Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಆಕರ್ಷಣೆಗಳು » ಮೋಟ್ಫ್ರಾನ್

ಮೋಟ್ಫ್ರಾನ್, ಶಿಲ್ಲಾಂಗ್

1

ಮೋಟ್ಫ್ರಾನ್ (Motphran) ಎಂಬುದು ಒಂದು ಸ್ಮಾರಕವಾಗಿದ್ದು, ಖಸಿಸ್ ಜನಾಂಗವು ಮೊದಲನೆಯ ವಿಶ್ವ ಯುದ್ಧದ ಸಂದರ್ಭ ಮಾಡಿದ ಬಲಿದಾನದ ಸ್ಮರಣಾರ್ಥವಾಗಿ ಬ್ರಿಟಿಷರು ಇದನ್ನು ನಿರ್ಮಿಸಿದರು.  ಮೋಟ್ಫ್ರಾನ್ ನ ಸುತ್ತಲಿರುವ ನಿವೇಶನವು ಲೆವ್ಡೂ (Lewduh) (ಅಥವಾ ಬಾರಾ ಬಜಾರ್) ಎಂದು ಕರೆಯಲ್ಪಡುತ್ತದೆ ಮತ್ತು ಇದು ಅಲ್ಲಿನ ಸ್ಥಳೀಯ, ನಗರದಲ್ಲಿಯೇ ಬಹು ದೊಡ್ಡ ಮಾರುಕಟ್ಟೆಯಾಗಿದೆ.

ಸ್ಥಳೀಯ ಕೇಂದ್ರಸ್ಥಾನ ಮಾತ್ರವಾಗಿರುವುದೇ ಅಲ್ಲದೆ, ಮೋಟ್ಫ್ರಾನ್ ವೈಭವದ ಇತಿಹಾಸವನ್ನು ಹೊಂದಿದ್ದು, ಶಿಲ್ಲಾಂಗ್ ನಲ್ಲಿ ಇದನ್ನೊಂದು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಿದೆ. ಮೋಟ್ಫ್ರಾನ್ ಅನ್ನು ತರ್ಜುಮೆಗೊಳಿಸಿದಾಗ, ಅದರರ್ಥವು 'ಫ್ರಾನ್ಸ್ ನ ಕಲ್ಲು' (Stone of France) ಎಂದಾಗುತ್ತದೆ.  ಮೊದಲನೆಯ ವಿಶ್ವ ಯುದ್ಧದ ಸಮಯದಲ್ಲಿ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು, ಮತ್ತು ಇತರೆ ಅವಶ್ಯಕ ಯುದ್ಧ ಸಾಮಗ್ರಿಗಳನ್ನು ಬ್ರಿಟಿಷ್ ಸೈನಿಕರಿಗಾಗಿ ಸಾಗಿಸುತ್ತಿದ್ದ 26 ನೆಯ ಖಾಸಿ ಶ್ರಮ ವರ್ಗದ ಸೈನಿಕರಿಗಾಗಿ ಮೋಟ್ಫ್ರಾನ್ ಸಮರ್ಪಿಸಲ್ಪಟ್ಟಿದೆ. ಯುದ್ಧದಲ್ಲಿ ಮಡಿದ ಎಲ್ಲಾ 67 ಶಸ್ತ್ರಾಸ್ತ್ರ ಸಾಗಾಟಗಾರರ ಗೌರವಾರ್ಥ ಬ್ರಿಟಿಷರು ಈ ಸ್ಮಾರಕವನ್ನು ನಿರ್ಮಿಸಿದರು.

ಹೊರೇಸನು ಲ್ಯಾಟಿನ್ ಭಾಷೆಯಲ್ಲಿ ಸುಪ್ರಸಿದ್ಧವಾದ ಶಾಸನವೊಂದನ್ನು ಈ ಸ್ಮಾರಕದಲ್ಲಿ ಬರೆದಿದ್ದು, ಅದು ಇಂತಿದೆ:  ‘Dulce et decorum est pro patria mori’. ಇದರ ಭಾವಾರ್ಥ, ಓರ್ವನು ತನ್ನ ರಾಷ್ಟ್ರಕ್ಕಾಗಿ ಸಾಯುವುದು ಉತ್ತಮ ಎಂದು.  ಬ್ರಿಟಿಷರು ಮೊದಲು ಈ ಸ್ಮಾರಕವನ್ನು ಮೋಟ್ ಫ್ರಾನ್ಸ್ (Mot France) ಎಂದು ಹೆಸರಿಸಿದ್ದರು.  ಆದರೆ, ಇಲ್ಲಿನ ಸ್ಥಳೀಯರಿಗೆ ಇದರ ಉಚ್ಚಾರಣೆಯು ತೊಡಕಾಗಿದ್ದುದರಿಂದ, ಇದನ್ನು ಮೋಟ್ಫ್ರಾನ್ (Motphran) ಎಂದು ಗುರುತಿಸುವುದು ರೂಢಿಯಾಯಿತು. ಇಂದು, ಮೋಟ್ಫ್ರಾನ್ ಒಂದು ಗಿಜಿಗಿಜಿಗುಟ್ಟುವ ವಾಹನಗಳ ಜಂಕ್ಷನ್ ಆಗಿದ್ದು, ಇಡೀ ದಿನ ನಗರದ ಪ್ರಮುಖ ರಸ್ತೆಯಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue