Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಹವಾಮಾನ

ಶೇಖಾವತಿ ಹವಾಮಾನ

ಶೇಖಾವತಿಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಅತ್ಯಂತ ಸೂಕ್ತವಾದ ಕಾಲವಾಗಿದೆ. ಆಗ ಇಲ್ಲಿ ಹವಾಗುಣವು ತಂಪಾಗಿ ಮತ್ತು ಮುದದಿಂದ ಕೂಡಿರುತ್ತದೆ. ಶೇಖಾವತಿಯಲ್ಲಿ ಫೆಬ್ರವರಿಯಲ್ಲಿ ನಡೆಯುವ ಮರುಭೂಮಿ ಉತ್ಸವವು, ಈ ಕಾಲದಲ್ಲಿ ಇಲ್ಲಿಗೆ ಭೇಟಿ ಕೊಡಲು ಬರುವ ಪ್ರವಾಸಿಗರಿಗೆ ಮುದನೀಡುತ್ತದೆ.

ಬೇಸಿಗೆಗಾಲ

 (ಮಾರ್ಚ್ ನಿಂದ ಮೇ) : ಶೇಖಾವತಿ ರಾಜಸ್ಥಾನದ ಇತರ ಭಾಗಗಳಂತೆ ಅತಿಯಾದ ಬೇಸಿಗೆಯನ್ನು ಹೊಂದಿದೆ. ಆಗ ಇಲ್ಲಿ ಉಷ್ಣಾಂಶವು 27°ಯಿಂದ 43° ಸೆಲ್ಶಿಯಸ್ ವರೆಗೆ ಇರುತ್ತದೆ. ಈ ಪ್ರಾಂತ್ಯವು ಮರುಭೂಮಿಯ ಹವಾಗುಣವನ್ನು ಹೊಂದಿರುವುದರಿಂದಾಗಿ ಇಲ್ಲಿಗೆ ಬೇಸಿಗೆಯಲ್ಲಿ ಭೇಟಿಕೊಡುವುದು ಉತ್ತಮ ಯೋಚನೆಯಲ್ಲ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್ ವರೆಗೆ): ಶೇಖಾವತಿಯಲ್ಲಿ ಮಳೆಯು ಅಷ್ಟೇನು ಬೀಳುವುದಿಲ್ಲ. ಮಳೆಗಾಲದಲ್ಲಿಯು ಸಹ ತಾತ್ಕಾಲಿಕವಾಗಿ ಆಗಾಗ ಮಳೆಯಾಗುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿಯವರೆಗೆ) : ಶೇಖಾವತಿಯಲ್ಲಿ ಚಳಿಗಾಲವು ಅತ್ಯಂತ ಹಿತವಾಗಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 35°ಯಿಂದ 10°ಸೆಲ್ಶಿಯಸ್ವಖರೆಗೆ ಇರುತ್ತದೆ. ಶೇಖಾವತಿಗೆ ಹೋಗಲು ಈ ಕಾಲವು ಅತ್ಯಂತ ಉತ್ತಮ ಅವಧಿಯಾಗಿರುತ್ತದೆ.