Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು » ಮುಕುಂದ್ಘಿಗಡ್

ಮುಕುಂದ್ಘಿಗಡ್, ಶೇಖಾವತಿ

0

ಮುಕುಂದ್ಘಿಗಡ್ ಎಂಬುದು 18ನೇ ಶತಮಾನದಲ್ಲಿ ರಾಜ ಮುಕುಂದ್ ಸಿಂಗನಿಂದ ನಿರ್ಮಾಣಗೊಂಡ ಪಟ್ಟಣವಾಗಿದೆ. ಇದು ರಾಜಸ್ಥಾನದಲ್ಲಿನ ಜುನ್ಜುನು ಜಿಲ್ಲೆಯಲ್ಲಿ ನೆಲೆಸಿದೆ. ಇಲ್ಲಿರುವ ಹವೇಲಿಗಳು ತಮ್ಮಲ್ಲಿರುವ ದಿವಾನ್ ಖಾನೆಗಳಿಗೆ ಮತ್ತು ಫ್ರೆಸ್ಕೊ ಮಾದರಿಯ ಚಿತ್ರಲೇಖನಗಳಿಗೆ ಹೆಸರುವಾಸಿಯಾಗಿದೆ. ಈ ಹವೇಲಿಗಳಲ್ಲಿರುವ ದಿವಾನ್ ಖಾನೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ವಸ್ತುಗಳಲ್ಲಿ 18ನೇ ಶತಮಾನಕ್ಕೆ ಸೇರಿದ ಗೋಡೆಗೆ ತೂಗುಹಾಕಲಾಗುವ ಕಲಾವಸ್ತುಗಳು, ಕೌಟುಂಬಿಕ ಭಾವಚಿತ್ರಗಳು ಮತ್ತು ಮರದ ಪೀಠೋಪಕರಣಗಳು ತಮ್ಮ ಅಂದದಿಂದ ಗಮನ ಸೆಳೆಯುತ್ತವೆ. ಇಲ್ಲಿರುವ ನಯನ ಮನೋಹರವಾದ ಕೌಟುಂಬಿಕ ಛಾತ್ರಿಗಳು ನೋಡುಗರ ಮನಸೂರೆಗೊಳ್ಳುತ್ತವೆ.ಭಗವಾನ್ ಕೃಷ್ಣನನ್ನು ಪೂಜಿಸಲಾಗುವ ವೇಣುಗೋಪಾಲ್ ಮಂದಿರ್ ಮತ್ತು ಗೋಪಿನಾಥ್ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳು ಇಲ್ಲಿವೆ. ಫೋರ್ಟ್ ವಿಲಿಯಂ ಹವೇಲಿ, ಘುವಾಲೆ ಕಿ ಹವೇಲಿ, ಗಂಗಾ ಬುಕ್ಸ್ ಸರಫ್ ಹವೇಲಿ ಮತ್ತು ರಾಜ್ ಕುಮಾರ್ ಗನೇರಿವಾಲಾ ಕಲಾ ಕೇಂದ್ರಗಳು ಇಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue