ಇಲ್ಲಿರುವ ಮತ್ತೊಂದು ಧಾರ್ಮಿಕ ಆಕರ್ಷಣೆ ತೇವರಂ ದೇವಾಲಯ. ಹೆಸರೇ ಹೇಳುವಂತೆ ಈ ದೇವಸ್ಥಾನದಲ್ಲಿ ಪ್ರತಿ ದಿನವೂ ದೇವರ ಕುರಿತು ಭಜನೆಗಳನ್ನು ಮಾಡಲಾಗುತ್ತದೆ. ಹೀಗೆ ಭಜನೆಗಳನ್ನು ಹೇಳುವುದಾಗಲಿ ಅಥವಾ ಕೇಳುವುದಾಗಲಿ ಮಾಡುವುದರಿಂದ ಭಕ್ತರ ದಿನ ನಿತ್ಯದ ಕಷ್ಟ ಕಾರ್ಪಣ್ಯಗಳು ದೂರ ಹೋಗಿ ನೆಮ್ಮದಿಯು ಲಭಿಸುತ್ತದೆ ಎಂಬ ಪ್ರತೀತಿಯು ಇಲ್ಲಿ ಚಾಲ್ತಿಯಲ್ಲಿದೆ.
ಈ ಶಿವ ದೇವಾಲಯದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದು ಹಳೆಯ ಹಿಂದೂ ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ಕಾರಣದಿಂದಾಗಿಯೂ ಪ್ರಸಿದ್ಧವಾಗಿದೆ. ಇಲ್ಲಿನ ಹಳೆಯ ಕಾಲದ ಕಟ್ಟಡ ಮತ್ತು ಇಲ್ಲಿನ ಭಜನೆಗಳು ನಿಮ್ಮನ್ನು ಗತಕಾಲದ ವೈಭವಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ನಗರದ ಕೇಂದ್ರ ಭಾಗದಿಂದ ಬಹಳ ಸಮೀಪದಲ್ಲಿದೆ. ಹಾಗಾಗಿ ತಲುಪಲು ಬಹಳ ಕಷ್ಟ ಪಡಬೇಕಾಗಿಲ್ಲ.


Click it and Unblock the Notifications