Search
  • Follow NativePlanet
Share
» »ವಿಶ್ವದ ಅತ್ಯಂತ ವೇಗವಾಗಿ ಚಲಿಸುವ ರೈಲುಗಳ ಬಗ್ಗೆ ನಿಮಗೆ ಗೊತ್ತೇ?

ವಿಶ್ವದ ಅತ್ಯಂತ ವೇಗವಾಗಿ ಚಲಿಸುವ ರೈಲುಗಳ ಬಗ್ಗೆ ನಿಮಗೆ ಗೊತ್ತೇ?

ಜಗತ್ತಿನ ಅತ್ಯಂತ ವೇಗದ ಅಥವಾ ಹೈಸ್ಪೀಡ್ ರೆಲಿನ ವೇಗ ಎಷ್ಟಿರಬಹುದು ಎಂದು ಯೋಚಿಸಿರುವಿರ?

ಗಂಟೆಗೆ 374 ಮೈಲುಗಳ ವೇಗದಲ್ಲಿ ರೈಲಿನಲ್ಲಿ ಕುಳಿತುಕೊಳ್ಳುವ ಅನುಭವ ಹೇಗಿರಬಹುದು ಎಂದು ಎಂದಾದರೂ ಊಹಿಸಿದ್ದೀರಾ ಗಂಟೆಗಟ್ಟಲೆ ಅಗತ್ಯವಿರುವ ಪ್ರಯಾಣವನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ನಿಮಿಷಗಳಲ್ಲಿ ಮಾಡಬಹುದಾದರೆ ಏನಾಗಬಹುದು?

ನಿಮ್ಮ ಮನಸ್ಸಿನಲ್ಲಿ ಈ ವೇಗದ ರೈಲುಗಳ ಬಗ್ಗೆ ನೂರಾರು ಪ್ರಶ್ನೆಗಳು ಬರುಬಹುದು ಆದ್ದರಿಂದ ನಾವು ಈ ಲೇಖನದಲ್ಲಿ ಜಗತ್ತಿನ ಅತ್ಯಂತ ವೇಗವಾದ ಅಥವಾ ಹೈಸ್ಪೀಡ್ ರೈಲುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇದರಿಂದ ಜನರು ಸುಧಾರಿತ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳ ಸಹಾಯದಿಂದ ಕೆಲವೇ ನಿಮಿಷಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾರೆ.

hemu-430x-mockup-1662567334-1663306813.jpg -Properties

"ಬುಲೆಟ್ ಟ್ರೈನ್" ಎಂಬ ಮೊದಲ ಹೈಸ್ಪೀಡ್ ರೈಲ್ವೇ ವ್ಯವಸ್ಥೆಯನ್ನು ಜಪಾನಿನಲ್ಲಿ ಸ್ಥಾಪಿಸಲಾಯಿತು ನಂತರ ಇದನ್ನು ಚೈನಾ, ಫ಼್ರಾನ್ಸ್, ಇತ್ಯಾದಿ ದೇಶಗಳಲ್ಲೂ ತಮ್ಮ ದೇಶಗಳ ಪ್ರಮುಖ ನಗರಗಳನ್ನು ಸಂಪರ್ಕಿಸಲು ಹೈಸ್ಪೀಡ್ ರೈಲುಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ.

ಇಲ್ಲಿ ಜಗತ್ತಿನ ಅತ್ಯಂತ ವೇಗದ ರೈಲುಗಳ ಪಟ್ಟಿ ಇದೆ.

5. ಫ಼ಕ್ಸಿಂಗ್ ಹಾವೋ ಸಿ ಆರ್ 400ಎ ಎಫ್/ಬಿಎಫ್, ಚೈನಾ

"ಬ್ಲೂ/ರೆಡ್ ಡಾಲ್ಫಿನ್ "ಮತ್ತು ಗೋಲ್ಡನ್ ಫಿಯೋನಿಕ್ಸ್" ಎಂಬ ಅಡ್ಡ ಹೆಸರಿನೊಂದಿಗೆ ಕರೆಯಲ್ಪಡುವ ಸಿ ಆರ್ 400ಎ ಎಫ್/ಸಿ ಆರ್ 400 ಬಿಎಫ್ ಗಳು ಬೀಜಿಂಗ್ ಸೌತ್ ಮತ್ತು ಶಾಂಘೈ ಹಾಂಗ್‌ಕಿಯಾವೊ ನಿಲ್ದಾಣದ ನಡುವೆ ನಿಯಮಿತವಾಗಿ ಗಂಟೆಗೆ 220 ಮೈಲುಗಳ ವೇಗದಲ್ಲಿ ತಲುಪುವ ಈ ರೈಲುಗಳು ಅವುಗಳ ಪರೀಕ್ಷೆಯ ಸಮಯದಲ್ಲಿ ಗಂಟೆಗೆ 260 ಮೈಲುಗಳನ್ನು ತಲುಪಿತು.

