ಪ್ರಸಿದ್ಧ ವೇದ ಕಾಲದ ಸರಸ್ವತಿ ನದಿ ಬತ್ತಿದೆ. ಆದರೆ ನಳಂದ ಜಿಲ್ಲೆಯ ರಾಜಗಿರ್ ನಲ್ಲಿ ಹೆಸರಿಗೆ ಸರಸ್ವತಿಯಷ್ಟೆ ಹಳೆ ನದಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಆಡಳಿತ ಮಂಡಳಿಯು, ಇದರ ಉಸ್ತುವಾರಿಯನ್ನು ತೆಗೆದುಕೊಂಡು ಮಣ್ಣನ್ನು ಅಗೆಸಿ, ಬಂದ ಹೊಸ ನೀರನ್ನು ಸೇರ್ಪಡೆ ಮಾಡಿದರು. ಜನರಿಗೆ ಪವಿತ್ರ ನದಿಯಲ್ಲಿ ಮಿಂದೇಳುವುದಕ್ಕೆ, ನದಿಯ ಬದಿಯಲ್ಲಿ ಘಾಟ್ ಗಳನ್ನು ಕಟ್ಟಿಸಲಾಗಿದೆ.
ನೀರಾವರಿ ಇಲಾಖೆಯು, ಸುಮಾರು 3.5 ಕಿ.ಮೀನಷ್ಟು ಆಳ, ನೀರಿನ ಮಟ್ಟವನ್ನು ತಲುಪಲು ಅಗೆದಿದ್ದಾರೆ. ಒಣ ಮರಳು ಹಾಸಿನ ಜೀವ ಕಳೆದುಕೊಂಡ ನದಿಯೆಂದೇ ಪರಿಗಣಿಸಲಾಗಿದ್ದ, ಇಂದು ಈ ನದಿ ಮೂಲ ರೂಪದಲ್ಲಿ ಹರಿಯುತ್ತಿದೆ.
ಪುರಾತನ ಧರ್ಮ ಗ್ರಂಥಗಳು ಈ ನದಿಯ ಪಾವಿತ್ರ್ಯತೆಯ ಬಗ್ಗೆ ವಿಸ್ತಾರವಾಗಿ ಉಲ್ಲೇಖಿಸಿದೆ. ವಾಯು ಪುರಾಣದ ಪ್ರಕಾರ ಈ ನದಿಯಲ್ಲಿ ಒಮ್ಮೆ ಮಿಂದೇಳುವುದು ಗಂಗಾ ನದಿಯಲ್ಲಿನ ಒಂದು ಇಡೀ ವರ್ಷದ ಸ್ನಾನಕ್ಕೆ ಸಮ ಎಂದು ತಿಳಿಸಲಾಗಿದೆ.


Click it and Unblock the Notifications