ಕುರುಕೈ ಶಿವನ ದೇವಸ್ಥಾನವು ಮೂರನೇ ಕಣ್ಣನ್ನು ತೆರೆದ ಶಿವನ ವಿಗ್ರಹವನ್ನು ಹೊಂದಿದೆ. ಈ ಸ್ಥಳದಲ್ಲಿ ಮನ್ಮಥನನ್ನು ಸುಡಲು ಶಿವನು ತನ್ನ ಮೂರನೇ ಕಣ್ಣನ್ನು ತೆರೆದ ಎಂದು ನಂಬಲಾಗುತ್ತದೆ. ಶಿವನ ಕೋಪ ಎಷ್ಟೆಂದರೆ ನೋಟದ ಮೂಲಕವೇ ಕೊಲ್ಲುವ ಶಕ್ತಿ ಅವನಿಗಿತ್ತು. ಶಿವನ ಮೂರನೇ ಕಣ್ಣಿನ ಬಗ್ಗೆ ಮಹಾಭಾರತದಲ್ಲಿ ಒಂದು ಕಥೆಯಿದೆ. ಒಮ್ಮೆ ಪಾರ್ವತಿ ಹುಡುಗಾಟಿಕೆಯಿಂದ ಶಿವನ ಕಣ್ಣುಗಳನ್ನು ಮುಚ್ಚಿದಳಂತೆ. ಆಗ ಇಡೀ ಜಗತ್ತು ಅಂಧಕಾರದಿಂದ ತುಂಬಿಹೋಯಿತಂತೆ. ಆಗ ಶಿವನ ಹಣೆಯಿಂದ ಬಂದ ಪ್ರಭೆಯಿಂದ ಒಂದು ಕಣ್ಣು ಗೋಚರಿಸಿತಂತೆ ಅದು ಜಗತ್ತಿಗೆ ಬೆಳಕನ್ನು ನೀಡಿತಂತೆ. ಮೂರನೇ ಕಣ್ಣು ಸದಾ ಒಳಗೆ ನೋಡುತ್ತಿರಬೇಕು ಅದರ ನೋಟ ಹೊರಕ್ಕೆ ತಿರುಗಿದರೆ ಅದು ವಿನಾಶಕಾರಿ. ಶಿವನು ತನ್ನ ಮೂರನೇ ಕಣ್ಣಿನಿಂದಲೇ ಮನ್ಮಥನನ್ನು ಸುಟ್ಟು ಬೂದಿಮಾಡಿದ. ಇಲ್ಲಿನ ಶಿವ ತ್ರಿನೇತ್ರ, ತ್ರಿಯಂಬಕ, ತ್ರಿಅಕ್ಷ ಮತ್ತು ತ್ರಿನಯನ ಎಂದು ಕೂಡ ಹೆಸರಾಗಿದ್ದಾನೆ. ಇದು ಶಿವನ ಕೋಪ ಮತ್ತು ಅಪರಿಮಿತ ಶಕ್ತಿಯನ್ನು ಹೇಳುವ ದೇವಸ್ಥಾನ.


Click it and Unblock the Notifications