ಗರಿಷ್ಠ ವೇಗ: ಗಂಟೆಗೆ 260 ಮೈಲುಗಳು (mph)

ದೇಶ: ಚೀನಾ.

1024px-a-maglev-train-coming-out-pudong-international-1663306882.jpg -Properties

4) ಹೆಮು- -430 ಎಕ್ಸ್ (HEMU-430X) ದಕ್ಷಿಣ ಕೊರಿಯ

2013ರಲ್ಲಿ ಫ್ರಾನ್ಸ್ ನಂತರ ಯುರೋಪ್, ಜಪಾನ್ ಮತ್ತು ಚೀನಾದಲ್ಲಿ ಹೈಸ್ಪೀಡ್ ರೈಲನ್ನು ಅಭಿವೃದ್ಧಿಪಡಿಸಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ದಕ್ಷಿಣ ಕೊರಿಯಾ ಪಾತ್ರವಾಗಿದ್ದು, 2013ರಲ್ಲಿ ಹೆಮು-430ಎಕ್ಸ್ ತನ್ನ ಪರೀಕ್ಷಾರ್ಥ ಚಾಲನೆಯ ಸಮಯದಲ್ಲಿ, ಹೆಮು(ಎಚ್ ಇ ಎಮ್ ಯು)-430ಎಕ್ಸ್ ಗಂಟೆಗೆ 262 ಮೈಲಿ ವೇಗವನ್ನು ತಲುಪಿತು, ಇದು ಇಡೀ ವಿಶ್ವದ ಅತ್ಯಂತ ವೇಗದ ಹೈಸ್ಪೀಡ್ ರೈಲುಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು, ಇದರಲ್ಲಿ ಹೆಮು ಹೈ-ಸ್ಪೀಡ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ಅನ್ನು ಸೂಚಿಸುತ್ತದೆ.

ಗರಿಷ್ಠ ವೇಗ: ಗಂಟೆಗೆ 262 ಮೈಲಿಗಳು (mph)

ದೇಶ: ದಕ್ಷಿಣ ಕೊರಿಯಾ.

sifang-crh2-380a-at-shanghai-expo-1662567314-1663306932.jpg -Properties

3) ಶಾಂಘೈ ಮ್ಯಾಗ್ಲೆವ್, ಚೀನಾ

ಶಾಂಘೈ ಟ್ರಾನ್ಸ್ ರಾಪಿಡ್ ಎಂದೂ ಕರೆಯಲ್ಪಡುವ ಶಾಂಘೈ ಮಾಗ್ಲೇವ್ ಇನ್ನೂ ಕಾರ್ಯನಿರ್ವಹಿಸುವ ಅತ್ಯಂತ ಹಳೆಯ ಮಾಗ್ಲೆವ್ ಆಗಿದೆ ಇದು ವರದಿಗಳ ಪ್ರಕಾರ ವಾಣಿಜ್ಯ ಬಳಕೆಯಲ್ಲಿರುವ ಏಕೈಕ ಮ್ಯಾಗ್ಲೆವ್ ಪಥವಾಗಿದೆ. ಶಾಂಘೈ ಮ್ಯಾಗ್ಲೆವ್ ರೈಲು ಮ್ಯಾಗ್ನೆಟಿಕ್ ಲೆವಿಟೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಚಕ್ರಗಳಿಲ್ಲದೆ ಚಲಿಸುತ್ತದೆ. ಈ ರೈಲು ಲಾಂಗ್ಯಾಂಗ್ ರಸ್ತೆ ನಿಲ್ದಾಣದಿಂದ ಪುಡಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಕೇವಲ 8 ನಿಮಿಷಗಳಲ್ಲಿ 19 ಮೈಲಿ ದೂರವನ್ನು ಕ್ರಮಿಸುತ್ತದೆ.

ಗರಿಷ್ಠ ವೇಗ: ಗಂಟೆಗೆ 268 ಮೈಲಿಗಳು (mph)

ದೇಶ: ಚೀನಾ

crh380ahexichina-1663307013.jpg -Properties

2) ಸಿಆರ್ ಎಚ್380ಎ ಹೆಕ್ಸಿ, ಚೀನಾ

ಹಾರ್ಮನಿ ಎಂದೂ ಕರೆಯಲ್ಪಡುವ ಸಿಆರ್ ಎಚ್380ಎ ಹೆಕ್ಸಿ, ಇದರ ವೇಗ ಪರೀಕ್ಷಿಸುವ ಸಮಯದಲ್ಲಿ ಇದು ಚೈನದಿಂದ ಒಂದು ಗಂಟೆಗೆ 302 ಮೈಲಿಗಳ ದೂರವನ್ನು ಕ್ರಮಿಸಿತ್ತು. ಇಂದು ಇದನ್ನು ವಾಣಿಜ್ಯ ಉಪಯೋಗಕ್ಕೆ ಬಳಸಲಾಗುತ್ತಿದ್ದರೂ ಕೂಡಾ ಇದು ಒಂದು ಗಂಟೆಗೆ 236 ಮೈಲಿಗಳ ದೂರವನ್ನು ಕ್ರಮಿಸುತ್ತದೆ. ಸಿಆರ್ ಎಚ್380ಎ ಹೆಕ್ಸಿ ಇದು ಸೀಮೆನ್ಸ್, ಹಿಟಾಚಿ, ಇತ್ಯಾದಿಗಳಿಂದ ವಿಭಿನ್ನ ತಂತ್ರಜ್ಞಾನವನ್ನು ಬಳಸಿ ಹೆಚ್ಚಿನ ವೇಗದಲ್ಲಿ ಓಡುವಂತೆ ವಿನ್ಯಾಸಗೊಳಿಸಲಾದ 4 ಚೀನೀ ರೈಲುಗಳಲ್ಲಿ ಒಂದಾಗಿದೆ.ಇದೇ ತರಹದ ಇನ್ನಿತರ ಮೂರು ಹೆಸರುಗಳೆಂದರೆ ಸಿ ಆರ್ ಎಚ್ 380 ಜೊತೆಗೆ ಇರುವ ಇತರ ಮೂರು ಹೆಸರುಗಳೆಂದರೆ ಸಿ ಆರ್ ಎಚ್ 380ಬಿ, ಸಿ ಆರ್ ಎಚ್ 380ಸಿ, ಮತ್ತು ಸಿ ಆರ್ ಎಚ್ 380ಡಿ.

ಗರಿಷ್ಠ ವೇಗ: ಗಂಟೆಗೆ 302 ಮೈಲಿಗಳು (mph)

ದೇಶ: ಚೀನಾ .

tgvposfrance

1) ಟಿಜಿವಿ ಪಿಒಎಸ್, ಫ್ರಾನ್ಸ್

ಪ್ಯಾರಿಸ್, ಪೂರ್ವ ಫ್ರಾನ್ಸ್ ಮತ್ತು ದಕ್ಷಿಣ ಜರ್ಮನಿಯ ನಡುವೆ ಫ್ರೆಂಚ್ ರೈಲು ಕಂಪನಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ಟಿಜಿವಿ ಪಿಒಎಸ್ 2007 ರಲ್ಲಿ ಗಂಟೆಗೆ 357 ಮೈಲಿಗಳಷ್ಟು ವೇಗದೊಂದಿಗೆ ವಿಶ್ವದಾಖಲೆಯನ್ನು ಸ್ಥಾಪಿಸಿತು. ಪ್ರಸ್ತುತ, ಇದು ಗಂಟೆಗೆ ಸರಾಸರಿ 200 ಮೈಲಿ ವೇಗದಲ್ಲಿ ಚಲಿಸುತ್ತದೆಯಾದರೂ, ಹೌದು, ಇದು ಅತ್ಯಂತ ಮೋಡಿಯ ಮತ್ತು ವಿಶ್ವದ ಅತ್ಯಂತ ವೇಗದ ಹೈಸ್ಪೀಡ್ ರೈಲುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಗರಿಷ್ಠ ವೇಗ: ಗಂಟೆಗೆ 357 ಮೈಲಿಗಳು (mph)

ದೇಶ: ಫ್ರಾನ್ಸ್ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X