ವಯಾಂಗಣಿ ಬೀಚ್ ಯಾವುದೇ ಬೀಚ್ ನಂತೆ ಇಲ್ಲವಾಗಿದ್ದು ತನ್ನ ಸುಂದರ ಕಡಲ ತಡಿ, ಸ್ಫಟಿಕ ಸ್ಪಷ್ಟ ನೀರು ಹೀಗೆ ಇತರೆ ಬಹಳಷ್ಟು ಕಾರಣಗಳಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಿಂಧುದುರ್ಗ ನಲ್ಲಿ ನೆಲೆಗೊಂಡಿರುವ ಈ ಬೀಚ್, ವನರಾಶಿಯಿಂದ ಸುತ್ತುವರಿದ ಮೋಡಿ ಮಾಡುವ ತನ್ನ ಸ್ಥಳದಿಂದ ಸಂದರ್ಶಕರನ್ನು ಆಕರ್ಷಿಸುತ್ತದೆ.
ಸಮುದ್ರ ತೀರವು ಉದ್ದಕ್ಕೂ ಸೊಂಪಾದ ಹಸಿರು ಮಾವು, ಗೋಡಂಬಿ ಮತ್ತು ಹಲಸಿನಹಣ್ಣುಗಳ ಮರಗಳಿಂದ ತುಂಬಿದೆ. ನವಿರಾದ ಎಳೆನೀರನ್ನು ಹೀರುತ್ತಾ ಮುಳುಗುವ ಸೂರ್ಯನನ್ನು ವೀಕ್ಷಿಸುವ ಸಂದರ್ಭವನ್ನು ಯಾರೆ ಆಗಲಿ ಕಳೆದುಕೊಳ್ಳಲು ಇಷ್ಟಪಡದಂತಹ ಅನುಭವವಾಗಿದೆ.


Click it and Unblock the Notifications