ರಮಣ ಆಶ್ರಮಕ್ಕೆ ಸಮೀಪದಲ್ಲಿಯೇ ಇದೆ ಶೇಷಾದ್ರಿ ಸ್ವಾಮಿಗಳ ಆಶ್ರಮ. ರಮಣ ಆಶ್ರಮಕ್ಕೆ ಹೋಗುವ ದಾರಿಯಲ್ಲಿಯೇ ಇರುವ ಶೇಷಾದ್ರಿ ಸ್ವಾಮಿಗಳ ಆಶ್ರಮ ಕೇವಲ ಮೂರು ಕಟ್ಟಡಗಳ ಅಂತರದಲ್ಲಿದೆ. ಸ್ವಾಮಿಗಳ ಆಶ್ರಮದಲ್ಲಿ ಬೇರೆ ನಗರಗಳಿಂದ ಬರುವ ಭಕ್ತರಿಗೆ ವಸತಿ ವ್ಯವಸ್ಥೆಯಿದೆ. ಇಲ್ಲಿನ ವಸತಿ ಬಾಡಿಗೆ ಅತ್ಯಂತ ಕಡಿಮೆ ಖರ್ಚಿನದ್ದು. ಕೆಲವೊಮ್ಮೆ ಹಣ ನೀಡಲಾಗದ ಭಕ್ತರಿಗೆ ಉಚಿತ ವಸತಿ ಸೌಲಭ್ಯವೂ ಇದೆ.
ಈ ಆಶ್ರಮವನ್ನು ಕಟ್ಟಿದ್ದು ಶೇಷಾದ್ರಿ ಸ್ವಾಮಿಗಳು- ಇವರು ಬಂಗಾರದ ಕೈಯ ಸಂತನೆಂದೇ ಪ್ರಸಿದ್ದಿ ಪಡೆದಿದ್ದಾರೆ. ದಕ್ಷಿಣ ಭಾರತದ ಜನ ಪೂಜಿಸುವ ಈ ಸಂತ ಭಾರತೀಯ ಸಂತರಲ್ಲಿಯೇ ಹೆಚ್ಚು ಮೆಚ್ಚತಕ್ಕ ಸಂತನೆಂದು ತಿಳಿಯಲಾಗುತ್ತದೆ. ತಿರುವಣ್ಣಾಲೈನಲ್ಲಿ ಜನಿಸಿದ ಇವರು ತಮ್ಮ ಜೀವಿತದ ಹೆಚ್ಚು ಸಮಯವನ್ನು ಜನರಿಗೆ ಆಧ್ಯಾತ್ಮ ಹಾಗು ಆರ್ಥಿಕ ಸಬಲತೆ ನೀಡುವುದರಲ್ಲಿಯೇ ವ್ಯಯಿಸಿದರು. ಈ ಕಾರಣಕ್ಕಾಗಿಯೇ ಹಲವರ ಪಾಲಿಗೆ ಈತ ದೇವತಾ ಪುರುಷ.


Click it and Unblock the Notifications