Search
  • Follow NativePlanet
Share
ಮುಖಪುಟ » ಸ್ಥಳಗಳು» ಸಿಂಕ್ವೇರಿಮ್

ಸಿಂಕ್ವೇರಿಮ್ ಬೀಚ್ : ಆನಂದದಿಂದ ವಿರಮಿಸಿರಿ

11

ಸಿಂಕ್ವೇರಿಮ್ ಬೀಚ್ ಲವಲವಿಕೆ ಮತ್ತು ಉತ್ಸಾಹಕ್ಕೆ ಹತ್ತಿರವಾಗಿದ್ದರೂ ಸಹ ಶಾಂತತೆಯನ್ನು ಕಾಪಾಡಿಕೊಂಡು ಪರಿಶುದ್ಧವಾದ ಅನುಭವವನ್ನು ಒದಗಿಸುವುದರಲ್ಲಿ ಯಶಸ್ವಿಯಾಗಿದೆ. ಪಣಜಿಯಿಂದ ಕೇವಲ 13 ಕಿ.ಮೀ ದೂರದಲ್ಲಿರುವ ಈ ಬೀಚ್, ಉತ್ತರ ಗೋವಾದ ಕ್ಯಾಂಡೋಲಿಮ್ ನಂತಹ ಪಾರ್ಟಿ ತಾಣಗಳಿಂದ ಮಾರಳತೆ ದೂರದಲ್ಲಿದೆ.ಶಾಂತತೆಯಿಂದ ಕೂಡಿರುವ ಈ ಕಡಲ ತೀರದಲ್ಲಿ ಕಡಿಮೆ ಪ್ರಮಾಣದಲ್ಲಿ ಜಲಕ್ರೀಡೆಗಳಿರುವುದನ್ನು ಗಮನಿಸಬಹುದು. ಶ್ಯಾಕ್ ಗಳು ಲಭ್ಯವಿದ್ದು ಕಡಿಮೆ ದರದಲ್ಲಿ ಡ್ರಿಂಕ್ಸ್ ಮತ್ತು ಗೋವನ್ ಊಟವನ್ನು ಸವಿಯಬಹುದು.

ಇಲ್ಲಿಂದ ಕೇವಲ ಎರಡೇ ಕಿ.ಮೀ ದೂರದಲ್ಲಿರುವ ಅರ್ವಲಮ್ ಜಲಪಾತವು ಒಂದು ಒಳ್ಳೆಯ ಪಿಕ್ನಿಕ್ ತಾಣವಾಗಿದೆ. ಇಲ್ಲಿ ಶುದ್ಧವಾದ ಗುಡ್ಡದ ನೀರು 50 ಮೀ ಎತ್ತರದಿಂದ ಕೆಳಬೀಳುತ್ತದೆ. ಈ ಜಲಪಾತದ ಹತ್ತಿರದಲ್ಲಿ, ಧಾರ್ಮಿಕ ಯಾತ್ರಿಕರಿಗಾಗಿ ರುದ್ರೇಶ್ವರ ದೇವಸ್ಥಾನವಿದೆ. ಪಕ್ಕದಲ್ಲಿರುವ ಅರ್ವಲಮ್ ಗುಹೆಗಳೂ ಕೂಡ ಅನ್ವೇಷಿಸಲು ಯೋಗ್ಯವಾಗಿವೆ.ಕ್ಯಾಂಡೋಲಿಮ್ ನಿಂದ ಟ್ಯಾಕ್ಸಿ ಅಥವಾ ರಿಕ್ಷಾಗಳ ಮೂಲಕ ಸಿಂಕ್ವೇರಿಮ್ ತಲುಪಬಹುದು. ಇನ್ನು ಪಣಜಿಯಿಂದ ಇಲ್ಲಿಗೆ ತಲುಪಲು ಬಸ್ಸು ಹಾಗು ಕ್ಯಾಬ್ ಗಳು ಲಭ್ಯವಿದ್ದು, ಬೇಕಾದರೆ ಬೈಕ್ ಗಳ ಮೂಲಕವು ಇದನ್ನು ತಲುಪಬಹುದು.

ಸಿಂಕ್ವೇರಿಮ್ ಪ್ರಸಿದ್ಧವಾಗಿದೆ

ಸಿಂಕ್ವೇರಿಮ್ ಹವಾಮಾನ

ಉತ್ತಮ ಸಮಯ ಸಿಂಕ್ವೇರಿಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಿಂಕ್ವೇರಿಮ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue