Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಹವಾಮಾನ

ಕೊಚ್ಚಿ ಹವಾಮಾನ

ನವೆಂಬರ‍್ ಮತ್ತು ಫೆಬ್ರುವರಿಯ ಮಧ್ಯದ ಅವಧಿಯಲ್ಲಿ ಕೊಚ್ಚಿಯಲ್ಲಿ ಪ್ರಶಾಂತ ವಾತಾವರಣವಿರುತ್ತದೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೊಚ್ಚಿಗೆ ಭೇಟಿ ನೀಡುವುದು ಸೂಕ್ತ. ಈ ಅವಧಿಯಲ್ಲಿ ನಗರದಾದ್ಯಂತ ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿರುತ್ತವೆ. ಆದಾಗ್ಯೂ, ನೀವು ಈ ಗಲಾಟೆ, ಗಜಿಬಿಜಿ ವಾತಾವರಣವನ್ನು ಇಷ್ಟಪಡುವುದಿಲ್ಲವಾದರೆ ಕ್ರಿಸ್‌ಮಸ್‌ ಮತ್ತು ಹೊಸವರ್ಷದ ಸಂಭ್ರಮವೆಲ್ಲಾ ಮುಗಿದ ಮೇಲೆ ಅಲ್ಲಿಗೆ ಹೋಗಿ ಬನ್ನಿ.

ಬೇಸಿಗೆಗಾಲ

ಕೊಚ್ಚಿಯಲ್ಲಿನ ಬೇಸಿಗೆಕಾಲವು ಒಣ ಹವೆಯನ್ನು ಹೊಂದಿದ್ದು, ಅತ್ಯಂತ ಉಷ್ಣವಾಗಿರುತ್ತದೆ. ಇತರ ಭಾಗಗಳಿಂದ ಬರುವ ಪ್ರವಾಸಿಗರು ಇಲ್ಲಿನ ಬಿಸಿಲನ್ನು ತಡೆದುಕೊಳ್ಳಲು ಕಷ್ಟಪಡಬೇಕಾಗುತ್ತದೆ. ಅಂದ ಹಾಗೆ ಇಲ್ಲಿನ ಬೇಸಿಗೆಕಾಲ ಪ್ರಖರವಾಗಿರುವುದು ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ. ಕೊಚ್ಚಿಗೆ ಭೇಟಿ ಮಾಡುವುದಕ್ಕೆ ಇದೂ ಸೂಕ್ತವಲ್ಲದ ಕಾಲ.

ಮಳೆಗಾಲ

ಕೊಚ್ಚಿಯಲ್ಲಿನ ಮಳೆಗಾಲ ಅತ್ಯಂತ ರುದ್ರಭಯಾನಕವಾದದ್ದು. ಧಾರಾಕಾರವಾಗಿ ಸುರಿಯುವ ಮಳೆಯಿಂದ ನೀವು ಎಲ್ಲೂ ಹೊರಗೆ ತಿರುಗಾಡುವಂತಿರುವುದಿಲ್ಲ. ಜುಲೈ, ಅಗಸ್ಟ್‌ ಮತ್ತು ಸಪ್ಟೆಂಬರ‍್ ತಿಂಗಳಿನ ಅವಧಿಯಲ್ಲಿ ಅತ್ಯಂತ ಮಳೆಯಾಗುತ್ತದೆ. ಮಳೆಗಾಲವು ಹಸಿರಿನಿಂದ ಕೂಡಿರುತ್ತದೆ. ಆದರೆ ಹೊರಗಡೆ ಸುತ್ತಾಡಲು ಮತ್ತು ನೀರಿನಲ್ಲಿ ಆಟವಾಡಲು ಈ ಸಂದರ್ಭದಲ್ಲಿ ಕಷ್ಟ. ಮಳೆಗಾಲದಲ್ಲಿ ಕೊಚ್ಚಿಗೆ ಹೋಗಲೇಬೇಡಿ.

ಚಳಿಗಾಲ

ಅದೃಷ್ಟವಶಾತ್‌, ಡಿಸೆಂಬರ‍್, ಜನವರಿ ಮತ್ತು ಫೆಬ್ರುವರಿಯ ತಿಂಗಳಲ್ಲಿ ಕೊಚ್ಚಿಯಲ್ಲಿನ ಚಳಿಗಾಲವು ಪ್ರವಾಸಿಗರು ಭೇಟಿ ಕೊಡಲು ಅತ್ಯಂತ ಸೂಕ್ತವಾದ ಕಾಲ. ಈ ಅವಧಿಯಲ್ಲಿ ವಾತಾವರಣ ಪ್ರಶಾಂತವಾಗಿರುತ್ತದೆ. ಹಾಗೆಯೇ ಸಂಜೆಯ ಹೊತ್ತಿನಲ್ಲಿ ನೀವು ಲೈಫ್‌ ಜಾಕೆಟ್‌ನ ಮೊರೆಹೋಗಬೇಕಾಗುತ್ತದೆ. ಈ ಅವಧಿಯಲ್ಲಿ ನೀರಿನ ಆಟಗಳನ್ನು ಹಾಗೇ ಹೊರಗಡೆ ಸುತ್ತಾಡುವ ಆನಂದವನ್ನು ಅನುಭವಿಸುತ್ತೀರಿ.