Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು » ಚುರು

ಚುರು, ಶೇಖಾವತಿ

1

ಚುರು ಎಂಬ ಜಿಲ್ಲೆಯು ಶೇಖಾವತಿಯಿಂದ 82 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.  ಇದು ತನ್ನಲ್ಲಿರುವ ವೈಭವೋಪೇತವಾದ ಹವೇಲಿಗಳಿಂದ ಮತ್ತು ವಿಶಿಷ್ಟವಾದ ರಾಜಸ್ಥಾನಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ಕೋಟೆಗಳಿಗಾಗಿ ಖ್ಯಾತಿಪಡೆದಿದೆ. ಕೋಟೆ ಮತ್ತು ಹವೇಲಿಗಳ ಹೊರಗೋಡೆಗಳಲ್ಲಿರುವ ವರ್ಣಚಿತ್ರಗಳಲ್ಲಿ ಸ್ಥಳೀಯ ನಾಯಕರ ಕಥೆಗಳನ್ನು ಚಿತ್ರಿಸಲಾಗಿದೆ. ಕನ್ಹೈಯಲಾಲ್ ಬಾಗ್ಲ ಹವೇಲಿ, ಸುರಾನ ಹವೇಲಿ ಮತ್ತು ಮಲ್ಜಿ ಕಾ ಕಮ್ರ ಹವೇಲಿಗಳ ಗೋಡೆಗಳ ಮೇಲೆ ಧೋಲ ಮತ್ತು ಮಾರುರವರ ( ಇಲ್ಲಿನ ಸ್ಥಳೀಯ ಜನಪದ ಕಥಾನಾಯಕರು) ಜೀವನ ಚರಿತ್ರೆಯನ್ನು ಚಿತ್ರಗಳ ಮೂಲಕ ಚಿತ್ರಿಸಲಾಗಿದೆ. 1739 ರಲ್ಲಿ ಠಾಕೂರ್ ಕುಶಾಲ್ ಸಿಂಗ್ ರಿಂದ ನಿರ್ಮಿಸಲ್ಪಟ್ಟ ಕೋಟೆಯು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ನಗರ್ ಶ್ರೀ ವಸ್ತು ಸಂಗ್ರಹಾಲಯ, ಲಕ್ಷ್ಮೀ ನಾರಾಯಣ್ ಚಂದ್ಗೋತಿಯ ಹವೇಲಿ ಮತ್ತು ಗೊಂಡಿಯ ಛಾತ್ರಿಗಳು ಇಲ್ಲಿ ನೋಡಲೆ ಬೇಕಾದ ಸ್ಥಳಗಳಲ್ಲಿ ಸೇರಿದೆ. ಈ ಛಾತ್ರಿಗಳ ಒಳಾಂಗಣವು ವರ್ಣಚಿತ್ರಗಳು ಮತ್ತು ಭಿತ್ತಿ ಚಿತ್ರಕಲೆಗಳಿಂದ ಸುಂದರವಾಗಿ ಅಲಂಕಾರಗೊಂಡಿದ್ದು, ನೋಡುಗರ ಮನತಣಿಸುತ್ತವೆ. ರಘುನಾಥ್ ಜೀ ದೇವಾಲಯ, ಚಂದ್ಗೋಥಿಯ ದೇವಾಲಯ, ಜಾಮಾ ಮಸೀದಿ, ನಾಥ್ ಜೀ ಕಾ ಧೋರಾ, ಸೆಥಾನಿ ಕಾ ಜೊಹರಾ ಮತ್ತು ಬಾಲಾಜಿ ದೇವಾಲಯಗಳು ಈ ಜಿಲ್ಲೆಯಲ್ಲಿರುವ ಇನ್ನಿತರ ಆಕರ್ಷಣೆಗಳಾಗಿವೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat