Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಲಾಡುತುರೈ » ಹವಾಮಾನ

ಮೈಲಾಡುತುರೈ ಹವಾಮಾನ

ಮೈಲಾಡುತುರೈ ದೇವಸ್ಥಾನಗಳ ಪಟ್ಟಣವಾದ್ದರಿಂದ ಸುತ್ತಾಡಲು ಅನುಕೂಲವಾದ ಸಮಯವೆಂದರೆ ಚಳಿಗಾಲ. ದೇವಸ್ಥಾನಗಳಿಗೆ ಭಕ್ತಾದಿಗಳು ಬರಿಗಾಲಿನಲ್ಲಿ ಹೋಗಬೇಕಾಗುವುದರಿಂದ ಚಳಿಗಾಲವೇ ಸೂಕ್ತವಾದ ಸಮಯ. ಈ ಸಮಯದಲ್ಲಿ ಉಷ್ಣತೆಯು ಕಡಿಮೆಯಿದ್ದು ಧಗೆ ಕೂಡ ಕಡಿಮೆಯಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್-ಮೇವರೆಗೆ ಬೇಸಿಗೆಕಾಲ. ತಮಿಳುನಾಡಿನ ಉಳಿದ ಭಾಗಗಳಲ್ಲಿಯಂತೆ ಇಲ್ಲಿ ಕೂಡ ಬೇಸಿಗೆ ಹೆಚ್ಚು ಉಷ್ಣಾಂಶದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿ ಉಷ್ಣಾಂಶವು 25 ರಿಂದ 45 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ. ಮಧ್ಯಾಹ್ನಗಳು ಹೆಚ್ಚು ಧಗೆಯಿಂದ ಕೂಡಿದ್ದು ರಾತ್ರಿಗಳು ಸ್ವಲ್ಪ ಮಟ್ಟಿಗೆ ತಂಪಾಗಿರುತ್ತದೆ. ಏಪ್ರಿಲ್ ಮತ್ತು ಮೇ ಇಲ್ಲಿ ಬೇಸಿಗೆಯ ಧಗೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಪ್ರವಾಸ ಕೈಗೊಳ್ಳದಿರುವುದು ಉತ್ತಮ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಬೇಸಿಗೆಯ ಧಗೆಯನ್ನು ಕಡಿಮೆ ಮಾಡುವುದರೊಂದಿಗೆ ಮಳೆ ದೇವಸ್ಥಾನಗಳನ್ನು ಶುಭ್ರಗೊಳಿಸುತ್ತದೆ.

ಚಳಿಗಾಲ

ಡಿಸಂಬರ್-ಜನವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 18 ರಿಂದ 32 ಡಿಗ್ರಿಗಳಷ್ಟಿರುತ್ತದೆ. ಇದು ಮೈಲಾಡುತುರೈಗೆ ಭೇಟಿ ನೀಡಲು ಉತ್ತಮ ಸಮಯ. ಇದು ಸಮುದ್ರ ತೀರಕ್ಕೆ ಹತ್ತಿರವಿರುವ ಪ್ರದೇಶವಾದ್ದರಿಂದ ಚಳಿಗಾಲದಲ್ಲಿ ಕೂಡ ಧಗೆ ಇದ್ದೇ ಇರುತ್ತದೆ.