Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಕೊಚ್ಚಿ ಕಡಲ ಕಿನಾರೆ

ಕೊಚ್ಚಿ ಕಡಲ ಕಿನಾರೆ, ಕೊಚ್ಚಿ

2

ಪೋರ್ಟ್ ಕೊಚ್ಚಿ ಬೀಚ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಕೊಚ್ಚಿ ಬೀಚ್ ನೀವು ಕೇರಳಕ್ಕೆ ಬಂದರೆ ಭೇಟಿ ಮಾಡಲೇಬೇಕಾದ ಸ್ಥಳ. ಕೊಚ್ಚಿ ಕೇಂದ್ರ ಸ್ಥಳದಿಂದ ಕೇವಲ 12 ಕಿಮೀ ಅಂತರದಲ್ಲಿರುವ ಈ ಪ್ರದೇಶವನ್ನು ಸುಲಭವಾಗಿ ತಲುಪಬಹುದು. ನಿತ್ಯ ಜೀವನದ ಜಂಜಾಟಗಳಿಂದ ಬಿಡಿಸಿಕೊಳ್ಳಲು ಇದಕ್ಕಿಂತ ಉತ್ತಮ ಸ್ಥಳ ಇನ್ನೊಂದಿರಲಾರದು. ಉಸುಕಿನ ತಡಿಯ ಮೇಲೆ ನಡೆಯುತ್ತಿದ್ದಾಗ, ಆ ಬೀಸು ಗಾಳಿಗೆ ಮನಸು ಪ್ರಫುಲ್ಲವಾಗದೆ ಇರಲಾರದು. ಹೊಸ ಚೈತನ್ಯವು ಮೂಡೇ ಮೂಡುತ್ತದೆ. ಬರೇ ವಿಶಾಲ ಜಲಧಿಯಷ್ಟೇ ಇಲ್ಲಿನ ವಿಶೇಷವಲ್ಲ. ಇದಕ್ಕಿಂತ ಹೆಚ್ಚಿನದಾಗಿ ಸಮುದ್ರದ ದಂಡೆಗಂಟಿಕೊಂಡೇ ಇರುವ ಕೋಟೆ ಗಮನಸೆಳೆಯುತ್ತದೆ. ಗತಕಾಲದ ವೈಭವವನ್ನು ಸಾರುತ್ತ ನಿಂತಿರುವ ಈ ಕೋಟೆ ಇಂಡೋ ಯುರೋಪಿಯನ್ ವಾಸ್ತುಶಿಲ್ಪ ಶೈಲಿಯ ಭವ್ಯತೆಗೆ ಸಾಕ್ಷಿಯಾಗಿದೆ.

ಇವತ್ತು ಜನಪ್ರಿಯ ಪ್ರವಾಸಿ  ತಾಣವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಪ್ರದೇಶ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಪೂರ್ವದಲ್ಲಿ ಐರೋಪ್ಯ ದೇಶಗಳ ವಸಾಹತು ಕೇಂದ್ರವಾಗಿತ್ತು. ಇದೇ ಕಾರಣದಿಂದ ಇವತ್ತಿಗೂ ಇಲ್ಲಿ ಐರೋಪ್ಯ ದೇಶಗಳು ಹಾಗೂ ಭಾರತೀಯ ಪರಂಪರೆಯ ಅನನ್ಯ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಪ್ರತೀ ವರ್ಷದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಆಚರಿಸುವ ಕೊಚ್ಚಿ ಬೀಚ್ ಉತ್ಸವ ಜಾತ್ರೆಯು ಸೊಬಗನ್ನು ಮೈಗೂಡಿಸಿಕೊಂಡು ರಂಜಿಸುತ್ತದೆ. ಲಕ್ಷಾಂತರ ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ರಜಾದಿನ ಹಾಗೂ ಸಂಜೆಯ ಹಿತ ನಡಿಗೆಗೆ ಈ ಸ್ಥಳ ಅನುಕೂಲಕರವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue