Search
  • Follow NativePlanet
Share

ತೌಬಲ್ - ಭತ್ತದ ಗದ್ದೆ ಹಾಗೂ ಬಯಲು ಪ್ರದೇಶಗಳ ಸುಂದರ ಜಿಲ್ಲೆ

13

ಮಣಿಪುರದ ತೌಬಲ್ ಜಿಲ್ಲೆಯ ಜಿಲ್ಲಾ ಕೇಂದ್ರವಾದ ತೌಬಲ್, ಅಭಿವೃದ್ದಿ ಹೊಂದಿದ ನಗರವಾಗಿದೆ. ತೌಬಲ್ ಜಿಲ್ಲೆಯ ಮೂಲಕ ಎರಡು ನದಿಗಳು ಹರಿಯುತ್ತವೆ- ಇಂಫಾಲ್ ನದಿ ಮತ್ತು ತೌಬಲ್ ನದಿ. ತೌಬಲ್ ಪಟ್ಟಣದ ಹೆಚ್ಚಿನ ಭಾಗವು ತೌಬಲ್ ನದಿಯ ತೀರದಲ್ಲಿದೆ. ತೌಬಲ್ ಜಿಲ್ಲೆಯ ಸುತ್ತಲಿರುವ ಮಣಿಪುರದ ಇತರ ಜಿಲ್ಲೆಗಳೆಂದರೆ- ಪೂರ್ವದಲ್ಲಿ ಉಖ್ರಲ್ ಮತ್ತು ಚಂಡೆಲ್, ಉತ್ತರದಲ್ಲಿ ಸೇನಾಪತಿ, ಪಶ್ಚಿಮದಲ್ಲಿ ಪೂರ್ವ ಇಂಫಾಲ್ ಮತ್ತು ಪಶ್ಚಿಮ ಇಂಫಾಲ್ ಹಾಗೂ ದಕ್ಷಿಣದಲ್ಲಿ ಚುರಾಚಂದ್ಪುರ್ ಮತ್ತು ಬಿಷ್ಣುಪುರ್.

ತೌಬಲ್ ನ ಆಕರ್ಷಣೆಗಳು

ತೌಬಲ್ ನಗರವು ಬೆಟ್ಟ ಗುಡ್ಡಗಳಿಂದ ಸುತ್ತುವರೆಯಲ್ಪಟ್ಟ ಒಂದು ಸುಂದರತಾಣವಾಗಿದೆ. ಪನ್ತೊಇಬೀ ದೇವಸ್ಥಾನ, ಚಿಂಗ ಲೈರೆನ್ಭಿ ದೇವಸ್ಥಾನ, ತೊಂಜಿಂಗ್ ಚಿಂಗ್ ಮತ್ತು ಮಣಿಪುರ್ ಸಾಹಿತ್ಯ ಸಮಿತಿ ಈ ನಗರ ಹಾಗೂ ಜಿಲ್ಲೆಯ ಪ್ರಮುಖ ಆಕರ್ಷಣೆಗಳು. ಶಾಪಿಂಗ್ ಪ್ರಿಯರು ಇಲ್ಲಿಂದ ಕೈಮಗ್ಗ ಹಾಗೂ ಕರಕುಶಲ ವಸ್ತುಗಳನ್ನು ಸ್ಮರಣಿಕೆ ರೂಪದಲ್ಲಿ ಕೊಂಡೊಯ್ಯಬಹುದು.

ತೌಬಲ್ ನಗರದ ಹೊರವಲಯದಲ್ಲಿ ಪಿಕ್ನಿಕ್ ಹಾಗೂ ವಾಯುವಿಹಾರಕ್ಕೆ ಸೂಕ್ತವಾದ ಬಯಲು ಪ್ರದೇಶಗಳಿವೆ. ಇಲ್ಲಿರುವ ಬೆಟ್ಟ ಪ್ರದೇಶವು ಟ್ರೆಕ್ಕಿಂಗ್ ಗೂ ಸೂಕ್ತ. ಜಲಾಶಯ ಮತ್ತು ನದಿಗಳಿಂದ ಕೂಡಿದ ಈ ಜಾಗದಲ್ಲಿ ಹೊರಾಂಗಣ ಚಟುವಟಿಕೆಗಳಿಗೂ ಅವಕಾಶವಿದೆ. ಹಚ್ಚ ಹಸುರಿನಿಂದ ಕೂಡಿದ ಭತ್ತದ ಹೊಲಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿ ಪ್ರವಾಸಿಗರ ಮನಸ್ಸಿಗೆ ಮುದವನ್ನೀಯುತ್ತದೆ.

ತೌಬಲ್ ಒಂದು ಕೃಷಿಪ್ರದೇಶವಾಗಿದ್ದು, ಇಲ್ಲಿ ಭತ್ತ, ಸಾಸಿವೆ, ಬಟಾಟೆ, ಹಣ್ಣುಗಳು ಮತ್ತು ಇತರ ತರಕಾರಿಗಳನ್ನು ಬೆಳೆಸಲಾಗುತ್ತದೆ. ಇದನ್ನು ಹೊರತುಪಡಿಸಿ, ಇಲ್ಲಿನ ಜನ ಪ್ರಾಣಿಸಾಕಣೆ, ರೇಷ್ಮೆ ತಯಾರಿ ಮುಂತಾದ ಕೆಲಸಗಳಲ್ಲೂ ತೊಡಗಿದ್ದಾರೆ. ತೌಬಲ್ ಅಭಿವೃದ್ದಿ ಹೊಂದಿದ ನಗರವಾಗಿದ್ದು, ಇಲ್ಲಿ ಪರಂಪರಾಗತ ಹಾಗೂ ಆಧುನಿಕತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಕಾಣಬಹುದು.

ತೌಬಲ್ ಪ್ರಸಿದ್ಧವಾಗಿದೆ

ತೌಬಲ್ ಹವಾಮಾನ

ಉತ್ತಮ ಸಮಯ ತೌಬಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತೌಬಲ್

  • ರಸ್ತೆಯ ಮೂಲಕ
    ಮಣಿಪುರ ಹಾಗೂ ಭಾರತದ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ರಾ. ಹೆ 102 ತೌಬಲ್ ಮೂಲಕ ಹಾದುಹೋಗುತ್ತದೆ. ಇದಲ್ಲದೆ, ಇಂಫಾಲ್-ಮೋರೆಹ್ ಮಾರ್ಗವು ತೌಬಲ್ ಅನ್ನು ರಾ.ಹೆ 39 ಹಾಗೂ ರಾ.ಹೆ 53 ರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಸಾರಿಗೆ ಬಸ್ ಗಳಲ್ಲದೆ, ಟ್ಯಾಕ್ಸಿಗಳು ಕೂಡ ಈ ಮಾರ್ಗವಾಗಿ ಓಡುತ್ತಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಣಿಪುರದಲ್ಲಿ ಇರುವುದು ನಾರ್ರೋ ಗೇಜು ರೈಲು ಮಾರ್ಗ ಮಾತ್ರ. ಹಾಗಾಗಿ ತೌಬಲ್ ಹತ್ತಿರದ ರೈಲು ನಿಲ್ದಾಣ 230 ಕಿ. ಮೀ ದೂರದಲ್ಲಿರುವ ದಿಮಾಪುರ್ ನಲ್ಲಿದೆ. ಈಶಾನ್ಯ ಭಾರತದ ಪ್ರಮುಖ ರೈಲು ನಿಲ್ದಾಣವಾದ ಗುವಾಹಾಟಿಯಿಂದ ದಿಮಾಪುರ್ ಗೆ ನಿಯಮಿತ ರೈಲು ಸೌಕರ್ಯವಿದೆ. ದಿಮಪುರನಿಂದ ತೌಬಲ್ ಗೆ ಬಸ್ ಹಾಗೂ ಟ್ಯಾಕ್ಸಿ ಸೌಕರ್ಯಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಜಧಾನಿಯಾದ ಇಂಫಾಲ್ ನಲ್ಲಿರುವ ವಿಮಾನನಿಲ್ದಾಣ ತೌಬಲ್ ಗೆ ಹತ್ತಿರದಲ್ಲಿದೆ. ಗುವಾಹಾಟಿ ಮೂಲಕ ಭಾರತದ ಇತರ ಎಲ್ಲಾ ನಗರಗಳಿಗೂ ಇಂಫಾಲ್ ವಿಮಾನನಿಲ್ದಾಣದಿಂದ ಸಂಪರ್ಕ ಸಾಧ್ಯವಿದೆ. ಯಾತ್ರಿಕರು ಕೋಲ್ಕತ್ತಾ, ಮುಂಬೈ, ಡೆಲ್ಲಿ ಮತ್ತು ಬೆಂಗಳೂರಿನಿಂದ ಗುವಾಹಾಟಿ ಮೂಲಕ ಇಂಫಾಲ್ ತಲುಪಬಹುದು. ತೌಬಲ್ ನಿಂದ ಇಂಫಾಲ್ ವಿಮಾನನಿಲ್ದಾಣ 30 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed