Search
 • Follow NativePlanet
Share
ಮುಖಪುಟ » ಸ್ಥಳಗಳು » ಸಿಂಕ್ವೇರಿಮ್ » ಆಕರ್ಷಣೆಗಳು » ಅರ್ವೇಲಮ್ ಗುಹೆಗಳು

ಅರ್ವೇಲಮ್ ಗುಹೆಗಳು, ಸಿಂಕ್ವೇರಿಮ್

3

ಗೋವಾದ ಸಕ್ವೇಲಿಮ್ ಪಟ್ಟಣವು ಯಾತ್ರಿಕರಿಂದ ಯಾವಾಗಲೂ ಭೇಟಿ ನೀಡಲ್ಪಡುತ್ತಿರುವ ಸ್ಥಳವಾಗಿದೆ. ಇಲ್ಲಿಂದ ಸ್ವಲ್ಪ ಬದಲಿನ ಹಾದಿಯಿಂದ ಮುಂದೆ ಸಾಗಿದರೆ ನಿಮಗೆ ಗಂಭೀರವಾದ ನೋಟ ಹೊತ್ತ ಅರ್ವೇಲಮ್ ಗುಹೆಗಳು ಕಾಣಸಿಗುತ್ತವೆ. ಒಂದಾನೊಂದು ಕಾಲದಲ್ಲಿ ಮಹಾಭಾರತದ ಪಾತ್ರವಾದ ಪಾಂಡವರು ತಮ್ಮ 12 ವರ್ಷಗಳ ವನವಾಸದಲ್ಲಿ ಇಲ್ಲಿ ತಂಗಿದ್ದರಿಂದ ಇದಕ್ಕೆ ಪಾಂಡವರ ಗುಹೆಗಳು ಎಂದೂ ಸಹ ಕರೆಯಲಾಗುತ್ತದೆ. ಈ ಗುಹೆಗಳು ತುಂಬ ಚಿಕ್ಕವಾಗಿರುವುದರಿಂದ ಇದರ ವಾಸ್ತುಶಿಲ್ಪದ ಕುರಿತು ಹೆಚ್ಚಿನ ಮಾಹಿತಿಗಳೆನು ಲಭ್ಯವಿಲ್ಲ.

6 ನೇ ಶತಮಾನದ ಈ ಗುಹೆಗಳ ನಿರ್ಮಾತೃ ಯಾರೆಂದು ಇನ್ನೂ ದೃಢವಾಗಿಲ್ಲ. ಕೆಲವರು ಅದು ಬೌದ್ಧರ ಕಾಲದಲ್ಲಿ ನಿರ್ಮಾಣವಾಗಿದ್ದೆಂದು ಹೇಳಿದರೆ, ಆ ಗುಹೆಗಳ ಗೊಡೆಗಳ ಮೇಲೆ ಉಪಸ್ಥಿತವಿರುವ ಲಿಂಗಗಳು ಆ ಮಾತನ್ನು ಸುಳ್ಳಾಗಿಸಿ ಗೊಂದಲಕ್ಕೀಡು ಮಾಡುತ್ತದೆ. ಆದರೂ ಬೌದ್ಧ ಶೈಲಿಯ ವಾಸ್ತುಕಲೆಯನ್ನು ಹೊತ್ತು 'ಲ್ಯಾಟರೈಟ್' ಕಲ್ಲಿನಿಂದ ನಿರ್ಮಾಣವಾಗಿರುವ ಈ ಗುಹೆಗಳು ಬಹುಶಹ ಇವು ಬೌದ್ಧ ಧರ್ಮಕ್ಕೆ ಸಂಬಂಧಪಟ್ಟವುಗಳೆ ಎಂದು ಭಾಸವಾಗುತ್ತದೆ. ಈಗಲೂ ಕೂಡ ಪುರಾತತ್ವ ಶಾಸ್ತ್ರಜ್ಞರು ಇಲ್ಲಿ ದೊರಕಿರುವ 7 ನೇ ಶತಮಾನದ ಸಂಸ್ಕೃತ ಲಿಪಿಗಳನ್ನು ಅವಲೋಕಿಸುತ್ತಿದ್ದಾರೆ.

ಧಾರ್ಮಿಕವಾಗಿ ಈಗಲೂ ಸಹ ಅನೇಕ ಹಿಂದೂ ಯಾತ್ರಿಕರು ಈ ಗುಹೆಗಳಿಗೆ ಭೇಟಿ ನೀಡುತ್ತಿದ್ದು, ಇನ್ನುಳಿದ ಹಾಗೆ ಇದೊಂದು ಜನಪ್ರೀಯ 'ಪಿಕ್ ನಿಕ್' ಅಥವಾ ಪ್ರವಾಸಿ ತಾಣವಾಗಿ ಜನರನ್ನು ತನ್ನೆಡೆ ಸೆಳೆಯುತ್ತಿದೆ. ಮಳೆಗಾಲವು ಈ ಗುಹೆಗಳಿಗೆ ಭೇಟಿ ನೀಡಲು ಸೂಕ್ತವಾಗಿದೆ. ಸ್ವಲ್ಪ ದೂರವಿರುವ ಈ ಗುಹೆಗಳನ್ನು ತಲುಪುವುದು ತುಸು ಕಷ್ಟವೆಂದೆ ಹೇಳಬಹುದು. ಸಂಕ್ವೇಲಿಮ್ ಪಟ್ಟಣದ ಒಳಪ್ರದೇಶದಲ್ಲಿರುವ ಈ ಸ್ಥಳವು ವಾಸ್ಕೊ, ಮಾರ್ಗೊ, ಪಣಜಿಯಿಂದ ಪೂರ್ವ ದಿಕ್ಕಿನಲ್ಲಿದೆ. ಇಲ್ಲಿಗೆ ತಲುಪಲು ಬೈಕ್ ಇಲ್ಲವೆ ಸ್ವಂತ ವಾಹನಗಳನ್ನು ಬಳಸುವುದು ಉತ್ತಮ. ಉತ್ತರ ಗೋವಾ ಭಾಗದ ನಗರಗಳಿಂದ ಕ್ಯಾಬ್ ಗಳು ದೊರೆಯುತ್ತವೆಯಾದರೂ ಹೆಚ್ಚಿನ ಹಣ ವ್ಯಯಿಸಬೇಕಾಗಬಹುದು.

One Way
Return
From (Departure City)
To (Destination City)
Depart On
14 Oct,Mon
Return On
15 Oct,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Oct,Mon
Check Out
15 Oct,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Oct,Mon
Return On
15 Oct,Tue
 • Today
  Sinquerim
  28 OC
  82 OF
  UV Index: 7
  Partly cloudy
 • Tomorrow
  Sinquerim
  27 OC
  80 OF
  UV Index: 6
  Patchy rain possible
 • Day After
  Sinquerim
  27 OC
  81 OF
  UV Index: 6
  Light rain shower