Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇನಾಪತಿ » ಹವಾಮಾನ

ಸೇನಾಪತಿ ಹವಾಮಾನ

ಸೇನಾಪತಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ಮತ್ತು ನವಂಬರ್ನ ಆರಂಭದ ದಿನಗಳು. ಕೆಲವು ಪ್ರವಾಸಿಗರು ಬೇಸಿಗೆಯಲ್ಲಿ ಕೂಡ ಇಲ್ಲಿಗೆ ಭೇಟಿ ನೀಡುತ್ತಾರೆ. ಚಳಿಗಾಲ ಇಲ್ಲಿ ತೀವ್ರವಾಗಿರುತ್ತದೆ. ನೀವು ಚಳಿಯನ್ನು ಎದುರಿಸಲು ಸಿದ್ಧರಾಗಿದ್ದಲ್ಲಿ ಈ ಸಮಯದಲ್ಲಿ ಕೂಡ ಇಲ್ಲಿಗೆ ಭೇಟಿ ನೀಡಬಹುದು.

ಬೇಸಿಗೆಗಾಲ

ಇಲ್ಲಿ ಜೂನ್-ಮಾರ್ಚವರೆಗೆ ಬೇಸಿಗೆಕಾಲ. ಈ ಸಮಯದಲ್ಲಿ ಉಷ್ಣತೆಯು 35 ಡಿಗ್ರಿಗಳವರೆಗಿದ್ದು ರಾತ್ರಿಗಳು ಎತ್ತರದ ಪ್ರದೇಶವಾದ್ದರಿಂದ ತಂಪಾಗಿರುತ್ತದೆ. ಕೆಲವೊಮ್ಮೆ ಈ ಸಮಯದಲ್ಲಿ ಮಳೆ ಬೀಳುವ ಸಂಭವ ಕೂಡ ಇರುತ್ತದೆ.

ಮಳೆಗಾಲ

ಜುಲೈ-ಅಕ್ಟೋಬರ್ ಮಳೆಗಾಲ. ಈ ಸಮಯದಲ್ಲಿ  ಅತಿ ಹೆಚ್ಚು ಅಂದರೆ ಪ್ರತಿ ತಿಂಗಳು ಸರಾಸರಿ 150-200 ಮಿಲಿಮೀಟರ್ ಮಳೆಯಾಗುತ್ತದೆ. ಜುಲೈನಲ್ಲಿ ಮಿಂಚು ಗುಡುಗು ಸಹಿತ ಭಾರೀ ಮಳೆಯಾಗುತ್ತದೆ. ಈ ಸಮಯದಲ್ಲಿ ಇಲ್ಲಿನ ಬಹುತೇಕ ವಾರ್ಷಿಕ ಸಸ್ಯಗಳು ಹೂಗಳಿಂದ ಕಂಗೊಳಿಸುತ್ತವೆ.

ಚಳಿಗಾಲ

ನವೆಂಬರ್-ಫೆಬ್ರವರಿ ಚಳಿಗಾಲ. ಈಶಾನ್ಯ ರಾಜ್ಯಗಳಲ್ಲಿಯಂತೆ ಇಲ್ಲಿ ಕೂಡ ಚಳಿಗಾಲ ತೀವ್ರವಾಗಿದ್ದು ಉಷ್ಣತೆಯು 3 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುತ್ತದೆ. ಡಿಸೆಂಬರ್ ತೀವ್ರ ಚಳಿಗಾಲದ ತಿಂಗಳು. ಈ ಸಮಯದಲ್ಲಿ ತೀವ್ರ ಶೀತಗಾಳಿಯು ಬೆಟ್ಟ ಕಣಿವೆಗಳಲ್ಲಿ ಬೀಸಲಾರಂಭಿಸಿ ಜನವರಿ ಫೆಬ್ರವರಿ ತಿಂಗಳವರೆಗೂ ಇರುತ್ತದೆ.