾಲಯದಲ್ಲಿ ಸ್ಟೋನ್ ಟವರ್ ಕೂಡ ಒಂದು.

ನಮ್ಮ ಭಾರತ ದೇಶದಲ್ಲಿ ಕೆಲವು ಸ್ಥಳಗಳು ರಹಸ್ಯವಾಗಿಯೇ ಉಳಿದಿದೆ. ಕಟ್ಟಡಗಳು, ಪ್ರಕೃತಿ ಸಿದ್ಧವಾಗಿ ಏರ್ಪಾಟಾದ ನಿರ್ಮಾಣವು ಕೂಡ ತನ್ನಲ್ಲಿ ಆನೇಕ ನಿಗೂಢತೆಯನ್ನು ಒಳಗೊಂಡಿದೆ. ಅವುಗಳಲ್ಲಿ ಹಿಮಾಲಯದಲ್ಲಿ ಸ್ಟೋನ್ ಟವರ್ ಕೂಡ ಒಂದು. ಇದು ಎಷ್ಟು ಪುರಾತನವಾದುದು. ಆ ಸ್ಟೋನ್ ಟವರ್ ಯಾವ ಉದ್ದೇಶದಿಂದ ನಿರ್ಮಾಣ ಮಾಡಿದರು ಎಂಬುದು ಇಂದಿಗೂ ತಿಳಿದಿಲ್ಲದ ಸಂಗತಿಯೇ ಆಗಿದೆ. ಅವುಗಳನ್ನು ಯಾವಾಗ ನಿರ್ಮಾಣ ಮಾಡಿದರು ಎಂಬುದು ಕೂಡ ತಿಳಿದಿಲ್ಲ. ಸಾವಿರಾರು ವರ್ಷಗಳಿಂದ ಪ್ರಕೃತಿ ವೈಪರಿತ್ಯವನ್ನು ತಡೆದುಕೊಂಡು ನೆಲೆ ನಿಂತಿದೆ.

ಮಾರ್ಟಿನ್ ಎಂಬ ವ್ಯಕ್ತಿ ಇದರ ಮೇಲೆ ಕೆಲವು ವರ್ಷಗಳ ಕಾಲ ಸಂಶೋಧನೆಯನ್ನು ಮಾಡಿದನು. ಈ ಟವರ್ಸ್ ಹಿಮಾಲಯದಲ್ಲಿನ ತಗ್ಗು ಪ್ರದೇಶದಲ್ಲಿದೆ. ಆದರೆ ಇಲ್ಲಿ ನಿವಾಸವಿರುವ ಟಿಬೆಟಿಯನ್ನ ಸನ್ಯಾಸಿಗಳು ಕೂಡ ಇವುಗಳ ಹಿಂದೆ ಇರುವ ರಹಸ್ಯವನ್ನು ಕಂಡು ಹಿಡಿಯಲು ಪ್ರಯತ್ನ ಮಾಡಿದರಂತೆ ಆದರೆ ಸಾಧ್ಯವಾಗಲಿಲ್ಲ. ಹಿಮಾಲಯದಂತಹ ಭೂ ಭಾಗದ ಮೇಲೆ ಈ ಟವರ್ಸ್ ನಿರ್ಮಾಣ ಮಾಡುವುದು ಅಷ್ಟು ಸುಲಭವಾದುದಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಆ ರಹಸ್ಯವಾದ ಟವರ್ಸ್ ಅನ್ನು ಯಾರು ನಿರ್ಮಾಣವನ್ನು ಮಾಡಿದರು? ಅದರ ವಿಶೇಷತೆಗಳೇನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ತಿಳಿದುಕೊಳ್ಳಿ.

1.ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

1.ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

ಈ ಟವರ್ಸ್ ಅನ್ನು 1800 ವರ್ಷಗಳ ಹಿಂದೆ ನಿರ್ಮಾಣ ಮಾಡಿರಬಹುದು ಎಂದು ಊಹಿಸಲಾಗಿದೆ. ಇವುಗಳನ್ನು ನಕ್ಷತ್ರಾಕಾರದಲ್ಲಿ ನಿರ್ಮಾಣ ಮಾಡಿದ್ದಾರೆ. ಇವುಗಳು ಸಮುದ್ರ ಮಟ್ಟದಿಂದ ಸುಮಾರು 200 ಅಡಿ ಎತ್ತರದಲ್ಲಿದೆ. ಇವೆಲ್ಲಾ ಹಿಮಾಲಯದಲ್ಲಿನ ತಗ್ಗು ಪ್ರದೇಶದಲ್ಲಿರುವುದನ್ನು ಕಾಣಬಹುದು. ಇದರ ಕುರಿತು ಯಾವುದೇ ಆಧಾರಗಳು ಇದುವರೆವಿಗೂ ಲಭಿಸಿಲ್ಲ.

