Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಹಿಲ್ ಪ್ಯಾಲೇಸ್ ಮ್ಯೂಸಿಯಂ

ಹಿಲ್ ಪ್ಯಾಲೇಸ್ ಮ್ಯೂಸಿಯಂ, ಕೊಚ್ಚಿ

3

ಕೊಚ್ಚಿ ರಾಜರು 1865 ರಲ್ಲಿ ನಿರ್ಮಿಸಿದ ಹಿಲ್ ಪ್ಯಾಲೇಸ್ ಮ್ಯೂಸಿಯಂ ಕೇರಳದ ಅತಿ ದೊಡ್ಡ ಪುರಾತತ್ವ ಮ್ಯೂಸಿಯಂ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಈ ಅರಮನೆ ಇರುವುದು ತ್ರಿಪುನಿತುರ ಎಂಬ ಸ್ಥಳದಲ್ಲಿ.  ಕೊಚ್ಚಿ ರಾಜರ ಆಡಳಿತಾತ್ಮಕ ಕಚೇರಿಯಾಗಿ ಬಳಕೆಯಾಗುತ್ತಿದ್ದ ಈ ಅರಮನೆ 49 ಕಟ್ಟಡಗಳ ಒಂದು ಬೃಹತ್ ಸಮೂಹವಾಗಿದೆ. ಸಮಕಾಲೀನ ಶೈಲಿ ಹಾಗೂ ಸಾಂಪ್ರದಾಯಿಕ ವಾಸ್ತುಶಿಲ್ಪಗಳ ಸಂಯೋಜನೆಯಲ್ಲಿ ಇಲ್ಲಿನ ಕಟ್ಟಡಗಳನ್ನು ಕಟ್ಟಲಾಗಿದೆ. ಇಲ್ಲಿನ ವಿಶೇಷಗಳೆಂದರೆ ಜಿಂಕೆ ಉದ್ಯಾನ, ಪುರಾತತ್ವ ವಸ್ತುಸಂಗ್ರಹಾಲಯ, ಮಕ್ಕಳ ಪಾರ್ಕ್, ಅಪೂರ್ವವಾದ ಐತಿಹಾಸಿಕ ಉದ್ಯಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯಗಳು. ಇದಲ್ಲದೇ ಅರಮನೆಯೊಳಗೆ  ಅಪರೂಪವಾದ ಮೆಣಸು ಹಾಗೂ ಗಿಡಮೂಲಿಕೆಗಳನ್ನು ಬೆಳೆಸುತ್ತಿರುವುದೂ ಕೂಡ ಗಮನ ಸೆಳೆಯುತ್ತದೆ.

ಕೇರಳ ರಾಜ್ಯ ಪುರಾತತ್ವ ಇಲಾಖೆ ಈ ಅರಮನೆಯನ್ನು ನವೀಕರಣಗೊಳಿಸಿ, ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು, ಇಲ್ಲಿನ ವಾಸ್ತುಶಿಲ್ಪವನ್ನು ಸಂರಕ್ಷಿಸುವ ಪ್ರಶಂಸನೀಯ ಕೆಲಸ ಮಾಡುತ್ತಿದೆ. ಇಲ್ಲಿ ಸಾರ್ವಜನಿಕರು, ಮುಕ್ತವಾಗಿ ಸಂಚರಿಸಬಹುದು. ಇಲ್ಲಿ ಸಿನಿಮಾ ಚಿತ್ರೀಕರಣವೂ ನಡೆಯುತ್ತಿದ್ದು, ಅನೇಕ  ಅತ್ಯಂತ ಜನಪ್ರಿಯ ಮಲಯಾಳಂ ಚಿತ್ರದ ಕೆಲವು ದೃಶ್ಯಗಳು ಇಲ್ಲೇ ಚಿತ್ರೀಕರಣವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed