ಕಾವೇರಿಯ ದಂಡೆಯ ಮೇಲಿರುವ ಶ್ರೀ ಪೆರುಮಾಳ್ ರಂಗನಾಥಸ್ವಾಮಿ ದೇವಸ್ಥಾನವು ವಿಷ್ಣುವಿನ 108 ದೇವಸ್ಥಾನಗಳಲ್ಲಿ ಒಂದು. ವೈಷ್ಣವ ಕವಿಗಳು ಆಳ್ವಾರರು ಹೇಳಿರುವ ವೈಷ್ಣವ ತಿರುಪತಿಗಳು ಅಥವ ದಿವ್ಯ ದೇಶಗಳಲ್ಲಿ ಇದು ಕೂಡ ಒಂದು. ಇಲ್ಲಿ ವಿಷ್ಣುವಿನ 12 ಅಡಿ ಎತ್ತರದ ಹಸಿರುಕಲ್ಲಿನ ವಿಗ್ರಹವಿದೆ. ವಿಷ್ಣುವಿನೊಂದಿಗೆ ಅವನ ಪತ್ನಿಯಾದ ಪರಿಮಳ ರಂಗನಾಯಕಿಯ ವಿಗ್ರಹವಿದೆ. ಈಕೆಯನ್ನು ಚಂದ್ರ-ಶಾಪ-ವಿಮೋಚನವಳ್ಳಿ ಮತ್ತು ಪುಂಡರೀಕವಳ್ಳಿ ಎಂದು ಕೂಡ ಕರೆಯುತ್ತಾರೆ. ಇದು ಪಂಚರಂಗ ಕ್ಷೇತ್ರಗಳಲ್ಲಿ ಒಂದು. ಪಂಚ ರಂಗಗಳೆಂದರೆ ಐದು ವಿಷ್ಣುವಿನ ದೇವಸ್ಥಾನಗಳು. ಇವು ಕಾವೇರಿ ತೀರದಲ್ಲಿವೆ. ಶ್ರೀ ರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ, ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ, ಕುಂಬಕೋಣಂನ ಸಾರಂಗಪಾಣಿ ದೇವಾಲಯ, ತಿರುಚ್ಚಿಯ ಶ್ರೀ ಅಪ್ಪಕ್ಕುದಾತನ್ ದೇವಾಲಯ ಮತ್ತು ಮೈಲಾಡುತುರೈನ ಶ್ರೀ ಪರಿಮಳ ರಂಗನಾಥಸ್ವಾಮಿ ದೇವಾಲಯ.


Click it and Unblock the Notifications