ಸೀತಾ ಬಿನ್ಜ್, ಕೆಯೊಂಝಾರ

ಸೀತಾ ಬಿನ್ಜ್ ಭಾರತದ ಏಳು ಅದ್ಭುತಗಳಲ್ಲಿ ಒಂದಾಗಿದೆ ಮತ್ತು ಇದು ಒಡಿಸ್ಸಾದ ಕೆಯೊಂಜ್ಹಾರ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ಸೀತಾ ನದಿಯ ದಡದಲ್ಲಿರುವ ಈ ಪ್ರದೇಶದಲ್ಲಿ ಪ್ರಾಚೀನ ಫ್ರೆಸ್ಕೋ ವರ್ಣಚಿತ್ರಗಳನ್ನು ನೋಡಬಹುದು. ಬಂಡೆಗಳ ಮೇಲೆ ಕೆತ್ತಲ್ಪಟ್ಟಿರುವ ಪ್ರಾಚೀನ ವರ್ಣಚಿತ್ರಗಳನ್ನು ವೀಕ್ಷಿಸಿ ಸಂಪೂರ್ಣವಾಗಿ ಮಂತ್ರಮುಗ್ಧಗೊಳಿಸುವ ಈ ಪ್ರದೇಶವು ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಸಮೀಪದ ನಗರ ರೂರ್ಕೆಲಾ ಮತ್ತು ರಾಜ್ಯ ರಾಜಧಾನಿಯಿಂದ ಈ ಸುಂದರ ಪ್ರದೇಶಕ್ಕೆ ಭೇಟಿ ನೀಡಲು ಕೆಲವು ಗಂಟೆಗಳು ಬೇಕು.

ಈ ಪ್ರದೇಶವು ಶ್ರೇಷ್ಠ ಐತಿಹಾಸಿಕ ಮೌಲ್ಯವನ್ನು ಹೊಂದಿರುವ ಕಾರಣ ಇದು ಭಾರತ ಪ್ರವಾಸೋದ್ಯಮದ ಇತಿಹಾದಲ್ಲಿ ಅಮೂಲ್ಯ ಪ್ರದೇಶ. ನೂರಾರು ಮಂದಿ ವಿದೇಶಿ ಪ್ರವಾಸಿಗರು ಪ್ರತೀ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಾಚೀನ ವರ್ಣಚಿತ್ರಗಳಲ್ಲಿ ಆಸಕ್ತಿಯಿರುವವರನ್ನು ಈ ಪ್ರದೇಶವು ಸೆಳೆಯುತ್ತದೆ.

Please Wait while comments are loading...