Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಮಂಗಳವನಂ ಪಕ್ಷಿಧಾಮ

ಮಂಗಳವನಂ ಪಕ್ಷಿಧಾಮ, ಕೊಚ್ಚಿ

4

ಮಂಗಳವನಂ ಪಕ್ಷಿಧಾಮ ಪಕ್ಷಿ ಪ್ರೇಮಿಗಳು, ಪ್ರವಾಸಿಗರು ಮತ್ತು ಪಕ್ಷಿವಿಜ್ಞಾನಿಗಳಿಗೆ ಅಚ್ಚುಮೆಚ್ಚಿನ ತಾಣವಿದು. ಎರ್ನಾಕುಲಂ ಹೈಕೋರ್ಟ್ ಕಟ್ಟಡದ ಹಿಂಭಾಗದಲ್ಲಿ ಈ ಪಕ್ಷಧಾಮವಿದೆ. ವಲಸೆ ಬಂದ ಅಪರೂಪದ ಪಕ್ಷಿಗಳ ವಸಾಹತು ಸ್ಥಾನ ಇದಾಗಿದ್ದು, ಮ್ಯಾಂಗ್ರೋವ್ ಕಾಡು ಹಾಗೂ ವಿಶೇಷವಾದ ಸಸ್ಯಗಳು ಪಕ್ಷಿಗಳ ವಾಸಕ್ಕೆ ಹೇಳಿ ಮಾಡಿಸಿದಂಥ ವಾತಾವರಣವನ್ನು ಸೃಷ್ಟಿಸಿವೆ. ಇಲ್ಲಿಯ ಮರಗಳಲ್ಲಿ ವಿವಿಧ ಪ್ರಭೇಧಗಳ ಪಕ್ಷಿಗಳ ತರಾವರಿ ಗೂಡುಗಳನ್ನು ನೋಡಬಹುದಾಗಿದ್ದು, ಸಂತಾನೋತ್ಪತ್ತಿಯ ವೇಳೆಗೆ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಉಪ ಕಾಲುವೆಯ ಮೂಲಕ ಕೊಚ್ಚಿ ಹಿನ್ನೀರಿಗೂ ಸಂಪರ್ಕ ಕಲ್ಪಿಸಿರುವುದರರಿಂದ ನೀರಾವರಿಯ ಲಭ್ಯತೆಯೂ ಹೇರಳವಾಗಿದ್ದು ಪಕ್ಷಿಗಳ ವಾಸಕ್ಕೆ ಅನುಕೂಲವಾದ ವಾತಾವರಣ ಇಲ್ಲಿದೆ.

2004 ನೇ ಇಸ್ವಿಯಲ್ಲಿ ಈ ಪ್ರದೇಶವನ್ನು ರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದ್ದು, ಅಪರೂಪದ ಸಸ್ಯ ಸಂಕುಲಗಳೂ ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ. ಇದನ್ನು ಎರ್ನಾಕುಲಂನ ಶ್ವಾಸಕೋಶ ಎಂದೂ ಕರೆಯಲಾಗುತ್ತದೆ. ಇಲ್ಲಿನ ದಟ್ಟ ಕಾಡುಗಳು ಹಾಗೂ ಸ್ವಚ್ಛ ಪರಿಸರದಿಂದಾಗಿ ಈ ಹೆಸರು ಬಂದಿದೆ. ಸಾಮಾನ್ಯವಾಗಿ ಜನವರಿಯಿಂದ ಹಕ್ಕಿಗಳು ಇಲ್ಲಿಗೆ ವಲಸೆ ಬರುವುದರಿಂದ ಆ ವೇಳೆಗೆ ನೀವು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue