ಗುಂಡಿಚಾಘಾಯಿ, ಕೆಯೊಂಝಾರ

ಒಡಿಶಾದ ಕೆಯೊಂಜ್ಹಾರದ ಜಿಲ್ಲೆಯಲ್ಲಿರುವ ಮತ್ತೊಂದು ಜನಪ್ರಿಯ ಜಲಪಾತ ಗುಂಡಿಚಾಘಾಯಿ. ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಈ ಸಣ್ಣ ಜಲಪಾತವನ್ನು ಕಂಡು ಬೆರಗಾಗಬೇಕು. ಈ ಜಲಪಾತದ ಎತ್ತರ 50 ಮೀ. ಮತ್ತು ಮುದಲೆ ನದಿ ಇದರ ಮೂಲಕ ಹರಿಯುತ್ತಿರುತ್ತದೆ. ಜಲಪಾತದ ಸುತ್ತಲು ಹಬ್ಬಿರುವ ಹಸಿರು ಅರಣ್ಯವು ಈ ಪ್ರದೇಶವನ್ನು ಮತ್ತಷ್ಟು ರಮಣೀಯವಾಗಿಸಿದೆ. ಭದ್ರಕ್ ಇಲ್ಲಿಗೆ ಸಮೀಪದ ನಗರ ಮತ್ತು ಭುವನೇಶ್ವರದ ಕಾರಿನ ಮೂಲಕ ಪ್ರಯಾಣಿಸಿದರೆ ಕೆಲವೇ ಗಂಟೆಗಳಲ್ಲಿ ಇಲ್ಲಿಗೆ ತಲುಪಬಹುದು.

ಒಡಿಶಾಗೆ ರಾಜ್ಯಕ್ಕೆ ಪ್ರಯಾಣಿಸುವವರು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಇಲ್ಲಿಗೊಮ್ಮೆ ಭೇಟಿ ನೀಡಬೇಕು. ಸೂರ್ಯೋದಯ ಮತ್ತು ಸೂರ್ಯಾಸ್ತ ವೇಳೆ ಈ ಪ್ರದೇಶ ಮನಮೋಹಕವಾಗಿ ಕಾಣಿಸುತ್ತದೆ. ಈ ಪ್ರದೇಶದಿಂದ ಐದು ಕಿ.ಮೀ. ದೂರದಲ್ಲಿ ಹರಿಚಂದ್ರಪುರವಿದೆ ಮತ್ತು ಒಡಿಸ್ಸಾ ರಾಜ್ಯದ ಪ್ರವಾಸೋದ್ಯಮದಿಂದ ಪ್ರವಾಸಿಗರಿಗಾಗಿ ಮಾಡಿರುವಂತಹ ವಿರಾಮ ಕೊಠಡಿಯಿದೆ. ಚಳಿಗಾಲದ ತಿಂಗಳಲ್ಲಿ ಪ್ರವಾಸಿಗಳು ಈ ಪ್ರದೇಶವನ್ನು ಪಿಕ್ನಿಕ್  ತಾಣವಾಗಿ ಪರಿಗಣಿಸಿದ್ದಾರೆ.

Please Wait while comments are loading...