2.ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

2.ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

ಇವುಗಳಲ್ಲಿ 40ಕ್ಕಿಂತ ಅಧಿಕವಾಗಿ ನಕ್ಷತ್ರಾಕಾರದಲ್ಲಿದ್ದು, ಇನ್ನು ಕೆಲವು 12 ಮೂಲೆಗಳನ್ನು ಹೊಂದಿರುವ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಟಿಬೆಟಿಯನ್ನರು ಇವುಗಳನ್ನು "ಸಿಗ್ನಲ್ಸ್ ಟವರ್" ಎಂದು ಕರೆಯುತ್ತಾರೆ. ಇದರ ಬಗ್ಗೆ ಯಾವುದೇ ವೈಜ್ಞಾನಿಕ ಕಾರಣ ಇದುವರೆವಿಗೂ ಲಭಿಸಿಲ್ಲ. ಆದರೆ ಕೆಲವರ ಅಭಿಪ್ರಾಯದ ಪ್ರಕಾರ...

3.ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

3.ಹಿಮಾಲಯದಲ್ಲಿ ಇಂದಿಗೂ ರಹಸ್ಯವಾಗಿಯೇ ಇರುವ ಟವರ್ಸ್

ಕೆಲವರ ಪ್ರಕಾರ ಇದು ಸರ್ಗಾನಿಕಲ್ ಟವರ್ಸ್ ಆಗಿ ಟೆಬೆಟ್ ಲೆಜೆಂಟ್‍ರನ್ನು ಒಂದುಗೂಡಿಸುವ ಟವರ್ಸ್ ಎಂದು ಭಾವಿಸುತ್ತಾರೆ. ಟಿಬೆಟ್ ಎನ್ನುವುದು ಅತ್ಯಂತ ಪ್ರಾಚೀನವಾದ ಸಂಸ್ಕøತಿಯನ್ನು, ಸಂಪ್ರದಾಯವನ್ನು ಮತ್ತು ಆಚಾರ, ವಿಚಾರಗಳನ್ನು ಹೊಂದಿದೆ.

4 ಜನಪ್ರಿಯವಾದ ಚಳಿಗಾಲದ ಗಮ್ಯಸ್ಥಾನ

4 ಜನಪ್ರಿಯವಾದ ಚಳಿಗಾಲದ ಗಮ್ಯಸ್ಥಾನ

ಈ ಟವರ್ಸ್ ಅತ್ಯಂತ ಎತ್ತರದಲ್ಲಿದ್ದು, ಇವುಗಳನ್ನು ಯಾರು ನಿರ್ಮಾಣ ಮಾಡಿದರು? ಏಕೆ ನಿರ್ಮಾಣ ಮಾಡಿದರು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಪ್ರಸ್ತುತ ಚಳಿಗಾಲವಾದ್ದರಿಂದ ಹಿಮಾಲಯದಲ್ಲಿರುವ ಅತ್ಯಂತ ಜನಪ್ರಿಯವಾದ ಚಳಿಗಾಲದ ಪ್ರವಾಸಿತಾಣವನ್ನು ತಿಳಿಯೋಣ.

5.ಗುಲ್ಮಾರ್ಗ್

5.ಗುಲ್ಮಾರ್ಗ್

ಗುಲ್ಮಾರ್ಗ್ ಹಿಮಾಲಯದ ಪ್ರಸಿದ್ಧವಾದ ಗಿರಿಧಾಮವಾಗಿದೆ. ಇದು ಚಳಿಗಾಲದ ಸಮಯದಲ್ಲಿ ತೆರಳಲು ಸೂಕ್ತವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಹಿಮದಿಂದ ಅವೃತವಾಗಿರುವ ಪರ್ವತಗಳು, ಅದ್ಭುತವಾದ ಭೂದೃಶ್ಯಗಳನ್ನು ಕಾಣಬಹುದಾಗಿದೆ. ಇದು ಪ್ರಪಂಚದಲ್ಲಿಯೇ 2 ನೇ ಅತ್ಯಂತ ಎತ್ತರದ ಕೇಬಲ್ ಕಾರಾಗಿದೆ.

6.ಶ್ರೀನಗರ

6.ಶ್ರೀನಗರ

ಶ್ರೀನಗರವು ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿಯಾಗಿದ್ದು, ಚಳಿಗಾಲದ ಕಾಲದಲ್ಲಿ ಇದು ಪ್ರಸಿದ್ಧವಾದ ಸ್ಥಳವಾಗಿದೆ. ಇದು ಚಳಿಗಾಲದಲ್ಲಿ ಭಾರಿ ಹಿಮಪಾತದಿಂದ ಕೂಡಿರುತ್ತದೆ. ಇಡೀ ಕಾಶ್ಮೀರ ಕಣಿವೆಯು ಹಿಮದ ನಾಲ್ಕು ಇಂಚಿನ ಹೊದಿಕೆಗೆ ಒಳಪಟ್ಟಿರುತ್ತದೆ. ಶ್ರೀ ನಗರವು ತನ್ನ ದಾಲ್ ಸರೋವರ, ಹೌಸ್ ಬೋಟ್ ಮತ್ತು ಉದ್ಯಾನವನಗಳಿಗೆ ಹೆಸರುವಾಸಿಯಾಗಿದೆ.

7.ಪಹಲ್ಗಮ್

7.ಪಹಲ್ಗಮ್

ಸುಂದರವಾದ ಪಹಲ್ಗಮ್ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇದು ಭಾರತದ ಅತ್ಯಂತ ಜನಪ್ರಿಯ ತಾಣವಾಗಿದೆ. ಇಲ್ಲಿನ ಮುಖ್ಯವಾದ ಆಕರ್ಷಣೆ ಎಂದರೆ ಬೀಟಾಬ್ ಕಣಿವೆ, ಅಮರನಾಥ ಯಾತ್ರೆ, ಹಾರ್ಸ್ ರೈಡ್ (ಸವಾರಿ), ಇನ್ನು ಹಲವಾರು.

8.ಪ್ಯಾಟ್ನಿ ಟಾಪ್

8.ಪ್ಯಾಟ್ನಿ ಟಾಪ್

ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ಧಾರಿ 1 ಎ ಹಿಮಾಲಯ ಪರ್ವತದ ಶಿವಾಲಿಕ್ ಬೆಟ್ಟದಲ್ಲಿರುವ ಪ್ಯಾಟ್ನಿಟಾಪ್ ಬೆಟ್ಟದ ಸ್ಥಳವಾಗಿದೆ. ಇದು ಪ್ಯಾರಾಗ್ಲೈಡಿಂಗ್‍ಗೆ ಪ್ರಸಿದ್ಧವಾದ ಸ್ಥಳವಾಗಿದೆ. ಚಳಿಗಾಲದ ಸಮಯದಲ್ಲಿ ಮಾತ್ರ ಈ ಪ್ರದೇಶವು ಹಿಮದಿಂದ ಅವೃತವಾಗಿರುತ್ತದೆ.

9.ಶಿಮ್ಲಾ

9.ಶಿಮ್ಲಾ

ಹಿಮಾಚಲ ಪ್ರದೇಶದ ರಾಜಧಾನಿಯಾದ ಶಿಮ್ಲಾವನ್ನು ಕಿನ್ನೌರ್ ಮತ್ತು ಸಿರ್ಮೌರ್ ಒಂದು ಪ್ರಸಿದ್ಧವಾಗಿದೆ. ಶಿಮ್ಲಾ ಚಳಿಗಾಲದಲ್ಲಿ ಹೇಳಿ ಮಾಡಿದ ಪ್ರವಾಸಿ ತಾಣವಾಗಿದೆ. ಇಲ್ಲಿ ಹೆಚ್ಚಾಗಿ ಸ್ಕೇಟಿಂಗ್ ಮತ್ತು ಸ್ಕೀಯಿಂಗ್ ನಂತಹ ಚಳಿಗಾಲದ ಕ್ರೀಡೆಗಳನ್ನು ಆನಂದಿಸಬಹುದಾಗಿದೆ. ಇಲ್ಲಿ ಮುಖ್ಯವಾಗಿ ಹಿಂದೂ ದೇವತೆಯಾದ ಕಾಳಿ ದೇವಾಲಯ, ಸುಂದರವಾದ ಉದ್ಯಾನವನಗಳು ಇಲ್ಲಿನ ಪ್ರಮುಖವಾದ ಆಕರ್ಷಣೆಯಾಗಿದೆ.

10.ಕುಫ್ರಿ

10.ಕುಫ್ರಿ

ಕುಫ್ರಿ ಶಿಮ್ಲಾಗೆ ಸಮೀಪದಲ್ಲಿರುವ ಒಂದು ಸಣ್ಣದಾದ ಗಿರಿಧಾಮವಾಗಿದ್ದು, ಹಿಮಾಚಲ ಪ್ರದೇಶದ ಜನಪ್ರಿಯ ಸ್ಕೈ ಟ್ರ್ಯಾಕ್ ತಾಣವಾಗಿದೆ. ಕುಫ್ರಿಯು ವಿಶ್ವದ ಅತಿ ಎತ್ತರದ ಗೋ-ಕಾರ್ಟ್ ಟ್ರ್ಯಾಕ್ ಆಗಿದೆ. ಅಷ್ಟೇ ಅಲ್ಲ ಹಿಮಾಲಯನ್ ಅಭಯಾರಣ್ಯಕ್ಕೂ ಕೂಡ ಜನಪ್ರಿಯವಾಗಿದೆ. ಇಲ್ಲಿನ ಸುಂದರವಾದ ಸ್ಥಳಗಳು ಎಂಥಹವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

11.ಮನಾಲಿ

11.ಮನಾಲಿ

ಇದೊಂದು ಅದ್ಭುತವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಸುಂದರವಾದ ಪರ್ವತಗಳಿದ್ದು, ಭಾರೀ ಹಿಮಪಾತದಿಂದ ಕೂಡಿರುತ್ತದೆ. ಇಲ್ಲಿ ಮುಖ್ಯವಾಗಿ ಹಿಮಪಾತದಿಂದ ಅವೃತ್ತವಾಗಿರುವ ಅದ್ಭುತವಾದ ಸೌಂದರ್ಯವನ್ನು ಸವಿಯಬಹುದು. ಮೌಂಟೇನ್ ಬೈಕಿಂಗ್, ಪ್ಯಾರಾಗ್ಲೈಡಿಂಗ್, ಸ್ಕೇಟಿಂಗ್ ಮತ್ತು ಝೋರ್ಬಿಂಗ್ ನಂತಹ ಮನರಂಜನಾ ಚಟುವಟಿಕೆಗಳನ್ನು ಒದಗಿಸುತ್ತದೆ. ಮನಾಲಿಯಿಂದ 51 ಕಿ.ಮೀ ದೂರದಲ್ಲಿರುವ ವಿಶ್ವ ಪ್ರಸಿದ್ಧ ರೋಥಾಂಗ್ ಪಾಸ್ ಕುಲ್ಲು ಕಣಿವೆಗಳೊಂದಿಗೆ ಮನಾಲಿ-ಲೇಹ್ ಹೆದ್ಧಾರಿಯಲ್ಲಿ ಸಂಪರ್ಕಿಸುತ್ತದೆ.

12.ಧರ್ಮಶಾಲ

12.ಧರ್ಮಶಾಲ

ಪ್ರಸಿದ್ಧವಾದ ಕಂಗ್ರಾ ಕಣಿವೆಯಲ್ಲಿರುವ ಧರ್ಮಶಾಲ ಹಿಮಾಚಲ ಪ್ರದೇಶದ ಚಳಿಗಾಲದ ನಗರವಾಗಿದೆ. ಇದು ಹಿಮಾಚಲ ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ದಲೈ ಲಾಮಾಗೆ ಸಮೀಪದಲ್ಲಿರುವ ಧೌಲಾಧರ್ ಶ್ರೇಣಿಯ ಅತ್ಯುನ್ನತ ಪೀಳಿಗೆಯೊಂದಿಗೆ ಮ್ಯಾಕ್ಲಿಯೋಡ್ ಗಂಜ್ ಗ್ರಾಮಕ್ಕೆ ಸಮೀಪದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X