ಪೂಚುಟಿ ಪೆರುಮಾಳ ದೇವಾಲಯ ತಿರುಮನಂಚೇರಿಗೆ ಸಮೀಪದಲ್ಲಿದೆ. ವೈಷ್ಣವರಿಗೆ ಇದು ಬಹಳ ಪ್ರಮುಖವಾದ ದೇವಾಲಯವಾಗಿದೆ. ಅವರಿಗೆ ಮಾತ್ರವಲ್ಲದೇ ಇತರರಿಗೂ ಬಹಳ ಪವಿತ್ರ ದೇವಾಲಯವಾಗಿದೆ. ಇಲ್ಲಿ ಹಳೆಯ ಹಲವು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗಿದೆ. ಪೂಚುಟಿ ಪೆರುಮಾಳ ರೂಪದಲ್ಲಿ ಇಲ್ಲಿ ವಿಷ್ಣು ದೇವರ ಆರಾಧನೆಯನ್ನು ಮಾಡಲಾಗುತ್ತದೆ. ಇಲ್ಲಿ ನಡೆಯುವ ಹಲವು ಹಬ್ಬಗಳ ಕಾರಣದಿಂದ ಹಾಗೂ ಇಲ್ಲಿನ ಸ್ಥಳೀಯರ ಮೆಚ್ಚಿನ ದೇವಾಲಯವಾದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ. ಇಲ್ಲಿನ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆಯೆ ನಿವು ಯಾವ ಕಾಲದಲ್ಲಿ ಇದ್ದೀರಿ ಎಂಬ ಅಚ್ಚರಿಯಾಗುವುದು ಖಂಡಿತ. ಏಕೆಂದರೆ ಈ ದೇವಾಲಯ ಅಷ್ಟೊಂದು ಹಳೆಯದಾಗಿದ್ದು ನಿಮ್ಮನ್ನು ಪುರಾತನ ಕಾಲಕ್ಕೆ ಕೊಂಡೊಯ್ದಂತೆ ಭಾಸವಾಗುತ್ತದೆ. ತಿರುಮನಂಚೇರಿಯಲಿದ್ದಾಗ ಈ ದೇವಾಲಯವನ್ನು ನೋಡಲು ಮರೆಯದಿರಿ.