ಸೇನಾಪತಿಯಿಂದ 37 ಕಿಮೀ ದೂರದಲ್ಲಿರುವ ಹಳ್ಳಿ ಲಿಯಾಯಿ ಖುಲ್ಲೇನ್. ಇದರ ಅರ್ಥ ‘ಸಮುದ್ರದ ಜನ’. ಪುರಾತತ್ವ ಪುರಾವೆಗಳ ಪ್ರಕಾರ ಈ ಪ್ರದೇಶ ಸುಮಾರು 500 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇಲ್ಲಿನ ಜಾನಪದ ಕತೆಯ ಪ್ರಕಾರ ಇವರ ಪೂರ್ವಜರು ಬೇಟೆಯಾಡುತ್ತಾ ಬರುತ್ತಿರಬೇಕಾದರೆ ಇಲ್ಲಿ ರೋಡೋಡೆಂಡ್ರೋನ್ಸ್ನಿಂದ ಆವೃತವಾದ ಸುಂದರ ತಿಳಿನೀರಿನ ಕೊಳವನ್ನು ನೋಡಿ ಇಲ್ಲಿಯೇ ನೆಲೆಸಿದರು.
ಇಲ್ಲಿ ಈ ಹಳ್ಳಿಯ ಜನರ ಭೂತಕಾಲದ ಕತೆಗಳನ್ನು ಹೇಳುವ ಹಲವು ಏಕಶಿಲೆಗಳಿವೆ. ಇಲ್ಲಿಯ ಹಳ್ಳಿಗರು 1930ರಿಂದ ಬೇಟೆಯನ್ನು ನಿಲ್ಲಿಸಿ ವ್ಯವಸಾಯಗಾರರಾಗಿದ್ದಾರೆ. ಬರಾಕ್ ನದಿ ಇಲ್ಲಿನ ಅತಿ ದೊಡ್ಡ ನದಿಗಳಲ್ಲಿ ಒಂದು.