ಯಾಂಗ್ಖುಲ್ಲೇನ್ ಒಂದು ಸಣ್ಣ ಹಳ್ಳಿ ಸೇನಾಪತಿಯಿಂದ 26 ಕಿಮೀ ದೂರದಲ್ಲಿದೆ. ಇಲ್ಲಿ ನಿಮಗೆ ಈ ಪ್ರದೇಶದ ಇತಿಹಾಸದ ನೋಟಗಳು ಸಿಗುತ್ತವೆ. ಇಲ್ಲಿ ನೀವು ಇಲ್ಲಿನ ಪೂರ್ವಜರ ಆರ್ಥಿಕ ಸಾಮಾಜಿಕ ಚಿತ್ರಣವನ್ನು ಕಾಣಬಹುದು. ಈ ಸಂಪ್ರದಾಯಗಳನ್ನು ಇಲ್ಲಿನ ಜನ ಶತಮಾನಗಳಿಂದ ಪಾಲಿಸುತ್ತಾ ಬಂದಿದ್ದಾರೆ. ಇಲ್ಲಿನ ಜನರ ಕರಕುಶಲ ವಸ್ತುಗಳು ಹಾಗೂ ಅವರು ಬಳಸುವ ಸಲಕರಣೆಗಳು ಹಲವು ತಲೆಮಾರುಗಳಿಂದ ಬಳಕೆಯಲ್ಲಿವೆ. ಇಡೀ ಹಳ್ಳಿಯು ಒಂದು ಕುಟುಂಬದಂತಿದ್ದು ತಮ್ಮ ತಮ್ಮಲ್ಲೇ ಕೆಲಸಗಳನ್ನು ಹಂಚಿಕೊಳ್ಳುತ್ತಾರೆ.
ಈ ಹಳ್ಳಿಯು ಕಡಿದಾದ ಬೆಟ್ಟವೊಂದರ ಮೇಲಿದ್ದು ಇಲ್ಲಿಂದ ಮನಮೋಹಕ ಕಣಿವೆಯ ನೋಟವನ್ನು ನೋಡಬಹುದು. ಈ ಹಳ್ಳಿಯ ಜನ ತಮ್ಮ ಹಳ್ಳಿಯ ಸುತ್ತಮುತ್ತಲಿನ ಸೌಂದರ್ಯವನ್ನು ಕಾಪಾಡಿಕೊಂಡಿರುವುದರಿಂದ ಪ್ರವಾಸಿಗರಿಗೆ ಸೌಂದರ್ಯಾನುಭೂತಿಯನ್ನು ನೀಡುತ್ತದೆ. ಇಲ್ಲಿ ಹಲವು ಅಪರೂಪದ ಸಸ್ಯಗಳನ್ನು ಕಾಣಬಹುದು.


Click it and Unblock the Notifications