Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು » ಮಂಡವ ಕೋಟೆ

ಮಂಡವ ಕೋಟೆ, ಶೇಖಾವತಿ

1

ಮಂಡವ ಎಂಬುದು ರಾಜಸ್ಥಾನದ ಜುನ್ಜುನು ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇದು ಶೇಖಾವತಿ ಪ್ರಾಂತ್ಯದ ಮಧ್ಯಭಾಗದಲ್ಲಿ ನೆಲೆಸಿದೆ. ಮಂಡವ ಎಂಬ ಕೋಟೆ ನಗರಿಯು ಜೈಪುರದಿಂದ ಉತ್ತರಕ್ಕೆ 190 ಕಿ.ಮೀ ದೂರದಲ್ಲಿದ್ದು, ರಸ್ತೆ ಮಾರ್ಗದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಮಂಡವ ತನ್ನಲ್ಲಿರುವ ಕೋಟೆಗಳಿಗೆ ಮತ್ತು ಹವೇಲಿಗಳಿಗೆ ಖ್ಯಾತಿ ಪಡೆದಿದೆ.ಮಂಡವ ಕೋಟೆಯು ಸುಮಾರು 18 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು, ಕ್ಯಾಸ್ಟಲ್ ಮಂಡವ ಎಂದು ಸಹ ಕರೆಯಲ್ಪಡುತ್ತದೆ. ಇದೊಂದು ವಿಶಿಷ್ಟವಾದ ಕೋಟೆಯಾಗಿದ್ದು, ಸುಂದರವಾದ ಕೃಷ್ಣ ಮತ್ತು ಗೋವುಗಳ ಚಿತ್ರವನ್ನು ಹೊಂದಿರುವ ಕೋಟೆ ದ್ವಾರವನ್ನು ಹೊಂದಿದೆ. ಈ ಕೋಟೆಯನ್ನು ಶಾರ್ದೂಲ್ ಸಿಂಗನ ಮಗನಾದ ಠಾಕೂರ್ ನವಾಲ್ ಸಿಂಗ್  ವಿಕ್ರಮ ಸಂವತ್ಸರದಲ್ಲಿ(ಕ್ರಿ.ಶ 1755 ) ನಿರ್ಮಿಸಿದನು. ಈ ಕೋಟೆಯನ್ನು ಮಧ್ಯಕಾಲೀನ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಗೋಡೆಗಳಲ್ಲಿ ಫ್ರೆಸ್ಕೊ ಚಿತ್ರಕಲೆಯನ್ನು ಕಾಣಬಹುದು. ಶ್ರೀ ಕೃಷ್ಣನ ವರ್ಣಚಿತ್ರಗಳಿಗೆ, ಅದ್ಭುತವಾದ ಕೆತ್ತನೆಗಳಿಗೆ ಮತ್ತು ಗಾಜಿನ ಕಲೆಗಳನ್ನು ಹೊಂದಿರುವ ಕೋಣೆಗಳಿಗೆ ಈ ಕೋಟೆಯು ಖ್ಯಾತಿ ಪಡೆದಿದೆ. ಇಲ್ಲಿನ ದರ್ಬಾರ್ ಹಾಲಿನ ಸೌಂದರ್ಯವನ್ನು ಇಲ್ಲಿರುವ ಪ್ರಾಚೀನ ಕಲಾವಸ್ತುಗಳು ಮತ್ತು ವರ್ಣಚಿತ್ರಗಳು ದ್ವಿಗುಣಗೊಳಿಸಿವೆ. ಮಂಡವ ಕೋಟೆಯನ್ನು ಪ್ರಸ್ತುತ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಇದನ್ನು ಮಂಡವದ ರಾಜಮನೆತನದವರು ನಿರ್ವಹಿಸುತ್ತಿದ್ದಾರೆ. ಈ ಹೋಟೆಲ್ಲಿನಲ್ಲಿ 70 ಕೋಣೆಗಳಿದ್ದು, ಸ್ಟ್ಯಾಂಡರ್ಡ್, ಡಿಲಕ್ಸ್,ಲಕ್ಸುರಿ ಸೂಟ್ ಮತ್ತು ರಾಯಲ್ ಸೂಟ್ ಎಂಬ ವರ್ಗಗಳಲ್ಲಿ ಇಲ್ಲಿನ ಕೋಣೆಗಳು ಬಾಡಿಗೆಗೆ ದೊರೆಯುತ್ತವೆ. ಸರ್ವಋತು ಉಪಾಹಾರ ಮಂದಿರವೊಂದು ಇಲ್ಲಿ ಪ್ರವಾಸಿಗರಿಗೆ ರುಚಿಕಟ್ಟಾದ ಆಹಾರವನ್ನು ಒದಗಿಸುತ್ತದೆ. ಇವುಗಳಲ್ಲಿ ಇಲ್ಲಿನ ಸ್ಥಳೀಯ ಆಹಾರಗಳು ಕೂಡ ಸೇರಿವೆ. ಇಲ್ಲಿ 24 ಗಂಟೆಗಳ ರೂಮ ಸರ್ವಿಸ್, ಟ್ರಾವೆಲ್ ಡೆಸ್ಕ್, ಫೋರೆಕ್ಸ್, ಈಜುಕೊಳ( ಮರುಭೂಮಿ ರೆಸಾರ್ಟ್ ನಿಂದ 3 ಕಿ.ಮೀ ದೂರದಲ್ಲಿದೆ), ಸಾಂಸ್ಕೃತಿಕ ಕಾರ್ಯಕ್ರಮಗಳು , ಥೀಮ್ ಡಿನ್ನರ್, ಕುದುರೆ ಸಫಾರಿ, ಒಂಟೆ ಸಫಾರಿ, ಹಳ್ಳಿ ಸಫಾರಿ ಇತ್ಯಾದಿ ಸೇವೆಗಳು ಲಭ್ಯವಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri